ತುಟ್ಟಿಭತ್ಯೆ ಹೆಚ್ಚಳ: ರಾಜ್ಯ ಸರ್ಕಾರಿ ನೌಕರರಿಗೆ ಶುಭ ಸುದ್ದಿ
ರಾಜ್ಯ ಸರ್ಕಾರಿ ನೌಕರರಿಗೆ ಶೇ.2ರಷ್ಟು ತುಟ್ಟಿಭತ್ಯೆ (Dearness Allowance) ಹೆಚ್ಚಿಸುವ ಕಡತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿದ್ದಾರೆ.
ಹೊಸ ತುಟ್ಟಿಭತ್ಯೆ ಏರಿಕೆ 2025ರ ಜುಲೈ 1ರಿಂದ ಅನ್ವಯವಾಗಲಿದ್ದು, ಮುಂದಿನ ಎರಡು-ಮೂರು ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆಯಿದೆ ಎಂದು ತಿಳಿಸಲಾಗಿದೆ.
ಹಿಂದಿನಿಂದಲೂ ಕೇಂದ್ರ ಸರ್ಕಾರವು ಅಖಿಲ ಭಾರತ ಬೆಲೆ ಸೂಚ್ಯಂಕದ ಆಧಾರದ ಮೇಲೆ ತುಟ್ಟಿಭತ್ಯೆ ಹೆಚ್ಚಿಸಿದಾಗ, ರಾಜ್ಯ ಸರ್ಕಾರವೂ ಅದರಂತೆ ರಾಜ್ಯ ಸರ್ಕಾರಿ ನೌಕರರಿಗೆ ಹೆಚ್ಚಳವನ್ನು ಮಂಜೂರು ಮಾಡುವ ಪರಂಪರೆ ಇದೆ. ಇದೇ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಾಕಿ ಇರುವ ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿತ್ತು.
ಪ್ರಸ್ತುತ ಕೇಂದ್ರ ಸರ್ಕಾರವು 2025ರ ಜುಲೈ 1ರಿಂದ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳವನ್ನು ಅನುಮೋದಿಸಿರುವುದರಿಂದ, ರಾಜ್ಯ ಸರ್ಕಾರಿ ನೌಕರರಿಗೂ ಅದೇ ದಿನಾಂಕದಿಂದ ಶೇ.3ರಷ್ಟು ನಗದು ರೂಪದಲ್ಲಿ ತುಟ್ಟಿಭತ್ಯೆ ನೀಡುವಂತೆ ಸಂಘವು ವಿನಂತಿಸಿತ್ತು. ಇದರ ನಂತರ ಸಿಎಂ ಸಿದ್ದರಾಮಯ್ಯ ಅವರು ಶೇ.2ರಷ್ಟು ತುಟ್ಟಿಭತ್ಯೆ ಹೆಚ್ಚಿಸುವ ಕಡತಕ್ಕೆ ಅನುಮೋದನೆ ನೀಡಿದರು.
ಇಂದು ತುಟ್ಟಿ ಭತ್ಯೆ ಹೆಚ್ಚಳ ಬಗ್ಗೆ ಈ ಕೆಳಗಿನಂತೆ ಆದೇಶ ಹೊರಡಿಸಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ