VIDYAVANI

Education and Career

ಶನಿವಾರ, ಅಕ್ಟೋಬರ್ 25, 2025

ಸೇವಾ ನಿರತ ಶಿಕ್ಷಕರಿಗೆ KARTET ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸ್ಪಷ್ಟೀಕರಣ

  VIDYAVANI       ಶನಿವಾರ, ಅಕ್ಟೋಬರ್ 25, 2025
ಸೇವಾ ನಿರತ ಶಿಕ್ಷಕರಿಗೆ KARTET ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸ್ಪಷ್ಟೀಕರಣ.


ರಾಜ್ಯದ ಸಮಸ್ತ ಶಿಕ್ಷಕರ ಗಮನಕ್ಕೆ.......

ಕರ್ನಾಟಕದಲ್ಲಿ TET ಪರೀಕ್ಷೆಗೆ ಅಧಿಸೂಚನೆ ಹೊರಡಿಸಿದ್ದು, ಸೇವಾನಿರತ ಶಿಕ್ಷಕರಿಗಾಗಿ ಈ ಪರೀಕ್ಷೆಯನ್ನು ನಡೆಸುತ್ತಿದೆಯೇ? ಖಂಡಿತವಾಗಿಯೂ ಇಲ್ಲ. ಈಗ ಅಧಿಸೂಚನೆ ಹೊರಡಿಸಿರುವ TET ಪರೀಕ್ಷೆಯು D.Ed, TCH ಪೂರ್ಣಗೊಳಿಸಿರುವ ಪ್ರಶಿಕ್ಷಣಾರ್ಥಿಗಳು CET ಬರೆದು ಶಿಕ್ಷಕರಾಗಿ ಆಯ್ಕೆಗೊಳ್ಳಲು ಅರ್ಹತೆಯನ್ನು ಪಡೆಯುತ್ತಿರುವ ಶಿಕ್ಷಣಾರ್ಥಿಗಳಿಗಾಗಿ ನಡೆಸುತ್ತಿರುವ ಪರೀಕ್ಷೆಯಾಗಿದೆ.

ಆದರೆ ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ದಿನಾಂಕ: 01-09-2025ರ ಆದೇಶದಂತೆ

▪️ರಾಷ್ಟ್ರದ ಎಲ್ಲಾ ಶಿಕ್ಷಕರು (1 ರಿಂದ 8ಕ್ಕೆ ಪಾಠ ಮಾಡುವ) 

▪️ಕಡ್ಡಾಯವಾಗಿ ಸೇವೆಯಲ್ಲಿ ಮುಂದುವರೆಯಲು 2 ವರ್ಷದಲ್ಲಿ TET ಪಾಸ್ ಆಗಬೇಕು.

▪️5 ವರ್ಷ ಸೇವೆ ಉಳಿದಿರುವ ಶಿಕ್ಷಕರು ಸೇವೆಯಲ್ಲಿ ಮುಂದುವರೆಯಬಹುದು, 

ಆದರೆ ಬಡ್ತಿಯನ್ನು ಹೊಂದಲು ಅವರು ಕೂಡ TETಯನ್ನು ಪಾಸಾಗಲೇಬೇಕೆಂದು ಗೌರವಾನ್ವಿತ ಸುಪ್ರೀಂಕೋರ್ಟ್ ಸಂವಿಧಾನದ ಆರ್ಟಿಕಲ್ (142) ಪ್ರಕಾರ ಪರಮಾಧಿಕಾರವನ್ನು ಉಪಯೋಗಿಸಿ ಆದೇಶಿಸಿದೆ.

ಆದರೆ ಈ ಆದೇಶದ ಕುರಿತು ರಾಜ್ಯದ ಸಮಸ್ತ ಶಿಕ್ಷಕರ ಗಮನಕ್ಕೆ ತರಬಯಸುವುದೇನೆಂದರೆ,

ಸದರಿ ಆದೇಶದ ಕುರಿತು ಕರ್ನಾಟಕ ಸರ್ಕಾರದ ಕಾನೂನು ಸಚಿವರಾದ ಸನ್ಮಾನ್ಯ ಶ್ರೀ ಎಚ್.ಕೆ.ಪಾಟೀಲ್ ರವರು ಹಾಗೂ ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ರವರ ಜೊತೆ ಹಲವಾರು ಬಾರಿ ಚರ್ಚಿಸಲಾಗಿದ್ದು, ಸರ್ಕಾರದಿಂದ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.), ಬೆಂಗಳೂರು ಸೇರಿದಂತೆ ರಾಷ್ಟ್ರದ ಹಲವಾರು ರಾಜ್ಯಗಳು ಅಖಿಲ ಭಾರತ ಶಿಕ್ಷಕರ ಫೆಡರೇಶನ್ ನವದೆಹಲಿಯ ಜೊತೆ ಸಂಯೋಜನೆ ಹೊಂದಿದ್ದು, ಸದರಿ ಸಂಘಟನೆಯಿಂದ ಸುಪ್ರೀಂಕೋರ್ಟ್‌ನಲ್ಲಿ 

▪️Review Petition
▪️Writ Petition
▪️Modification Application

ಈ ರೀತಿಯ ಅರ್ಜಿಗಳನ್ನು ಸಲ್ಲಿಸಿ ರಾಷ್ಟ್ರದ ಸೇವಾನಿರತ ಶಿಕ್ಷಕರಿಗೆ ನ್ಯಾಯ ಒದಗಿಸಲು ನ್ಯಾಯಾಲಯದಲ್ಲಿ ಹೋರಾಟ ಮಾಡಲಾಗುತ್ತಿದೆ.

▪️ನ್ಯಾಯಾಲಯದಲ್ಲಿ ನ್ಯಾಯಾಂಗ ಹೋರಾಟದ ಜೊತೆಗೆ ಅಖಿಲ ಭಾರತ ಶಿಕ್ಷಕರ ಪೇಡರೇಷನ್ ನೇತೃತ್ವದಲ್ಲಿ ನವೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರದ ಗಮನವನ್ನು ಸೆಳೆಯಲು ದೆಹಲಿಯಲ್ಲಿ ಹೋರಾಟವನ್ನು ಕೂಡ ರೂಪಿಸಲಾಗಿದೆ.

▪️ಇದರ ಜೊತೆಗೆ ಈಗಾಗಲೇ ಕೇಂದ್ರ ಸಚಿವರುಗಳಾದ ಸನ್ಮಾನ್ಯ ಶ್ರೀ ಪ್ರಹ್ಲಾದ್ ಜೋಶಿ ರವರನ್ನು ಹಾಗೂ ಸನ್ಮಾನ್ಯ ಶ್ರೀ ಹೆಚ್.ಡಿ.ಕುಮಾರಸ್ವಾಮಿ ರವರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದಿಂದ ಸೂಕ್ತ ಸೇವಾ ಭದ್ರತೆಗೆ ಕಾನೂನು ರೂಪಿಸಲು ಒತ್ತಾಯಿಸಲಾಗಿದೆ.

▪️ಬೇರೆ-ಬೇರೆ ರಾಜ್ಯಗಳಿಂದ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವರಾದ ಸನ್ಮಾನ್ಯ ಶ್ರೀ ಧಮೇರ್ಂದ್ರ ಪ್ರಧಾನ್ ರವರಿಗೆ ಸದರಿ ನ್ಯಾಯಾಲಯದ ಆದೇಶದಿಂದ 40 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಆಘಾತಕ್ಕೆ ಉಂಟಾಗಿರುವ ಬಗ್ಗೆ ಗಮನ ಸೆಳೆಯಲಾಗಿದ್ದು, ಅವರು ಕೂಡ ಕೇಂದ್ರ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದೆಂದು ತಿಳಿಸಿರುತ್ತಾರೆ.

ಆದ ಕಾರಣ ರಾಜ್ಯದ ಸೇವಾನಿರತ ಶಿಕ್ಷಕರ ಸೇವೆಯಲ್ಲಿ ಮುಂದುವರೆಯಲು ಹಾಗೂ ಬಡ್ತಿ ಹೊಂದಲು ನ್ಯಾಯಾಲಯದ ಆದೇಶದಂತೆ TETಯನ್ನು ಕಡ್ಡಾಯಗೊಳಿಸಿರುವುದು 15,20,25,30 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರ ಮೇಲೆ ತೀವ್ರ ಆಘಾತವನ್ನು ಉಂಟುಮಾಡಿದ್ದು, ಸೇವಾನಿರತ ಶಿಕ್ಷಕರು ಈ ಆದೇಶದ ಬಗ್ಗೆ ಯಾವುದೇ ಆತಂಕಕ್ಕೆ ಒಳಗಾಗಬಾರದು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯು ನ್ಯಾಯಾಂಗ ಹೋರಾಟವನ್ನು ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಸದರಿ ಅಂಶವನ್ನು ಬದಲಾವಣೆ ಮಾಡುವುದರೊಂದಿಗೆ ಯಾವುದೇ ಕಾರಣಕ್ಕೂ TETಯನ್ನು ಪೂರ್ವಾನ್ವಯಗೊಳಿಸದಂತೆ ಹೋರಾಟ ಮಾಡಿ ನ್ಯಾಯ ದೊರಕಿಸಲಾಗುವುದು.

ಕಾರಣ ಯಾವ ಶಿಕ್ಷಕರು TET ಪರೀಕ್ಷೆ ಬಗ್ಗೆ ಆತಂಕಗೊಳ್ಳದೇ ಸೇವೆಯಲ್ಲಿ ಯಥಾವತ್ತಾಗಿ ನೆಮ್ಮದಿಯಿಂದ ತೊಡಗಿಸಿಕೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

ವಂದನೆಗಳೊಂದಿಗೆ...

ಶ್ರೀ ಚೇತನ್.ಹೆಚ್.ಎಸ್. ಪ್ರಧಾನ ಕಾರ್ಯದರ್ಶಿ
 ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು

ಶ್ರೀ ಚಂದ್ರಶೇಖರ ನುಗ್ಗಲಿ ಅಧ್ಯಕ್ಷರು
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು.



logoblog

Thanks for reading ಸೇವಾ ನಿರತ ಶಿಕ್ಷಕರಿಗೆ KARTET ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸ್ಪಷ್ಟೀಕರಣ

Previous
« Prev Post

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ