VIDYAVANI

Education and Career

ಸೋಮವಾರ, ನವೆಂಬರ್ 3, 2025

Environmental studies: ಪರಿಸರ ಅಧ್ಯಯನ ಕಲಿಕೆಯನ್ನು ಅನುಕೂಲಿಸುವುದು

  VIDYAVANI       ಸೋಮವಾರ, ನವೆಂಬರ್ 3, 2025
Environmental studies: ಪರಿಸರ ಅಧ್ಯಯನ ಕಲಿಕೆಯನ್ನು ಅನುಕೂಲಿಸುವುದು.


ಭಾರತೀಯ ತತ್ವಶಾಸ್ತ್ರವು ಭೂಮಿಯ ಮೇಲಿರುವುದೆಲ್ಲವೂ ಒಂದೇ ಕುಟುಂಬಕ್ಕೆ ಸೇರಿರುತ್ತದೆ ಎಂಬುದನ್ನು ಸದಾ ಎತ್ತಿ ಹಿಡಿಯುತ್ತದೆ. "ವಸುದೈವ ಕುಟುಂಬಕಂ" ಎಂದು ಘೋಷಿಸಿದೆ. ಇದು ಪರಿಸರದ ಮೂಲಭೂತ ಮೌಲ್ಯವಾಗಿದೆ.ಭೂಮಿ ಒಂದು ಜೀವಂತಗ್ರಹ, ಜೀವನಾಧಾರಕ್ಕೆ ಅವಶ್ಯವಾದ ಸೂಕ್ತ ಸ್ಥಿತಿಗಳನ್ನು ಉಂಟುಮಾಡುತ್ತದೆ. ಪರಿಸರವು ಸೂಕ್ತಜೀವಿಗಳಿಂದ ಹಿಡಿದು. ಮಾನವನವರೆಗೂ ಎಲ್ಲ ಸಜೀವಿಗಳು ಹಾಗೂ ನಿರ್ಜೀವ ಅಂಶಗಳನ್ನು ಒಳಗೊಂಡಿದೆ.

ಭಾರತವು ಬಹು ಬಗೆಯ ಪರಿಸರೀಯ ಸಮಸ್ಯೆಗಳನ್ನು ಹಾಗೂ ಕಾಳಜಿಗಳನ್ನು ಎದುರಿಸುತ್ತಿದೆ. ಸ್ವಾಭಾವಿಕ ಸಂಪನ್ಮೂಲಗಳ ಬರಿದಾಗುವಿಕೆ, ಅರಣ್ಯ ನಾಶ, ಜೀವ ವೈವಿಧ್ಯತೆಯ ಹಾನಿ, ಹೆಚ್ಚುತ್ತಿರುವ ಪರಿಸರ ಮಲಿನತೆ, ಹರಡುತ್ತಿರುವ ರೋಗಗಳು ಸೇರಿವೆ. ಈ ಕಾರಣದಿಂದಲೇ ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಪರಿಸರ ಶಿಕ್ಷಣವನ್ನು ಸೇರಿಸುವ ಜಾಗೃತಿ ಮೂಡುತ್ತಿದೆ. ಪ್ರಾಥಮಿಕ ಹಂತದಲ್ಲಿ ಪರಿಸರ ಶಿಕ್ಷಣವನ್ನು ವಿಜ್ಞಾನ ಮತ್ತು ಸಮಾಜ ವಿಜ್ಞಾನ ಮಾಹಿತಿ ಪಡೆದು ಸಮ್ಮಿಶ್ರ ಅಧ್ಯಯನಕ್ಷೇತ್ರವೆಂದು ಪರಿಚಯಿಸಲಾಗಿದೆ. ಆದ್ದರಿಂದ ಇದನ್ನು ಪರಿಸರ ಅಧ್ಯಯನವೆಂದು ಪರಿಗಣಿಸಲಾಗಿದೆ. ಇದು ಸಾಂಪ್ರದಾಯಿಕ ಬೋಧನಾ ಕಲಿಕಾ ಪದ್ಧತಿ ಬದಲು ಮಕ್ಕಳ ಸ್ವಅನುಭವ ಕಲಿಕೆ (experiential learning), ಕಲಿಯುವಿಕೆಗೆ ಶಿಶು ಕೇಂದ್ರಿತ ವ್ಯವಸ್ಥೆ ಆಗತ್ಯ ಎನ್ನಲಾಗಿದೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಸಮಗ್ರ ದೃಷ್ಟಿಕೋನ ಬೆಳೆಸಲು, ಪರಿಸರ ಕಾಳಜಿ, ಮನೋದೋರಣೆ, ಕೌಶಲ್ಯ ಹಾಗೂ ಮೌಲ್ಯಗಳನ್ನು ವಿಕಸಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಇದು ಮಕ್ಕಳ ಭವಿಷ್ಯಕ್ಕೆ ಹೂಡಿಕೆಯಾಗಿದೆ.

ಪ್ರಾಥಮಿಕ ಶಾಲಾ ಹಂತದಲ್ಲಿ ಪರಿಸರ ಅಧ್ಯಯನದ ವ್ಯಾಪ್ತಿ:

▪️ಟಿಬ್ಲಿಸಿ ಕಾನ್ಸರೆನ್ಸ್ 1977 'ಪರಿಸರವು ಸತತವಾಗಿ ಪ್ರತಿಕ್ರಿಯಿಸುವ ಎಲ್ಲಾ ವಸ್ತುಗಳ ಮೊತ್ತ ಮತ್ತು ಗ್ರಾಮಾಂತರ ಪ್ರದೇಶದ

▪️ಸಂಕೀರ್ಣ ಜೋಡಣೆಯಲ್ಲದೆ ಇನ್ನೂ ಹೆಚ್ಚಿನದಾಗಿರುತ್ತದೆ. ಅದು ಪ್ರಪಂಚದ ಬೇರೆ ಬೇರೆ ಭಾಗದ ಜನಗಳು, ಆರ್ಥಿಕ ಚೌಕಟ್ಟು,

▪️ಮನೋಭಾವ ಹಾಗೂ ಪದ್ಧತಿಗಳನ್ನು ಒಳಗೊಂಡಿರುತ್ತದೆ.

ಯುನೆಸ್ಕೋ 1990 ಮಾನವನಿಗೆ ಅನ್ವಯಿಸುವಂತೆ ವಿವಿಧ ಬಗೆಯ ಪರಿಸರವನ್ನು ಗುರುತಿಸಲಾಗಿದೆ.

1. ಭೌತಿಕ ಪರಿಸರ: ಒಬ್ಬ ವ್ಯಕ್ತಿಯು ವಾಸಿಸುವ ಪ್ರದೇಶದ ಭೌತಿಕ ಸ್ಥಿತಿಯಿಂದ ಗುರುತಿಸುವುದು.

2. ಸಾಮಾಜಿಕ ಪರಿಸರ: ಒಬ್ಬ ವ್ಯಕ್ತಿಯು ವಾಸಿಸುವ ಪ್ರದೇಶದ ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯ ಸ್ಥಿತಿ ಇವುಗಳಿಂದ ಗುರುತಿಸುವುದು. ಅವು ಒಬ್ಬ ವ್ಯಕ್ತಿಯ ಜೀವನ ನಡವಳಿಕೆಯ ಸ್ವಭಾವಗಳ ಮೇಲೆ ಪ್ರಭಾವ ಬೀರುತ್ತವೆ.

3. ಮನೋವೈಜ್ಞಾನಿಕ ಪರಿಸರ: ಇದು ಪ್ರತಿಯೊಬ್ಬ ವ್ಯಕ್ತಿಗೂ ವಿಶಿಷ್ಟವಾಗಿರುತ್ತದೆ.

ಪರಿಸರದಲ್ಲಿ ಪರಸ್ಪರ ಪ್ರತಿಕ್ರಿಯೆ:

ಪರಿಸರದಲ್ಲಿನ ಭೌತಿಕ ಹಾಗೂ ಜೈವಿಕ ಅಂಶಗಳಲ್ಲಿ ಪರಸ್ಪರ ಪ್ರತಿಕ್ರಿಯೆ ಅತಿ ಮುಖ್ಯವಾಗಿದೆ. ಪರಿಸರದಲ್ಲಿ ಮಾವನವನ್ನೊಳಗೊಂಡಂತೆ ಎಲ್ಲಾ ಸಜೀವಿಗಳೂ, ಭೌತಿಕ ಅಂಶಗಳ ಮೇಲೆ ಅವಲಂಬಿತವಾಗಿವೆ. ಅದೇ ರೀತಿ ಅನೇಕ ಭೌತಿಕ ಅಂಶಗಳು ಸಜೀವಿಗಳ ಚಟುವಟಿಕೆಯ ಮೇಲೆ ಅವಲಂಬಿತವಾಗಿವೆ. ಎಲ್ಲಾ ಸಜೀವಿಗಳು ಚಟುವಟಿಕೆಯ ಮೇಲೆ ಅವಲಂಬಿತವಾಗಿದೆ. ಎಲ್ಲಾ ಸಜೀವಿಗಳೂ ಜೀವಿಸಲು, ಆಕ್ಸಿಜನ್ ಅವಶ್ಯಕವಾಗಿದೆ. ಇದನ್ನು ನೆಲದ ಮೇಲೆ ವಾಪಿಸುವ ಜೀವಿಗಳು ವಾತಾವರಣದಿಂದ ಹಾಗೂ ಜಲಚರಗಳು ನೀರಿನಿಂದ ಪಡೆಯುತ್ತವೆ. ಈ ಕ್ರಿಯೆಯಲ್ಲಿ ಕಾರ್ಟನ್‌ ಡೈಆಕ್ಸೆಡ್ ಉಪ ಉತ್ಪನ್ನವಾಗಿ ಬಿಡುಗಡೆಯಾಗುತ್ತದೆ. ಸಸ್ಯಗಳು ತಮ್ಮ ಆಹಾರ ತಯಾರಿಸಲು ಈ ಕಾರ್ಬನ್ ಡೈ ಆಕ್ಸೆಡ್‌ನ್ನು ಕಚ್ಚಾವಸ್ತುವನ್ನಾಗಿ ಉಪಯೋಗಿಸುತ್ತವೆ. ಸಸ್ಯಗಳು, ನೀರಿನೊಂದಿಗೆ ಭೂಮಿಯಿಂದ ಆನೇಕ ಪೌಷ್ಟಿಕಾಂಶಗಳನ್ನು ಹೀರಿಕೊಳ್ಳುತ್ತವೆ. ಬ್ಯಾಕ್ಟಿರಿಯಾ ಮತ್ತು ಶಿಲೀಂದ್ರಗಳ, ವಿಭಜನಾ ಕ್ರಿಯೆಯಿಂದ, ಈ ಪೌಷ್ಟಿಕಾಂಶಗಳು ಪುನಃ ಭೂಮಿಗೆ ಸೇರುತ್ತವೆ. ಪರಿಸರದಲ್ಲಿ ಸ್ವಾಭಾವಿಕ ಚಕ್ರಗಳಾದ, ಕಾರ್ಬನ್‌ಚಕ್ರ, ನೈಟ್ರೋಜನ್‌ಚಕ್ರ ಹಾಗೂ ಜಲಚಕ್ರಗಳು, ಜೈವಿಕ ಮತ್ತುಅಜೈವಿಕ ಅಂಶಗಳ ನಡುವೆ ಪರಸ್ಪರಾವಲಂಬನೆಗೆ ಉದಾಹರಣೆಗಳಾಗಿವೆ. 

ಪರಿಸರ ವ್ಯವಸ್ಥೆಯಲ್ಲಿ ಕಾಣುವ ಆಹಾರ ಸರಪಳಿ ಮತ್ತು ಆಹಾರ ಜಾಲಗಳ ಸಂಖ್ಯೆ ಈ ಅಂಶಗಳಲ್ಲಿರುವ ಪರಸ್ಪರಾವಲಂಬನೆಗೆ ನಿದರ್ಶನಗಳಾಗಿವೆ. ಅಂತಹ ಪರಸ್ಪರಾವಲಂಬನೆ ಮತ್ತು ಪರಸ್ಪರ ಕ್ರಿಯೆಗಳು ಜೀವನಾಧಾರದ ಸಾರವಾಗಿದೆ. ಮಾನವರಾದ ನಾವು ಜೈವಿಕ ಪರಿಸರದ, ಬೇರ್ಪಡಿಸಲಾಗದ ಅಂಶವಾಗಿದ್ದೇವೆ. ನಾವು ನಮ್ಮ ಭೌತಿಕ ಪರಿಸರದ ಎಲ್ಲಾ ಅಂಶಗಳ ಮೇಲೆ ಅವಲಂಬಿಸಿದ್ದೇವೆ. ಅಲ್ಲದೇ ಮನುಷ್ಯರು, ತಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದ ಅನೇಕ ಅಂಶಗಳನ್ನೂ ಅವಲಂಬಿಸಿದ್ದಾರೆ. ಅಂತಹ ಪರಸ್ಪರಾವಲಂಬಿತ ಸಂಬಂಧದಲ್ಲಿ ಭಾಗಿಗಳಾದವರು, ಭಾವನಾತ್ಮಕವಾಗಿ, ಪರಿಸರೀಯವಾಗಿ ಮತ್ತು ನೈತಿಕವಾಗಿ ಒಬ್ಬರನ್ನೊಬ್ಬರು ಅವಲಂಬಿಸಿದ್ದಾರೆ ಹಾಗೂ ಅವಕ್ಕೆ ಜವಾಬ್ದಾರರಾಗಿರುತ್ತಾರೆ.

ಪರಿಸರ ಮತ್ತು ಮಗು:

ಮಗುವಿನ ಬಾಲ್ಯಾವಸ್ಥೆಯ ಬೆಳವಣಿಗೆಯಲ್ಲಿ 5 ಕ್ಷೇತ್ರಗಳಿವೆ ಅವುಗಳೆಂದರೆ:

ಶಾರೀರಿಕ: 

ಈ ಕ್ಷೇತ್ರದಲ್ಲಿ ಮಗುವು ಸರಳ ಕರಕುಶಲ ಕೆಲಸಗಳನ್ನು ಮಾಡಬಲ್ಲದು ಮತ್ತು ಸಮಸ್ಯೆಗಳನ್ನು ಬಿಡಿಸಬಲ್ಲದು.

ಸಾಮಾಜಿಕ: 

ಈ ಕ್ಷೇತ್ರದಲ್ಲಿ ಮಗುವು ಬೇರೆ ಬೇರೆ ವ್ಯಕ್ತಿಗಳೊಂದಿಗೆ ಸಂಬಂಧ ಬೆಳೆಸಲು ಮತ್ತು ಅವರೊಡನೆ ಪ್ರತಿಕ್ರಿಯಿಸಲುಆರಂಭಿಸುತ್ತದೆ.

ಭಾವನಾತ್ಮಕ: 

ಈ ಕ್ಷೇತ್ರದಲ್ಲಿ ಮಗುವು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಆರಂಭಿಸುತ್ತದೆ.

ಭಾಷಾತ್ಮಕ: 

ಈ ಕ್ಷೇತ್ರದಲ್ಲಿ ಮಗುವು ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದಲ್ಲದೇ ತನ್ನ ಭಾವನೆ ಹಾಗೂ ಸಂವೇದನೆಗಳನ್ನು ಅಭಿವ್ಯಕ್ತಿ ಪಡಿಸುವುದನ್ನು ಹೆಚ್ಚಿಸಿಕೊಳ್ಳುತ್ತದೆ.

ಜ್ಞಾನ ಸಂಬಂಧಿತ: 

ಈ ಕ್ಷೇತ್ರದಲ್ಲಿ ಮಗುವು ತನ್ನ ದಿನ ನಿತ್ಯದ ಪರಿಸರದೊಂದಿಗೆ ಪ್ರತಿಕ್ರಿಯಿಸುತ್ತದೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯವನ್ನು ಗಳಿಸಿಕೊಳ್ಳುತ್ತದೆ.

ಮಗುವಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಅಂಶಗಳು:

ಎಳೆಯ ವಿದ್ಯಾರ್ಥಿಗಳ ಗುಣಲಕ್ಷಣಗಳು:

▪️ಮಕ್ಕಳು ಈ ಹಂತದಲ್ಲಿ ತುಂಬಾ ಚಟುವಟಿಕೆಯಿಂದಿರುತ್ತಾರೆ. ಆದ್ದರಿಂದ ಇವರನ್ನು ಹಲವು ಬಗೆಯ ಆಟಗಳು, ಸಂವಾದಗಳು. ಪಾತ್ರಾಭಿನಯ ಮತ್ತು ಇಂತಹ ಇತರೆ ಚಟುವಟಿಕೆಗಳಲ್ಲೂ ತೊಡಗಿಸಬಹುದಾಗಿದೆ.

▪️ಅವರು ಬಹಳ ಕುತೂಹಲಗಳಾಗಿದ್ದು, ನಮ್ಮ ಪರಿಸರದಲ್ಲಿ ವಿಷಯಗಳನ್ನು ಅನ್ವೇಷಿಸುವುದರಲ್ಲಿ ಆಸಕ್ತಿ ಉಳ್ಳವರಾಗಿರುತ್ತಾರೆ.

▪️ಅವರ ಆಸಕ್ತಿಯ ಅವಧಿಯು ಬಹಳ ಕಡಿಮೆ ಇರುತ್ತದೆ. ಆದುದರಿಂದ ಶಿಕ್ಷಕರು ವಿಷಯಗಳನ್ನು ಬೋಧಿಸುವಾಗ ತಂತ್ರಗಳನ್ನು ಬದಲಾಯಿಸಬೇಕಾಗುತ್ತದೆ.

▪️ಮಕ್ಕಳು ಆಟದ ಮೂಲಕ ಕಲಿಯುವುದನ್ನು ಆನಂದಿಸುತ್ತಾರೆ. ಆದುದರಿಂದ ಅವರ ಕಲಿಕೆಯಲ್ಲಿ ಆಟಗಳು ಬಹುಮುಖ್ಯ ಪಾತ್ರವಹಿಸುತ್ತವೆ.

▪️ಅವರು ಬಹುಕಲ್ಪನಾ ಜೀವಿಗಳಾದ್ದರಿಂದ ಅತಿರೇಕದ ಕಲ್ಪನೆಗಳನ್ನು ಇಷ್ಟಪಡುತ್ತಾರೆ.

▪️ಅವರು ಹಿರಿಯ ವಿದ್ಯಾರ್ಥಿಗಳಗಿಂತ ಕಡಿಮೆ ಸಂಕೋಚ ಪ್ರವೃತ್ತಿಯವರಾಗಿರುತ್ತಾರೆ.

ಕಲಿಯಲು ಪರಿಸರವನ್ನು ಮುಖ್ಯವೆಂದು ಪರಿಗಣಿಸುವುದು:

ಒಂದು ಮಗುವಿನ ಸುತ್ತಮುತ್ತ ಇರುವ ಪರಿಸರವು ಆ ಮಗುವಿನ ಸವಾರ್ಂಗೀಣ ಬೆಳವಣಿಗೆಯಲ್ಲಿ ಅತೀ ಮುಖ್ಯ ಪಾತ್ರ ವಹಿಸುತ್ತದೆ. ಸುತ್ತಲಿನ ಪರಿಸರದ ಮನೋವೈಜ್ಞಾನಿಕ ಸಾಮಾಜಿಕ ಮತ್ತು ಸೈದ್ಧಾಂತಿಕ ಅಂಶಗಳು ಮಗುವಿನ ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಈ ಅಂಶಗಳು, ಪರಿಸರವನ್ನು ಬಹು ಮುಖ್ಯವೆಂದು ಪರಿಗಣಿಸಲು ಮಗುವಿಗೆ ಸಹಾಯ ಮಾಡುತ್ತವೆ.


ಮನೋವೈಜ್ಞಾನಿಕ ಪರಿಸರದ ಪ್ರಭಾವಗಳು:

▪️ಮನೋವೈಜ್ಞಾನಿಕ ಪರಿಸರದ ಮೂರು ಮೂಲಭೂತ ವಿಚಾರಗಳ ಬಗ್ಗೆ ಗಮನ ಕೊಡುವುದು ಅವಶ್ಯಕವಾಗಿದೆ.

▪️ಎಲ್ಲಾ ಕಲಿಕೆಗಳೂ ಭೌತಿಕ ಪರಿಸರದಲ್ಲಿ ನಡೆಯುತ್ತವೆ.

▪️ಮಕ್ಕಳು ನಿಷ್ಕ್ರಿಯವಾಗಿ ನೋಡುವುದು, ಕೇಳುವುದು ಅಥವಾ ಮುಟ್ಟುವುದು ಮಾಡುವುದಿಲ್ಲ, ಅವರು ಸಕ್ರಿಯವಾಗಿ ಕೇಳುತ್ತಾರೆ. ನೋಡುತ್ತಾರೆ ಹಾಗೂ ಅನುಭವಿಸುತ್ತಾರೆ. ಕಲಿಕಾ ಪರಿಸರದ ಭೌತಿಕ ಲಕ್ಷಣಗಳು ಮಕ್ಕಳನ್ನು ಮುಖ್ಯವಾದ ಜ್ಞಾನ ಹಾಗೂ ನಡವಳಿಕೆಗಳ ಪರಿಣಾಮಗಳೊಂದಿಗೆ ಸಂವೇದನಾತ್ಮಕವಾಗಿ ಪ್ರಭಾವಗೊಳಿಸುತ್ತದೆ.

ಸಾಮಾಜಿಕ ಪರಿಸರದ ಪ್ರಭಾವ:

ಬೋಧನೆ ಮತ್ತು ಕಲಿಕೆಯ ಪರಸ್ಪರ ಕ್ರಿಯೆಯಂತೆ ಸಾಮಾಜಿಕ ಸಂಬಂಧಗಳು ನೆಯ್ದ ರಚನೆಯೊಳಗೆ ಇರುತ್ತದೆ ಎಂಬುದು ತಿಳಿದಿದೆ. ವಿರಾಮದ ವೇಳೆಯಲ್ಲಿ ಸ್ನೇಹಿತರ ಜೊತೆ ಆಡುವುದು, ಬಿಡುವಿನ ಸಮಯದಲ್ಲಿ ಬೆಂಚಿನ ಮೇಲೆ ಕುಳಿತುಕೊಳ್ಳುವುದು, ಸಭೆಯಲ್ಲಿ ಒಟ್ಟಿಗೆ ಕಲೆಯುವುದು, ತರಗತಿಯಲ್ಲಿ ನಡೆಸುವ ಅಧ್ಯಯನ ಶಿಕ್ಷಕರು ಮತ್ತು ಸಹಪಾಠಿಗಳೊಂದಿಗೆ ಪ್ರವಾಸ, ಇವುಗಳು ಮತ್ತು ಇನ್ನೂ ಅನೇಕ ಚಟುವಟಿಕೆಗಳು, ಸಮುದಾಯವನ್ನು ಒಟ್ಟುಗೂಡಿಸುವುದಲ್ಲದೇ ಕಲಿಕಾ ಸಮುದಾಯದ ಲಕ್ಷಣವಾಗಿದೆ.

ಸೈದ್ಧಾಂತಿಕ ಪರಿಸರದ ಪ್ರಭಾವಗಳು:

ಪ್ರತಿಯೊಂದು ಮಗುವಿಗೂ ವಾಸ್ತವೀಕರಿಸುವ ಪ್ರಶಂಸೆಯನ್ನು ಉತ್ತೇಜಿಸುವ ವ್ಯತ್ಯಾಸಗಳನ್ನು ಸ್ವೀಕರಿಸುವ ಮತ್ತು ಜವಾಬ್ದಾರಿಗಳನ್ನು ಪ್ರೋತ್ಸಾಹಿಸುವ ಅಂತಹ ವಾತಾವರಣದಲ್ಲಿ ಬೆಳೆಯುವ ಹಕ್ಕಿದೆ. ತಂದೆ ತಾಯಿಯರ ಕುಟುಂಬದ ಸಮವಯಸ್ಕರ ಸಂಬಂಧಗಳು ಶಾಲಾ ಅನುಭವಗಳಲ್ಲದೇ. ಸಂಪ್ರದಾಯಗಳು, ಕಾನೂನುಗಳು ಮತ್ತು ಸಮುದಾಯದ ಪ್ರಮುಖ ಸಾಂಸ್ಕೃತಿಕ ಮೌಲ್ಯಗಳು ಇವುಗಳಿಂದ ಹಲವು ಸ್ತರಗಳಲ್ಲಿ ಪ್ರಭಾವಗೊಳ್ಳುತ್ತದೆ.

ಪರಿಸರ ಅಧ್ಯಯನ ಕಲಿಕೆಯ ಪ್ರಮುಖ ಕಲಿಕಾ ಫಲಿತಾಂಶಗಳು ಈ ಕೆಳಕಂಡಂತಿವೆ.

▪️ಪರಿಸರದ ಸಮಗ್ರವಾದ ಜ್ಞಾನವನ್ನು ಬೆಳೆಸುವುದು.

▪️ಸ್ವಾಭಾವಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರಗಳ ನಡುವಿನ ಸಂಬಂಧಗಳನ್ನು ಗುರುತಿಸುವುದು ಮತ್ತು ಗ್ರಹಿಸುವುದು.

▪️ಬಡತನ ಹಾಗೂ ಅಸಮಾನತೆಗಳಂತಹ ಸಾಮಾಜಿಕ ವಿವಾದಾಂಶಗಳ ಸೂಕ್ಷ್ಮತೆಯನ್ನು ಗುರುತಿಸುವುದು, ಪರಿವೀಕ್ಷಣೆಯ, ತೀರ್ಮಾನಿಸುವ, ಉದಾಹರಿಸುವ ಮತ್ತು ಇತರ ಕೌಶಲ್ಯಗಳ ಆಧಾರದಿಂದ ತಿಳುವಳಿಕೆ ಹೆಚ್ಚಿಸುವುದು.

▪️ಶಬ್ದ ಭಂಡಾರವನ್ನು ಹೆಚ್ಚಿಸುವುದು.

▪️ವೈವಿಧ್ಯತೆ, ಸಮಾನತೆ, ನ್ಯಾಯ, ಘನತೆ ಮತ್ತು ಸ್ವಂತ ಯೋಚನೆ ಇಂತಹ ಮಾನವೀಯ ಮೌಲ್ಯಗಳನ್ನು ಬೆಳೆಸುವುದು.

2. ಪ್ರಾಥಮಿಕ ಹಂತದಲ್ಲಿ ಪರಿಸರ(EVS) ಅಧ್ಯಯನವನ್ನು ಸೇರಿಸುವ ಉದ್ದೇಶಗಳು:

ಎನ್.ಸಿ.ಎಫ್ 2005 ರಲ್ಲಿ ಸೂಚಿಸಿದ ಅಭಿಪ್ರಾಯದಂತೆ, ಪರಿಸರ ಶಿಕ್ಷಣದ ಪ್ರಮುಖ ದೃಷ್ಟಿಏನೆಂದರೆ, "ವಿದ್ಯಾರ್ಥಿಗಳನ್ನು ಅವರು ಜೀವಿಸುವ ನೈಸರ್ಗಿಕ ಹಾಗೂ ಸಾಮಾಜಿಕ. ನಿಜ ಜೀವನಕ್ಕೆ ಅವರನ್ನು ಒಡ್ಡಲು ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಕಾಳಜಿಗಳನ್ನು ವಿಶ್ಲೇಷಿಸಿ, ಮೌಲ್ಯಮಾಪನ ಮಾಡಲು ಮತ್ತು ತೀರ್ಮಾನ ಕೈಗೊಳ್ಳಲು ಸಾಧ್ಯವಾಗುವಂತೆ ಮಾಡಲು ಸಾಧ್ಯವಿದ್ದಲ್ಲಿ ನಾವು ಗ್ರಹಿಸಿದ ಪರಿಸರದ ಸಮಸ್ಯೆಗಳನ್ನು ಸೇರಿಸಲು ಮತ್ತು ಸುಸ್ಥಿರ ಅಭಿವೃದ್ಧಿಯೆಡೆಗೆ ಸುಗಮವಾಗಿ ಸಾಗುವಂತೆ ಸಕಾರಾತ್ಮಕ ಕ್ರಮವನ್ನು ಉತ್ತೇಜಿಸಲು.

ಪರಿಸರ ಎಂಬ ಪದದ ಸರಳವಾದ ಅರ್ಥ ನಮ್ಮ ಸುತ್ತ ಇರುವುದು ಅಥವಾ ನಮ್ಮ ಸುತ್ತ ಇರುವ "ಜಗತ್ತು" ಎಂದು ಹೇಳಬಹುದು (ಪರಿಸರ) (Environment) ಎಂಬ ಪದವನ್ನು (ಎನ್ವಿರಾನರ್) 'Environner' ಎಂಬ ಫ್ರೆಂಚ್ ಭಾಷೆಯಿಂದ ತೆಗೆದುಕೊಳ್ಳಲಾಗಿದೆ.

ಪರಿಸರ ಅಧ್ಯಯನವು 'ಪರಿಸರದೊಂದಿಗೆ ಮಾನವನ ಪ್ರತಿಕ್ರಿಯೆಯ ಕ್ರಮಬದ್ಧ ಅಧ್ಯಯನ ಹಾಗೂ ಸಂಕೀರ್ಣ ಪರಿಸರ ಸಮಸ್ಯೆಗಳನ್ನು ಪರಿಹರಿಸುವತ್ತ ಆಸಕ್ತಿ ಮೂಡಿಸುತ್ತದೆ".

ಆವಾಸದ ಪ್ರಾಮುಖ್ಯತೆ:

▪️ಯಾವುದೇ ಪ್ರಾಣಿವರ್ಗವು ಏಳಿಗೆಯಾಗಲು,

▪️ಪ್ರಾಣಿಗಳಿಗೆ ಆಹಾರ ದೊರಕುವ ಸಾಧ್ಯತೆ.

▪️ತಮ್ಮ ಶತ್ರುಗಳನ್ನೆದುರಿಸಲು,

▪️ಸಾಮಾಜಿಕ ಒಡನಾಡಿಗಳನ್ನು ಭೇಟಿ ಮಾಡಲು,

UNESCO ವ್ಯಾಖ್ಯಾನಿಸುವಂತೆ "ಪರಿಸರ ಶಿಕ್ಷಣವು ಪರಿಸರ ಮತ್ತು ಸಂಬಂಧಿತ ಸವಾಲುಗಳ ಬಗ್ಗೆ ಜನಗಳು ಪಡೆಯುವ ಮತ್ತು ಜಾಗೃತಿ ಉಂಟುಮಾಡುವ ಸವಾಲುಗಳನ್ನು ಎದುರಿಸಲು ಬೇಕಾದ ಕೌಶಲಗಳನ್ನು ಮತ್ತು ಪಾಂಡಿತ್ಯ ಪರಿಣಿತಿಯನ್ನು ಬೆಳೆಸುವ, ಉತ್ತಮ ನಿರ್ಧಾರಗಳನ್ನು ಹಾಗೂ ಒಳ್ಳೆಯ ಕೆಲಸಗಳನ್ನು ಮಾಡಲು ಬೇಕಾದ ಮನೋಧೋರಣೆಯನ್ನು, ಪ್ರೇರಣೆಯನ್ನು, ಕಾರ್ಯ ಬದ್ಧತೆಯನ್ನು ಉಂಟುಮಾಡುವ ಒಂದು ಕಲಿಕಾ ಪ್ರಕ್ರಿಯೆ",

ಪರಿಸರ ಅಧ್ಯಯನವು ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಪರಿಸರ ಇವುಗಳಿಂದ ಮಾಹಿತಿ ಪಡೆದ ಸಮ್ಮಿಶ್ರ ಅಧ್ಯಯನ ಕ್ಷೇತ್ರ. ಪರಿಸರ ಅಧ್ಯಯನವು ಮಕ್ಕಳಿಗೆ, ಅನ್ವೇಷಿಸಲು, ಅರ್ಥಮಾಡಿಕೊಳ್ಳಲು, ಶ್ಲಾಘಿಸಲು ಪರಸ್ಪರ ಪ್ರತಿಕ್ರಿಯಿಸಲು ಹಾಗೂ ಪರಿಸರದ ಮೌಲೀಕರಿಸಲು ಸಮರ್ಥಗೊಳಿಸಿ, ಅರ್ಥೈಸಲು ಮತ್ತು ತಮ್ಮ ಸುತ್ತಲಿನ ಪರಿಸರ ಸ್ವಾಭಾವಿಕ ಜಗತ್ತು ಹಾಗೂ ಸಮುದಾಯದೊಂದಿಗೆ ಸಂಬಂಧ ಕಲ್ಪಿಸುವುದರ ಮೂಲಕ ಕಲಿಕೆಯಲ್ಲಿ ಸಂತಸ ತರಲು ಸಹಾಯ ಮಾಡುತ್ತದೆ.

▪️ಪರಿಸರ ಅಧ್ಯಯನವು ಒಂದು ಸಂಕೀರ್ಣ ಕ್ಷೇತ್ರವಾಗಿ ತಮ್ಮ ನೈಸರ್ಗಿಕ ಹಾಗೂ ಮಾನವ ನಿರ್ಮಿತ ಪರಿಸರ ಹಾಗೂ ಪರಿಸರದ ವಿವಿಧ ಅಂಶಗಳ (ಜೈವಿಕ, ಅಜೈವಿಕ ಮತ್ತು ಮಾನವ ನಿರ್ಮಿತ) ಮೇಲೆ ನಮ್ಮ ಅವಲಂಬನೆ ಇವುಗಳೊಂದಿಗೆ ಸಂಬಂಧಕಲ್ಪಿಸಲು

▪️ಅವರ ಪರಿಸರವನ್ನು ಸಮಗ್ರವಾಗಿ ತಿಳಿದುಕೊಳ್ಳಲು.

▪️ನಮ್ಮ ಪರಿಸರದ ವಿವಾದಗಳು/ಸಮಸ್ಯೆಗಳು ಇವುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ಸಮಗ್ರತೆಯ ಮೇಲೆ ನಮ್ಮ ನಿತ್ಯ ಚಟುವಟಿಕೆಗಳ ಪರಿಣಾಮಗಳನ್ನು ಪ್ರಶಂಸಿಸುವುದನ್ನು ಬಹುಶಿಸ್ತಿನ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು.

▪️ನಮ್ಮ ಪರಿಸರವನ್ನು ರಕ್ಷಿಸಲು ಮತ್ತು ಉಳಿಸಿಕೊಳ್ಳಲು ಅನುಕೂಲಕರ ನಡವಳಿಕೆಗಳ ಹಾಗೂ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಮಕ್ಕಳನ್ನು ಶಕ್ತಗೊಳಿಸುತ್ತದೆ.

ಪರಿಸರ ಅಧ್ಯಯನದ ಉದ್ದೇಶಗಳು:

1. ಪರಿಸರ ರಕ್ಷಣೆ ಮತ್ತು ಸಂರಕ್ಷಣೆ ಮಾಡುವಲ್ಲಿ ಶಿಕ್ಷಣ ಪ್ರಮುಖ ಸಾಧನವಾಗಿದೆ.

2. ಎಲ್ಲಾ ವರ್ಗದ ಜನರಲ್ಲಿ ಪರಿಸರ ಕುರಿತು ಅರಿವು ಮತ್ತು ಜ್ಞಾನವನ್ನು ಅಭಿವೃದ್ಧಿಗೊಳಿಸುವುದು.

3. ಮಕ್ಕಳಲ್ಲಿ ಪರಿಸರದ ಬಗೆಗಿನ ಸಮಗ್ರ ದೃಷ್ಟಿಕೋನವನ್ನು ಅಭಿವೃದ್ಧಿಗೊಳಿಸುವುದು.

4. ಮಕ್ಕಳ ವಾಸ್ತವಿಕ ಪರಿಸರದಲ್ಲಿನ ಕಲಿಕಾ ಅನುಭವಗಳನ್ನು ಸಾಂದರ್ಭಿಕರಿಸಲು.

5. ಪರಿಸರ ಸ್ನೇಹಿ ಮನೋಭಾವನೆ ಮೌಲ್ಯಗಳು ಮತ್ತು ವರ್ತನೆಗಳನ್ನು ಪ್ರೋತ್ಸಾಹಿಸಲು.

6. ಅನ್ವೇಷಣಾ ಕಲಿಕೆ, ಅನುಭವಾತ್ಮಕ ಕಲಿಕೆ, ಚಟುವಟಿಕೆ ಆಧಾರಿತ ಕಲಿಕೆ ಮೂಲಭೂತ ಕೌಶಲ್ಯ ಆಧಾರಿತ ಕಲಿಕೆ.

ಶಾಲಾ ಮಟ್ಟದಲ್ಲಿ ಪರಿಸರ ಅಧ್ಯಯನ ಕುರಿತಂತೆ ರಾಷ್ಟ್ರೀಯ ಶಿಕ್ಷಣ ನೀತಿ (1986) ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್.ಸಿ.ಎಫ್./ರಾಪಚೌ 2005)

ಮೂಲಭೂತ ಶಿಕ್ಷಣ: ಭೌತಿಕ ಮತ್ತುಜೈವಿಕ ಪರಿಸರದಲ್ಲಿನ ಸತ್ಯಾಂಶಗಳು, ಪರಿಕಲ್ಪನೆಗಳು, ತತ್ವಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ಸರಿಯಾದ ತಿಳುವಳಿಕೆ ಬೆಳೆಸುವುದು. ಪ್ರಾಥಮಿಕ ಶಾಲೆಗಳಲ್ಲಿ ವಿಜ್ಞಾನ ಬೋಧನೆಯ ಮುಖ್ಯ ಉದ್ದೇಶವಾಗಿದೆ" ಎಂದು ಶಿಫಾರಸು ಮಾಡಿದೆ (ಕೊಠಾರಿ ಆಯೋಗ).

ರಾಷ್ಟ್ರೀಯ ಶಿಕ್ಷಣ ನೀತಿ (1986) 'ಪರಿಸರ ಸಂರಕ್ಷಣೆ ಒಂದು ಮೌಲ್ಯವಾಗಿದೆ. ಅದು ಇತರ ಮೌಲ್ಯಗಳೊಂದಿಗೆ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಒಂದು ಅವಿಭಾಜ್ಯ ಅಂಗವಾಗಬೇಕು ಎಂದು ಅದು ಹೇಳಿದೆ. ಪರಿಸರ ಪ್ರಜ್ಞೆ ಮೂಡಿಸುವುದು ಪ್ರಮುಖ ಅಗತ್ಯವಾಗಿದೆ. ಅದು ಸಮಾಜದಲ್ಲಿ, ಮಗುವಿನಿಂದ ಹಿಡಿದು ಎಲ್ಲಾ ವಯಸ್ಸಿನವರೆಗೂ ಹಾಗೂ ಎಲ್ಲಾ ವರ್ಗದವರಿಗೂ ಹರಡಬೇಕು. ಪರಿಸರ ಪ್ರಜ್ಞೆಯನ್ನು, ಶಾಲಾ ಕಾಲೇಜುಗಳಲ್ಲಿ ಬೋಧಿಸುವುದರಲ್ಲಿ ತಿಳಿಸಬೇಕು. ಈ ವಿಷಯವು, ಇಡೀ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಸಮಗ್ರವಾಗಿ ಇರಬೇಕು.

ಶಾಲಾ ಶಿಕ್ಷಣದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು(NCFSE-2000) ಈ ಚೌಕಟ್ಟು ಶಾಲೆಯ ಎಲ್ಲಾ ಹಂತಗಳಲ್ಲೂ ಪರಿಸರ ಕಾಳಜಿಗಳಿರಬೇಕೆಂದು ಎತ್ತಿ ತೋರಿಸಿದೆ. ಅದು ಹೇಳುವಂತೆ ಪರಿಸರದ ಸ್ವಾಭಾವಿಕ ಸಾಮಾಜಿಕ ಭಾಗಗಳು, ಅವುಗಳ ಪರಸ್ಪರ ಪ್ರತಿಕ್ರಿಯೆಗಳು ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಪರಿಸರ ಸಂರಕ್ಷಿಸುವ ಮಾರ್ಗೋಪಾಯಗಳನ್ನೊಳಗೊಂಡಂತೆ ಪರಿಸರವನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಬೇಕು.

ಪರಿಸರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ತೀರ್ಪು:

ಪರಿಸರ ಜಾಗೃತಿ, ಪರಿಸರದ ಸಮಸ್ಯೆಗಳು ಹಾಗೂ ಮಾಲಿನ್ಯತೆಗೆ ಸಂಬಂಧಿಸಿದಂತೆ ಎಲ್ಲಾ ವಿಷಯಗಳಲ್ಲಿ ಕಡ್ಡಾಯವಾಗಿ ಶಿಕ್ಷಣದ ಮೂಲಕ ಕೊಡಬೇಕೆಂದು ತಾತ್ವಿಕವಾಗಿ ನಾವು ಒಪ್ಪುತ್ತೇವೆ. ಈ ಸೂಚನೆಯು ಮುಂದೆ ಹೇಳಿರುವಂತೆ, ಕಾಲೇಜು ಹಂತಗಳಲ್ಲಿ ಸರ್ಕಾರ ಮತ್ತು ಶಿಕ್ಷಣ ಮಂಡಳಿಗಳು, ಪ್ರೌಢ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಪರಿಸರ ಶಿಕ್ಷಣವನ್ನು ಹಂತ ಹಂತವಾಗಿ ಹಾಗೂ ಕಡ್ಡಾಯವಾಗಿ ಸೇರಿಸಬೇಕು".

logoblog

Thanks for reading Environmental studies: ಪರಿಸರ ಅಧ್ಯಯನ ಕಲಿಕೆಯನ್ನು ಅನುಕೂಲಿಸುವುದು

Previous
« Prev Post

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ