ಒಬ್ಬ ರಾಜನಿಗೆ ಒಬ್ಬ ಮಗ ಇದ್ದ. ಆ ಮಗ ಬಾರಿ ಹಂಗಾಮಿಗೆ ಬಂದ (ವಯಸ್ಸಿಗೆ) ಅವನ ವಾರಿಗೆಯವುರೆಲ್ಲಾ ಲಗ್ನ ಮಾಡ್ಕೊಂಡ್ರು. ಈ ಹುಡುಗನಿಗೆ ಲಗ್ನ ಆಗಿರಲಿಲ್ಲ. ಒಂದು ದಿನ ಮಗ ಅಪ್ಪ, 'ಏನಪ್ಪಾ ನನ್ನ ವಾರಿಗೆಯವರಿಗೆಲ್ಲಾ ಲಗ್ನ ಮಾಡ್ಕಂಡು ಸುಖವಾಗಿ ನನಗೆ ಲಗ್ನ ಬ್ಯಾಡ್ವ; ನನಗೂ ಲಗ್ನ ಮಾಡು' ಅಂತ ಕೇಳ. ಅದಕ್ಕೆ ಅಪ್ಪ 'ನಾನು ಆನೆ ತುಂಬ ಡುಡ್ಡ ತಕ್ಕಂಡು ಹೋಗಿ ಹೆಣ್ಣು ಗೊತ್ತು ಮಾಡ್ಕಂದಿ ಬರೀನಿ'ಅಂದ. ಮಗ ಅಪ್ಪ, 'ಅಪ್ಪ, ಅಪ್ಪ' ಅಂದ. "ಏನಪ್ಪಾ"ಅಂದ. 'ನೀನು ಯಂತ ಹೆಣ್ಣು ನೋಡ್ತಿಯೇ' ಅಂತ ಕೇಳ. 'ಕರಿ ಮೈ, ಕೆಂಪುಮೈ ಸಿಕ್ಕಿತ್ತು' ಅಂದ. ಆಗಾದ್ರೆ ಯಂತ ಹೆಣ್ಣು ಲಗ್ನ ಆಗ್ತಿ ಅಂತ ಮಗನ್ನ ಕೇಳ. ಆ ಹೆಣ್ಣ ತಂದು ತಕ್ಕಡಿ ಒಳಗೆ ಹಾಕಬೇಕು. ಆಗ ಹೂವಿನ ತೂಕ ಹೆಚ್ಚಾಗಬೇಕು, ಹೆಣ್ಣಿನ ತೂಕ ಕಡಿಮೆ ಅಗಬೇಕು' ಅಂತ ಹೆಣ್ಣ ನಾನ್ ಲಗ್ನ ಆಗ್ತಿನಿ ಅಂದ. ಅಪ್ಪಆಯ್ತು ನೋಡ್ಕ ಬರ್ರೀನಿ ಹೋದ.
ಈ ಸುತ್ತಲೆಲ್ಲ ಅಡ್ಡಾಡಿದ. ಆ ಊರು, ಈ ಊರು ಎಲ್ಲಾ ಕಡೆ ತಿರುಗಿದ್ರು, ಸರಿ ಎಲ್ಲಾ ಕಡೆ ನೋಡಿ ಬಂದ. ಆ ರೀತಿ ಹೆಣ್ಣು ಎಲ್ಲೂ ಸಿಗಲಿಲ್ಲ. ತಕ್ಕಹೋಗಿದ್ದ ದುಡ್ಡು ಕುಲಾಸ್ ಆದ್ಮಲೆ ಮನೆಗೆ ಹೋದ. ಅಪ್ಪನಿಗೆ ಚಿಂತೆ ಆಯ್ತು. ಅವುನ ಮುಖವೆಲ್ಲಾ ಕಪ್ಪಾಗಿ ಹೋಗಿತ್ತು. ಹೂವಿನ ಗಾದಿ ಮೇಲೆ ಕುಂತ್ಕಂಡ. ಮಗ ಅಪ್ಪ ಕುಂತಿದ್ದ ಹೂವಿನ ಮಂಚದ ತಾವುಕೆ ಹೋದ. ಅಪ್ಪ ಅಂದ, 'ಯಾಕಪ್ಪ ಮಗನೇ ಬಂದೆ' ಅಂದ. ಹೆಣ್ಣು ನೋಡಿ ಬಂದಿದ್ದೆನೋ ಅಂದ. ಎಲ್ಲಾ ಕಡೆ ಅಡ್ಡಾಡಿದೆ. ಎಲ್ಲೊ ಹೂವಿನ ತೂಕದ ಹೆಣ್ಣು ಸಿಗಲಿಲ್ಲ ಅಂದ. ಹೋದಲ್ಲೆಲ್ಲ ಕರಿ ಮೈ ಹೆಣ್ಣು, ಕೆಂಪು ಮೈ ಹೆಣ್ಣು ಗಳನ್ನ ನಾವು ಕೊಡ್ತಿವಿ ಅಂದ್ರು. ನಾನು ಬ್ಯಾಡ ಅಂತ ಬಂದೆ ಅಂತ ಮಗನೆ ಹೇಳಿದ.
ಮಗ ಹೇಳಿದ 'ಅಪ್ಪ ನನ್ನೆ ಅಪ್ಪಣೆ ಕೊಡು ನನ್ನೆ ಅಪ್ಪಣೆ ಕೊಡು' ಅಂದ. ನೀನೇ ಹೋಗಪ್ಪ ತಗೊ ದುಡ್ಡು ಎಷ್ಟು ಬೇಕು ಅಷ್ಟು ಲಕ್ಷ, ಲಕ್ಷ ಅಂದ. ನೀನೆ ಹೋಗಿ ಚಂಡುವಿನ ತೂಕದ ಹೆಣ್ಣು ಗೊತ್ತು ಮಾಡ್ಕ ಬರೋಗು' ಅಂತ ಹೇಳ್ತ, ಇವನೂ ಎರಡು ರೊಟ್ಟಿ ಬಕಣ (ಜೇಬು) ಹಾಕ್ಕಂಡಿ ಹೋದ. ಆ ಊರು ಈ ಊರು ಅಂತ ಕೇಳ್ಳಂದಿ ಸುತ್ತಿದ ನಾಲೈದು ಮಂದಿ ಕೇಳಿದ್ರು, 'ನನ್ನೆ ಹೆಣ್ಣು ಬೇಕಾಗಿದೆ ಹೋಗ್ತಿದ್ದೀನಿ 'ಅಂತ ಹೇಳಿ, 'ನನ್ನೆ ಈ ಊರಲ್ಲಿ ಹೂವಿನ ತೂಕದ ಹೆಣ್ಣು ಸಿಕ್ಕಾದ' ಅಂತ ಹೇಳ, ಚಂಡುವಿನ ತೂಕದ ಹೆಣ್ಣು ನಮ್ಮ ಊರಲ್ಲಿ ಇಲ್ಲ. ಆ ದೂರದ ಪಟ್ಟದಲ್ಲಿ ಅದೆ . ಆ ಪಟ್ಟಕ್ಕೆ ಹೋದ್ರೆ ಹೆಣ್ಣು ಸಿಗುದೆ ಅಂದ್ರು. ಒಬ್ಬ ಹೆಣ್ಣು ತುಂಬುತ್ತಾನೆ. ಎಷ್ಟೆಷ್ಟೋ ಹೆಣ್ಣು ವ್ಯಾಪಾರ ಮಾಡ್ತಾನೆ ಅಂದ್ರು. ಈ ಹುಡುಗ ಅಲ್ಲಿ ಹೋದ.
ಆ ಪಟ್ಟದಲ್ಲಿ ಹೋಗಿ ನಿಂತ್ಕಂಡ. ಅಲ್ಲಿ ನಾಲ್ಕು ಮಂದಿ ಕೂಡಿದ್ರು. ಅವ್ರನ್ನ ಕೇಳ ಒಬ್ಬ ಹೆಣ್ಣು ಮಾರೋ ಶೆಟ್ಟಿ ಇದ್ದನಂತಲ್ಲ ಅವುನ ಮನೆ ಯಾವುದು ಅಂತ ಕೇಳಿದ. ಅಲ್ಲಿ ಅದೆಲ್ಲ ದೊಡ್ಡ ಮನೆ ಅಂತ ತೋರಿಸಿದ್ರು. ಈ ಹುಡುಗಆ ವಾಡೆಗೆ ಹೋದ. ಅದು ಮೇಲಂತಸ್ತು. ಇವುನು ಕೆಳಗೆ ನಿಂತ್ಕಂಡು ಕೂಗಿದ. ಆ ಶೆಟ್ಟಿ ಕೆಳಗೆ ಇಳಿಯ ಬಂದು ಯಾಕಪ್ಪ ಕೂಗಿದೆ ಅಂತ ಕೇಳ. ಅಪ್ಪನನ್ ಒಂದೆಣ್ಣು ಬೇಕಾಗದೆ ಅಂದ. ಆ ಶೆಟ್ಟಿ ' ನಿನ್ನೆ ಯಂತ ಹೆಣ್ಣು ಬೇಕು ಅಂತ ಹೆಣ್ಣು ಅದೆ' ಅಂದ. ಹುಡುಗ ಆಹಾ 'ಹಾಗಾದ್ರೆ ನಾನ್ ಕೇಳಿದ್ ಹೆಣ್ಣು ಕೊಡ್ತೀಯಾ' ಅಂದ. ಸರಿ ನೋಡು ಕರೆಸ್ತೀನಿ ಅಂದು ಈ ಹುಡುಗನ್ನ ಕೂರಿಸ್ಟ. ಇಷ್ಟು ಜನರಲ್ಲಿ ಯಾರು ಬೇಕುಅಂದ. ಶೆಟ್ಟಿಗೆ ಈ ಹುಡುಗ ಹೇಳ್ತ, 'ಈ ಹೆಣ್ಣು ತಕ್ಕಂದಿ ಏನು ಮಾಡ್ಡೆ' ಅಂದು. 'ಮತ್ತೆ ಹೇಳ ಬೇಕಾದಂತ ಹೆಣ್ಣು ಕೊಡ ಬೇಕು'ಅಂದ. ಶೆಟ್ಟಿ ಹಾಗಾದ್ರೆ ಯಂಗಪ್ಪ ಅಂದ. 'ಚಂಡು ಹೂವಿನ ತೊಕ ಹೆಚ್ಚಾಗಬೇಕು;ಹೆಣ್ಣಿನ ತೂಕ ಕಡಿಮೆ ಇರಬೇಕು' ಅಂತ ಹುಡುಗ ಹೇಳ್ತ, ಆಗ ಶೆಟ್ಟಿ, ಅಗಲಿ 'ಅದೇ ಹೆಣ್ಣು ಕೊಡ್ತೀನಪ್ಪ ತೆರು ಬಾರಿ ಆಗುತ್ತೆಲ್ಲ 'ಅಂದ. ದುಡ್ಡು ಬಾರಿ ಅದ್ರು ಕೊಡ್ತೀನಿ ಅಂದ ಹುಡುಗ.
ನನ್ನ ಚೆಂಡುವಿನ ತೂಕದ ಹೆಣ್ಣು ಬೇಕು ಅಂದ. ಈ ರೀತಿ ಮಾತು ಕತೆ ಆಯ್ತು. ಆಗ ಹೆಣ್ಣು ಮಾರುವ ಶೆಟ್ಟಿ ಹನ್ನೆರಡು ಆಳು ಉದ್ದದಷ್ಟು ಆಳವಾಗಿದ್ದ ಬಾವಿ ತೋರಿದ್ದ. ಆ ಹುಡುಗನಿಗೆ ಅದನ್ನ ಸೇರು ಅಂತ ಹೇಳಿದ. ಹುಡುಗ ಆಯ್ತು ಅಂದ. ಆ ಸೇರಿನ ತುಂಬಾ ಬಂಗಾರ ಬೇಕು ಅಂತ ಹೇಳ್ವ. 'ನೀನು ಬಂಗಾರ ಕೊಟ್ಟಾಗ ನಿಗ್ಗೆ ತಕ್ಕಡಿ ತೂಕ ಮಾಡಿ ಹೂವಿನ ತೂಕದ ಹೆಣ್ಣು ಕೊಡ್ತೀನಿ' ಅಂತ ಹೇಳ್ತ. ಆಯ್ತು ಅಂತ ಹುಡುಗ ಒಪ್ಪಿಕೊಂಡು ತಮ್ಮ ಪಟ್ಟಣಕ್ಕೆ ಹುಡುಗ ಹೊರಟ.
ಹುಡುಗ ಅಪ್ಪನ ಬಳಿ ಬಂದು 'ಅಪ್ಪ ಅಪ್ಪ' ಅಂದ. 'ಏನಪ್ಪಾ ಮಗನೇ'ಅಂದ. ಹೆಣ್ಣು ಗೊತ್ತು ಮಾಡಿದ್ದಿ ಅಂತ ಹೇಳ್ವ. ಅಪ್ಪ ಕೇಳ ನಾಲ್ಕು ದಿನದಲ್ಲಿ ಯಂಗೆ ಹೆಣ್ಣು ಗೊತ್ತು ಮಾಡ್ಲೆ ಅಂದ. ಹುಡುಗ 'ಹೆಣ್ಣು ಮಾರೊ ಶೆಟ್ಟಿ ಹತ್ತಿರ ಹೆಣ್ಣು ಅದೆ. ಅದ್ರೆ ಅವುನು ತೆರ ಕೊಡ ಬೇಕು ಅಂದನ್ನೆ, ಅಷ್ಟು ತೆರ ಕೊಟ್ರೆ ಚೆಂಡುವಿನ ತೂಕದ ಹೆಣ್ಣು ಕೊಡ್ತಾನೆ' ಅಂತ ಹೇಳಿದ. ತಂದೆ ಕೂಡ ಒಪ್ಪಿ ಕೊಂಡ.
ಆ ಹೆಣ್ಣು ಮಾರುವ ಶೆಟ್ಟಿ ಹತ್ತಿರ ಒಂದು ಸೇರದೆ. ಅದರ ತುಂಬ ಬಂಗಾರ ತಂದು ಕೊಟ್ಟು ಹೆಣ್ಣು ತಕ್ಕ ಹೋಗು ಅಂತ ಹೇಳಿದ್ರೆ ಅಂತ ತಂದೆಗೆ ಹೇಳ, ರಾಜನ ಬಳಿ ಬಂಗಾರ ಗುಗ್ಗಳ ಇತ್ತು. ದುಡ್ಡು ಇತ್ತು. ಬೆಳ್ಳಿ ಬಂಗಾರ ತುಂಬಿತ್ತು ಸರಿ ಮಗನ ಮಾತಿಗೆ ಒಪ್ಪಿ ಗಾಡಿ ಕಟ್ಟಿ ಸಾಗಿಸಿದ. ಎಲ್ಲಾ ವನ್ನೂ ಬಾವಿಗೆ ಹಾಕಿದ. ಮನೆ, ಆಸ್ತಿ, ಬೆಳ್ಳಿ, ಬಂಗಾರ ಎಲ್ಲ ಮುಗಿದೋಯ್ತು. ಆದರೂ ಆ ಸೇರು ತುಂಬಲಿಲ್ಲ. ವಾಡ ಮಾರಿದ, ಆಸ್ತಿ ಮಾರಿದ, ಎಲ್ಲ ಮಾರಿ ದುಡ್ಡು ತಕ್ಕ ಹೋಗಿ ಬಾವಿಗೆ ತುಂಬಿದ್ರು. ಬಾವಿ ಆರಾಳು ತುಂಬು. ಇನ್ನು ಆರಾಳು ಮೇಲೆ ಉಳಿದಿತ್ತು. ತಂದೆನ ಊರಿನ ಕಡೆಕಳುಹಿಸಿದ. 'ನೀನು ಹೋಗು ನಾನು ಹನ್ನೆರಡು ವರ್ಷ ತಪಸ್ಸು ಕೊಡ್ತೀನಿ 'ಅಂತ ಹೇಳಿದ.ಆ ದುಡ್ಡಿನ ಮೇಲೆ ತಪಸ್ಸಿಗೆ ಕೂತ್ಸಂದ. ಹೆನ್ನೆರಡು ವರ್ಷ ತಪಸ್ಸು ಕೂತ್ಕಂಡ ಬಾವಿಗೆ ಕೈ ಮುಗಿದು ರಾತ್ರಿ ಹಗಲು ಕೂತ್ಕಂಡ.
ಹನ್ನೆರಡು ವರ್ಷ ಆಯ್ತು. ಗಾಳಿ ಮಳೆಗೆ ಬಟ್ಟೆ ಅರಿದು ಮಣ್ಣು ಮುತ್ತಿತ್ತು. ಸುತ್ತ ಹುತ್ತ ಆಯ್ತು. ಇವುನು ತಪಸ್ಸಿಗೆ ಕೂಂತೆ ಇದ್ದ. ಅದ್ರೆ ಆ ಹೆಣ್ಣು ಬರ ಬೇಕು ಅವುನ್ನ ನೋಡ ಬೇಕು. ಇವುನು ಬಂದು ಹನ್ನೆರಡು ವರ್ಷ ಆಯ್ತು ಅಂತ ಆ ಹೆಣ್ಣು ನೆನಿಸ್ತಿತ್ತು. ಪೂರ ಹನ್ನೆರಡು ವರ್ಷ ಕಳೆಯಿತು. ಆ ಹೆಣ್ಣು ಒಂದೊತ್ತಿ ನಲ್ಲಿ ಎದ್ದು ರಾಜನ ಬಳಿಗೋಯ್ತು. ಕೈ ಜೋಡಿಸಿದ್ದ. ಆ ಕೈಗೆ ಬಂಗಾರ ಹಾಕಿದ್ದು. ಕೈಯಿಂದ ಪೊಳ್ಳಾಗಿದ್ದದ್ದೆಲ್ಲಾ ಕೆಳಕ್ಕೆ ಸುರಿತು. ಸರಿ ಆಗ ಬೋರನೇ ಬಾವಿ ತುಂಬಿಬಿಡ್ತು.
ಸರಿಯಾಗಿ ಹನ್ನೆರಡುವರ್ಷ ಆಯ್ತು. ಸೇರು ತುಂಬು. ತಪಸ್ಸು ನಿಲ್ಲಿಸಿ ಹುಡುಗ ಹೆಣ್ಣು ಮಾರೊ ಶೆಟ್ಟಿಯನ್ನ ಕೂಗಿದ. ಶೆಟ್ಟಿ ಬಂದು ನೋಡ. ಹುಡುಗ ಹೇಳ 'ನೋಡಯ್ಯ ನಿನ್ನ ಸೇರು ತುಂಬಿದೆಯೋ ಇಲ್ಲವೋ'ಅಂದ. ಆಗ ಆ ಶೆಟ್ಟಿ ಅವುನ್ನ ಕರಂಡಿ ಹೋಗಿ ಸ್ನಾನ ಮಾಡಿಸಿ ಅಂದ. ಆಳುಗಳು ಕರಂಡಿ ಹೋಗಿ ಸ್ನಾನ ಮಾಡಿಸಿದ್ರು. ಮಡಿ ಬಟ್ಟೆ ಕೊಟ್ರು. ಊಟ ಉಪಚಾರ ಮಾಡಿಸಿದ್ರು. ಆ ಹುಡುಗನ ಅಪ್ಪನ್ನ ಕರೆಸಲು ಆಳುಗಳ ಕೈಲಿ ಕರೆ ಕಳಿಸಿದ್ರು. ಅವ್ರ ಅಪ್ಪ ಬಂದ. ಯಾಕಪ್ಪ ಕರೆಸಿದ್ದು ಅಂದ. ಆ ಹುಡುಗ 'ಅಪ್ಪಾ ಈ ಶೆಟ್ಟಿಯ ಸೇರು ತುಂಬು. ಹೆಣ್ಣು ಕೊಡ್ತಾನೆ'ಅಂದ. 'ಆ ಹೆಣ್ಣನ್ನ ಒಂದು ತಕ್ಕಡಿಲಿ ಇಟ್ರು;ಒಂದು ಚಂಡು ವನ್ನ ಒಂದು ತಕ್ಕಡಿಲಿ ಇಟ್ರು. ಆಗ ಚಂಡುವಿನ ತೂಕ ಹೆಚ್ಚಾಯ್ತು. ಆ ಹೆಣ್ಣಿನ ತೂಕನೇ ಕಡಿಮೆ ಆಯ್ತು. ಸರಿ ಲಗ್ನ ಮಾಡಿದ್ರು, ಬೇಕಾದಷ್ಟು ಚಿನ್ನ, ಹೊನ್ನು, ಬೆಳ್ಳಿ, ಬಂಗಾರ, ವಜ್ರ ವೈಡೂರ ಕೊಟ್ಟು, ಅರಮನೆ ಕೊಟ್ಟ ಶೆಟ್ಟಿ, ಮತ್ತೆ ಊರಿಗೆ ಕಳುಹಿಸಿದ. ಗಂಡ ಹೆಂಡ್ತಿ ಸುಖವಾಗಿ ರಾಜ್ಯ ಆಳ್ವ ಇದ್ರು.
No comments:
Post a Comment