ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ, ಪ್ರಸ್ತುತ ರಾಜ್ಯದ ಶಾಲೆಗಳಲ್ಲಿ ರೂಪಣಾತ್ಮಕ ಮೌಲ್ಯಾಂಕನ FA-1, FA-2, FA-3 2 FA-4 ಹಾಗೂ ಸಂಕಲನಾತ್ಮಕ SA-1 2 SA-2 1 C, C+, B, B+, A, A+ ಶ್ರೇಣಿಗಳನ್ನು ಮಾತ್ರ SATS ತಂತ್ರಾಂಶದಲ್ಲಿ ಇಂದೀಕರಿಸಲು ಅವಕಾಶ ಕಲ್ಪಿಸಲಾಗಿತ್ತು.
ಮೌಲ್ಯಾಂಕನದ ಅಂಕಗಳನ್ನು SATS ನಲ್ಲಿ ಇಂದೀಕರಿಸಿದಲ್ಲಿ ವಿದ್ಯಾರ್ಥಿಗಳ ಕಲಿಕೆಯನ್ನು ವಿಶ್ಲೇಷಿಸಿ ಪರಿಹಾರಾತ್ಮಕ ಕ್ರಮಕೈಗೊಳ್ಳಲು ಸಹಕಾರಿಯಾಗುವ ಹಿನ್ನೆಲೆಯಲ್ಲಿ ಉಲ್ಲೇಖ-2 ಮತ್ತು 3 ರಂತೆ SATS ತಂತ್ರಾಂಶದಲ್ಲಿ ಅಂಕಗಳನ್ನು ನಮೂದಿಸಲು ಅವಕಾಶ ಕಲ್ಪಿಸಲಾಗಿದೆ.
ಅದರಂತೆ, 10ನೇ ತರಗತಿ ವಿದ್ಯಾರ್ಥಿಗಳ ಸಂಕಲನಾತ್ಮಕ ಮೌಲ್ಯಾಂಕನದ (SA1 ಅಥವಾ ಮಧ್ಯಂತರ ಪರೀಕ್ಷೆ ಬಾಹ್ಯ ಮೌಲ್ಯಾಂಕನದ ಅಂಕಗಳನ್ನು ಪ್ರಥಮ ಭಾಷೆಗೆ 100 ಅಂಕಗಳು ಮತ್ತು ದ್ವಿತೀಯ ಭಾಷೆ, ತೃತೀಯ ಭಾಷೆ/NSQF, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ 80 ಅಂಕಗಳಿಗೆ SATS ತಂತ್ರಾಂಶದಲ್ಲಿ ದಿನಾಂಕ: 21-10-2025 ರೊಳಗೆ ಕಡ್ಡಾಯವಾಗಿ ನಮೂದಿಸಲು ತಿಳಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ