Thursday, July 2, 2026

Habbagala-mahatva-kannada

  VIDYAVANI       Thursday, July 2, 2026
Habbagala-mahatva-kannada



ಹಬ್ಬಗಳ ಸಾಮಾನ್ಯ ಸ್ವರೂಪ

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ತುಂಬ ಮಹತ್ವದ ಸ್ಥಾನ ಪಡೆದಿವೆ. ಅವು ನಮ್ಮ ಧಾತ್ಮಿಕ ಶ್ರದ್ದೆಯ ಸಂಕೇತವಾಗಿ ಶತಮಾನಗಳಿಂದ ಉಳಿದುಕೊಂಡಿವೆ. ಇಹದ ಬದುಕಿಗೆ ಹಾಗೂ ಪರದ ಚಿಂತನೆಗೆ ಹಬ್ಬವನ್ನು ಸಾಧನವೆಂದು ಬಳಸಿಕೊಳ್ಳಲಾ ಗುತ್ತಿದೆ. ಅವು ನಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಬಲಗೊಳಿಸುವ ಉದ್ದೇಶ ಹೊಂದಿವೆ. ಜೀವನದ ಮೂಲ ಗುರಿಯೆ ಧರ ಸಾಧನೆ ಎಂದು ನಮ್ಮ ಸನಾತನ ನಂಬಿಕೆಯಷ್ಟೆ, ಈ ನಂಬಿ ಕೆಯ ನೆರಳಿನಲ್ಲಿ ಹಬ್ಬ ಹರಿದಿನಗಳು ರೂಪುಗೊಂಡಿವೆ. ಶುಚಿ ರುಚಿಯಾದ ಜೀವನ ರಚನೆ ಹಬ್ಬಗಳ ಹಿನ್ನೆಲೆಯಲ್ಲಿ ಹುದುಗಿದೆ. ನೈತಿಕ ಮೌಲ್ಯಗಳ ಉದ್ದೀಪನವೂ ಇವುಗಳ ವಿಶಾಲ ಧೈಯ ಗಳಲ್ಲಿ ಒಂದಾಗಿದೆ.

ಹಬ್ಬಗಳಿಗೆ ನಂಬಿಕೆ ಮತ್ತು ಆಚರಣೆ ಎಂಬ ಎರಡು ಮುಖಗಳುಂಟು. ಇವು ಪರಸ್ಪರ ಪೂರಕ ಅಂಶಗಳಾಗಿವೆ. ನಂಬಿಕೆ ಮೂಲ ಶ್ರದ್ದೆಗೆ ಸಂಬಂಧಿಸಿದುದಾಗಿದೆ. ಆಚರಣೆ ಆ ನಂಬಿಕೆಯನ್ನು ಆಧರಿಸಿದ ಕ್ರಿಯೆಗೆ ಸಂಬಂಧಪಟ್ಟಿದೆ. ನಂಬಿಕೆ ದೃಢವಾಗಿದ್ದರೆ ಮಾತ್ರ ಆಚರಣೆ ಫಲಪ್ರದವಾಗಲು ಸಾಧ್ಯ. ಕೆಲವೊಮ್ಮೆ ನಂಬಿಕೆಯ ತಳಹದಿ ಭದ್ರವಾಗಿರದಿದ್ದರೂ ಆಚರಣೆ ಗೋಚರಿಸುವುದುಂಟು, ಇಂಥ ಆಚರಣೆ ನಂಬಿಕೆಗೆ ಗೈಯುವ ದ್ರೋಹವಾಗಿದೆ. ಇದು ಆತ್ಮವಂಚನೆಯೂ ಆಗಿರುವ ಸಂಭವ ವಿದೆ.

ಹಬ್ಬಗಳ ಪ್ರಯೋಜನಗಳನ್ನು ಸ್ಕೂಲವಾಗಿ ಆಧ್ಯಾತ್ಮಿಕ ಹಾಗೂ ಲೌಕಿಕ ಎಂದು ವಿಂಗಡಿಸಬಹುದು. ಆಧ್ಯಾತ್ಮಿಕ ಅವರ ಪರ ನಂಬಿಕೆಗಳಿಗೆ ಅನುಗುಣವಾಗಿರುತ್ತದೆ. ಹಬ್ಬಗಳ ನಿಷ್ಠಾ ಪೂರ್ಣ ಆಚರಣೆ ಸದ್ಗತಿಗೆ ದಾರಿ ಎಂದು ಆಸ್ತಿಕರ ನಂಬಿಕೆ, ದೇವತ್ವದ ನಿಜವನ್ನು ಅರಿಯಲು ಇವು ನೆರವಾಗುವವೆಂದು ಅವರ ವಿಶ್ವಾಸ, ನಮ್ಮ ಈ ಹಬ್ಬಗಳು ಕೂಡ ಹಲವಾರು ದೇವರು ಗಳೊಡನೆ ಹೆಣೆದುಕೊಂಡಿರುವುದನ್ನು ನೆನೆಯಬಹ ದು. ದೇವರ ಲೀಲೆಗಳ ನೆನಪುಗಳು ದೇವತ್ವದ ಕುರಿತು ಭಕ್ತಿ, ಶ್ರದ್ಧೆ ಗಳು ಹುಟ್ಟುವಂತೆ ದೃಢಪಡುವಂತೆ ಹಬ್ಬಗಳ ಯೋಜನೆ ಇದೆ. ಹಬ್ಬಗಳ ಲೌಕಿಕ ಪ್ರಯೋಜನಗಳು ತುಂಬ ವ್ಯಾಪಕವಾಗಿರು ವುದನ್ನು ಗಮನಿಸಬೇಕು. ಹಬ್ಬಗಳು ಕಾಲಿಕ್ಕುತ್ತಿರುವಂತೆಯೇ ಮನೆ ಮಠಗಳು ತಮ್ಮ ಧೂಳು ಕೊಡಹಿಕೊಂಡು, ಮೈ ಮುರಿದು ಮೇಲೆಳುವವು. ಮನೆಗಳಿಗೆ ಈಗ ಸ್ವಚ್ಛತೆಯ ದೀಕ್ಷೆ ದೊರೆವುದು. ಜೊತೆಗೆ, ಸುಣ್ಣ-ಬಣ್ಣಗಳು, ತಳಿರು-ತೋರಣಗಳು ವ ನೆಯ ಅಂದವನ್ನು ಇನ್ನಷ್ಟು ಹೆಚ್ಚಿಸುವವು. ಬಂಧು-ಬಾಂಧವರು, ಇಷ್ಟ-ಮಿತ್ರರು ಹಬ್ಬಗಳ ನೆಪದಲ್ಲಿ ಸಂಧಿಸುವುದುಂಟು. ಇದು ಅಚರಣೆಯ ಸಡಗರವನ್ನು ಹೆಚ್ಚಿ ಸುವುದು. ಮಕ್ಕಳಿಗೆ ಉಮೇದು, ಹೆಂಗಸರಿಗೆ ಹೊಣೆಗಾರಿಕೆ, ಹಿರಿಯರಿಗೆ ಕಾರ್ಯಭಾರ-ಇವನ್ನು ಹಬ್ಬಗಳು ಜೊತೆಯಾಗಿ ಒದಗಿಸುವವು. ಆಬಾಲ ವೃದ್ಧರಲ್ಲಿ ಉತ್ಸಾಹದ ಚಿಲುಮೆ ಈಗ ಹಬ್ಬಗಳ ಸಾಮಾನ್ಯ ಸ್ವರೂಪ

ಚಿಮ್ಮುವುದು. ಹಲವು ಪೂಜಾವಿಧಿಗಳಿಂದಾಗಿ ಇಡೀ ಮನೆಯ ವಾತಾವರಣದಲ್ಲಿ ಉತ್ಸಾಹ ಭಕ್ತಿಗಳು ಹೊನಲಾಗಿ ಹರಿವವು. ಭಜನೆ ಹಾಗೂ ಪ್ರಾರ್ಥನೆಗಳು ಹಬ್ಬ-ಹರಿದಿನಗಳ ಅಂಗಗಳಾಗಿ ಸೇರಿಕೊಂಡಿರುವವು. ಇವೆಲ್ಲ ಸಾಮೂಹಿಕ ಭಕ್ತಿ ಸಾಧನೆಯ ವಿಧಾನಗಳಾಗಿವೆ.

“ಅನಾದಿಕಾಲದಿಂದ ಭಾರತವನ್ನು ಶಕ್ತಿಶಾಲಿಯಾಗಿ ಬೆಳಗಿಸಿ, ಮುಂದುವರೆಸುತ್ತಿರುವುದು ಯಾವುದೊ ರಹಸ್ಯ ತತ್ವ ವಲ್ಲ, ಅಲೌಕಿಕ ಜ್ಞಾನವಲ್ಲ. ಅದು ಮೃದು ಮಧುರವಾದ ಮಾನವೀಯ ಗುಣ, ವೈವಿಧ್ಯಮಯ ಸಹಿಷ್ಣು ಸಂಸ್ಕೃತಿ, ಯುಗದಿಂದ ಯುಗಕ್ಕೆ ಭಾರತದ ಅನಂತ ಶಕ್ತಿ ಪ್ರವಹಿಸುತ್ತಿ ರುವುದು ಇವುಗಳಿಂದಲೇ" ಎಂದು ಪಂಡಿತ ಜವಾಹರಲಾಲ ನೆಹರೂ ಅವರು ಹೇಳಿದ್ದು ನಮ್ಮ ಹಬ್ಬಗಳಿಗೆ ವಿಶೇಷವಾಗಿ ಅನ್ವಯಿಸುತ್ತಿದೆ. ಅವು ನಮ್ಮ ಘನವಾದ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿಗಳಾಗಿವೆ. ಆಧ್ಯಾತ್ಮಿಕ ಹಿರಿಮೆ ನಮ್ಮ ನಡೆ-ನುಡಿಗಳಲ್ಲಿಯ ನಮ್ಮ ಧಾರ್ಮಿಕ ಶ್ರದ್ದೆಯಲ್ಲೂ ಜೀವಂತವಾಗಿ ಉಳಿದಿದೆ. ಅಂತೆಯೆ ಹಲವು ಸೋಲುಗಳನ್ನು ಅನುಭವಿಸಿಯ ನಾವು ಜೀವಂತ ಜನಾಂಗವಾಗಿ ಉಳಿದಿದ್ದೇವೆ, ಬೆಳೆದಿದ್ದೇವೆ. ಖ್ಯಾತ ತತ್ವವೇತ್ತ ಡಾ|| ಎಸ್. ರಾಧಾಕೃಷ್ಣನ್ ಅವರು ಅಭಿಪ್ರಾಯಪಟ್ಟಿರುವಂತೆ, “ಭಾರತ ಎಂದೂ ಪರಾಭವ ಹೊಂದಿಲ್ಲ, ಅದರ ಆಧ್ಯಾತ್ಮಿಕ ಜ್ಯೋತಿ ಇನ್ನೂ ಉರಿಯು ತಲೆ ಇದೆ. ಅದು ಪ್ರಮಾದಗಳನ್ನು ಮಾಡಿರಬಹುದು ಆದರೆ ಅವನ್ನು ಸರಿಪಡಿಸಿಕೊಂಡು ಮುನ್ನುಗ್ಗುವ ಶಕ್ತಿ ಅದಕ್ಕಿದೆ."

ಆದರೆ, ಇಂದು ಹಬ್ಬಗಳ ಮೂಲ ಸತ್ವ ಮರೆಯಾಗಿ ರುವುದು ನಗ್ನ ಸತ್ಯ. ಅವುಗಳ ಹಿಂದಿನ ನಂಬಿಕೆ, ಆಚರಣೆಯ ನಿಷ್ಠೆ ಇಂದು ತೀರ ವೀರಳವಾಗಿ ಕಾಣ ಸಿಗುತ್ತವೆ. ಅವುಗಳ ಆಡಂಬರದ ವಿಕೃತ ರೂಪ ಮಾತ್ರ ಉಳಿದುಕೊಂಡಿದೆ. ಆಚರ ಣೆಯ ಪವಿತ್ರತೆ ಔಷಧಿಗೂ ಸಿಕ್ಕುತ್ತಿಲ್ಲ. ಬದಲಾದ ಜೀವನ ಮೌಲ್ಯಗಳು ಕೂಡ ಹಬ್ಬಗಳ ಹಿನ್ನಡೆಗೆ ಕಾರಣವಾಗಿರಬಹುದು. ಭರದಿಂದ ನಶಿಸಿ ಹೋಗುತ್ತಿರುವ ಆಸ್ತಿಕತೆ, ಕುಸಿದು ಬೀಳುತ್ತಿ ರವ ಹಳೆಯ ನಂಬಿಕೆಗಳು - ಹಬ್ಬಗಳ ಅಡಿಪಾಯವನ್ನು ಅಲ್ಲಾಡಿಸುತ್ತಿವೆ. ನಮ್ಮಲ್ಲಿಯೆ ಹಲವರು ಇವುಗಳ ಆಚರಣೆ ಯನ್ನು ಆಡಂಬರ, ಸ್ವಪ್ರತಿಷ್ಠೆಗಳ ಪ್ರದರ್ಶನಕ್ಕೆ ಬಳಸಿಕೊಳ್ಳು ತಿರುವುದು ಇನ್ನಷ್ಟು ಕೆಟ್ಟ ಪ್ರವೃತ್ತಿಯಾಗಿದೆ. ಇದು ನಿಜಕ್ಕೂ ಹಬ್ಬಗಳಿಗೆ ನಾವು ಗೈಯ್ಯುತ್ತಿರುವ ಅಪಚಾರ. ಆಳವಾದ ನಂಬಿಕೆ ಮತ್ತು ಉತ್ಸವ, ಆಚಾರ ಬೇರೂರಿದರೆ ಮಾತ್ರ ನಾವು ಹಬ್ಬ ವನ್ನು ಅರ್ಥ ಪೂರ್ಣವಾಗಿ ಆಚರಿಸಬಲ್ಲೆವು.

ಬದುಕನ್ನು ತೆರೆದ ಕಣ್ಣುಗಳಿಂದ ನೋಡುತ್ತ ಬಂದಿರುವ ಕವಿಗಳು, ನಮ್ಮ ಹಬ್ಬ ಹರಿದಿನಗಳ ಕಡೆಗೆ ವಿಶೇಷ ಗಮನ ಹರಿಸಿರುವರು. ಅವುಗಳ ಹಿನ್ನೆಲೆ ಹಾಗೂ ಆಚರಣೆಗಳ ವೈಶಿಷ್ಟ್ಯ ಗಳನ್ನು ಅವರು ತಮ್ಮ ಕವನಗಳಲ್ಲಿ ಮನಂಬುಗುವಂತೆ ಮೂಡಿಸಿ ರವರು. 'ರವಿ ಕಾಣದ್ದನ್ನು ಕವಿ ಕಾಣುತ್ತಾನೆ' ಅನ್ನುವುದಕ್ಕೆ ಒಂದು ದೃಷ್ಟಾಂತ ಇಂಥ ನಿರೂಪಣೆಗಳಲ್ಲಿ ಗೋಚರಿಸುತ್ತಿದೆ. ಜೊತೆಗೆ, ನಮ್ಮ ಹಬ್ಬಗಳ ಸಾಂಸ್ಕೃತಿಕ ಸ್ವರೂಪ ದರ್ಶನ ಕವಿ ಗಳ ನಿರೂಪಣೆಯಲ್ಲಿ ಆಗುತ್ತಿದೆ. ಬಾಹ್ಯಾಡಂಬರಕ್ಕೆ ಮನಸೋತ ಜನ ಹಬ್ಬಗಳಿಗೆ ನೀಡಿದ ವಿಕೃತ ಸ್ವರೂಪದ ವಿಡಂಬ ನೆಯೂ ಇಲ್ಲಿದೆ. ಎಲ್ಲಕ್ಕೂ ಮಿಗಿಲಾಗಿ, ಅನುದಿನದ ಬದುಕಿಗೆ ಹಬ್ಬಗಳು ನೀಡುವ ಪ್ರೇರಣೆ, ಸಂದೇಶಗಳ ನಿರೂಪಣೆ ಕವಿ ವಾಣಿಯಲ್ಲಿ ಹುದುಗಿದೆ. ಅಂತೆಯೆ, ಹಬ್ಬಗಳ ಕುರಿತು ಕವಿ ದೃಷ್ಟಿ ತುಂಬ ಮಹತ್ವದ್ದೆನಿಸುತ್ತಿದೆ.

ಯುಗಾದಿ, ವಿಜಯದಶಮಿ, ದೀಪಾವಳಿ ಹಾಗೂ ಹೋಳಿ ಹಬ್ಬ ಈ ನಾಲ್ಕು ಹಬ್ಬಗಳನ್ನು ಕೈಗೆತ್ತಿಕೊಂಡು, ಕನ್ನಡ ಕವಿ ಗಳು ಕಂಡಂತೆ ಅವುಗಳ ಸ್ವರೂಪವನ್ನು ಗುರುತಿಸುವ ಹವಣಿಕೆ ಈ ಪುಸ್ತಿಕೆಯ ಮುಂದಿನ ಪುಟಗಳಲ್ಲಿದೆ. (ಕವಿಗಳ ಉಲ್ಲೇಖ ದೊಡನೆ ಕವನಗಳನ್ನು ಭಾಗಶಃ ಉದಾಹರಿಸಿದ್ದು, ಅವುಗಳ ಅಡಿಯಲ್ಲಿ ಸಂಬಂಧಿಸಿದ ಕವನದ ಹೆಸರು ಹಾಗೂ ಸಂಕಲನದ ಹೆಸರು ಇವನ್ನು ಕ್ರಮವಾಗಿ ಕೊಟ್ಟಿದ್ದು, ಕವನದ ಹೆಸರು ಗಳನ್ನು ಅವತರಣಿಕೆ ಚಿಹ್ನೆಯಲ್ಲಿ ಸೂಚಿಸಲಾಗಿದೆ.

logoblog

Thanks for reading Habbagala-mahatva-kannada

Newest
You are reading the newest post

No comments:

Post a Comment