Thursday, February 26, 2026

Story -06 ಹುಣಸೇಮರದೊಳಗಿನ ಹುಡುಗಿ

  VIDYAVANI       Thursday, February 26, 2026
Story -06 ಹುಣಸೇಮರದೊಳಗಿನ ಹುಡುಗಿ

ಒಂದೂರಲ್ಲಿ ಒಬ್ಬ ರಾಜ ಇದ್ದ. ಅವುನು ತನ್ನ ಹೆಂಡ್ತಿ ಜೊತೆ ಸುಮಾರು ವರ್ಷದಿಂದ ಸಂಸಾರ ಮಾಡ್ಕಂಡಿದ್ದ. ಅವರೆ ಒಬ್ಬು ಮಗು ಇದ್ದಳು. ಆಕೆಯನ್ನ ಸಣ್ಣ ವಯಸ್ಸಿನಲ್ಲಿ ಇಸ್ಕೊಲಿಗೆ ಕಳುಹಿಸುತ್ತಿದ್ರು. ಆ ಹೆಣ್ಣು ಮಗಳನ್ನೇ ಗಂಡು ಹುಡುಗನ ರೀತಿಲಿ ಸಾಕಿದ್ರು. ಪ್ರತಿ ದಿನ ಶಾಲೆಗೆ ಕಳುಹಿಸುತ್ತಿದ್ರು. ಇಸ್ಕೂಲಿಗೆ ಹೋಗಿ . ಬರುವ ತನಕವೂ ತಾಯಿ ಅವುಳ ದಾರಿ ನೋಡುತ್ತಿದ್ದಳು. ಮಗಳು ಚಿಕ್ಕವು ಳಾಗಿದ್ದವುಳು ದೊಡ್ಡವುಳಾಗಿದ್ದಾಳೆ. ಎಷ್ಟು ವರ್ಷ ಆದ್ರು ಗಂಡನ ಮನೆಗೆ ಕಳುಹಿಸ ಬೇಕು ಅಂತ ಹೇಳಿದ್ದು.

ಎಲ್ಲಾದ್ರು ಗಂಡು ನೋಡಿ ನಂಟುಸ್ತನ ಗಟ್ಟಿ ಮಾಡ ಬೇಕು, ಅಂತ ಗಂಡನೆ ಹೇಳಿದ್ದು. ಜಾಸ್ತಿ ದಿನ ಮನೇಲಿದ್ರೆ ಮರುವಾದಿ ಕಮ್ಮಿಯಾಗ್ತಾದೆ ಅಂತ ಹೇಳಿ ಗಂಡ ಹೇಳಿದ್ದು, ಗಂಡ ಹೇಳ ಬಂಗಾರದಂತ ಮಗಳ ಹೊರಗಡೆ ಊರಿಗೆ ಯಾಕೆ ಲಗ್ನ ಮಾಡಿಕೊಡ ಬೇಕು. ನನ್ನ ಮಗಳ ಯಾರಿಗೂ ಕೊಡಕಿಲ್ಲ. ತಂದೆಯಾದನಾನು ಹೇಳ್ತಿನಿ 'ನಾನೇ ನನ್ನ ಮಗಳ ಮದುವೆ ಮಾಡ್ಕತ್ತೀನಿ'ಅಂತ ಹೇಳ.

ಜಗದಾಗ ಮಗಳ ಹುಟ್ಟಿಸಿ ಯಾವ ಜನರು ಕೂಡ ಈ ರೀತಿ ಹೇಳಿಲ್ಲ, ಅಂತ ಹೇಳಿದ್ದು, ಗಂಡನ ಮಾತು ಕೇಳಿ ಹೆಂಡ್ತಿ ಅಳಕ್ಕೆ ಸುರುಮಾಡಿದಳು. ಅಪ್ಪನ ಮಾತು ಕೇಳಿ ಮಗಳು ಕೂಡ ಆಳಕ್ಕೆ ಕುಂತಿದ್ದಳು. ಮಾರನೇ ದಿನ ಇಸ್ಕೂಲಿಗೆ ಹೋಗಿ ಬಂದಳು. ಯಾಕಮ್ಮ ನೀನು ಆಳುತ್ತಿದ್ದೀಯೆ ಅಂತ ಅವ್ವನ್ನ ಕೆಳಿದ್ದು, ನಿನ್ನ ತಂದೆಗೆ ನಂಟುಸ್ತಾನ ಮಾಡ ಬೇಕು ಅಂತ ಹೇಳಿದ್ರೆ ನಿನ್ನ ತಂದೆ ಬಂಗಾರದಂತ ಮಗಳ ಬೇರೆಯವುರೆ ಯಾಕೆ ಲಗ್ನ ಮಾಡಿ ಕಳುಹಿಸಬೇಕು. ನಾನೇ ಮದ್ದೆ ಆಗ್ತಿನಿ ಅಂತ ಅನ್ನೋದನ್ನ ಹೇಳಿದ್ದು. ಅದ್ರೆ ನಾನು ಯೋಚೆ ಮಾಡ್ತಾ ಕುಂತಿ ಅಂತ ಮಗಳಿಗೆ ಹೇಳಿದ್ದು.

ಮಗಳು ಧೈರವಾಗಿ 'ಅಮ್ಮ, ತಂದೆ ಹೇಳಿದ್ರೆ ನಾನು ಹೆಂಡ್ತಿ ಆಗ್ಲಿಲ್ಲ. ನಾನು ಒಂದು ಶಾಸ್ತ್ರ ಹೇಳೀನಿ ಅದನ್ನ ಸರಿಯಾಗಿ ಹೇಳಿದ್ರೆ, 'ನಾನು ಹೆಡ್ತಿ ಆಗ್ತಿನಿ. ಅವುನು ಹೇಳಿಲ್ಲ ಅಂದರೆ ನಾನು ಮದ್ಯೆ ಆಗಲ್ಲ. ನೀನು ಅಳಬ್ಯಾಡ ತಾಯಿ'ಅಂದ್ಲು,

ನನ್ನ ತಂದೆಗೆ ಮೂರು ದಿನ ಮೂರು ಗಂಟೆ ಮೂರು ನಿಮಿಷ ಟೈಂ ಕೊಡ್ತೀನಿ.

ನನ್ನ ತಲೇಲಿ ಹೇನು ನೋಡು ಅಂತ ತಾಯಿಯನ್ನ ಕೇಳಿದ್ದು. ಅವ ವ್ವ ಕೂರಿಸಿ ಕೊಂಡು ಹೇನು ಸೋಸಿದಳು. ತಲೇಲಿ ಒಂದು ಹೇನು ಕೂಡ ಇರಲಿಲ್ಲ. ಕೊನೆಗೆ ಕಿವಿ ತಾವು ಒಂದೇ ಒಂದು ಹೇನು ಸಿಕ್ಕು. ಆ ಹೇನಿಗೆ ಹೊಡೆಯಬೇಡ ನನ್ನ ಕೈಲಿ ಕೊಡು ತಾಯಿ ಅಂತ ಹೇಳಿದ್ದು. ಹೇನನ್ನ ಅವ್ವ ಮಗಳ ಕೈಗೆ ಹಾಕಿದಳು. ಸ್ವಲ್ಪ ಮಣ್ಣು ತಕ್ಕ ಬಾ ಅಂದಳು.

ಮಗಳು ಹೇಳಿದ ರೀತಿಲಿ ಮಣ್ಣಿನ ಬಕ್ಕರೆಗೆ ನೀರಾಕಿ ಸಣ್ಣ ಗುಂಡಿ ಮಾಡಿ ಅದ್ರಲ್ಲಿ ಹೇನನ್ನ ಹಾಕಿ ಬಿಟ್ಟು. ಅದ್ರೆ ಒದು ಚಮಚ ನೀರಾಕಿದ್ದು, ಅದು ಹೇನಿನ ಸಸಿಯಾಗಿ ಬೆಳೆಯಿತು. ಆಗ ಅವ್ವಸ್ಥೆ ಹೇಳಿದ್ದು. 'ಇದನ್ನ ನನ್ನ ತಂದೆ ಹೇಳಿದ್ರೆ ನಾನು ಮದ್ವಿಯಾಡ್ತೀನಿ' ಅಂತ ಅವ್ವನಿಗೆ ಮಗಳು ಹೇಳಿದ್ದು. ಅವ್ವ ಎಲ್ಲವನ್ನು ನೋಡುತ್ತಾ ಕುಂತಿದ್ದು. ಮಗಳು ಕೈಯಲ್ಲಿ ಕತ್ತಿ ಹಿಡುಕಂಡು ತಂದೆ ಬರುವುದನ್ನೆ ಕಾಯುತ್ತಾ ಇದ್ದಳು.

7 ಅಪ್ಪ ಬಂದು ಮಗಳನ್ನ ಕೇಳಿದ 'ನಾನು ನಿನ್ನ ಲಗ್ನ ಆಗ್ತಿನಿ'ಅಂತ ಕೇಳಿದ. ಆಗ ಮಗಳು ತನ್ನ ತಂದೆಗೆ ಹೇಳಿದ್ದು. 'ಈ ಮರ ಯಾವುದು ಅಂತ ನೀವು ಹೇಳಿದ್ರೆ ನಾನು ನಿಮ್ಮನ್ನೆ ಮದ್ದೆ ಆಗ್ತಿನಿ'ಅಂದು. ತಂದೆಗೆ ಗೊತ್ತಿಲ್ಲ. ತುಂಬ ಗಾಬರಿ ಯಾಯ್ತು. ಮೂರು ದಿನ ಮೂರು ಗಂಟೆ ಮೂರು ನಿಮಿಷದಲ್ಲಿ ಆ ಮಾತು ಹೇಳು ಅಂತ ಹಟ ಹಿಡಿದ್ದು. ತಂದೆ 'ನನಗೆ ಗೊತ್ತಿಲ್ಲ' ಅಂತ ಹೇಳಿದ. 'ನಾನು ನಿನ್ನ ಮದುವೆ ಯಾಗಲ್ಲ ಅಂದ್ಲು.

ಆ ಹೇನು ಮರ ಆಗಿ ಬೆಳೆಯುತ್ತಿದ್ದದನ್ನು ಹುಡುಗನೊಬ್ಬ ನೋಡಿದ್ದ. ಅವುನು 'ಆ ಮರ ಹೇನಿನದು' ಅಂದ. ಯಾರು ಅದನ್ನ ಹೇಳ್ತಾರೆ ಅವ್ರನ್ನ ನಾನು ಮದುವೆಯಾಗ್ತಿನಿ ಅಂತ ಹೇಳಿ ಆ ಹುಡುಗನನ್ನ ಅವುಳು ಮದುವೆಯಾದಳು. ಅವುಳು ಆ ಹುಡುಗನ ಜೊತೇಲಿ ಇಲ್ಲಿರೋದು ಬ್ಯಾಡ ಅಂತ ಹೇಳಿ ಹೊರಟು ಹೋದ್ದು. ಅವ್ವ ಬೇಕಾದಷ್ಟು ಬೇಡಿಕೊಂಡು, ತಾಯಿ ಮಾತು ಕೇಳಲಿಲ್ಲ. ಸೇರಿ ಹೋಗು ಅಂದ್ಲು. ಹುಡುಗನ ಜೊತೆ ಕೀಲು ಕುದುರೆ ಮೇಲೆ ಕುಂತ್ಸಂದಿ ದೂರಕ್ಕೆ ಹೊರಟು ಹೋದ್ರು.

ಹೋಗ್ತಾ ಹೋಗ್ತಾ ಅಲ್ಲಿ ಗಿಡ ಮರಗಳಿಂದ ತುಂಬಿದ್ದ ಒಂದು ದೊಡ್ಡ ಅರಣ್ಯ ಸಿಕ್ಕು. ಅಲ್ಲಿ ಆ ಹುಡುಗ ಕೀಲು ಕುದುರೆ ಇಳಿಸಿದ. ನಾನು ನಿನ್ನೆ ಹೇಳಿದ್ದೀನಿ ನಾನು ಹಿಂದೆ ಹೋಗಿ ಬರ್ತೀನಿ ನೀನು ಇಲ್ಲೆ ಇರು ಅಂತ ಹೇಳಿದ. ಅದಕ್ಕೆ ಅವುಳು ಒಂದು.

ನನ್ನೆ ಇಲ್ಲೆ ಒಂದು ಮನೆ ಮಾಡು ಅಂತ ಹೇಳಿದ್ದು. ಅಲ್ಲಿ ಒಂದು ದೊಡ್ಡ ಮರ ಇತ್ತು. ಆ ಮರದಲ್ಲಿ ಒಂದು ದೊಡ್ಡ ಪೊಟರೆ ಇತ್ತು. ಅಲ್ಲಿ ಇಬ್ಬರು ಒಂದು ರಾತ್ರಿ ಜೊತೇಲಿ ಇದ್ದು ಬೆಲಿಗ್ಗೆ ಎದ್ದು ಹಿಂದಕ್ಕೆ ಹೊರಟು ಹೋದ.

ಒಬ್ಬಮ್ಮ ಸಂತೆಗೆ ಹೋಗಿ ಸಂತೇಲಿ ಸಾಮಾನು ತಕ್ಕ ಹೋಗಿ ಆ ದೊಡ್ಡ ಮರದಡಿಯಲ್ಲಿ ಕುಂತು ಕೊಂಡು, ಈಕೆ ಮರದೊಳಗೆ ಉಳಿದಿದ್ದಲ್ಲಾ ಅವುಳು ಮರದ ಪೊಟರೆಯೊಳಗೆ ಆಳುತ್ತ ಇದ್ದು. ಕಣ್ಣೀರು ಹರಿಯುತ್ತ ಮರದ ಕೆಳಗೆ ಬೀಳು. ಆ ಕಣ್ಣೀರ ಹನಿ ಅವುಳ ಕಾಲ ಮೇಲೆ ಬೀಳು. ಮರದಡಿಯಲ್ಲಿ ಕುಂತಿದ್ದ ಮುದುಕಿ ನೋಡಿದ್ದು. ಮರದ ಮೇಲೆ ಹಕ್ಕಿ ಪಕ್ಷಿ ಯಾವುದೂ ಇಲ್ಲ. ಅಂತ ದ್ದರಲ್ಲಿ ಈ ನೀರಿನ ಹನಿ ಎಲ್ಲಿಂದ ಬಂತು ಅಂತ ಹೇಳಿ ಮುದುಕಿ ಸ್ವಲ್ಪ ಯೋಚಿಸಿದ್ದು. ಆಗ ಮರದ ಪೊಟರೆ ಒಳಗೆ ಇದ್ದವಳು 'ಯಾಕೆ ತಾಯಿ ನೋಡ್ತಾ ಇದ್ದೀಯ ನನ್ನ ಕಣ್ಣೀರು ನಿನ್ನ ತೊಡೆ ಮೇಲಿ ಬಿದ್ದಿದೆ' ಅಂತ ಆ ಮುದುಕಿಗೆ ಹೇಳಿದ್ದು.

.ಆ ಹುಡುಗಿ ಮುದುಕಿಗೆ ನಾನು ಎಷ್ಟು ದಿನಾ ಅಂತ ಇಲ್ಲೇ ಇರಬೇಕು ಅಂತ ಕೇಳಿದ್ದು, ಮುದುಕಿ 'ಮಗಳೇ ನೀನು ಚಿಂತೆ ಮಾಡ ಬ್ಯಾಡೀ ಮರ ಮೂರು ದಿನ ದಲ್ಲಿ ಸಿಡಿಯುತ್ತೆ' ಅಂತ ಹೇಳಿದ್ದು. ಮತ್ತೆ ಒಂದು ಮಾತು ಹೇಳ್ತಿನಿ. 'ರಾತ್ರೆ ಹನ್ನೆರಡು ಗಂಟೆ ಹೊತ್ತಿಗೆ ಮರದಿಂದ ಹೊರಕ್ಕೆ ಬಾ, ಸೇಬು, ಬಾಳೆ. ಕಿತ್ತಲೆ, ತಾಳೆ ಇತ್ಯಾದಿ ಹಣ್ಣು ಹಂಪಲು ತಿಂದು, ಈ ಕೆರೇಲಿ ನೀರು ಕುಡುದು ಮತ್ತೆ ನಿನ್ನ ಜಾಗಕ್ಕೆ ಹೋಗು ಮತ್ತೆ ಮರ ಸೇರುಕಳದೆ. ನೀನು ಯಾವುದಕ್ಕೂ ಯೋಚೆ ಮಾಡಬ್ಯಾಡ ಮಗಳೇ ' ಅಂತ ಹೇಳಿ ನಡೆದು ಬಿಟ್ಟು.

ಮರದ ಒಳಗೆ ಅಳುತ್ತ ಕುಲಿತಿದ್ದ ಹುಡುಗಿ ರಾತ್ರಿಯಾಗುವುದನ್ನೆ ಕಾಯುತ್ತಾ ಕುಂತಿದ್ದಳು.ರಾತ್ರಿ ಹನ್ನೆರಡು ಗಂಟೆಯಾಯ್ತು. ಮರ ತನ್ನ ಷ್ಟಕ್ಕೆ ತಾನೇ ಭಾಗ ಭಾಗ ಆಯಿತು. ಈ ಹುಡುಗಿ ಹೊರಗಡೆ ಬಂದು. ಮುದುಕಿ ಹೇಳಿದ್ದಂಗೆ ಹೊರಗಡೆ ಇದ್ದ ವನಕ್ಕೆ ಹೋಗಿ ಬಾಳೆ, ಸೇಬು, ಕಿತ್ತಲೆ, ತಾಳೆ ಇತ್ಯಾದಿ ಹಣ್ಣು ಹಂಪಲು ತಕ್ಕ ಬಂದು ಹೊಟ್ಟೆ ತುಂಬುವ ತನಕ ತಿಂದು. ಕೆರೇಲಿ ನೀರು ಕುಡಿದ್ದು. ಮನಸ್ಸಿಗೆ ಎಷ್ಟೋ ಸಮಾಧಾನ ಅನಿಸಿತು. ಮತ್ತೆ ಮರದ ಪೊಟರೆಯೊಳಕ್ಕೆ ಹೋದ್ದು. ಮತ್ತೆ ಮಾಮೂಲಿಯಾಗಿ ಮರಮುಚ್ಚಿಕೊಂಡಿತು.

ಈ ಹುಡುಗಿ ಹೋಗಿ ವನದಲ್ಲಿ ಹಣ್ಣು ಹಂಪಲು ತಿಂದು ಎಷ್ಟೋ ಹಣ್ಣನ್ನ ಕೆಳಕ್ಕೆ ಬೀಳಿಸಿದ್ದು. ಎಷ್ಟೋ ಹಣ್ಣನ್ನ ತಿಂದು ಹೊರಗೆಸೆದಿದ್ದು. ಈ ವನ ಒಬ್ಬ ರಾಜನಿಗೆ ಸೇರಿತ್ತು. ಆ ತೋಟವನ್ನು ರಾಜ ಆಳುಗಳನ್ನು ಬಿಟ್ಟು ಕಾವಲು ಕಾಯುತ್ತಿದ್ದ. ಪ್ರತಿ ರಾತ್ರಿ ಆಳುಗಳು ನಿದ್ದೆ ಬಂದು ಮಲಗಿರುತ್ತಿದ್ದರು. ಈ ಹುಡುಗಿ ಅವರುಗಳಿಗೆ ಗೊತ್ತಾಗದ ರೀತಿಲಿ ತಿಂದು ಮತ್ತೆ ಬಂದು ಮರದೊಳಕ್ಕೆ ಸೇರಿ ಬಿಡುತ್ತಿತ್ತು.

ಈ ರೀತಿಯಾಗಿರುವಾಗ ರಾಜ ಆಳುಗಳನ್ನ ಮತ್ತೆ ನೇಮಿಸಿದ್ದ. ಯಾರು ತಮ್ಮ ರಾಜ್ಯದ ವನವನ್ನು ಈ ರೀತಿ ಹಾಳು ಮಾಡ್ತಾ ಇರವು, ಅವುರನ್ನ ಬಂದಿಸುವಂತೆ ಅಜ್ಞೆ ಹೊರಡಿಸಿದ. ರಾಜನ ಮೂರು ಜನ ಆಳುಗಳು ಕಾವಲು ಕಾಯೋದಕ್ಕೆ ಆ ಜಾಗಕ್ಕೆ ಬಂದ್ರು. ರಾಜ'ನೀವು ಕಳ್ಳರನ್ನು ಹಿಡಿಯದೆ ಹೋದ್ರೆ ನಿಮ್ಮನ್ನು ಕೆಲಸ ದಿಂದ ತೆಗೆದು ಹಾಕುತ್ತೀನಿ' ಅಂತ ಹೇಳಿ ಕಳುಹಿಸಿದ.

ಮತ್ತೆ ರಾತ್ರೆಗೆ ಈ ಹುಡುಗಿ ಮರದೊಳಗಿನಿಂದ ಹೊರಕ್ಕೆ ಬಂದಳು. ಈ ಮೂವರು ನಿದ್ದೆಯಲ್ಲಿದ್ದರು. ಈಕೆ ಹಣ್ಣನ್ನು ತಿಂದು ಮಾವಿನ ಹಣ್ಣಿನ ಬೀಜ, ನೇರಳೆ ಹಣ್ಣಿನ ಬೀಜಗಳನ್ನು ಆ ಕಾವಲು ಕಾಯಲು ಬಂದಿದ್ದ ಆಳುಗಳ ಬಾಯಿಗೆ ಹಾಕಿದ್ದು, ಮತ್ತೆ ಹೋಗಿ ಮರದ ಪೊಟರೆಯೊಳಕ್ಕೆ ಸೇರುಕಂಡು.

ಬೆಳಗಾಯಿತು. ಆಳುಗಳಿಗೆ ಎಚ್ಚರವಾಯ್ತು. ನೋಡಿದ್ರೆ ಬಾಯಲ್ಲಿ ಹಣ್ಣಿನ ಬೀಜಗಳಿವೆ. ಆವ್ರಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಅನುಮಾನ ಸುರುವಾಯಿತು. ಆದರೂ ಈ ಮೂರು ಜನ ಸೇರಿ ಮತ್ತೆ ಕಳ್ಳರನ್ನ ಹಿಡಿಬೇಕು ಅಂತ ಮಾತಾಡಿ ಕೊಂಡ್ರು.

ರಾತ್ರಿಯಾಯ್ತು. ಮೂವರೂ ಸುಮಾರು ಹೊತ್ತು ಕಾಯ್ತಾ ಕುಂತಿದ್ರು. ತೂಕಡಿಕೆ ಜಾಸ್ತಿ ಆಯ್ತು.ಮೂವರು ನಿದ್ದೆ ಮಾಡಕೆ ಸುರು ಮಾಡಿದ್ರು. ಇವುಳು ರಾತ್ರಿ ಹನ್ನೆರಡು ಗಂಟೆ ಟೈಮುಗೆ ಸರಿಯಾಗಿ ಮರದ ಪೊಟರೆಯಿಂದ ಸಲೀಸಾಗಿ ಬಂದು, ತನಗೆ ಬೇಕು ಬೇಕಾದ ಹಣ್ಣನ್ನೆಲ್ಲಾ ತಿಂದು. ಹಣ್ಣಿನ ಬೀಜನೆಲ್ಲ ಆ ಕಾವುಲು ಕಾಯಕೆ ಬಂದಿದ್ದವುರ ಬಾಯಿಗೆ ಹಾಕಿ ಮತ್ತೆ ತನ್ನ ಜಾಗಕ್ಕೆ ಹೋಗಿ ಸೇರಬಿಟ್ಟು.

ಮೂರು ಜನ ಬೆಳಕಾಗೊ ಹೊತ್ತಿಗೆ ಎದ್ರು. ಮತ್ತೆ ತಮ್ಮ ತಮ್ಮ ಬಾಯಲ್ಲಿ ಹಣ್ಣಿನ ಬೀಜ ಇದ್ದದನ್ನು ನೋಡಿ ಯಾರು ಬೇರೆಯುವು ಈ ಕೆಲ್ಸ ಮಾಡ್ತಿರೋವ ಅಂತ ಹೇಳಿ ಸುದ್ದಿಯನ್ನ ರಾಜನ ಬಳಿಗೆ ತಂದ್ರು. ಮೂವರು ರಾಜನ ಮಗನಿಗೆ ಬಂದು ಹೇಳಿದ್ರು. "ರಾಜಕುಮಾರರೇ ನಮ್ಮ ತೋಟದಲ್ಲಿ ದಿನರಾತ್ರಿ ಹಣ್ಣನ್ನ ಯಾರೋ ತಿಂದು ಆ ಬೀಜವನ್ನ ನಮ್ಮ ಬಾಯಿಗೆ ಹಾಕಿ ಹೋಗುತ್ತಿದ್ದಾರೆ ನೀವೇ ಬಂದು ನೋಡ ಬೇಕು ಮಹಾಸ್ವಾಮಿ" ಅಂತ ಆಳುಗಳು ರಾಜನ ಬಳಿ ಹೇಳಿದ್ರು. ರಾಜನ ಬಳಿ ಅಪ್ಪಣೆ ಪಡೆದು ಕೊಂಡು ತೋಟಕ್ಕೆ ರಾಜಕುಮಾರನ ಜೊತೆ ಬಂದರು. ಯಾವ ರೀತಿಯಲ್ಲಿಯೂ ಕಳ್ಳರು ತಪ್ಪಿಸಿಕೊಂಡು ಹೋಗದ ರೀತಿಯಲ್ಲಿ ಸಿದ್ಧತೆಮಾಡಿ ಕೊಂಡು ಬಂದರು. 'ನಿಮ್ಮ ತಂದೆ ನಮ್ಮನ್ನ ಕೆಲಸದಿಂದ ತೆಗೆಯುತ್ತೀನಿ ಅಂದಿದ್ದಾರೆ. ಮಹಾಸ್ವಾಮಿ ನಾವು ನಿರಪರಾಧಿಗಳು ನೀವೇ ನೋಡಿ ಬನ್ನಿ' ಅಂತ ರಾಜಕುಮಾರರ ಜೊತೆ ತಾವು ಮೂರು ಜನ ಆಳುಗಳು ತೋಟಕ್ಕೆ ಬಂದು ಕಾಯ್ದು ಕುಳಿತಿದ್ದರು.

ಸುಮಾರು ಹೊತ್ತು ಕಳೆಯಿತು. ರಾಜನ ಮಗನಿಗೆ ನಿದ್ದೆ ಬಂತು. ರಾಜನ ಮಗನನಗೆ ನಿದ್ದೆ ಬಾ ಇದೆ. ನಿದ್ದೆ ಮಾಡಿ ಹೇಳ್ತಿನಿ ನೀವು ಕಾಯುತ್ತಾ ಇರಿ' ಅಂತ ಹೇಳಿ ತಾನು ಮಲಗಿದೆ. ಎಷ್ಟೋ ಹೊತ್ತಿನ ಮೇಲೆ ಆಳುಗಳಿಗೂ ನಿದ್ದೆ ಬಂತು. ಮೂರು ಜನರೂ ರಾಜನ ಮಗನ ಜೊತೆಯಲ್ಲಿಯೇ ಮಲಗಿದ್ದರು. ಆ ರಾತ್ರೀಲಿ ಹುಣಸೇ ಮರದಲ್ಲಿದ್ದ ಹುಡುಗಿ ಹೊರಗೆ ಬಂದ್ಲು. ತಾನು ಮಾಮೂಲಿಯಾಗಿ ವನವನ್ನೆಲ್ಲ ತಿರುಗಿ ಚೆಂದ ಚೆಂದವಾದ ಹಣ್ಣುಗಳನ್ನು ತಿಂದು ಬೀಜಗಳನ್ನು ತಂದು ರಾಜನಮಗನ ಬಾಯಿಗೆ ಹಾಕಿ ತಾನು ಮಾಮೂಲಿಯಾಗಿ ಸೇರುತ್ತಿದ್ದ ಮರದ ಪೊಟರೆಗೆ ಹೋಗಿ ಮಲಗಿದಳು.

ಕಾಗೆಗಳು ಕಿರುಚುತ್ತಿದ್ದೊ. ಆಗ ಆಳು ಮನುಷ್ಯರಿಗೆ ಎಚ್ಚರವಾಯ್ತು. ಬೇಗ ಎದ್ದು ನೋಡ್ತಾರೆ ಹಣ್ಣಿನ ಬೀಜಗಳು ರಾಜನ ಮಗನ ಬಾಯಲ್ಲಿವೆ. ಆಳು ಮನುಷ್ಯ 'ಬನ್ನಿ ಮಹಾಸ್ವಾಮಿ ನಿಮ್ಮ ತಂದೆಯವರ ಬಳಿ ಹೋಗಿ ಹೇಳೋಣ ' ವೆಂದು ವಿನಯ ದಿಂದಲೇ ಹೇಳಿದರು. ಆಗ ರಾಜನ ಮಗ ಆಳು ಮನುಷ್ಯರಿಗೆ 'ಅಯ್ಯ ನೀವು ನಮ್ಮ ತಂದೆಯಾದ ಮಹಾರಾಜರಿಗೆ ಹೇಳಿದರೆ ನಮ್ಮ ನಾಲ್ಕು ಮಂದಿಗೂ ಶಿಕ್ಷೆಯನ್ನು ಕೊಡುತ್ತಾರೆ. ಆದ ಕಾರಣ ನಾವು ಯಾರು ಕೂಡ ಯಾರ ಮೇಲೂ ಹೇಳುವುದು ಬೇಡ ನಾಳೇ ನಾನೇ ಯಾರು ಈ ರೀತಿ ನಮಗೆ ಮೋಸವನ್ನು ಮಾಡುತ್ತಿರುವವರು ಅನ್ನುವುದನ್ನು ಕಂಡು ಹಿಡಿಯುತ್ತೇನೆ' ಎಂದು ಆಳು ಮನುಷ್ಯರನ್ನು ಸಮಾಧಾನ ಮಾಡಿದ.

ಆ ಹೊತ್ತು ನಾಲ್ಕು ಮಂದಿಯೂ ಬಹಳ ಕಠಿಣ ಶ್ರಮದಿಂದ ಕಾಯುವುದಕ್ಕಾಗಿ ಅಲ್ಲಿ ಬಂದು ಯೋಚಿಸುತ್ತಿದ್ದರು. ರಾಜರು ನಮ್ಮ ನಾಲ್ಕು ಮಂದಿಗೂ ಶಿಕ್ಷೆ ಕೊಡುತ್ತಾರೆ ಎಂದು ಬಹಳ ಜವಾಬ್ದಾರಿಯಿಂದ ಕಾಯುತ್ತಿದ್ದರು.

ಆ ಹುಡುಗಿ ರಾತ್ರಿ ಸರಿಯಾಗಿ ಹನ್ನೆರಡು ಗಂಟೆಗೆ ಆ ಹುಣಸೇಣರದಿಂದ ಬಂದು ಹಣ್ಣಿನ ತೋಟಕ್ಕೆ ಹೋದಳು. ತನಗೆ ಬೇಕಾದ ಒಳ್ಳೆಯ ಹಣ್ಣುಗಳನ್ನೆಲ್ಲ ಕಿತ್ತು ತಿಂದು ಬೀಜಗಳನ್ನು ತಂದು ರಾಜನ ಮಗನ ಬಾಯಿಗೆ ಹಾಕಲು ಹೋದ್ಲು. ರಾಜನ ಮಗ ಆಕೆಯ ಕೈಯನ್ನ ಹಿಡಿದು ಕೊಂಡ. ನೀನು ನಮಗೆ ಎಷ್ಟು ಅನ್ಯಾಯ ನನ್ನ ಮಾಡಿರುವೆ, ನಿನಗೆ ಕುದಿಯುವ ಬಿಸಿನೀರನ್ನು ಮೈ ಮೇಲೆ ಹಾಕಿ ನಿನ್ನನ್ನು ಕೊಲ್ಲಿಸುತ್ತೇನೆ ಅಂದ.

ಆಕೆ ನೀನು ನನ್ನ ಕೈ ಹಿಡಿದಿದ್ದೀಯೆ ಆದ ಕಾರಣ ನೀನೇ ನನ್ನ ಗಂಡನಾಗ ಬೇಕು ಅಂದಳು. ಆಕೆಯನ್ನು ಒಮ್ಮೆ ರಾಜನ ಮಗ ದೃಷ್ಟಿ ಇಟ್ಟು ನೋಡಿದ. ಆಕೆ ಬಂಗಾರದಂತೆ ಹೊಳೆಯುತ್ತಿದ್ದಳು. ಆಕೆಯನ್ನು ಅರಮನೆಗೆ ಕರೆದುಕೊಂಡು ಬರುವುದಕ್ಕೆ ಮೊದಲು ಆ ರಾತ್ರಿ ರಾಜನ ಮಗ ಆ ಹುಡುಗಿಯ ಜೊತೆ ಆ ಮರದ ಪೊಟರೆಯಲ್ಲಿಯೇ ಮಲಗಿದ. ರಾತ್ರಿ ಕಳೆದ ಮೇಲೆ ಬೆಳಿಗ್ಗೆ ಅರಮನೆಗೆ ಹೋದ.

ರಾಜನ ಜೊತೆ ಅಪ್ಪ'ನಾನು ಆ ನಮ್ಮ ಹಣ್ಣಿನ ತೋಟದ ಬಳಿ ಇರುವ ಹುಣಿಸಿ ಮರವ ಲಗ್ನ ಆಗ್ತಿನಿ 'ಅಂತ ಹೇಳಿದ. ಮಗನಿಗೆ ರಾಜ ನೀನು ಹುಣಸೇ ಮರವ ಯಂಗೆ ಲಗ್ನ ಆಗ್ತಿಯೇ ಅಂತ ಕೇಳಿದ. ಅಪ್ಪ'ನೀವು ಏನಾದ್ರೂ ಹೇಳಿ ನಾನು ಮಾತ್ರ ಆ ಹುಣಸೇ ಮರನೇ ಲಗ್ನ ಆಗ್ತಿನಿ'ಅಂತ ಹೇಳಿದ.

ರಾಜನಿಗೆ ತನ್ನ ಮಗನ ಮಾತಿನಿಂದ ಸಿಟ್ಟು ಬಂತು. 'ನೋಡು ನಾನು ನಿನ್ನ ಹುಟ್ಟಿಸಿಲ್ಲ; ನೀನುನನಗೆ ಹುಟ್ಟಿಲ್ಲ ಅಂದತ್ತೀನಿ, ನೀನು ಹೋಗು ನನ್ನ ಮಾತು ಕೇಳದೆ ಹೋದ ಮೇಲೆ'ಅಂದ . ರಾಜನ ಮಗ ತಾನು ಇಷ್ಟ ಪಟ್ಟಿದ್ದಂತೆ ಹುಣಸೇ ಮರವ ಲಗ್ನ ಆದ. ಊರಿಗೆಲ್ಲಾ ಊಟ ಕೊಟ್ಟ. ಆ ರಾಜನ ಮಗನ್ನೆ ಒಬ್ಬ ಮಗ ಹುಟ್ಟಿದ. ಈತ ಮಗವನ್ನ ತೊಟ್ಟಿಲಲ್ಲಿ ಹಾಕ್ಕಂಡು ಪದವ ಹೇಳಿದ್ದ. ಅದನ್ನ ಆಳುಗಳು ನೋಡ್ಕಂಡ್ರು ರಾಜನ್ ಹೋಗಿ ಹೇಳದ್ರು.

ಮಹಾರಾಜರೇ 'ನಿಮ್ಮ ಮಗನ್ನೆ ಬಂಗಾರದಂಥ ಹೆಣ್ಣು ಸಿಕ್ಕಿದೆ, ನಾವು ಸತ್ಯ ಹೇಳ್ತಿದ್ದೀವಿ' ಅಂದ್ರು. ರಾಜ ತನ್ನ ಮಗನ್ನ ನೋಡಿಕ್ಕಾಗೆ ದಂಡು ದಾಳಿ ಕಂಡು ಬಂದು, ಡಂಗುರ ಮಾಡಿಸ್ಕಂಡಿ ಸೊಸೆ, ಮಗ, ಮೊಮ್ಮಗ ಎಲ್ಲಾರನ್ನೂ ಕಂಡು ಅರಮನೆಗೆ ಬಂದ್ರು.

ರಾಜನ್‌ ಒಬ್ಬ ಚಿಕ್ಕ ಮಗ ಇದ್ದ. ಅವುನು ಅಪ್ಪ 'ಅಪ್ಪ ಅಪ್ಪ ಅಣ್ಣ ದೊಡ್ಡ ಹುಣಸೇ ಮರಕ್ಕೆ ಲಗ್ನ ಆಗಿರೋ ಹೊತ್ತಿಗೆ ಅವು, ಬಂಗಾರದಂಥ ಹೆಣ್ಣು ಸಿಕ್ಕಿದ್ದು, ಬಂಗಾರ, ಬೆಳ್ಳಿ, ಎಲ್ಲಾ ಸಿಕ್ತು. ಅಲ್ಲಿ ಚಿಕ್ಕದೊಂದು ಮುತ್ತಿನ ಮರ ಇದೆ ಅದನ್ನ ಮದ್ದೆ ಆಗ್ತಿನಿಂದ. ನಿನ್ನ ಇಷ್ಟ ಅಂತ ರಾಜ ಹೇಳ. ರಾತ್ರೀಲಿ ಹೋಗಿ ತೋಟದಲ್ಲಿ ಕುಂತಿದ್ದ. ಅಲ್ಲೆ ಒಂದು ಹುಲಿ ಬಂತು. ಯಾಕೆ ನಿನ್ನೆ ನಾಚಿಕೆ ಆಗಿದ್ದದಾ ಅಂತ ಹತ್ತಿರಕ್ಕೆ ಹೋದ. ಹುಲಿ ಅವುನ್ನ ಹಿಡ್ಕಂಡಿ ಎರಡು ತಾವು ಕಚ್ಚಿರಕ್ತ ಕುಡೀತು. ಬೆಳಿಗ್ಗೆ ಹೊತ್ತೆ ಸುದ್ದಿ ರಾಜನ್‌ ತಲುಪಿತು. ರಾಜನ ಕಿರಿ ಮಗನ್ನ ಹುಲಿ ಹಿಡಿದು ಸಾಯಿಸದೆ ಅಂತ ಗೊತ್ತಾಯ್ತು. ರಾಜ ತನ್ನ ಪರಿವಾರ ಸಮೇತ ಹೋಗಿನೋಡಿದ. ಹೋದ್ರೆ ಹೋಗ್ಲಿ ಅಂತ ಇರೋನು ಒಬ್ಬ ಮಗನ ಜೊತೆ ಸೇರಂಡಿ ಸುಖವಾಗಿ ರಾಜ್ಯ ಭಾರ ಮಾಡಿಕೊಂಡು ನೆಮ್ಮದಿಲಿ ಕಾಲ ಕಳೀತಿದ್ದ.

logoblog

Thanks for reading Story -06 ಹುಣಸೇಮರದೊಳಗಿನ ಹುಡುಗಿ

Previous
« Prev Post

No comments:

Post a Comment