Thursday, February 26, 2026

Story -05 ಹುಂಜನ ಕತೆ

  VIDYAVANI       Thursday, February 26, 2026
Story -05 ಹುಂಜನ ಕತೆ

ಒಂದೂರಲ್ಲಿ ಒಬ್ಬಳು ಮುದುಕಿ ಇದ್ದಳು. ಅವಳಿಗೆ ಮಕ್ಕಳಿರಲಿಲ್ಲ. ಅವುಳು ಒಂದು ಹುಂಜ ಸಾಕಿದ್ದಳು. ಅದು ಒಂದು ದಿನ 'ಅವ್ವ ವಾರ ವಾರವೂ ನೀನೇ ಸಂತೆಗೆ ಹೋಗ್ತಿಯಲ್ಲ, ಈ ವಾರ ನಾನು ಹೋಗಿ ಸಂತೆ ಡೊಡ್ತೀನಿ ಅಂತ ಹೇಳು. ಮುದುಕಿ ನಾನೇ ಸಂತೆ ಮಾಡ್ತೀನಿ ಅಂತ ಹೇಳ್ತಾಳೆ. ಸಂತೆ ಗೋಗಿ ರಾಗಿ, ಜೋಳ, ಉಪ್ಪು, ಮೆಣಸಿನಕಾಯಿ ತಕ್ಕಂಡಿ ಬಾಳೆ ಒಂದು ವಾರದ ತನಕವೂ ಜೀವನ ಸಾಗಿಸ್ತಾಳೆ.

ಮುದುಕಿಯ ಮನೆಯ ಹುಂಜ ಚೆನ್ನಾಗಿ ಮಾತು ಕಲಿತಿರುತ್ತದೆ. ಹುಂಜ "ಅವ್ವನಾನು ನೋಡಂಗೆ ನೀನೇ ಎಷ್ಟು ದಿನದಿಂದ್ಲುವೆ ಸಂತೆ ಮಾಡ್ತೀಯೇ, ಆದ್ರೆ ಈ ವಾರ ನಾನು ಸಂತೆ ಮಾಡ್ತೀನಿ' ಅಂತ ಹೇಳ್ತುದೆ. ಅದೆ ಮುದುಕಿ ಹೇಳಿದ್ದು 'ನೀಯಂಗೆ ಸಂತೆ ಮಾಡಿಯೇ, ನಿನ್ನ ಕೈ ಇಲ್ಲ. ಜೋಳ. ರಾಗಿ, ಮೆಣಸಿನಕಾಯಿ ಎಲ್ಲಾನೂ ಯಂಗೆ ತರುತ್ತಿಯೇ' ಅಂತ ಕೇಳಿದ್ದು, ಹುಂಜ ಅವುಳ ಮಾತು ಕೇಳ್ಳಿಲ. 'ಬ್ಯಾಡ ಕನಪ್ಪ ನಾನು ಸಂತೆಗೋಗಿ ಸಾಮಾನು ತಕ್ಕ ಬರ್ತೀನಿ ಇನ್ನೂ ಸಂತೆ ಇರೋದು ಒಂದು ವಾರಕ್ಕೆ ' ಅಂತ ಹೇಳಿದ್ದು. 'ನೀನು ಎಂಟು ದಿನಕ್ಕೆ ಆಗುವಷ್ಟು ಯಂಗೆ ತಕ್ಕಬರಿಕೆ ಅದದು' ಅಂತ ಹುಂಜಕ್ಕೆ ಕೇಳಿದ್ದು, ಇನ್ನೂ ನಿನ್ನ ಸಂತೆಗೆ ಕಳಿಸಿದ್ರೆ ನಾನು ವಾರದ ತನಕವೂ ಉಪವಾಸ ಇರಬೇಕಾಗ್ತದೆ. ಅದ್ರೆ ನೀನು ಸಂತೆಗೆ ಹೋಗೋದು ಬ್ಯಾಡ ಮೊಗ ಮನೇಲಿರು ಅಂತ ಮುದುಕಿ ಹೇಳಿದ್ದು.

ಮುದುಕಿ ಮಾತು ಕೇಳಿಲ್ಲ ಹುಂಜ 'ನಾನು ಸಂತೆಗೆ ಹೋಗ್ತಿನಿ ಅಂದ್ರೆ ಬ್ಯಾಡ ಅಂತ ಹೇಳಿದ್ದೀಯಲ್ಲಾ ನೀನೇ ಮನೇಲಿರು ನಾನು ಸಂತೆಗೆ ಹೋಗ್ತಿನಿ' ಅಂತ ಹೇಳಿ ಹೊರಟೇ ಹೋಯ್ತು. ಮುದುಕಿ ಕೋಪದಿಂದ 'ಅಂಗೆ ಅದ್ರೆ ನೀನೇ ಹೋಗಿ ಬಾ' ಅಂದು, ಒಂದುದುಡ್ಡು ಕೊಟ್ಟು, ಒಂದು ಬ್ಯಾಗು ಕೊಟ್ಟು 'ಕತ್ತಲೆ ಮಾಡ್ಕಂದಿ ಬರಬ್ಯಾಡ ಜಲ್ಲಿ ಸಂತೆ ಮಾಡ್ಕಂದಿ ಬಂದು ಬಿಡು'ಅಂತ ಹೇಳಿ ಕಳಿಸಿದ್ದು.


'ಹುಂಜ ಬ್ಯಾಗ ನೇತಾಕ್ಕಂಡಿ ಜಲ್ಲಿ ಬರುತ್ತೀನಿ' ಅಂತ ಹೋಯ್ತು. ಹುಂಜ ಹೋಗಿ ಸಂತೆ ಮುಟ್ಟಿತು. ಜೋಳ ಮಾರುವ ಗುಡ್ಡೆ ಕಡಿಕೆ ಹೋಯ್ತು.ಜೋಳ ಮಾರಿದ್ದವು. ಅಪ್ಪ ನಿನ್ನೆ ದುಡ್ಡು ಕೊಡ್ತೀನಿ, ನನ್ನ ಕಿವಿಲಿ ಎಷ್ಟು ಜೋಳ ಹಿಡಿಸ್ತುದೆ ಅಷ್ಟು ಜೋಳ ಹಾಕು 'ಅಂತ ಹೇಳು. ಕಿವಿಗೆ ತುಂಬಕ್ಕೆ ಆಗಲಿಲ್ಲ ಅಂದ್ರೆ ನೀನು ದುಡ್ಡು ವಾಪಸ್ಸು ಕೊಡು ಅಂತ ಹೇಳ್ತು. ಜೋಳ ಮಾರಿದ್ದವುನು 'ಆಯ್ತು' ಅಂತ ಒಪ್ಪಂದ. ಹುಂಜದ ಕಿವಿಗೆ ಜೋಳ ತುಂಬಿದ. ಕಿವಿಗೆ ಎಷ್ಟು ಜೋಳ ತುಂಬಿದ್ರು ಜೋಳ ಮಾಡ್ತಿದ್ದವುನು ಮಾತಿನಂತೆ ತನ್ನ ದುಡ್ಡ ವಾಪಸ್ಸು ಕೊಟ್ಟ. ಹುಂಜ ದುಡ್ಡು ತಕ್ಕಂದಿ ಮುಂದೆ ಹೋಯ್ತು.

ಹೋಗ್ತಾ ಹೋಗ್ತಾ ಅಲ್ಲಿ ಬೇಳೆ ಮಾರಿದ್ದವುನ ತಾಕೆ ಹೋಯ್ತು. ಅಲ್ಲಿ ಹೋಗಿ ನಿಂತ್ಕತ್ತು. 'ಅವುನು ಏನು ಬೇಕು ಹುಂಜ'ಅಂತ ಕೇಳ. 'ಅಪ್ಪ ಈ ಒಂದು ದುಡ್ಡು ತಕ್ಕಬುಡು, ನನ್ನ ಕಿವಿ ಎಷ್ಟು ಬೇಳೆ ತುಂಬುದೆ ಅಷ್ಟು ಬೇಳೆತುಂಬಿ ಬಿಡಿ' ಅಂತ ಹೇಳ್ತು. ತುಂಬಿದ್ರು ತುಂಬಿದ್ರು ಬೇಳೆ ಎಲ್ಲಾ ತೀರೋಯ್ತು. ಕಿವಿ ಇನ್ನೂ ಹಿಡಿಸ್ತಿತ್ತು. ಅದ್ರೆ ಮತ್ತೆ ದುಡ್ಡು ವಾಪಸ್ಸು ಕೊಟ್ಟು ಕಳಿಸ. ಹುಂಜ ಅಂಗೆ ಮುಂದೆ ನಡಿತು. ಮುಂದೆ ಹೋಗಿ ಮೆಣಸಿನಕಾಯಿ ಗುಡ್ಡೆ ತಾವು ಹೋಗಿ ನಿಂತ್ಕತ್ತು. ಅಲ್ಲಿ ಇಪ್ಪತ್ತು ಮೂವತ್ತು ಮೂಟೆ ಮೆಣಸಿನಕಾಯಿ ಗುಡ್ಡೆ ಇತ್ತು. ಅಲ್ಲಿ ಹೋಗಿ ನಿಂತ್ಯಂದಿ ಹೇಳು. 'ನನ್ನ ಎರಡು ರೆಕ್ಕೆಗಳು ಎಷ್ಟು ಮೆಣಸಿನಕಾಯಿ ಹಿಡಿಸ್ಕಳುತ್ತೆ ಅಷ್ಟು ಹಾಕಿಕೊಡಿ. ನನ್ನ ಹತ್ರ ಇರೋ ಒಂದು ದುಡ್ಡು ತಕ್ಕಳ್ಳಿ' ಅಂತ ಹುಂಜ ಹೇಳು.

DORK

ಮೆಣಸಿನಕಾಯಿ ತುಂಬಿದ್ರು, ತುಂಬಿದ್ರು ಆ ರೆಕ್ಕೆಗೆ ಅಲ್ಲಿದ್ದ ಮೆಣಸಿನ ಕಾಯಿಗಳೆಲ್ಲಾ ತೀರೋದು. ಸರಿ ಕೊಟ್ಟಿದ್ದ ದುಡ್ಡುನ್ನ ವಾಪಸ್ಸು ಇಸ್ಕಂಡಿ ಮನೆಗೆ ಬರಿಕೆ ನಿಂತ್ಸತ್ತು. ಚೀಲ ಕತ್ಸೆ ನೇತಾಕ್ಕಂಡಿ ಮನೆಗೆ ಬಂತು. ಹುಂಜ ಬನ್ನಿಲ್ವಲ್ಲ ಅಂತ ಮುದ್ರಿ ದಾರಿ ಕಾಯ್ತು ಕುಂತಿದ್ದು . ಸಂತೆಲಿ ದನಕರಗಳು ಹುಂಜವ ತುಳಿದಿರ ಬೈದು ಅಂತ ಯೋಚಿಸ್ತಿದ್ದು. ಅಷ್ಟೊತ್ತಿಗೆ ಹುಂಜ ಮನೆ ಮುಟ್ಟಿತ್ತು.

ಮುದ್ದಿ ಕೇಳಿದ್ದು 'ಹುಂಜ ನಾನ್ ಎಷ್ಟೇಳಿದ್ರು ನೀನ್ ಕೇಳಿಲ್ಲ ಈಗ ಖಾಲಿ ಬ್ಯಾಗ ತಕ್ಕಂದಿ ಬಂದಿಲ್ಲಾ' ಅಂತ ಹೇಳಿ ಮುದುಕಿ ಅಳ್ತ ಕುಂತಿದ್ದಳು. ಆಗ ಹುಂಬ ಹೇಳು. 'ಯಾಕೆ ಮುದುಕಿ ಚಿಂತೆ ಮಾಡ್ತ ಕುಂತಿದ್ದೀಯೇ, ಸ್ವಲ್ಪ ತಾಳು ಸಗಣಿ ತಕ್ಕ ಬಂದು ಮನೆ ತಾರಿಸು' ಅಂತು. ಅದೇ ರೀತಿ ಮನೆಯಲ್ಲನೂ ಮುದುಕಿ ಸಾರಿಸಿದ್ದು. ಪೂಜೆ ಮಾಡಿದ್ದು. 'ಈಗ ನೀನು ಸಂತೆಯಿಂದ ಏನೂ ತಂದಿಲ್ಲವಲ್ಲ ವಾರದ ತನಕ ಹಸಿಗೊಂಡು ಇರಬೇಕು' ಅಂತ ಹೇಳಿದ್ದು. 'ನೀನು ಆಳಬೇಡ ನಾನು ತಂದಿದ್ದೀನಿ'ಅಂತ ಹುಂಜ ಹೇಳ್ತು. ಕೊನೆಗೆ ಒಮ್ಮೆ ತಲೆ ಅಲ್ಲಾಡಿಸ್ತು, ಜೋಳ, ಬೇಳೆ, ಮೆಣಸಿನಕಾಯಿ, ಎಲ್ಲಾ ರಾಶಿರಾಶಿಯಾಗಿ ಬೀಳು. ಎಲ್ಲಾ ಒಂದೊಂದು ಗುಡ್ಡೆ, ಗುಡ್ಡೆಯಾಗಿ ಬೀಳು. ಆಗ ಮುದುಕಿ ನಗನಾಡೋಕೆ ಸುರುಮಾಡಿದ್ದು,

ನಾನು ಒಂದು ವಾರಕ್ಕೆ ಆಗುವಷ್ಟು ಸಾಕು ಅಂತಿದ್ದೆ. ಒಂದು ವರ್ಷಕ್ಕಾಗುವಷ್ಟು ತಂದವುನು ನೀನು ಅಂತ ಸುಮ್ಮನಾದಳು. ಮುದ್ದಿ ಕೊಟ್ಟಿದ್ದ ದುಡ್ಡು ಮುದ್ದಿ ಕೈಗೆ ಕೊಡ್ತು. ಆಗ ಮುದ್ದಿ ಸುಮ್ಮನಾದಳು. 'ಅಮ್ಮ ನೀನು ನನ್ನ ತಾಯಿ, ನಾನು ನಿನ್ನ ಮಗ, ನನ್ನೆ ನೀನು ಲಗ್ನ ಮಾಡ ಬೇಕು' ಅಂತ ಹುಂಜ ಹೇಳು. 'ನೀನು ಲಗ್ನ ಮಾಡ್ಕೊಟ್ರೆ ಮಾಡ್ಕೊಡು, ಇಲ್ಲ ಅಂದ್ರೆ ನಾನೆ ಲಗ್ನ ಮಾಡ್ಕಂದಿ ಬರೀ ದುಡ್ಡು ಕೊಡು' ಅಂತ ಕೇಳ್ತು.

ನನ್ನೆ ದುಡ್ಡು ಕೊಡವ್ವ ಎಲ್ಲಾದ್ರು ಹೋಗಿ ಲಗ್ನ ಮಾಡ್ಕ೦ದಿಬರ್ರೀನಿ ಅಂತ ದಾರೀಲಿ ನಡದೇ ಬಿಡ್ತು. ಹೋದ, ಹೋದ, ದೂರಕ್ಕ ಹೋಯ್ತು. ದೂರದ ಅರಣ್ಯವಾಗ ಹೋಗಿ ನಿಂತತ್ತು. ಅಲ್ಲಿ ಒಂದು ಬೆಕ್ಕು ಬಂದು ಅಡ್ಡ ನಿಂತ್ಕತ್ತು, 'ಏನು ಮಾವ ನಿನ್ನ ಮೇಲೆ ಬಾರಿದಿನದಿಂದ್ಲುವೆ ದುಷ್ ಮನ್ ಆಯ್ತು'ಅಂತ ಹೇಳು. ಆ ಕಾರಣದಿಂದ ನಿನ್ನ ಏನಾದ್ರು ಮಾಡಿ ತಿನ್ನ ಬೇಕು ಅಂತ ಹೇಳ್ತು. ಹುಂಜ 'ಮಗನೇ ನಿನ್ನ ಬಾಲ ಹಿಡ್ಕಂಡು ಬಡಿದ್ರೆ ಸತ್ತೋಯಿಯೇ' ಅಂತ ದೈರ್ಯ ಮಾಡ್ತು. ಆಗ ಬೆಕ್ಕು ಹಿಂದಕ್ಕೆ ಹೋಯ್ತು. ನಂತರ ಬೆಕ್ಕು ಹೆದರಿಕೊ ಬಿಡ್ತು. ಹುಂಜ ಮುಂದಕ್ಕೆ ಹೋಯ್ತು. ಅಲ್ಲಿ ಮುಂದೆ ಹೋಗ್ತಾ ಹೋಗ್ತಾ ಒಂದು ಹುಲಿ ಬಂತು. 'ನಿನ್ನ ಬಣ್ಣ ಕೆಂಪು ನನ್ನೆ ತುಂಬ ಇಷ್ಟ ಆಯ್ತು. ನಿನ್ನ ತಿಂತಿನಿ ಅಂತ ಹುಲಿ ಹೇಳಿ. ಹುಂಜ 'ನಾನು ಚಿಕ್ಕವನು ಅಂತ ಅಂಗೆ ಹೇಳ್ತಿದ್ದೀಯ ನಿನ್ನ ಬಾಯಿ ಹಿಡ್ಕಂದಿ ಸಿಗಿದ್ರೆ ನೀನ್ ಸತ್ತೋಯ್ತಿಯೆ' ಅಂತ ಹೆದರಿಸ್ತು, ಆಗ ಹುಲಿ ಆಯ್ತು ಅಂತ ಒಪ್ಪತ್ತು. ನಾನು ನಿನ್ನ ಜೊತೇಲಿ ಬರ್ರೀನಿ ಅಂತ ಹೇಳ್ತು. ಹುಂಜ ಮುಂದೆ ಮುಂದೆ ಹೋಗ್ತಾ ಇತ್ತು . ಅಲ್ಲಿ ಹೋಗ್ತಾ ಹೋಗ್ತಾ ಒಂದು ಇಲಿ ಸಿಕ್ತು. ಇಲಿ ಹೇಳು 'ಹುಂಜ ಮಾಮಾ ನಿನ್ನ ಮೆಲ್ಲಕೆ ತಿಂತಿನಿ' ನನ್ನ ಬಾಯಿ ಚಿಕ್ಕದಿರ ಬೈದು' ಅಂತ ಹೇಳು . ಆಗ ಹುಂಜ 'ಹೇ ಮಗನೇ ನೋಡಿದ್ರೆ ಒಂದಿಷ್ಟು, ಇದ್ದಿಯೇ ಬಾಲ ಹಿಡ್ಕಂದಿ ಬಂಡೆಗೆ ಬಡಿದ್ರೆ, ನೀನು ಸತ್ತೋಯ್ತ ಯ" ಅಂತು. ಆಗ ಇಲಿ 'ಬ್ಯಾಡ ಮಾವ, ನಿನ್ನ ಜೊತೇಲಿ ನಾನು ಬದ್ದೀನಿ' ಅಂತ ಹೇಳ .

ಈ ರೀತಿಯಾಗಿ ಮೂವರು ಜೊತೇಲಿ ಹೋಗ್ತಿದ್ರು. ನೋಡಿದ್ರು ಮುಂದೆ ಯಾವುದು ಅಡ್ಡ ಇಲ್ಲ. ಮುಂದೆ ಹೋಗ್ತಾ ಹೋಗ್ತಾ ರಾಜನ ಅರಮನೆಯ ದೇವಸ್ಥಾನ ಸಿಕ್ಕಿತು. ಅಲ್ಲಿ ರಾಜನ ಮಗಳು ಇದ್ದು, ಬೆಕ್ಕು, ಇಲಿ, ಹುಲಿ ಎಲ್ಲಾ ಹೋಗ್ತಾ ಇದ್ದವು..

ಹುಂಜ ರಾಜನ ಆಸ್ಥಾನದ ಮೇಲೆ ನಿಂತು ಕೊಂಡು 'ರಾಜ ರಾಜ ನಿನ್ನ ಮಗಳ. ಗಂಡ ನಾನೇ ಕೊಕ್ಕೋಕ್ಕೋ'ಕೂಗಿತು. ರಾಜ 'ಯಾರು ಈ ರೀತಿ ಕೂಗೋವ್ರು, ಅಂತ ನೋಡ್ತ. ಮಹಡಿಯ ಮೇಲೆ ಹುಂಜ ಕಾಣಿಸ್ತು. ಆಳು ಮನುಷ್ಯರು ಅರುವತ್ತು ಮಂದಿ ಇದ್ರು ಕೂಡ ಹುಂಜನ್ನ ನೋಡಿಲ್ವಲ್ಲ. ಅಂತ ಹೇಳಿ ಯಾರ ಹುಂಜ ಅದನ್ನ ಹಿಡ್ಕಂಬನ್ನಿ ಅಂದ. ಸುಮಾರು ಎಂಬತ್ತು ಹುಂಜ ಅವೆ ಯಾವುದು ಅಂತ ಕಂಡು ಹಿಡಿಯೋದು ಅಂತ್ಕಂಡ. 'ಆ ಹುಂಜವ ಎಂಭತ್ತು ಹುಂಜದೊಳಕ್ಕೆ ಬಿಡಿ, ಹೊಸ ಹುಂಜ ಅದ್ರೆ ಕಚ್ಚಿ ಕಚ್ಚಿ ಸಾಯಿಸ್ತವ' ಅಂತ ಹೇಳ್ವ. ಹೊಸ ಹುಂಜ ಎಲ್ಲ ಹುಂಜಕ್ಕೂ ಕಚ್ಚಿಕೆ ಸುರುಮಾಡ್ತು.

ಹುಂಜನ ಜೊತೇಲಿ ಬಂದಿತ್ತಲ್ಲಾ ಬೆಕ್ಕು ಎಲ್ಲಾ ನೋಡ್ತಾ ನಿಂತಿತ್ತು . ಹುಂಜ ಮಾನ ಏನು ನೋಡ್ತಾ ನಿಂತಿದ್ದೀಯೇ ಬಾ' ಅಂತು. ಅಂಗ ಅಂದದ್ದೆ ತಡ ಬೆಕ್ಕು ನೆಗೆದು ಬಂದು ಎಲ್ಲಾ ಕೋಳಿಗಳ ತಲೆನುವೆ ಕಡಿದು ಕಡಿದು ತಿಂದು ಬಿಡ್ತು. ಮತ್ತೆ ಒಂದು ಸಾರಿ ಹುಂಜ ಹೋಗಿ ರಾಜನ ಅರಮನೆ ಮೇಲೆ ನಿಂತ್ಕಂಡಿ ರಾಜನ ಮಗಳ ಗಂಡ ನಾನೇ 'ಕೊಕ್ಕೋಕೋ'ಅಂತ ಜೋರಾಗಿ ಕೂಗಿತು. ಆಗ ರಾಜ'ಥ ಅವು ನವುನಾಡ ಎಲ್ಲಾ ಗ್ರಾಚಾರ ಆಯ್ತುಪ್ಪಾ ''ಅದುನ್ನ ಹಿಡ್ಕಂಡಿ ಬನ್ನಿ'ಹೋಗಿ ಅಂತ ಹೇಳಿ ಕಳುಹಿಸಿದ. ಸರಿ ಹೋಗಿ ಹಿಡಿಯಾಕೆ ಹೋದ್ರು ಯಾರೂ ಹಿಡಿಯಾಕೆ ಆಗಲಿಲ್ಲ. ಆಗ ಬಂದ್ ಐನೂರು ಹಸಗಳ ಬಿಟ್ಟು ಚೆನ್ನಾಗಿ ಹುಂಜವ ತುಳಿಸುಬಿಡಿ ಅಂತ ರಾಜ ಹೇಳ .

ಆಳು ಮನುಷ್ಯರು ಹಸುಗಳ ಹಿಡ್ಕಂಬಂದ್ರು. ಆಗ ಹುಂಜ ಹೇಳು. ಹುಲಿ ಮಾವ ಹುಲಿ ಮಾವ ನನ್ನ ಈ ಹಸುಗಳು ತುಳಿದು ಹಾಕ್ತವೆ ನೀನು ಇವುನ್ನ ತಿನ್ನು' ಅಂತು. ಆಗ ಹುಲಿ ಹಸುಗಳ ಮೇಲೆ ಬೀಳು. ಚೆನ್ನಾಗಿ ಕಡಿತು.

ಮತ್ತೆ ಹುಂಜ ರಾಜನ ಅರಮನೆ ಮಹಡಿಯ ಮೇಲೆ ನಿಂತ್ಕಂಡಿ'ನಾನೇ ರಾಜನ ಮಗಳ ಗಂಡ ಕೊಕ್ಕೋಕ್ಕೋ'ಅಂತು. ಆಗ ರಾಜ ಹೇಳಿದ 'ಹೋಗಿ ಆ ಹುಂಜವ ಹಿಡ್ಕಂದಿ ಬನ್ನಿ'ಅಂದ್ರು. ಅರವತ್ತು ಜನ ಆಳು ಮನುಷ್ಯರು ಹೋಗಿ ಹುಂಜವ ಹಿಡ್ಕಂದಿ ಬಂದ್ರು. ಹೋಗಿ ತಿಪ್ಪೆಗುಂಡಿಲಿ ಹಾಕಿ ಮುಚ್ಚಿದ್ರು. ಹುಂಜ ಈಗ ಏನು ಮಾಡೋದು ಅಂತ ಯೋಚಿಸ್ತಾ ಇತ್ತು.

ಆಗ ಎಷ್ಟೋ ಹೊತ್ತಾದ ಮೇಲೆ ಇಲಿಮಾವನ್ನ ನೆನಿಸ್ಕಂಡಿ'ಇಲಿ ಮಾವ ಇಲಿ ಮಾವ'ಅಂತ ಕೂಗಿತು. ಓಡಿ ಬಂತು ಇಲಿ. ಇಲಿ ಬಂದುದ್ದೆ ತಿಪ್ಪೆಗುಂಡಿನೆಲ್ಲಾ ಎರಡು ಕಾಲಲ್ಲಿ ಪರೆದು ಕಿತ್ತಾಕಿಬಿಡ್ತು. ಆಗ ಮತ್ತೆ ಹುಂಜ ಬದಿಕ್ಕಂಡಿ ಮೇಲಕ್ಕೆ ಬಂತು.

ಮೂರು ಬಾರಿ ಬದುಕಿ ಬಂದವುನೆ ಅಂತ ರಾಜನ ಮಗಳು 'ನನ್ನ ಗಂಡ ಅವುನೆ ಇರಬಹುದು ಅಂತ ತಿಳ್ಕೊಂಡಿ ಕಣ್ಣಲ್ಲಿ ನೀರಾಕಿದ್ದು. ತನ್ನ ತಂದೆ ಕರೆದು ಹೇಳಿದ್ದು 'ಕೋಳಿ ಮನೆಗೆ ಹಾಕಿದೆ, ಹಸುಗಳ ಕೈಲಿ ತುಳಿಸಿದೆ, ತಿಪ್ಪೇ ಗುಂಡೀಲಿ ಹಾಕಿ ಮುಚ್ಚಿಸಿದ್ದೆ ಎಲ್ಲಾ ಕಡೆಯೂ ಹುಂಜ ಸಾಯಲಿಲ್ಲವಲ್ಲ ನನ್ನೆ ಅವುನ ಜೊತೆಯೇ ಲಗ್ನ ಮಾಡು' ಅಂತ ಹೇಳಿ ಕೇಳ್ಕೊಂಡ್ಯ. ಆ ಮಾತ್ರೆ ರಾಜನುವ ಮಗಳಿಗೆ ಲಗ್ನ ಮಾಡೋದೆ ಒಳ್ಳೆಯದು ಅಂತ ಒಪ್ಪಂದ.

ಮದುವೆಗೆ ಎಲ್ಲಾ ಸಿದ್ಧತೆಯನ್ನ ಮಾಡಿ ಲಗ್ನ ಮಾಡಿದ್ರು. ಆನೆ, ಕುದುರೆ, ಒಂಟೆ ಎಲ್ಲನುವೆ ಕೊಟ್ಟು ಕಳಿಸಿದ್ರು. ಏಳುನೂರು ಎಂಟು ನೂರು ಜನ ಹೋದ್ರು. ನಮ್ಮ ಮನೆ ತುಂಬ ದೂರ ಅದೆ ಅಂತ ಹೇಳಿ ಅವೆಲ್ಲರುನ್ನುವೆ ಅಲ್ಲೇ ಊರಲ್ಲಿ ಇರಿ ಅಂತ ಹೇಳು. 'ನನ್ನ ಹೆಂಡ್ತಿಯ ನನ್ನ ಮೇಲೆ ಕುರಿಸ್ಕಂಡಿ ಹಾರು ಬಿಡ್ತಿನಿ' ಅಂತ ಹೇಳ್ತು. ರಾಜ ಅದ್ಮ ಒಪ್ಪಂಡ.

ಹುಂಜನ ಮೇಲೆ ಕುಂತ್ಕಂಡು ಹುಂಜ ಬಾಲ ಹಿಡ್ಕಳ್ಳಕ್ಕೆ ಹೇಳ್ತು. ರಾಜನ ಮಗಳು ಬಾಲ ಹಿಡ್ಕಂದಿ ಕುಂತ್ಕಂಡು, ಬರನೇ ಹಾರಿ ಹೋಗಿ ಎಲ್ಲೋ ಒಂದು ಗುಡಿಸಿಲಿನ ತಾವು ಇಳಿತು. ರಾಜನ ಮಗಳು ಈ ಹುಂಜನ ಜೊತೆ ಜೀವನ ನಡೆ ಸೋದು ಯಂಗೆ ಅಂತ ಆಳುತ್ತಿದ್ದು. ಹುಂಜನ್ನ ಸಾಕಿದ್ದ ಮುದುಕಿ ಆ ಗುಡಿಸಲಿ ನಲ್ಲಿದ್ದು. ಆಕೆ ದೂರದಿಂದ ಬಂದಿದ್ದಿಯೇ ಬಾ ಬಿಸಿನೀರು ಸ್ನಾನ ಮಾಡು ಅಂತ ಬಿಸಿ ನೀರು ಕಾಯಿಸಿ ಸ್ನಾನ ಮಾಡಿಸಿದ್ದು. ಅಡಿಗೆ ಮಾಡಿ ಊಟ ಬಡಿಸಿ ಆಯಾಸವೆಲ್ಲ ಎಂಟು ದಿನಕ್ಕೆ ಹೋಗಿಸಿದ್ದು.

ಮುದುಕಿಯನ್ನ ಚೆನ್ನಾಗಿ ನೋಡ್ಕಳ್ಳಿಕ್ಕೆ ಇವಳು ರೆಡಿಯಾದ್ದು. ಅನ್ನ, ರೊಟ್ಟ, ಸಾರು ಮಾಡೋದು ಹುಂಜಕ್ಕೆ, ಅತ್ತೆಗೆ ನಂತರ ತಾನು ಊಟಮಾಡೋದು ಈ ರೀತಿಯಾಗೆ ಕಾಲ ಕಳಿತಿದ್ದು, ರಾತ್ರಿ ಆಯ್ತಮೇಲೆ ಹುಂಜ ಹೋಗಿ ತನ್ನ ಗೊಡ್ಡಲ್ಲಿ ಮಲಿಕಳದು. ಬೆಳಗಾಯಿತು. ಮತ್ತೆ ದಿನ ಇದೇ ಮಾಡ್ಕಂದಿ ಕಾಲ ಕಳಿತ್ತಿದ್ದು.

ಒಂದು ದಿನ ಇವುಳು ಮನೆಬಿಟ್ಟು ಅರಣ್ಯಕ್ಕೆ ಹೋಗಿ ಆಳುತ್ತಿದ್ದು. ಅಲ್ಲಿ ಪಾರ್ವತಿ ಪರಮೇಶ್ವರರು ಸಂಚಾರಕ್ಕೆ ಬಂದಿದ್ರು. ಇವುಳು ಆಳೋದು ನೋಡಿ ಹತ್ತಿರಕ್ಕೆ ಬಂದ್ರು. 'ನೀನು ಯಾರಮ್ಮ; ಯಾಕೆ ಆಳ ಇದ್ದೀಯೇ' ಅಂದ್ರು. ಅವ್ರು ತಾಯಿ ತಂದೆ ಯಾರೂ ಇಲ್ಲ ಅಂತ ಹೇಳಿದ್ದು. ಹುಂಜ ನನ್ನ ಗಂಡ ಅಂದ್ಲು. ಇದೇ ರೀತಿಯಾದ್ರೆ ಮುಂದೆ ನಾನು ಯಂಗೆ ಜೀವನ ನಡೆಸೋದು ಅಂತ ಕೇಳಿದ್ದು. ಅದ್ರೆ ಒಂದು ಕತೆ ಅದೆ ಅಂಗೆ ಮಾಡು ಅಂದ್ಲು, ಹೇಳು ಅಂಗೆ ಮಾಡ್ತೀನಿ ಅಂತ ಹೇಳಿದ್ದು. 'ಬೆಳಗ್ಗೆ ಹೊತ್ತೆ ಜೇಟ್ಲಿ ಹೇಳಬೇಕು, ಬಿಸಿನೀರು ಕಾಯಿಸಬೇಕು. ಆ ಹುಂಜನ್ ಸ್ನಾನ ಮಾಡಿಸಿ ಕಲ್ಲು ತಕ್ಕಂದಿ ಚೆನ್ನಾಗಿ ತಿಕ್ಕು; ಚೆನ್ನಾಗಿ ಬಟ್ಟೆಲಿ ವರಿಸು, ಸರಿಯಾದ ಐದು ಅಡಿ ಹುಡುಗ ಆಯ್ತನೆ' ಅಂತ ಪಾರ್ವತಿ ಹೇಳಿದ್ದು. ಇನ್ನು ಅದೇ ರೀತಿ ಮಾಡಿದ್ದು. ಐದು ಅಡಿ ಹುಡ್ಗ ಆಯ್ತು ಹುಂಜ. ಹುಂಜ ಇದ್ದದು ಹುಡ್ಗ ಆಯ್ತು. ತನ್ನ ಅಪ್ಪ ಅಮ್ಮನೆ ಹೇಳಿ ಕಳಿಸಿದ್ದು. ನನ್ನೆ ಪರಮಾತ್ಮನ ದೆಸೆಯಿಂದ ಹುಂಜ ಹೋಗಿ ಮನುಷ್ಯ ಆದ ಅಂತ ಹೇಳಿ. ಮತ್ತೆ ಎಲ್ಲರ ಎದುರು ಮದುವೆ ಆದ್ದು. ಆ ಮೇಲೆ ಜೀವನ ನಡೆಸ್ಕಂಡು ಸುಖವಾಗಿ ಬಾಳಿದ್ರು.


logoblog

Thanks for reading Story -05 ಹುಂಜನ ಕತೆ

Previous
« Prev Post

No comments:

Post a Comment