MRP TRAINING-2025: ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶಿಕ್ಷಕರಿಗೆ ತರಬೇತಿ
2025-26ನೇ ಸಾಲಿನ ರಾಜ್ಯ ಬಜೆಟ್ ಆಯವ್ಯಯದಲ್ಲಿ ಮರುಸಿಂಚನ, ಗಣಿತ ಗಣಕ, ಓದು ಕರ್ನಾಟಕ, ಕಲಿಕಾ ದೀಪ ಮತ್ತು ಜ್ಞಾನಸೇತು ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಿ ಮೇಲಿನ ಉಲ್ಲೇಖಗಳನ್ನಯ ಕಾರ್ಯಕ್ರಮದ ಅನುಷ್ಠಾನಕ್ಕೆ ಸರ್ಕಾರಿ ಆದೇಶವನ್ನು ಹೊರಡಿಸಲಾಗಿರುತ್ತದೆ. ಸದರಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶಿಕ್ಷಕರಿಗೆ ತರಬೇತಿಯನ್ನು ನೀಡುವ ಅಗತ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕಾಗಿ ಎಂಆರ್‌ಪಿ ತರಬೇತಿಯನ್ನು ಹಮ್ಮಿಕೊಳ್ಳಬೇಕಾಗಿರುತ್ತದೆ. ತರಬೇತಿ
▪️ಎಂಆರ್‌ಪಿ ತರಬೇತಿಗೆ ಮರುಸಿಂಚನ, ಗಣಿತ ಗಣಕ, ಓದು ಕರ್ನಾಟಕ, ಕಲಿಕಾ ದೀಪ ಮತ್ತು ಜ್ಞಾನಸೇತು ವಿಷಯಗಳನ್ನು ಒಳಗೊಂಡಂತೆ 5 ದಿನಗಳ ಪ್ಯಾಕೆಜ್‌ನ್ನು ಯೋಜಿಸಲಾಗಿದೆ. ಈ 5 ದಿನಗಳ ಪ್ಯಾಕೆಜ್‌ನಲ್ಲಿ ವಿವಿಧ ವಿಷಯಗಳಿಗೆ ಹಂಚಿಕೆ ಮಾಡಲಾಗಿರುವ ಅವಧಿಗಳ ವಿವರ ಕೆಳಕಂಡಂತಿದೆ.
▪️ಸದರಿ 05 ದಿನಗಳ ಪ್ಯಾಕೆಜ್ ತರಬೇತಿಯಲ್ಲಿ ಒಂದು ಅವಧಿ ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತ "ಶೋಧ' ತರಬೇತಿ. ಒಂದು ಅವಧಿ WWF India (World Wide Fund for Nature) (ವಿಶ್ವ ವನ್ಯ ಜೀವಿ ನಿಧಿ)ಕುರಿತ ತರಬೇತಿಯನ್ನು ನೀಡುವುದು. ಶೋಧ ಸಾಹಿತ್ಯವನ್ನು ಈಗಾಗಲೇ ಎಲ್ಲಾ ಜಿಲ್ಲೆಗಳಿಗೆ ಕಳುಹಿಸಲಾಗಿದೆ. WWF ವಿಷಯದ ಬಗ್ಗೆ ಎನ್‌ಜಿಓ ರವರ ಮೂಲಕ ತರಬೇತಿಯನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದ ಸಾಹಿತ್ಯವನ್ನು ಇ-ಮೇಲ್ ಮೂಲಕ ಕಳುಹಿಸಲಾಗುವುದು.
ಉಲ್ಲೇಖ-1 ರಲ್ಲಿನ ಆದೇಶರಲ್ಲಿನ ಆದೇಶದಂತೆ ಎಂಆರ್‌ಪಿ ತರಬೇತಿಯನ್ನು ದಿನಾಂಕ:13/10/2025 ರಿಂದ 17/10/2025 ರವರೆಗೆ ಕೆಳಕಂಡ 05 ಜಿಲ್ಲೆಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿತ್ತು. ಸಾಮಾನ್ಯ ಹಾಗೂ ಶೈಕ್ಷಣಿಕ ಗಣತಿ ಕಾರ್ಯವನ್ನು ದಿನಾಂಕ:18.10.2025 ರವರೆಗೆ ವಿಸ್ತರಿಸಿರುವುದರಿಂದ ಎಂ.ಆರ್.ಪಿ ತರಬೇತಿಯನ್ನು ದಿನಾಂಕ:23.10.2025 ರಿಂದ 27.10.2025 ರವರೆಗೆ ಆಯೋಜಿಸುತ್ತಿದ್ದು, ಪ್ರತಿ ಡಯಟ್‌ನಿಂದ ಕೆಳಗಿ. ಕೋಷಕದಲ್ಲಿ ವಿವರಿಸಿರುವಂತೆ ಪ್ರತಿ ವಿಷಯಕ್ಕೆ 4 ಸಂಪನ್ಮೂಲ ವ್ಯಕ್ತಿಗಳಂತೆ 5 ವಿಷಯಗಳಿಗೆ ಅನುಗುಣವಾಗಿ ಪ್ರತಿ ಜಿಲ್ಲೆಯಿಂದ ಸಂಬಂಧಿಸಿದ ಜಿಲ್ಲೆಗಳಿಗೆ ನಿಯೋಜಿಸುವುದು. ಒಟ್ಟಾರೆ ಪ್ರತಿ ಡಯಟ್‌ನಿಂದ 05 ಜಿಲ್ಲೆಗಳಿಗೆ 20 ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಬೇಕಿರುತ್ತದೆ
▪️ಎಂಆರ್‌ಪಿ ತರಬೇತಿಯಲ್ಲಿನ ವಿಷಯಗಳ ನಿರ್ವಹಣೆಗೆ ನಿಯೋಜನೆಗೊಳ್ಳುವ ಸಂಪನ್ಮೂಲ ವ್ಯಕ್ತಿಗಳು.
1. ಡಯಟ್‌ನಿಂದ ಸಂಬಂಧಿಸಿದ ವಿಷಯದ ಹಿನ್ನೆಲೆ ಇರುವ ಒಬ್ಬರು ಸಂಪನ್ಮೂಲ ವ್ಯಕ್ತಿಗಳು. (ಹಿರಿಯ ಉಪನ್ಯಾಸಕರು/ಉಪನ್ಯಾಸಕರು)
2. ಒಬ್ಬರು ಬಿಆರ್‌ಪಿ (ಪ್ರೌಢ) (ಆರ್ಟ್ಸ್ ಅಥವಾ ಗಣಿತ, ವಿಜ್ಞಾನ)
3. ಇಬ್ಬರು ಸಿ.ಆರ್.ಪಿ.ಗಳು,
▪️ವಿಜ್ಞಾನ ವಿಷಯದ ಹಿನ್ನೆಲೆಯಿರುವವರನ್ನು ಗಣಿತ ವಿಷಯಕ್ಕೆ ನಿಯೋಜಿಸಬಹುದು. ಕನ್ನಡ, ಅಂಗ, ಸಮಾಜ ವಿಜ್ಞಾನ ವಿಷಯಕ್ಕೆ ಆರ್ಟ್ಸ್ ಹಿನ್ನೆಲೆಯಿರುವವರನ್ನು ನಿಯೋಜಿಸಬಹುದು.
▪️ತರಬೇತಿ ನಡೆಯುವ ಸ್ಥಳ ಹಾಗೂ ವಿಳಾಸದ ವಿವರವನ್ನು 5 ಜಿಲ್ಲೆಯವರು ಉಳಿದ ಎಲ್ಲಾ ಜಿಲ್ಲೆಯ ಡಯಟ್ ಪ್ರಾಂಶುಪಾಲರಿಗೆ ಮುಂಚಿತವಾಗಿ ತಿಳಿಸಲು ಸೂಚಿಸಲಾಗಿದೆ. ಅದರಂತೆ ಮೇಲೆ ತಿಳಿಸಿರುವ 5 ಡಯಟ್‌ನವರು ತರಬೇತಿ ನಡೆಯುವ ಸ್ಥಳದ ವಿವರವನ್ನು ತಿಳಿಸಿರುತ್ತಾರೆ.
▪️ಎಲ್ಲಾ ಡಯಟ್‌ನವರು ತರಬೇತಿ ಸಂಘಟಿಸುತ್ತಿರುವ 05 ಡಯಟ್‌ಗಳಿಗೆ ಮುಂಚಿತವಾಗಿ ಆರ್.ಪಿ.ಗಳ ಪಟ್ಟಿಯನ್ನು ಕಳುಹಿಸಲು ತಿಳಿಸಿದೆ.
▪️05 ಜಿಲ್ಲೆಗಳಿಂದ ತರಬೇತಿ ಪಡೆಯುವ ಒಟ್ಟು 140*5=700 ಜನ ಪ್ರಧಾನ ಸಂಪನ್ಮೂಲ ವ್ಯಕ್ತಿಗಳು ಆಯಾ ಜಿಲ್ಲೆಗಳಲ್ಲಿ ನಡೆಯುವ ಎಂಆರ್‌ಪಿ ತರಬೇತಿಗಳಲ್ಲಿ ಉಳಿದ ಎಂಆರ್‌ಪಿಗಳಿಗೆ ತರಬೇತಿಯನ್ನು ನೀಡಬೇಕಾಗಿರುತ್ತದೆ.
▪️ಎಂಆರ್‌ಪಿ ತರಬೇತಿ ಪಡೆದವರು ಜಿಲ್ಲಾ/ತಾಲ್ಲೂಕು ಹಂತದಲ್ಲಿ ಶಿಕ್ಷಕರಿಗೆ ತರಬೇತಿಯನ್ನು ನೀಡಬೇಕಾಗಿರುತ್ತದೆ.
▪️ಜಿಲ್ಲಾ ಹಂತದ ಎಂಆರ್‌ಪಿ ತರಬೇತಿ:
▪️5 ಜಿಲ್ಲೆಗಳಿಂದ ತರಬೇತಿ ಪಡೆದ ಪ್ರಧಾನ ಸಂಪನ್ಮೂಲ ವ್ಯಕ್ತಿಗಳು ಜಿಲ್ಲಾ ಹಂತದಲ್ಲಿ ಉಳಿದ 110 ಎಂಆರ್‌ಪಿಗಳಿಗೆ ತರಬೇತಿಯನ್ನು ನೀಡುವುದು. ತರಬೇತಿಗೆ ಅಗತ್ಯವಾದ ಸಂಪನ್ಮೂಲಗಳನ್ನು 05 ಡಯಟ್ ಹಾಗೂ ಡಿಎಸ್‌ಇಆರ್‌ಟಿ ಸಹಯೋಗದೊಂದಿಗೆ ಪರಿಷ್ಕರಿಸಲಾಗಿರುವ ಮರುಸಿಂಚನ ಶಿಕ್ಷಕರ ಕೈಪಿಡಿ ಹಾಗೂ ವಿದ್ಯಾರ್ಥಿಗಳ ಕೈಪಿಡಿಗಳನ್ನು ಡಿ.ಎಸ್.ಇ.ಆರ್.ಟಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇದನ್ನು ಯಾವುದೇ ತರಬೇತಿಯಲ್ಲಿಯೂ ಭೌತಿಕ ರೂಪದಲ್ಲಿ ಶಿಬಿರಾರ್ಥಿಗಳಿಗೆ ನೀಡಲಾಗುವುದಿಲ್ಲ. ಡಿಜಿಟಲ್ ಗ್ರೂಪ್ ಗಳಲ್ಲಿ ಇದನ್ನು ಹಂಚಿಕೆ ಮಾಡಿಕೊಳ್ಳುವಂತೆ ಡಯಟ್ ಮತ್ತು ಬಿ.ಆರ್.ಸಿ ಕೇಂದ್ರಗಳಿಗೆ ಸೂಚಿಸಿದೆ.
▪️ತರಬೇತಿ ಸಂದರ್ಭಗಳಲ್ಲಿ ಅಧಿವೇಶನಗಳ ನಿರ್ವಹಣೆಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಮಾತ್ರ Handoutsಗಳನ್ನು ನೀಡಲು ತಿಳಿಸಿದೆ. ಟಿ.ಎಲ್.ಎಂ. ಹಾಗೂ ಸಾದಿಲ್ವಾರು ವೆಚ್ಚಗಳಡಿ ಲಭ್ಯವಿರುವ ತರಬೇತಿ ಅನುದಾನದ ಮಿತಿಯೊಳಗೆ ಖರ್ಚನ್ನು ಭರಿಸಿ ಶಿಬಿರಾರ್ಥಿಗಳಿಗೆ ನೀಡಲು ಸೂಚಿಸಿದೆ.
▪️ಶಿಬಿರಾರ್ಥಿಗಳಿಗೆ ಮರುಸಿಂಚನ ಸಾಹಿತ್ಯಗಳ ಡಿಜಿಟಲ್ ಪ್ರತಿಯನ್ನು ಮಾತ್ರ ಒದಗಿಸಬೇಕು.
▪️ತರಬೇತಿಯ ಸಂದರ್ಭದಲ್ಲಿ ಅಧಿವೇಶನಗಳ ನಿರ್ವಹಣೆಗೆ ಅಗತ್ಯವಿರುವ ಪುಟಗಳನಷ್ಟೇ ಅತ್ಯಂತ ಸೀಮಿತ ಸಂಖ್ಯೆಯಲ್ಲಿ ಜೆರಾಕ್ಸ್ ಮಾಡಿಸಿ ಬಳಸಬಹುದಾಗಿರುತ್ತದೆ.
▪️ಉಲ್ಲೇಖ-7ರ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕರವರ ಸುತ್ತೋಲೆಯಲ್ಲಿರುವಂತೆ ಆಯಾ ಜಿಲ್ಲಾ ಹಂತದಲ್ಲಿ ನಡೆಯುವ ಎಂಆರ್‌ಪಿ ತರಬೇತಿಗಳಿಗೆ ಘಟಕ ವೆಚ್ಚ ರೂ.1000/- ಗಳಂತೆ ಬಿಡುಗಡೆ ಮಾಡಲಾಗುವುದು. ಆದರೆ ಘಟಕ ವೆಚ್ಚ ರೂ.500/-ಗಳಂತೆ ಮಾತ್ರ ಖರ್ಚನ್ನು ಭರಿಸಬೇಕಾಗಿರುತ್ತದೆ.
ಪ್ರಸ್ತುತ ತರಬೇತಿಯನ್ನು ನಡೆಸಲು ಮಂಜೂರಾಗಿರುವ ರೂ.500/-ಗಳಲ್ಲಿ ಊಟ/ತಿಂಡಿ, ಇತರೆ ವೆಚ್ಚ ಬೋಧನಾ ಉಪಕರಣಗಳಿಗಾಗಿ ಘಟಕ ವೆಚ್ಚ ರೂ.190/-ರಂತೆ ಖರ್ಚನ್ನು ಭರಿಸಲು ತಿಳಿಸಿದೆ.
▪️ತರಬೇತಿಗೆ ಹಾಜರಾಗುವ ಶಿಬಿರಾರ್ಥಿಗಳಿಗೆ ನಿಗದಿತ ಭತ್ಯೆಯನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕರವರಿಂದ DBT PORTAL ನಲ್ಲಿ ನೇರ ನಗದು ವರ್ಗಾವಣೆ ಮಾಡುವುದರಿಂದ, ತರಬೇತಿಗೆ ಹಾಜರಾಗುವ ಶಿಬಿರಾರ್ಥಿಗಳ ಅವರ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ವಿವರಗಳನ್ನು ರೆಸಿಪಿಯೆಂಟ್ ಐಡಿ ವಿವರಗಳನ್ನು ಪಡೆದು ಪರಿಶೀಲಿಸಿ, ಕೆಳಕಂಡ ನಮೂನೆಯಲ್ಲಿ ವಿವರವನ್ನು ಭರ್ತಿ ಮಾಡಿ ತರಬೇತಿ ಪೂರ್ಣಗೊಂಡ 3 ದಿನಗಳೊಳಗೆ 2 ಸೆಟ್‌ನ್ನು (1 ಶುದ್ದ ಪ್ರತಿ +1 ಜೆರಾಕ್ಸ್ ಪ್ರತಿ)ಡಿಎಸ್ ಇಅರ್‌ಟಿಗೆ ಸಲ್ಲಿಸಲು ತಿಳಿಸಿದೆ.
▪️ಪಾವತಿಗೆ ಸಂಬಂಧಿಸಿದಂತೆ ಶಿಬಿರಾರ್ಥಿಗಳ ಬ್ಯಾಂಕ್ ವಿವರ ಹಾಗೂ ರೆಸಿಪಿಯೆಂಟ್ ಐಡಿ ವಿವರಗಳನ್ನು ತರಬೇತಿದಾರರಿಗೆ ನೀಡಲು ನಿಮ್ಮ ಜಿಲ್ಲೆಯ ಸಂಪನ್ಮೂಲ ವ್ಯಕ್ತಿಗಳಿಗೆ ತಿಳಿಸುವುದು.
▪️ಜಿಲ್ಲಾ ಹಂತದಲ್ಲಿ ಎಂಆರ್‌ಪಿಯಾಗಿ ತರಬೇತಿ ಪಡೆದವರು ಶಿಕ್ಷಕರಿಗೆ ಜಿಲ್ಲಾ/ತಾಲ್ಲೂಕು ಹಂತದಲ್ಲಿ ತರಬೇತಿಯನ್ನು ನೀಡಬೇಕಾಗಿರುತ್ತದೆ.
ಜಿಲ್ಲಾ ಮಟ್ಟದ ಎಂಆರ್‌ಪಿ ತರಬೇತಿ ಕಾರ್ಯಗಾರದ ಘಟಕ ವೆಚ್ಚ ರೂ.500/-ರ ಬ್ರೇಕ್ ಅಪ್ (ಮೊತ್ತ ರೂ.ಗಳಲ್ಲಿ)
▪️ನಿಮ್ಮ ಜಿಲ್ಲೆಯ ತರಬೇತಿ ವೇಳಾಪಟ್ಟಿ ತರಬೇತಿ ವಿವರಗಳನ್ನು ತರಬೇತಿಗಳು ಪೂರ್ಣಗೊಂಡ ನಂತರ ಭೌತಿಕ ಪ್ರಗತಿ, ಛಾಯಾ ಚಿತ್ರಗಳು, ತರಬೇತಿ ವರದಿಯನ್ನು ಡಯಟ್ ವೆಬ್‌ಸೈಟ್‌ನಲ್ಲಿ ಯಾವುದೇ ದೋಷಗಳಿಲ್ಲದಂತೆ ಅಪ್‌ಲೋಡ್ ಮಾಡಲು ತಿಳಿಸಿದೆ.
▪️ತರಬೇತಿಗೆ ಅಗತ್ಯವಿರುವ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ತಿಳಿಸಿದೆ. ತರಬೇತಿ ಮುಗಿದ 3 ದಿನಗಳೊಳಗಾಗಿ ವರದಿಯನ್ನು ರಾಜ್ಯ ಯೋಜನಾ ನಿರ್ದೇಶಕರ ಕಚೇರಿಗೆ ಕಳುಹಿಸಿ ಪ್ರತಿಯನ್ನು ಈ ಡಿ.ಎಸ್.ಇ.ಆರ್.ಟಿಗೆ ಕಳುಹಿಸಲು ತಿಳಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ