VIDYAVANI

Education and Career

ಶುಕ್ರವಾರ, ಅಕ್ಟೋಬರ್ 31, 2025

Cabinet meeting-2025 ಪೊಲೀಸ್ ನೇಮಕಕ್ಕೆ ಪಿಯು ಕಡ್ಡಾಯ

  VIDYAVANI       ಶುಕ್ರವಾರ, ಅಕ್ಟೋಬರ್ 31, 2025
Cabinet meeting-2025 ಪೊಲೀಸ್ ನೇಮಕಕ್ಕೆ ಪಿಯು ಕಡ್ಡಾಯ...




ಕಾನ್‌ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ ಗಳು ದ್ವಿತೀಯ ಪಿಯುಸಿ ಉತ್ತೀರ್ಣ ಆಗಿರಲೇ ಬೇಕು. ಈ ಬಗ್ಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಪ್ರಸ್ತುತ ಕನಿಷ್ಠ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು ಎಂದು ಇದೆ. ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವ ಎಚ್.ಕೆ. ಪಾಟೀಲ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ ಆರ್‌ಪಿ) ಮತ್ತು ಭಾರತೀಯ ಮೀಸಲು ಪಡೆಯ (ಐಆರ್‌ಬಿಕರಡು ವೃಂದ ಮತ್ತು ನೇಮಕಾತಿ ನಿಯ ಮಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಆಹ್ವಾನಿಸಿ ಪ್ರಕಟಿಸಬೇಕು.

ಕರಡು ನಿಯಮಗಳಿಗೆ ಸ್ವೀಕೃತವಾಗುವ ಆಕ್ಷೇ ಪಣೆಗಳು ಗುರುತರವಾಗಿಲ್ಲದಿದ್ದಲ್ಲಿ ಮತ್ತೊಮ್ಮೆ ಸಂಪುಟದ ಅನುಮೋದನ ಪಡೆಯದೆ ಅಂತಿಮಗೊಳಿಸಿ ಪ್ರಕಟ ಸಲು ಸೂಚಿಸಲಾಗಿದೆ ಎಂದರು.

ಕಾನ್‌ಸ್ಟೇಬಲ್ ಹುದ್ದೆಗೆ ಕನಿಷ್ಠ ದ್ವಿತೀಯ ಪಿಯುಸಿ ಉತ್ತೀರ್ಣ ಆಗಿರಲೇಬೇಕು ಸಚಿವ ಸಂಪುಟ ಸಭೇಲಿ ನಿರ್ಧಾರ ಪ್ರಸ್ತುತ ಎಸ್ಸೆಸ್ಸೆಲ್ಸಿ ಪಾಸ್ ಆಗಿದ್ದರೆ ಸಾಕಿತ್ತು.

ನಿನ್ನೆ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ಅಂಶಗಳು.

▪️ಸರ್ಕಾರಿ ಶಾಲೆಗಳಲ್ಲಿ 2,200 ಕೊಠಡಿಗಳನ್ನು ನಿರ್ಮಾಣ ಮಾಡುವ ಕಾರ್ಯವನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲು ತೀರ್ಮಾನ

▪️ರಾಜ್ಯದ ನಾಲ್ಕು ಬ೦ದರುಗಳಾದ ಕಾರವಾರ, ಹಳೇ ಮಂಗಳೂರು (ಬೇಂಗ್ರೆ ಬದಿ), ಹಳೇ ಮಂಗಳೂರು (ನಗರ ಬದಿಯ) ಮತ್ತು ಮಲ್ಪೆಯ ಬರ್ತ್‌ಗಳನ್ನು ಸಾರ್ವಜನಿಕ - ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ರಿಪೇರಿ - ಕಾರ್ಯಾಚರಣೆ - ನಿರ್ವಹಣೆ - ವರ್ಗಾವಣೆ (ROMT) ಆಧಾರದಲ್ಲಿ ಅಭಿವೃದ್ಧಿಪಡಿಸಲು ನಿರ್ಧಾರ

▪️ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಕಾಲುವೆ ಫಾರ್ಮ್‌ನಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಪ್ರಾಥಮಿಕ ಹಂತದಲ್ಲಿ ₹23.25 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ದುರಸ್ತಿ ಮತ್ತು ನವೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ.

▪️ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ 5 ಬೆಂಗಳೂರು ನಗರ ಪಾಲಿಕೆಗಳ ವ್ಯಾಪ್ತಿಯ ವಾರ್ಡ್ ಅಭಿವೃದ್ಧಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ₹10.55 ಕೋಟಿಗಳ ಮೊತ್ತದಲ್ಲಿ ಕೈಗೊಳ್ಳುವ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ

▪️ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ 5 ಬೆಂಗಳೂರು ನಗರ ಪಾಲಿಕೆಗಳಲ್ಲಿ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಡಾ೦ಬರೀಕರಣ ಕಾಮಗಾರಿಗಳನ್ನು ₹12.41 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳುವ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ

▪️ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸ‌ರ್ ಕೇರ್ ಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಮೊದಲನೇ ಹಂತದ ಉಪಕರಣಗಳು, ಸಿಎಸ್‌ಎಸ್‌ಡಿ ಉಪಕರಣಗಳು ಮತ್ತು ಪೀಠೋಪಕರಣಗಳನ್ನು ₹50 ಕೋಟಿಗಳ ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.

▪️ನೈಋತ್ಯ ಮುಂಗಾರು ಅವಧಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿನ ಮೂಲಸೌಕರ್ಯಗಳ ಪುನ‌ರ್ ನಿರ್ಮಾಣಕ್ಕೆ ಎನ್‌ಡಿಆರ್‌ಎಫ್‌ ಅಡಿಯಲ್ಲಿ ₹1545.23 ಕೋಟಿ ಸಹಾಯಧನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರ.

▪️ ಕಾರವಾರ ಕ್ಯಾನ್ಸರ್ ಕೇರ್ ಘಟಕದ ಸ್ಥಾಪನೆಗೆ ಅಗತ್ಯವಿರುವ ಹೆಚ್ಚುವರಿ ಉಪಕರಣಗಳಿಗೆ ತಗಲುವ ₹18.25 ಕೋಟಿ ಮೊತ್ತವನ್ನು ಸರ್ಕಾರದ ವತಿಯಿ೦ದ ಭರಿಸಲು ಮತ್ತು ₹13.38 ಕೋಟಿ ಅನುದಾನವನ್ನು ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ಭರಿಸಲು ತೀರ್ಮಾನ

ಕರ್ನಾಟಕ ಸ್ಟಾರ್ಟ್‌ ಅಪ್ ಪಾಲಿಸಿ 2022-27ರ ಅಡಿಯಲ್ಲಿ ಐದು ವರ್ಷಗಳ ಅವಧಿಗೆ ₹80 ಕೋಟಿ ವೆಚ್ಚದಲ್ಲಿ 8 ಟೆಕ್ನಾಲಜಿ ಬ್ಯುಸಿನೆಸ್ ಇನ್‌ಕ್ಯೂಬೇಟರ್ಸ್ (TBIs) 2.0 ಗಳನ್ನು ಸ್ಥಾಪಿಸಲು ನಿರ್ಧಾರ

▪️2025 - 26ನೇ ಸಾಲಿನಲ್ಲಿ ಪೊಲೀಸ್ ಇಲಾಖೆಗೆ 241 ವಿವಿಧ ಮಾದರಿಯ ವಾಹನಗಳನ್ನು ₹34.95 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ

₹69.13 ಕೋಟಿ ವೆಚ್ಚದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಡಿ ಇನ್-ಹೌಸ್ ತಾಂತ್ರಿಕ ಅಭಿವೃದ್ಧಿ ವಿಭಾಗ 'ಕಾವೇರಿ ಐಟಿ ಸೆಲ್‌' ಸ್ಥಾಪನೆಗೆ ತೀರ್ಮಾನ.

logoblog

Thanks for reading Cabinet meeting-2025 ಪೊಲೀಸ್ ನೇಮಕಕ್ಕೆ ಪಿಯು ಕಡ್ಡಾಯ

Previous
« Prev Post

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ