Thursday, February 26, 2026

Story -04 ತಾಯಿ ಮತ್ತು ಮಗನ ಕತೆ

  VIDYAVANI       Thursday, February 26, 2026
Story -04 ತಾಯಿ ಮತ್ತು ಮಗನ ಕತೆ

ಒಂದು ತಾಂಡದಲ್ಲಿ ಔಸರಾಜ ಅನ್ನೊವೂನೊಬ್ಬ ಇದ್ದ. ಅವುನ ಹೊಟ್ಟೆಲಿ ಒಬ್ಬ ಮಗ ಹುಟ್ಟಿದ. ಅವು, ಲಗ್ನ ಮಾಡ್ಡ. ಅವ್ರ ಊರಲ್ಲಿ ಕುಡಿಯಕ್ಕೂ ಒಂದು ತೊಟ್ಟು ನೀರಿರಲಿಲ್ಲ. ಎಲ್ಲ ಜನ ಸೇರಿಸಿ "ಇಷ್ಟು ದೊಡ್ಡ ರಾಜ ಇದ್ದು ನಮಗೆ ಏನು ಪ್ರಯೋಜನ ಅಂತ ಮಾತಾಡಿಕೊಂಡರು. ನಾವು ಬಡವರು ಕುಡಿ ಯಾರೂ ನೀರಿಲ್ಲ. ನೀನು ಊರಿಗೆ ದೊಡ್ಡ ರಾಜ, ನೀನು ಇದ್ದು ನಮಗೆ ಏನು ಪ್ರಯೋಜನ ನೀವು ಬಾವಿ ತೆಗಿಸಬೇಕು "ಅಂತ ಹೇಳಿದ್ರು. ಆಗ ರಾಜ ನಾನು ಯಾರನ್ನಾದ್ರು ಕರ್ರ ಬತೀನಿ ನೀವೇ ಸೇರಿ ಕೊಂಡು ತೆಗಿಸಿರಿ ನೀವು ಹಣ ತಕ್ಕಳ್ಳಿ ಬಾವಿ ತೆಗಿಸಿರಿ ಅಂದ್ರು. ಊರಿನ ಜನರೆಲ್ಲಾ ಸೇರಿಕೊಂಡು ಜಮಾ ಆಗಿ ಬಾವಿ ತೆಗಿಯಾಕೆ ಹೋದ್ರು. ಸುಮಾರು ಅರವತ್ತು ಅಡಿ ಬಾವಿ ತೆಗೆದ್ರು; ಆದರೂ ನೀರು ಬರಲಿಲ್ಲ. ರಾಜನ ಬಳಿ ಬಂದ್ರು. ಅರವತ್ತು ಅಡಿ ಬಾವಿ ತೆಗೆದ್ರು. ಒಂದು ತೊಟ್ಟು ನೀರು ಬರಲಿಲ್ಲವಲ್ಲ ಏನು ಮಾಡಬೇಕು' ಅಂತ ಹೇಳಿದ್ರು. ರಾಜನ್ 'ಎಲ್ಲಾದ್ರು ಹೋಗಿ ಪಂಚಾಂಗ ತೆಗೆಸಿ' ಅಂತ ಹೇಳ್ತ. ಜನ ಕೇಳಿದ್ರು. ರಾಜ ಆಯ್ತು ಅಂತಬ್ರಾಹ್ಮಣರ ತಾವು ಪಂಚಾಂಗ ತೆಗೆಸಿ ಬರ್ರೀನಿ'ಅಂದ. ಪಂಚಾಂಗ ಹೇಳುವ 'ಬಿಚ್ಚಿ ಹೇಳಲೇ ನೀನು ಭಯ ಪಡ್ತೀಯೇ 'ಅಂತ ಹೇಳ. 'ಮುಚ್ಚುದೇನು ಬೇಡ ಎದುರುಗೆ ಹೇಳು'ಅಂತ ರಾಜ ಹೇಳ. ಬ್ರಾಹ್ಮಣ ಹೇಳ 'ನೀನು ಇರೋ ಒಬ್ಬ ಮಗನ್ನ ಬಾವಿಗೆ ಬಲಿಕೊಡಬೇಕು ಹಾಗಾದ್ರೆ ನಿನ್ನ ಬಾವೀಲಿ ನೀರು ಪೂರ್ತಿ ಬರುತ್ತೆ'ಅಂತ ಹೇಳ್ತ. ರಾಜ ಎದ್ದು ಮನೆಗೆ ಬಂದ.

ಮನೇಲಿ ರಾಜ ಸಪ್ಪೆ ಮುಖ ಮಾಡಿಕೊಂಡು ಕುಂತಿದ್ದ. ಅವುನ ಹೆಡ್ತಿ ಕೇಳಿದ್ದು. ಆವಾಗ ಅವುನು ಹೆಡ್ತಿಗೆ ಹೇಳ. 'ಚೆನ್ನಾಗಿ ಅಡಿಗೆ ಮಾಡಿ ಮಗ, ಸೊಸೆ, ನಾವು ಗಂಡ ಹೆಡ್ತಿ ಎಲ್ಲಾರು ಜೊತೇಲಿ ಊಟ ಮಾಡುವ ಅಂದ. 'ನೀನು ಮಗನಿಗೆ ಹೇಳಬೇಡ, ಬಾವಿಗೆ ಬಲಿ ಕೊಡ ಬೇಕು'ಅಂತ ಅಂದ.

ಬಾವಿಗೆ ಬಲಿ ಕೊಡುವಂತೆ ಬ್ರಾಹ್ಮಣ ಹೇಳಿರುವುದನ್ನು ಹೆಡ್ತಿ ಜೊತೆ ಹೇಳ್, ಈ ರೀತಿ ಹೇಳ್ತ ಇದ್ದದನ್ನು ರಾಜನ ಸೊಸೆ ಕೇಳಿಸಿ ಕೊಂಡಳು. ತನ್ನ ಗಂಡನ ಜೊತೆ ಹೋಗಿ ಹೇಳಿದಳು. 'ನಡಿ ಇಲ್ಲಿರೋದು ಒಳ್ಳೆಯದಲ್ಲ; ನಿಮ್ಮ ಪ್ರ ಬಾವಿಗೆ ಬಲಿ ಕೊಡ್ತರಂತೆ ಆದ್ದರಿಂದ ಹೋಗೋಣ'ಅಂದಳು. ಗಂಡ ಹೆಂಡತಿಯರು ಕೀಲು ಕುದುರೆ ಹತ್ತಿಕೊಂಡು ಹೊರಟರು.

ಕುದುರೆ ಆಕಾಶದಲ್ಲಿ ಹೋಯ್ತು, ತುಂಬ ದೂರ ಹೋಗ್ತಿತ್ತು. ಆಗ ಇವಳಿಗೆ ನೀರು ಕುಡಿಬೇಕು ಅನ್ನಿಸಿತು. ಅರಣ್ಯದಾಗ ಕೀಲು ಕುದುರೆ ನಿಲ್ಲಿಸಿ ಕೆಳಗೆ ಇಳಿದು ಗಂಡನಿಗೆ ಹೇಳಿ ಕಳುಹಿಸಿದ್ದು. ನೀರು ತಕ್ಕ ಬರೋಗು ಅಂದ್ಲು. ಅವನು ಜೆಂಬು ತಕ್ಕಂಡಿ ನೀರಿಗೆ ಹೋದ. ಹೆಡ್ತಿ ಅಲ್ಲಿ ಅರಣ್ಯದಾಗೆ ಬಿಟ್ಟು ಹೋದ. ಸುಮಾರು ಮುನ್ನೂರು ಅರವತ್ತು ಬಾವಿನೆಲ್ಲ ನೋಡಿದ್ರೂ ಯಾವ ಬಾವಿನಲ್ಲೂ ನೀರು ಸಿಗಲಿಲ್ಲ.

ದೂರದಲ್ಲಿ ಒಂದು ಬಾವಿ ಇತ್ತು. ಒಬ್ಬು ರಾಕ್ಷಸಿ ಇದ್ದು. ಆ ಬಾವಿ ತಾವು ಒಂದು ಕಾಗೆ ಇತ್ತು. ಅಲ್ಲಿಗೆ ರಾಜನ ಮಗ ಹೋದ. ರಾಕ್ಷಸಿ ಬಂದು ಅಡಡಡು ಅಂತ ರಾಜನ ಮಗನ್ನ ನುಂಗಿದ್ದು. ಹೆಂಡ್ತಿಗೆ ದಿಕ್ಕುದೆಸೆ ಯಾರು ಇಲ್ಲ. ಅವುಳೆ ಮಕ್ಕಳು ಅದೂ, ಮಕ್ಕಳು ಚುಳು ಚುಳು ಅಲ್ಲಿತ್ತು. ಅವುಳು ಗಂಡ ರ್ಬಾನೆ ಅಂತ ಕಾಯ್ತು ಕುಂತಿದ್ದಳು. ಏಳು ಜನ ಅಕ್ಕತಂಗಿಯರು ಶನಿಗಳು ಸುತ್ತುತ್ತಿದ್ದರು. ಆಗ ಸಣ್ಣ ಮಗು ಆಳಿರೋದು ಕೇಳಿಸ್ತು. ಹತ್ತಿರಕ್ಕೆ ಬಂದು ಯಾಕೆ ತಾಯಿ ಇಲ್ಲಿದ್ದೀಯೇ; ಯಾವ ದೇಶ ನಿಮ್ಮದು? ಅಂತ ಕೇಳಿದವು. ನನ್ನ ಗಂಡ ನಾನು ಬಂದೊ, ನೀರು ತರಲಿಕ್ಕೆ ನನ್ನ ಗಂಡ ಹೋದ ಒಂದು ತಿಂಗಳಾಯ್ತು ಇನ್ನೂ ಬರಲಿಲ್ಲ. ಅಂತ ರಾಜನ ಸೊಸೆ ಹೇಳಿದಳು.

ಆಗ ಅವುರುಗಳು ನೀನು ಇರಮ್ಮ ನಾವು ಬಾಣಂತನ ಮಾಡ್ತೀವಿ ಅಂತ ಹೇಳಿದರು.

ತನ್ನ ಗಂಡನನ್ನು ರಾಕ್ಷಸಿ ತಿಂದು ಬಿಟ್ಟಿದೆ ಅನ್ನುವುದನ್ನ ಹೇಳಿದವು. ಎರಡು ಮೂರು ತಿಂಗಳಾಗಿ ವಿದ್ಯಾಬುದ್ದಿ ಯಾವುದನ್ನು ಕಲಿಸಿಲ್ಲ ಅಂತ ತಾಯಿ ಹೇಳಿದ್ರು. ಮಗ ದೇಶ ತಿರುಗಕ್ಕೆ ಹೋಗವೆ ಅನ್ನುವುದನ್ನು ಹೇಳಿದಳು. ಮಗ ಬಾಣ, ಬಿಲ್ಲು, ಕತ್ತಿ, ಗುರಾಣಿ ತಕ್ಕಂಡಿ ಅವ್ರ ಅಪ್ಪ ಹೋಗಿದ್ದ ಬಾವಿ ತಾವುಕೆ ಹೊಗದ್ದೆ. ಅಲ್ಲಿ ಹೋಗಿ ಬಾವಿ ಮುಟ್ಟಿತ್ತು. 'ಕಮ್' ಅಂತ ಕೂಗು, ಆ ರಾಕ್ಷಸಿ ಮೇಲೆ ಬಂದಳು. ಆಗ ರಾಕ್ಷಸಿ ಯನ್ನ ಹೊಡೆದು ಹೋಗ್ಯಾನೆ ಕಂಬಕ್ಕೆ ನಂತರ ತಾಯಿಯ ಹತ್ತಿರಕ್ಕೆ ಬಂದ. ಅಲ್ಲಿಂದ ತಾಯಿ ಜೊತೆ ರಾಕ್ಷಸಿಯನ್ನ ಕಟ್ಟಾಕಿದ್ದಲ್ಲಿಗೆ ಬಂದ್ರು. ತನ್ನ ಗಂಡನನ್ನು ತಿಂದಾಕಿದ್ದ ಬಾವಿಯ ಹತ್ತಿರಕ್ಕೆ ಬಂದ. ಅಲ್ಲೇ ಒಂದು ರೂಮಿತ್ತು. ಅಲ್ಲಿ ಬಿಟ್ಟು ಬಿಡು ಅಂತ ಹೇಳಿದಳು. ರಾಕ್ಷಸಿ ಆ ರೂಮಿನಲ್ಲಿ ಸೇರಿಕತ್ತು,

ಈ ರೀತಿಯಾಗಿ ಸುಮಾರು ದಿನ ಕಳೆದ್ರು, ಒಂದು ದಿನ ರಾಕ್ಷಸಿನು ಆ ಹುಡುಗನ ತಾಯಿಯೂ ಒಂದಾಗಿಬಿಟ್ಟು. ಹುಡುಗನಿಗೆ ಗೊತ್ತಾಗದ ರೀತಿಲಿ ಜೊತೆ ಮಲಗೋದನ್ನ ಮಾಡ್ತಿದ್ರು. ಆ ಹುಡುಗ ಬರುವ ರಾಕ್ಷಸಿ ಆ ಹುಡುಗನ ತಾಯಿಗೆ ಹೇಳಿ ಕೊಟ್ಟಿತ್ತು. 'ಕಣ್ಣುನೋವು ಅಂತ ಹೇಳಿ ಹೋಗಿ ಮದ್ದು ತಂದು ಕೊಡು' ಅಂದ್ಲು, ತಾಯಿ ಮಗನಿಗೆ ಹೊಟ್ಟಿಗೆ ಏನೂ ಇಲ್ಲ ಅನ್ನ ತಂದು ಕೊಡು ಅಂತ ಕೇಳದ್ದ.

ರಾಕ್ಷಸಿ ಹೇಳಿ ಕೊಟ್ಟಂತೆಯೇ ಹುಡುಗನಿಗೆ ಹೇಳಿದಳು. ಆ ಹುಡುಗ ತಾಯಿ ಯನ್ನು ಉಳಿಸ್ಕಳಿಕ್ಕೋಸ್ಕರವಾಗಿ ಕಾಡಿಗೆ ಹೋದ. ಆಗ ಮತ್ತೆ ಆ ರಾಕ್ಷಸಿ ಆ ಹುಡುಗನ ತಾಯಿಯ ಜೊತೆ ಕೂಡಿತು. ನಿನ್ನ ಮಗನನ್ನು ಹುಲು ಹಾಲು ತಕ್ಕಬಾಅನ್ನು ಅವನು ಹುಲು ಹಾಲು ತರಲು ಹೋದರೆ, ಹುಲಿಗಳು ತಿಂದಾಕಿ ಬಿಡ್ತವೆ. ಆಗ ನಾವು ಸುಖವಾಗಿ ಇರಬಹುದು ಅಂತಹೇಳಿ ಕೊಟ್ಟಿತು.

ಹುಡುಗ ಕಾಡು ಮೇಡು ಅಲೆಯ ಗೆಡ್ಡೆ ಗೆಣಸನ್ನು ತಂದು ಕೊಡ್ತು. ಆಗ ತಾಯಿ ಒಂದು ಜಾಗದಲ್ಲಿ ಹುಲಿ ಹಾಲು ತಂದು ಕೊಡು ನನ್ನ ಕಣ್ಣು ನೋವು ವಾಸಿ ಯಾಗ್ತದೆ ಅಂದ್ಲು. ಆಯ್ತು ಅಂತ ಹೇಳಿ ಮಗ ಹುಲಿ ಹಾಲು ತರಲು ಹೋದ. ಇತ್ತಾಗಿ ರಾಕ್ಷಸಿಯ ಜೊತೆ ಹುಡುಗನ ತಾಯಿ ಮಜಮಾಡ್ಕಂದಿ ಕಾಲ ಕಳಿತ್ತಾವೈ.

ಆ ಹುಡುಗ ಹೋದ ಕಾಡಿನ ಮಧ್ಯೆ ಹುಲ್ಲಿನ ಪೊದೆಗೆ ಬೆಂಕಿ ಬಿದ್ದಿದೆ. ಅದೇ ಜಾಗದಲ್ಲಿ ಹುಲಿಗಳ ಮರಿಗಳು ಕಿರುಜಾಡುತ್ತಿವೆ. ಈ ಹುಡುಗ ಹೋಗಿ ನೋಡಿದ. ಹುಲಿ ಮರಿಗಳ ಪ್ರಾಣ ಕಾಪಾಡುವುದಕ್ಕಾಗಿ ನೀರು ತಂದು ಬೆಂಕಿಗೆ ಹಾಕಿ ಕೆಡಿಸಿದ, ಎಷ್ಟೋ ಹೊತ್ತಾಯ್ತು. ಆಗ ಹುಲಿ ಮನುಷ್ಯರ ವಾಸನೆ ತಿಳಿದು ಬಂದು ನಿನ್ನ ತಿನ್ನ ಬೇಕು ಅಂತು. ಹುಲಿಯ ಮರಿಗಳು ತಿನ್ನ ಬೇಡ ಅಮ್ಮ ನಮ್ಮ ಪ್ರಾಣ ಕಾಪಾಡಿದವುನು ಅಂದವು. ಆಗ ಹುಲಿ ಸುಮ್ಮನಾಯ್ತು.

bhe

'ನನ್ನ ಮರಿಗಳ ಪ್ರಾಣ ಕಾಪಾಡಿದ್ದೀಯೇ ನಿನ್ನೆ ಏನು ಬೇಕು ಕೇಳು ಕೊಡು ತೀನಿ' ಅಂತ ಹುಲಿ ಆ ಹುಡುಗನಿಗೆ ಹೇಳು. ನಮ್ಮ ತಾಯಿಗೆ ಕಣ್ಣು ನೋವು ಅದಕ್ಕೆ ನಿಮ್ಮ ಹಾಲು ಬೇಕಾಗಿದೆ ಕೊಡಿ ಅಂತ ಕೇಳ. ಹುಲಿ ಆಯ್ತು ಅಂತ ಒಪ್ಪಿಕೊಂಡು ಹಾಲು ಕೊಡು. ಹಾಲು ತಕ್ಕಂಡಿ ಎರಡು ಮಕ್ಕಳನ್ನ ಕಂಡಿ ತನ್ನ ತಾಯಿಯ ಬಳಿಗೆ ಹೊರಟ.

ತಾಯಿಯ ಬಳಿಗೆ ಬಂದು'ತಾಯಿಗೆ ಮದ್ದು ತಂದಿದ್ದೀನಿ' ಅಂತ ಕೊಟ್ಟ. ಆಗ ಅವಳು ನನ್ನ ಕಣ್ಣು ಈ ಹುಲಿ ಹಾಲಿಗೆ ವಾಸಿಯಾಗೋದಲ್ಲ. ಗರುಡ ಪಕ್ಷಿಯ ಹಾಲು ತಂದೆ ನನ್ನ ಕಣ್ಣು ನೋವು ವಾಸಿಯಾಗ್ತದೆ ಅಂತ ಹೇಳಿದ್ದು. ಸರಿ ಆಗ ಹುಡುಗ ಹುಸಿ ಮರಿಗಳ ಕರಂಡು ಗರುಡ ಪಕ್ಷಿಗಳ ತಾವುಕೆ ಹೋದ, ಗರುಡ ಪಕ್ಷಿ ತಾವು ಎರಡು ಮರಿಗಳಿದ್ದವು. ಅದೇ ಹೊತ್ತಿಗೆ ಮರಿಗಳನ್ನು ತಿನ್ನಲು ಹಾವು ಮರ ಏರುತ್ತಿತ್ತು. ಅವನ್ನ ನೋಡ್ಕಂಡು ಈ ಹುಡುಗ ಹಾವನ್ನು ಮೂರು ತುಂಡು ಮಾಡಿದ. ಆಗ ಗರುಡ ಪಕ್ಷಿಗಳ ತಾಯಿ ಬಂತು. ಯಾರು ಈ ರೀತಿ ಹಾವನ್ನು ಕೊಂದವನು. ನಮ್ಮ ಪ್ರಾಣ ಉಳಿಸಿದವುನು ಅಂತ ಹೇಳಿದವು.

'ಗರುಡ ಪಕ್ಷಿ ತನ್ನ ಮರಿಗಳನ್ನು ಕಾಪಾಡಿದ್ದರಿಂದ ನಿನಗೆ ಏನು ಬೇಕು ಕೇಳು' ಅಂತ ಹೇಳಿತು. ಆಗ ಈ ಹುಡುಗ ನನ್ನ ತಾಯಿಗೆ ಕಣ್ಣು ನೋವು ನನಗೆ ನಿಮ್ಮ ಹಾಲು ಬೇಕು ಅಂತ ಹೇಳಿದ. ಗರುಡ ಪಕ್ಷಿಗಳು ಹಾಲು ತಕ್ಕಂಡು ಬರಾವ ಹಾಲು ಮತ್ತು ಅಮೃತದ ಹೂವು ಕೊಡ್ತೀನಿ ತಕ್ಕ ಹೋಗು ಅಂತ ಗರುಡ ಪಕ್ಷಿ ಹೇಳು. ಆಗ ಹಾಲು ಮತ್ತು ಹೂವು ಎಲ್ಲವನ್ನು ತಕ್ಕಂಡು ಬಂದ.

ಹುಡುಗ ಗರುಡ ಪಕಿ. ಹಾಲು ತಕ್ಕಂಡು ತಾಯಿಯ ಬಳಿಗೆ ಬಂದ 'ಅಮ್ಮ ಗರುಡ ಪಕ್ಷಿಯ ಹಾಲು, ಅಮೃತದ ಹೂವು ತಂದಿದ್ದೇನೆ' ಅಂತ ಹೇಳ. 'ನನ್ನ ಜೀವವನ್ನು ಪಣ ಇಟ್ಟು ನಿಗೆ ತಂದು ಕೊಟ್ಟಿದ್ದೇನೆ. ನನಗೊ ಹಸಿವಿನಿಂದ ಪ್ರಾಣ ಉಳಿಸಿ ಕೊಂಡು ಸಾಕಾಗಿ ಹೋಗಿದೆ. ನನ್ನ ಕೊಲಿ ಮಾಡ೦ಗಿದೆ ಮಾಡು. ಈ ರೀತಿಯ ವನವಾಸ ಮಾತ್ರ ಬೇಡ ಅಮ್ಮ 'ಅಂತ ಹೇಳ. ತಾಯಿ ಬಂದು ತಳವಾರ ತಕ್ಕೊಂಡು ಸೀಳಾಕಿದ್ದು, ಒಂದು ಕುರಿ ಕಂಬಳಿಗೆ ಸುತ್ತಿ ಬಾವಿಗೆ ಬಿಸಾಕಿದ್ದು. ದ

ಹುಲಿಮರಿ, ಗರುಡಪಕ್ಷಿಗಳು ಜೊತೆಯಾದೊ. ಹುಲಿಮರಿಗಳು ಬೆಂಡೆಕಟ್ಕಂಡು, ಮೂಟೆ ಕಟ್ಕಂಡು ಬಂಡೆಗೆ ಹಾಕ್ಕಂಡವು. ತಾಯಿ ಜೊತೆ ಬಂದು ಗರುಡ ಪಕ್ಷಿಗಳು ಹುಲಿಗಳಿಗೆ ಮುಖಕ್ಕೆ ನೆಳ್ಳು, ಮಾಡ್ತಿದ್ದವು. ತಾಯಿ ಜೊತೆ ಗರುಡ ಪಕ್ಷಿಗಳು ಹಾರಿದವು. ಆಗ ಆ ಹುಡುಗನ ತಾಯಿ ಎತ್ಥಂದಿ ಹೋಗಿ ಆ ಕಂಬಳಿಯಲ್ಲಿ ಕಟ್ಟಿದ್ದ ಮೂಟೆಯನ್ನು ಹೊಳೆಗೆ ಹಾಕಿದ್ದು, ನೀರಿನಾಗೆ ಅದು ತೇಲ್ಕಂಡಿ ಹೋಗಿತ್ತು. ಹುಲಿಮರಿಗಳು ನೀರಿನಾಗೆ ನಡ್ಕಂಡಿ ಹೋಗ್ತಾನೆ. ಗರುಡ ಪಕ್ಷಿಗಳು ಮೂಟೆಗೆ ನೆಳ್ಳು ಮಾಡ್ಕಂಡಿ ಹೋಗ್ತಿದ್ದಾನೆ.

ಅಲ್ಲಿ ಒಂದೂರು. ಅಲ್ಲಿ ಒಬ್ಬ ರಾಜ ತನ್ನ ಮಗಳಿಗೆ ಮದುವೆ ಮಾಡೋಕೆ ಯಾವುದಾದರೂ ಹೆಣ ಸಿಕ್ಕಿದ್ರೆ ಸಾಕು ಅಂತ ಎಲ್ಲಾ ರಾಜರಿಗೂ ಪತ್ರ ಬರೆದು ಕಾಯ್ತು ಇದ್ದಾನೆ. ಅಗಸರು ಅದೇ ಹೊಳೆಗೆ ಬಟ್ಟೆ ಒಗೆಯಕ್ಕೆ ಹೋಗಿದ್ರು. ಆ ಹೆಣ ತೇಲುಕಂದಿ ಬರಿತ್ತು. ಅವುರ ತಾವುಕೆ ಹೋಯ್ತು. ಅಗಸರವುನು ಓಡಿ ಹೋಗಿ 'ರಾಜ ರಾಜರೇ, ಹೊಳೇಲಿ ಹೆಣ ಬಂದಿದೆ. ಹೆಣದ ಜೊತೆ ಮಧ್ಯೆ ಮಾಡು ಅಂತ ಹೇಳಿದ.

ರಾಜ ಅಗಸರಿಗೆ ಕಳಿಸ್ಟ, ಹೆಣ ತಕ್ಕಂದಿ ಹೋದರು. ಊರಿನ ಹನುಮಂತ ದೇವ್ರ ಪಾದಕ್ಕೆ ಇಟ್ಟು. ಪತ್ರ ಬರೆದಿರುವಂತೆ ಮಗಳು ಮದುವೆ ಮಾಡ್ತೀನಿ ಅಂತ ಆ ಹುಡುಗಿಯ ತಂದೆ ಹೇಳ್ತ, ರಾಜನ ಮಗಳ ಮದುವೆಗೆ ಜನರೆಲ್ಲಾ ಬಂದು ಅಕ್ಷತೆ ಹಾಕಿ ಹೋದರು.

ಆ ಹುಡುಗಿಗೆ ಚಿಂತೆ ಆಯ್ತು. ತನ್ನ ತೊಟ್ಟಿಲಿ ಮಕ್ಕಳು ಹುಟ್ಟಕ್ಕೆ ಏನು ಮಾಡಲಿ: ಮುಂದೆ ಜೀವನ ಯಂಗೆ ನಡೆಸಲಿ ಅಂತ ಅಳ್ತಾಳೆ. ಆಗ ಹುಲಿಮರಿಗಳು, ಗರುಡ ಪಕ್ಷಿಗಳು ಅವಳನ್ನು ಸಮಾಧಾನ ಮಾಡಿದವು. ತಾವು ತಂದಿದ್ದ ಅಮೃತದ ಹೂವನ್ನು ಸೀಳಿ ಆ ಹೆಣದ ಹೊಟ್ಟೆಗೆ ಸೇರಿಸಿದರೆ, ತಟ್ಟನೆ ಜೀವ ಆಯ್ತದೆ ಅಂತ ಹುಲಿಮರಿಗಳು ಮತ್ತು ಗರುಡ ಪಕ್ಷಿಗಳು ಹೇಳಿದವು. ಅದೇ ರೀತಿ ಆ ಹುಡುಗಿ ಅಮೃತದ ಹೂವು ಕೂದು ರಸವನ್ನು ಅಲ್ಲೆ ಹಾಕಿದ್ದು.

ಆ ಹೊತ್ತಿಗೆ 'ಉಪ್'ಅಂತ ಆ ಹುಡುಗ ಎದ್ದು ಕುಂತ್ಸಂದ, ಹನುಮದೇವ್ರಗೆ ನಮಸ್ಕಾರ ಮಾಡಿ ಎದ್ದು ಕುಂತ. ಕತ್ತಿ, ಬಾಣ ತಕ್ಕಂದಿ ಹೋದ. ತಾನು ಸತ್ತಿದ್ದ ಬಾವಿಗೆ ಹೋಗಿದ್ದ. ಅಲ್ಲಿ ಕಾಗೆ ಕೂಗಿತ್ತು. ರಾಕ್ಷಸರನ್ನ ಕೊಲೆ ಮಾಡಿದ. ಯಾವ ಯಾವ ಜನುಮದವರು ಇದ್ರು ಎಲ್ಲಾರೂ ಎದ್ದು ಬಂದ್ರು. ತನ್ನ ತಾಯಿ ಯನ್ನು ಕೊಲೆ ಮಾಡಿದ. ಮತ್ತೆ ಗರುಡ ಪಕ್ಷಿಗಳು, ಹುಲಿ ಮರಿಗಳು ಅಮೃತದ ಹೂವು ಹಾಕಿ ಬದುಕಿಸಿದವು. ಈಗ ಖರೇ ಖರೇ ಲಗ್ನ ಮಾಡಿಸ್ಕಂಡು ಎಲ್ಲಾರಿಗೂ ಪತ್ರ ಬರೆದು ಕಳಿಸಿ, ತನ್ನ ಮಗಳಿಗೆ ಮದುವೆ ಮಾಡಿದ. ನಂತರ ಎಲ್ಲರೂ ಸುಖವಾಗಿ ಕಾಲ ಕಳಿತ್ತಿದ್ದರು.

logoblog

Thanks for reading Story -04 ತಾಯಿ ಮತ್ತು ಮಗನ ಕತೆ

Previous
« Prev Post

No comments:

Post a Comment