VIDYAVANI

Education and Career

ಮಂಗಳವಾರ, ಅಕ್ಟೋಬರ್ 21, 2025

KSPSTA: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ 3 ತಿಂಗಳ ಸಾರ್ಥಕ ಸೇವೆಗಳು, ದೀಪಾವಳಿಯ ವಿಶೇಷ ಕೊಡುಗೆ.

  VIDYAVANI       ಮಂಗಳವಾರ, ಅಕ್ಟೋಬರ್ 21, 2025
KSPSTA: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ 3 ತಿಂಗಳ ಸಾರ್ಥಕ ಸೇವೆಗಳು,ದೀಪಾವಳಿಯ ವಿಶೇಷ ಕೊಡುಗೆ



ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಅದರದೇ ಆದ ಇತಿಹಾಸವನ್ನು ಹೊಂದಿದ್ದು, ರಾಜ್ಯದ ಶಿಕ್ಷಕರ ಸಂಘಟನೆ ಕಳೆದ 54 ವರ್ಷಗಳಿಂದ (1971-72) ಇಲ್ಲಿಯವರೆಗೂ ಸಾಕಷ್ಟು ಶಿಕ್ಷಕರ ಪರವಾಗಿ ಐತಿಹಾಸಿಕ ಕೆಲಸಗಳನ್ನು ಮಾಡುತ್ತಾ ಬಂದಿದೆ.

ಕಳೆದ 5 ದಶಕಗಳಿಂದ ಶಿಕ್ಷಕರ ಸಂಘಟನೆ ಈ ರಾಜ್ಯದ ಶಿಕ್ಷಕರ ಬೇಕು-ಬೇಡಿಕೆಗಳನ್ನು ಈಡೇರಿಸುತ್ತಾ, ಕಾಲ-ಕಾಲಕ್ಕೆ ಶಿಕ್ಷಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾ ಬಂದಿದೆ, ಅದರಲ್ಲೂ ವಿಶೇಷವಾಗಿ 2025ರ ಜುಲೈ 20ರಂದು ಸಂಘಟನೆಯು ನೂತನ ನಾಯಕತ್ವವನ್ನು ವಹಿಸಿಕೊಂಡು ಹಲವಾರು ಕೆಲಸಗಳನ್ನು ಮಾಡಿ ಪ್ರಾಮಾಣಿಕವಾಗಿ ಈ ರಾಜ್ಯದ ಶಿಕ್ಷಕರ ಸಂಘಟನೆಗೆ ಶಕ್ತಿಯನ್ನು ತುಂಬುವಂತಹ ಕೆಲಸವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯ ಸಂಘ (ರಿ) ಬೆಂಗಳೂರು. ಮಾಡುತ್ತಿದೆ.

ಹೊಸ ನಾಯಕತ್ವವನ್ನು ವಹಿಸಿಕೊಂಡ 3 ತಿಂಗಳಲ್ಲಿ (ಆದೇಶದ ರೂಪದಲ್ಲಿ) ಸಂಘಟನೆಯಿಂದ ಆಗಿರುವಂತಹ ಒಂದಿಷ್ಟು ಸಾರ್ಥಕ ಸೇವೆಗಳು:

1. ದಿನಾಂಕ: 08-08-2025ರಂದು ಎಲ್.ಬಿ.ಎಗೆ ಸಂಬಂಧಿಸಿದಂತೆ (1 ರಿಂದ 5) ಪರೀಕ್ಷಾ ಅಂಕಗಳನ್ನು 25 ರಿಂದ 10+5 ಅಂಕಗಳಿಗೆ (6 ರಿಂದ 8) 25 ಅಂಕಗಳಿಂದ 20 ಅಂಕಗಳಿಗೆ ಕಡಿಮೆಗೊಳಿಸಿ ಆದೇಶ ಮಾಡಿಸಲಾಗಿದೆ.

2. ದಿನಾಂಕ :15-07-2025ರಂದು ಪ್ರತಿಭಾ ಕಾರಂಜಿ/ಕ್ರೀಡಾಕೂಟಗಳನ್ನು ಪ್ರತ್ಯೇಕ ಸೆಮಿಸ್ಟರ್‌ಗಳಲ್ಲಿ ನಡೆಸುವಂತೆ ಆದೇಶ ಮಾಡಿಸಲಾಗಿದೆ.

3. ದಿನಾಂಕ: 03-09-2025ರಂದು SATS, MDM, SFN 3 ಆ್ಯಪ್‌ಗಳಲ್ಲಿ ಹಾಕುತ್ತಿದ್ದ ಮಕ್ಕಳ ಹಾಜರಾತಿಯನ್ನು ಬದಲಾಯಿಸಿ, ಎಲ್ಲವೂ SATS ಒಂದೇ ಆ್ಯಪ್‌ನಲ್ಲಿ ಮಕ್ಕಳ ಹಾಜರಾತಿ ಹಾಕುವಂತೆ ವ್ಯವಸ್ಥೆ ಮಾಡಿಸಲಾಗಿದೆ.

4. 2016ಕ್ಕಿಂತ ಮೊದಲು 1 ರಿಂದ 7ಕ್ಕೆ ನೇಮಕವಾದ ಪ್ರಾಥಮಿಕ ಶಾಲಾ ಸಹ ಶಿಕ್ಷಕರನ್ನು 2017ರ ವೃಂದ & ನೇಮಕಾತಿ ನಿಯಮಗಳ ಪ್ರಕಾರ 1 ರಿಂದ 5ಕ್ಕೆ ನಿಗದಿಗೊಳಿಸಿದ್ದನ್ನು ಹಿಂಪಡೆಯುವಂತೆ ಹೊಸ ನಾಯಕತ್ವ ವಹಿಸಿಕೊಂಡ ಕೇವಲ 44 ದಿನಗಳಲ್ಲಿ 800ಕ್ಕೂ ಹೆಚ್ಚು ತಾಸು ಕಾರ್ಯನಿರ್ವಹಿಸಿ ದಿನಾಂಕ : 04-09-2025 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ, ಅನುಮೋದಿಸಿ ಅದನ್ನು ವಾಪಸ್ ಪಡೆಯಲಾಗುವುದೆಂದು ಮಾನ್ಯ ಮುಖ್ಯಮಂತ್ರಿಗಳಿಂದ ಹಾಗೂ ಮಾನ್ಯ ಶಿಕ್ಷಣ ಸಚಿವರಿಂದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಘೋಷಣೆ ಮಾಡಿಸಲಾಗಿದೆ.

5. ದಿನಾಂಕ : 05-09-2025ರ ಶಿಕ್ಷಕರ ದಿನಾಚರಣೆಯಂದು ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಸಮಸ್ತ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಲು ಘೋಷಣೆ ಮಾಡಿಸಲಾಗಿದೆ.

6. ಹೆಚ್ಚುವರಿಯಾಗಿರುವ ಶಿಕ್ಷಕರಿಗೆ ಹಾಗೂ 5 ವರ್ಷ ಪೂರೈಸಿದ ಇಸಿಓ/ ಸಿ.ಆ‌ರ್.ಪಿ/ಬಿ.ಆರ್.ಪಿ ಗಳಿಗೆ PST ಹುದ್ದೆಗಳ ಜೊತೆಗೆ GPT ಹುದ್ದೆಗಳನ್ನು ಕೊಡಿಸಲಾಗಿದೆ.

7. ದಿನಾಂಕ : 07-10-2025ರಂದು ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸಂಘಟನೆಯ ವಿಶೇಷ ಪ್ರಯತ್ನದಿಂದ ರಾಜ್ಯದ ಸಮಸ್ತ ಶಿಕ್ಷಕರಿಗೆ 10 ದಿನಗಳ ವಿಶೇಷ ದಸರಾ ರಜೆಯನ್ನು ಕೊಡಿಸಲಾಗಿದೆ.

8. ದಿನಾಂಕ : 14-10-2025ರಂದು ಹಿಂದುಳಿದ ವರ್ಗಗಳ ಆಯೋಗದಿಂದ ನಡೆದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಆಕಸ್ಮಿಕ ನಿಧನ ಹೊಂದಿದ ಶಿಕ್ಷಕರ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡುವ ಆದೇಶವನ್ನು ಮಾಡಿಸಲಾಗಿದೆ.

9. ದಿನಾಂಕ : 16-05-2025ರಂದು ನಾಗಮೋಹನ್ ದಾಸ್ ಒಳಮೀಸಲಾತಿ ಸಮೀಕ್ಷೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ ಆಯೋಗದಿಂದ 15 ಲಕ್ಷ ಪರಿಹಾರವನ್ನು ಘೋಷಣೆ ಮಾಡಿಸಲಾಗಿದೆ.

10. ದಿನಾಂಕ: 09-10-2025ರಂದು (ಸಚಿವ ಸಂಪುಟ ಸಭೆಯಲ್ಲಿ) ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳಲ್ಲಿ, ಗಾರ್ಮೆಂಟ್ಸಗಳಲ್ಲಿ MNC ಕಂಪನಿಗಳಲ್ಲಿ, IT ಕಂಪನಿಗಳಲ್ಲಿ ಮತ್ತು ಇತರೆ ಖಾಸಗಿ ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಒಂದು ದಿನದ ವೇತನ ಸಹಿತ ಋತುಚಕ್ರ ರಜೆಯನ್ನು ಕೊಡಿಸಲಾಗಿದೆ.

11. ದಿನಾಂಕ:13-10-2025ರಂದು ಧಾರವಾಡ, ಕಲಬುರ್ಗಿ ಅಪರ ಆಯುಕ್ತರ ಕಛೇರಿಯಲ್ಲಿ ವಿಭಾಗೀಯ HRMS CELL ಕಾರ್ಯಾರಂಭ ಮಾಡಲು ಆದೇಶ ಮಾಡಿಸಲಾಗಿದೆ.

ಇದರ ಜೊತೆಗೆ ಸಮೀಕ್ಷೆಯ ಸಂದರ್ಭದಲ್ಲಿ ಶಿಕ್ಷಕರಿಗೆ ಸಾಕಷ್ಟು ನೋವುಗಳಾಗಿದ್ದು, ಇದಕ್ಕೆ ಶಿಕ್ಷಕರ ಸಂಘಟನೆ ಕಾಲ ಕಾಲಕ್ಕೆ ಸ್ಪಂದಿಸಿದ್ದು, ಕಳೆದ 8 ವರ್ಷಗಳ ಸುಧೀರ್ಘ ಸಮಸ್ಯೆಯಾದ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಕುರಿತು ಹಂತ-ಹಂತವಾಗಿ ಹೋರಾಟ ಮಾಡಿದ ಪ್ರತಿಫಲವಾಗಿ ದಿನಾಂಕ : 04-09-2025ರ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ನೀಡಲಾಗಿದೆ.

ಒಟ್ಟಾರೆಯಾಗಿ ಶಿಕ್ಷಕರ ಪ್ರಮುಖ ಬೇಡಿಕೆಗಳಾದ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಪ್ರೌಢಶಾಲಾ ಬಡ್ತಿ ಪ್ರಕ್ರಿಯೆಗಳು, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಬಡ್ತಿ ಪ್ರಕ್ರಿಯೆಗಳು, 1 ರಿಂದ 5ಕ್ಕೆ ನಿಯಮಿತ ಗೊಳಿಸಿದವರಲ್ಲಿ ಪದವಿಯನ್ನು ಪೂರೈಸಿರುವ ಶಿಕ್ಷಕರನ್ನು 6 ರಿಂದ 7ಕ್ಕೆ ಪರಿಗಣಿಸುವ ಕುರಿತು ಆದೇಶದ ರೂಪದಲ್ಲಿ ಹೊರತರುವ ಗುರುತರವಾದ ಜವಾಬ್ದಾರಿ ರಾಜ್ಯದ ಶಿಕ್ಷಕರ ಸಂಘಟನೆ ಮೇಲಿದೆ.

ರಾಷ್ಟ್ರದ ಎಲ್ಲಾ ಶಿಕ್ಷಕರಿಗೆ ಸೇವೆಯಲ್ಲಿ ಮುಂದುವರೆಯಲು ಹಾಗೂ ಬಡ್ತಿಯನ್ನು ಹೊಂದಲು ಗೌರವಾನ್ವಿತ ಸುಪ್ರೀಂಕೋರ್ಟ್ Article 142 ವಿಶೇಷ ಕಾನೂನಿನ ಅಡಿಯಲ್ಲಿ TETಯನ್ನು ಕಡ್ಡಾಯಗೊಳಿಸಿ ದಿನಾಂಕ : 01-09-2025ರಂದು ಆದೇಶಿಸಿದ್ದು, ಸದರಿ ಆದೇಶವನ್ನು ಪೂರ್ವಾನ್ವಯವಾಗಿ (Restrospective) ಶಿಕ್ಷಕರಿಗೆ ಜಾರಿಗೊಳಿಸಬಾರದೆಂದು ಗೌರವಾನ್ವಿತ ಸುಪ್ರೀಂಕೋರ್ಟಿನಲ್ಲಿ Review Petition ಸಲ್ಲಿಸಲಾಗಿದ್ದು ನ್ಯಾಯಾಂಗ ಹೋರಾಟವನ್ನು ಮಾಡಲಾಗುತ್ತಿದೆ.

 ಶುಭ ದೀಪಾವಳಿಯ ವಿಶೇಷ ಕೊಡುಗೆ:

ರಾಜ್ಯದ 1,68,000 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಚಿತ ಸಾರ್ಥಕ ಸೇವೆಗಳು:


1) 2025-26ನೇ ಸಾಲಿನ ಆರ್ಥಿಕ ವರ್ಷದ (2026-27ನೇ ಸಾಲಿನ Assessment Year) Income tax Returns Form No -16 ನೀಡಲಾಗುವುದು.

2) 2025-26ನೇ ಸಾಲಿನ ಆರ್ಥಿಕ ವರ್ಷದ (2026-27ನೇ ಸಾಲಿನ Assessment Year) E-Filling Online ಮಾಡಿಕೊಡಲಾಗುವುದು.

3) ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆಗೆ ಸಂಬಂಧಿಸಿದ ಪ್ರತಿಯೊಬ್ಬ ಮುಖ್ಯಗುರುಗಳು ಶಾಲಾ ಹಂತದಲ್ಲಿ ನಿರ್ವಹಿಸಬೇಕಾದ ದಾಖಲೆಗಳು...

▪️Data entry formನಲ್ಲಿ ದಿನದ ಹಾಜರಾತಿ ಮಾಹಿತಿಯನ್ನು entry ಮಾಡಿದ ತಕ್ಷಣ.
▪️Auto Calculated ದೈನಂದಿನ ರೇಷನ್ ಖರ್ಚು ಉಳಿಕೆ (ರೇಷನ್ ಮಾಹಿತಿ) ದಾಸ್ತಾನು ವಹಿ.
▪️Auto Calculated ತರಕಾರಿ, ಸಾಂಬಾರ್ ಪದಾರ್ಥ ಖರ್ಚು-ವೆಚ್ಚ.
▪️Auto Calculated ಹಾಲಿನ ಪುಡಿ ಖರ್ಚು, ಉಳಿಕೆ, ರಾಗಿ-ಮಾಲ್ಟ್ ಖರ್ಚು, ಉಳಿಕೆ, ಸಕ್ಕರೆಯ ಖರ್ಚಿನ ಮಾಹಿತಿ.
▪️ಇಸ್ಕಾನ್ ಸಂಸ್ಥೆಯ ವತಿಯಿಂದ ವಿತರಿಸುವ ಊಟದ ಮಾಹಿತಿಯ ಫಾರಂ.
▪️ಅಡುಗೆ ಕೇಂದ್ರ ಇದ್ದಲ್ಲಿ ತಿಂಗಳ ಕೊನೆಗೆ ವಿತರಿಸುವ ಉಪಯೋಗ ಪ್ರಮಾಣ ಪತ್ರ.
▪️ಸರ್ಕಾರದ ವತಿಯಿಂದ ವಿತರಿಸುವ ಮೊಟ್ಟೆ, ಬಾಳೆ ಹಣ್ಣಿನ Auto Calculated ವಿವರ.
▪️APF ವತಿಯಿಂದ ವಿತರಿಸುವ ಮೊಟ್ಟೆ ಬಾಳೆಹಣ್ಣಿನ Auto Calculated ವಿವರ.

ಈ ಮೇಲಿನ ಎಲ್ಲಾ ಸೌಲಭ್ಯಗಳ ಮಾಹಿತಿಯನ್ನು ಹಾಗೂ ಉಚಿತ ಸೇವೆಯನ್ನು ಮುಂದಿನ ವರ್ಷದಿಂದ ಎಲ್ಲಾ ಜಿಲ್ಲಾ/ತಾಲ್ಲೂಕಿನ ಶಿಕ್ಷಕರು ಉಚಿತವಾಗಿ ಪಡೆಯಲು ಈ ಕೆಳಕಂಡ ಪದಾಧಿಕಾರಿಗಳನ್ನು ಸಂಪರ್ಕಿಸಬೇಕು ಹಾಗೂ ಅವರಿಗೆ ತಮ್ಮ ತಾಲ್ಲೂಕು ಹಾಗೂ ಜಿಲ್ಲೆಯಿಂದ ಅಗತ್ಯ ಸಹಕಾರವನ್ನು ನೀಡಬೇಕಾಗಿ ಕೋರಲಾಗಿದೆ.

ರಾಜ್ಯ ಸಂಘದ ತಾಂತ್ರಿಕ ಸಂಚಾಲಕರು:
ತುಂಬು ಹೃದಯದ ಧನ್ಯವಾದಗಳೊಂದಿಗೆ

ಮತ್ತೊಮ್ಮೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ರಾಜ್ಯದ ಶಿಕ್ಷಕರ ಸಂಘಟನೆಯು ಶಿಕ್ಷಕರ ಎಲ್ಲಾ ಸಮಸ್ಯೆಗಳಿಗೆ ಅತ್ಯಂತ ಗಟ್ಟಿಯಾಗಿ ಪರಿಹಾರವನ್ನು ದೊರಕಿಸಿಕೊಡುವಂತಹ ಹಾಗೂ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗಳನ್ನು ಮುಂದುವರೆಸುವಂತಹ ಕೆಲಸವನ್ನು ಮಾಡುತ್ತಿದೆ ಎಂದು ಈ ಮೂಲಕ ತಮ್ಮೆಲ್ಲರಿಗೂ ತಿಳಿಸಬಯಸುತ್ತೇವೆ.


ಶ್ರೀ ಚೇತನ್.ಹೆಚ್.ಎಸ್
ಪ್ರಧಾನ ಕಾರ್ಯದರ್ಶಿ, ಕ.ರಾ.ಪ್ರಾ.ಶಾ.ಶಿ ಸಂ.ಬೆಂಗಳೂರು.

ಶ್ರೀ ಚಂದ್ರಶೇಖರ ನುಗ್ಗಲಿ
ಅಧ್ಯಕ್ಷರು.ಕ.ರಾ.ಪ್ರಾ.ಶಾ.ಶಿ ಸಂ.ಬೆಂಗಳೂರು.


logoblog

Thanks for reading KSPSTA: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ 3 ತಿಂಗಳ ಸಾರ್ಥಕ ಸೇವೆಗಳು, ದೀಪಾವಳಿಯ ವಿಶೇಷ ಕೊಡುಗೆ.

Newest
You are reading the newest post

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ