ವಿದ್ಯಾವಾಣಿ

Educational Information

Thursday, February 26, 2026

Story -02 ಸುಖದ ಕೊಳಲು - ದುಃಖದ ಕೊಳಲು

  VIDYAVANI       Thursday, February 26, 2026
Story -02 ಸುಖದ ಕೊಳಲು - ದುಃಖದ ಕೊಳಲು

ಒಂದು ತಾಂಡದಲ್ಲಿ ಒಬ್ಬ ಗೊಲ್ಲರವನು ಇದ್ದ. ಅವನ ಹೆಸರು ಕೃಷ್ಣ ಅಂತ. ಅವನು ಮೂರು ಸಾವಿರ ಆಕಳು (ದನ, ಕರ)ಗಳನ್ನು ಮೇಯಿಸುತ್ತಿದ್ದ. ಅವನು ದನಕರ ಮೇಯಿಸಬೇಕಾದ್ರೆ ಕಾಡಿಗೆ ಹೋಗಿ ಒಂದು ಕಲ್ಲು ಬಂಡೆಯ ಮೇಲೆ ಕಂತು ಕೊಳ್ಳುತ್ತಿದ್ದ.

ಅವನ ಹತ್ತಿರ ಒಂದು ಸುಖದ ಕೊಳಲು, ಒಂದು ದುಃಖದ ಕೊಳಲು ಇದ್ದೊ. ಪ್ರತಿ ದಿನ ದನಕಾಯಲು ಹೋಗುತ್ತಿದ್ದಾಗ ಈ ಕೊಳಲುಗಳನ್ನು ತಕ್ಕಂಡು ಗುಡ್ಡ ಏರುತ್ತಿದ್ದ.

ಇವನು ಸುಖದ ಕೊಳಲು ಊದಿ "ನೀರು ಕುಡಿದು ಬಾ ಅಂದ್ರೆ"ಆಕಳುಗಳು ನೀರು ಕುಡಿದು ಬರುತ್ತಿದ್ದವು. "ಹಾಲು ಕರೆಯುವ ಹೊತ್ತಾಯ್ತು ಬೇಗ ಬನ್ನಿ "ಅಂದ್ರೆ, ಆಕಳುಗಳು ಒಳ್ಳೆ ಬರುತ್ತಿದ್ದವು. ಅವನಿಗೆ ಕಷ್ಟ ವಾದಾಗ ದುಃಖದ ಕೊಳಲು ಊದುತ್ತಿದ್ದ.

ಆಗ ಅಕಳುಗಳು ಆತನ ಕಷ್ಟದಲ್ಲಿ ಸಹಾಯಕ್ಕೆ ಬರುತ್ತಿದ್ದವು. ಈ ರೀತಿಯಾಗಿ ಪ್ರತಿ ದಿನವೂ ಮಾಡುತ್ತಿದ್ದ. ಒಂದು ದಿನ ಖಾಲಿ ಕೊಡ ತಕ್ಕೊಂಡು ಹತ್ತಿರದಲ್ಲಿದ್ದ ಬಾವಿಗೋಗಿ ತಾನ ಮಾಡಿದ. ಬಟ್ಟೆ ಬರೆ ಒಗೆದು,ದನ ಕರ ಕಾಯಲು ಹೋದ. ಅಲ್ಲೊಬ್ಬ ರಾಜನ ಮಗಳು ಬಟ್ಟೆ ಒಗೆಯೋಕೆ ಬಂದ್ಲು. ಕೃಷ್ಣನ ಬಾವಿಗೆ ಯಾರು ನೀರು ತರಲು ಹೋಗುತ್ತಿರಲಿಲ್ಲ. ಇವಳು ಅದೇ ಬಾವಿಗೆ ಹೋದ್ದು, ಅಲ್ಲಿ ಬಾವಿಯ ತಾವು ಕೃಷ್ಣನ ಕೂದಲು ಬಿದ್ದಿತ್ತು. ರಾಜನ ಮಗಳು ಬಟ್ಟೆ ಒಗೆಯುತ್ತಿದ್ದವಳು ನೋಡಿದ್ದು. ಕೂದಲು ಬಂಗಾರ ಯಂಗೆ ಹೊಳೆಯುತ್ತದೆ ಅಂಗೆ ಕಾಣಿತ್ತು. ಆ ಕೂದಲೂ ಯಾರದು ಅಂತ ಹೋಗಿ ತಕ್ಕಂಡು ನೀರಾಕಿ ತೊಳ್ಳಂಡು ಅಲ್ಲೆ ಮಡಿ ಕಂಡ್ರು. ಈ ಕೂದಲು ಯಾರದು ಅಂತ ಯೋಚೆ ಮಾಡ್ತ ಇದ್ದು. ಅವುಳು "ಈ ಕೂದಲು ಯಾವ ಹುಡುಗಂದು ಅವುನ್ನೆ ಮದುವೆ ಅಗಬೇಕು" ಅಂತ ಯೋಚಿಸುತ್ತಿದ್ದು. ಬಟ್ಟೆ ಒಗೆದು ಆಯ್ತು. ಬಟ್ಟೆ ಹೊಂದಿ ಹಟ್ಟ ಕಡಿಕೆ ಬಂದು. ಬಟ್ಟೆ ಗಳ ಜೊತೇಲಿ ತಂದಿದ್ದ ಆ ಕೂದಲನ್ನು ಅಲ್ಲೆ ಹಾಕಿದ್ದು. ಆಗ ಮನೆಯಾದ ಮನೆಯೇ ಬೆಳಕಾಯ್ತು. ಅವುಳು " ಅವ್ರಪ್ಪ ಅವ್ರವ್ವಂಗೆ" ಹೇಳಿದ್ದು, ಅಪ್ಪ "ನಾನು ಬಟ್ಟೆ ಒಗೆಯಾಕೆ ಹೋಗಿದ್ದೆ. ಅಲ್ಲಿ ಈ ಕೂಡ್ಲು ಸಿಕ್ಕು, ಈ ಕೂದಲೇ ಇಷ್ಟು ಚೆಂದಾಗಿರ ಬೇಕಾದ್ರೆ, ಇನ್ನು ಆ ಕೂದಲಿನ ಹುಡುಗ ಎಷ್ಟು ಚೆಂದಾಗಿರ ಬೇಕು. ನಾನು ಈ ಕೂದಲಿನವನನ್ನೇ ಲಗ್ನವಾಗ್ತಿನಿ, ಬೇರೆಯವರನ್ನ ನಾನು ಲಗ್ನ ಆಗಲ್ಲ "ಅಂದ್ಲು.

ಆಗ ಈ ಹುಡುಗಿಯ ತಾಯಿ ಹೇಳಿದ್ದು "ಆಹಾ ತಾಯಿ ಆ ಹುಡುಗ ಯಾರು? ಅವನ ಜಾತಿ ಯಾವುದು? ಅವುನು ಮಾದರೋ, ಹೊಲೆಯರೊ ಅದನ್ನು ಯೋಚಿಸು"ಅಂದ್ಲು, ಆಗ ಆ ಹುಡುಗಿ "ಮಾದರವನಾದ್ರೂ ಮದ್ಯೆ ಆಗ್ತಿನಿ, ಹೊಲೆಯರವು ನಾದ್ರು ಮದ್ಯೆ ಆಗ್ತಿನಿ ಅಂದ್ಲು.

ಆಗ ಹುಡುಗಿಯ ತಂದೆ ಯೋಚಿಸಿದ್ರು. ಹೇಗಾದರೂ ಮಾಡಿ ಆ ಹುಡುಗ ಯಾರು ಅನ್ನುವುದನ್ನು ಕಂಡು ಹಿಡಿದು ಬೇಕು ಅಂತ ಹುಡುಕಿದರು, ಆ ಬಾವಿಯಲ್ಲಿ ಜಳಕ ಮಾಡಕ್ಕೆ ಬರೋನು ಕೃಷ್ಣ ಅಂತ ಗೊತ್ತಾಯ್ತು. ಆತ ಗೊಲ್ಲರವನು ಅನ್ನೋದು ತಿಳಿಯಿತು. ಆಗ ಆ ಹುಡುಗಿಯ ತಂದೆ ಯೋಚಿಸಿದ ನನ್ನ ಜಾತಿಗೆ ಅಡ್ಡಿ ಆಯ್ತಲ್ಲ. ಯಂಗೆ ಲಗ್ನ ಮಾಡ್ಲಿಕ್ಕೆ ಆಯ್ತದೆ. ಮೋಸ ಮಾಡಿ ಅವುನೆ ಚೆಂಡ ಕಡಿಸ ಬೇಕು ಅಂತ ಯೋತಿಸುತ್ತಿದ್ದ.

ಆ ಹುಡುಗನ ಬಳಿಗೆ ಯಾರು ಹೋಗುತ್ತಾರೆ ಅನ್ನುವುದನ್ನ ಈ ಹುಡುಗಿಯ ತಂದೆ ಕಂಡು ಹಿಡಿದ. ಅವುನ ಬಳಿಗೆ ಯಾರೂ ಕೂಡ ಹೋಗುವುದಿಲ್ಲ. ಏನಾದ್ರು ಕೇಡು ಮಾಡುವುದಕ್ಕೆ ಯಾರಾದ್ರು ಹೋದದ್ದೇ ಆದ್ರೆ, ಆತನ ಬಳಿ ಇರುವ ಮೂರು ಸಾವಿರ ಆಕಳುಗಳು ಆತನನ್ನು ಸಿಗಿದು ಹಾಕಿ ಬಿಡುತ್ತವೆ. ಮನುಷ್ಯರಾರೂ ಕೂಡ ಆ ಕಡೆ ಸುಳಿಯುವಂಗಿಲ್ಲ, ಅಂತ ಯೋಚಿಸಿ ಕೊನೆಗೆ ಹೋಗವು ಯಾರು ಅಂತ ಶೋಧನೆ ತಕ್ಕಂಡ್ರು, ಒಬ್ಬನೇ ಒಬ್ಬ ಹೋಗ್ತಾನೆ ಅವುನು ಕೃಷ್ಣಂಗೆ ಚಪ್ಪಲಿ ಮಾಡಿ ಕೊಡುವ ಮಾದರವನು. ಅವನೇ ಕೃಷ್ಣನ ದೋಸ್ತಿ ಅನ್ನೋದು ತಿಳಿತು. ರಾಜ ಆಳುಗಳು ಕೈಲಿ ಹೇಳಿ ಕಳುಹಿಸಿದ. ಆಳುಗಳು ಹೋಗಿ ಮಾದರವುನ ಕಂಡು ಬಂದ್ರು.

ರಾಜ ಮಾದರವನ್ನು ಕೇಳಿದ್ರು "ಏನಪ್ಪಾ ಒಂದು ಮಾತಯ್ಯ ಹೇಳ್ತಿನಿ ಕೇಳಿ ಯಪ್ಪಾ "ಅಂದ . ಮಾದರವನು ರಾಜರ ಮುಂದೆ ತಲೆ ತಗ್ಗಿಸಿ "ಆಯ್ತು" ಅಂದ.

ಅಂದ " ಕೃಷ್ಣ ಅನ್ನೋ ಹುಡುಗ ಮೂರು ಸಾವ್ರ ಆಕಳು ಸಾಕ್ಕಂಡಿ ಕಾಡಲ್ಲಿ ಅವೆಲ್ಲಾ ಅಲ್ಲಿ ಹೋಗ್ತಿಯೇನಪ್ಪ ಅಂದ. ಮಾದರವನು "ಹೋಗ್ತಿನಿ" ಅಂದ. ಮಾದರವನು ಒಪ್ಪಿಕೊಂಡಿದ್ದಕ್ಕೆ ತುಂಬ ಋಷಿಯಾಯ್ತು. ನಿನ್ನೆ ಒಂಭತ್ತು ಹಳ್ಳಿ ಜಾಹುಗೀರು ಕೊಡ್ತೀನಿ; ಬೇಕಾದಷ್ಟು ಬೆಳ್ಳಿ ಬಂಗಾರ ಕೊಡ್ತೀನಿ; ಮೇಲಂತಸ್ತು ಕೊಡ್ತೀನಿ ''ಅಂಥ ರಾಜ ಹೇಳ. ಮಾದರವನು 'ಏನು ಕೆಲ ಮಾಡಬೇಕು 'ಅಂತ ತಲೆ ಹಾಕಿದ. ರಾಜ ಮಾದರವನಿಗೆ "ಏನಾದ್ರು ನೀನ್ ಮಾಡೊ ಕೆಲ್ಸ ಅಂದ್ರೆ ಆ ಕಾಡಲ್ಲಿ ಮೂರು నావ ఆకళగళ మరియన్నంది కాల కళతా వల్ల ఆ కృష్ణనే జెండ కడ్యెండి ಬಯಪ್ಪ "ಅಂದ ಮಾದರವನು " ಆಯ್ತು "ಅಂತ ಒಪ್ಪಿಕೊಂಡ.

ಮಾದರವನು ರಿಂಗಾಕಿ ಚಪ್ಪಲಿ ಮಾಡಿದ. ಚಪ್ಪಲಿಯ ತಳಕ್ಕೆ ನಾಲ್ಕು ಮೊಳೆ ಹೊಡೆದ. ಎರಡು ಚಪ್ಪಲಿ ಮಾಡ್ಕಂಡು ಹೊಂಟ. ಹೋಗುವಾಗ ರಂಪೆ ತಕ್ಕಂಡಿ, ಹೆಗಲ ಮೇಲೆ ಹಾಕ್ಕಂಡಿ ಹೋದ. ಆ ಹುಡುಗ ಮುಂದೆ ಮುಖ ಮಾಡಿ ಕುಂತಿದ್ದ, ಹತ್ತಿರ ಹೋಗಿ ಮಾದರವನು "ಅಪ್ಪಾ" ಅಂತ ಕೂಗಿದ. ಆತ ಒಳ್ಳಿ ನೋಡಿದ. ಚಪ್ಪಲಿ ತಂದಿದ್ದೀನಿ ಅಂದ. ಆಗ ಬಂಡೆಯ ಮೇಲೆ ಕುಳಿತಿದ್ದವನು ಇಳಿದು ಬಂದ. ಚಪ್ಪಲಿ "ಭಗ ಭಗ" ಅಂತವೆ ಚೆನ್ನಾಗಿಯೇ ಮಾಡ್ಯ ಬಂದಿದ್ದೀಯೆ ಅಂದ. ಮಾದರವನು "ಒಂದು ವರ್ಷಕ್ಕೆ ಆಗುವಂತೆ ಚೆಪ್ಪಲಿ ಮಾಡ್ಯ ಬಂದಿ "ಅಂಥ ಹೇಳಿ "ಚಪ್ಪಲಿ ಮೆಟ್ಕಂಡಿ ಬೇಸಾಗಿ ತುಳಿ" ಅಂದ. ಆಗ ಹುಡುಗ ಚಪ್ಪಲಿಮೆಟ್ಕಂಡಿ ಹಿಂಬಿಡಿ ಕಡಿದ. ಕೃಷ್ಣ ನೆಲಕ್ಕೆ ಉರುಳಿದ. ರಂಬಿಗೆಲಿ ಮಾದರವನ್ನು ಚಂಡು ಕಡಿದು ಹೊಂಟ. ಆ ಹುಡುಗ ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದ.

ಸುಮಾರು ಹೊತ್ತಾಯ್ತು ಆಕಳುಗಳು ನೋಡೂ, ಇಷ್ಟೋತ್ತಿಗೆ ಕೃಷ್ಣ ಬರಬೇಕಿತ್ತು. ನೀರಿ ಗೋಗಕ್ಕೆ ಕೊರಳು ಊದ ಬೇಕಾಗಿತ್ತು. ಯಾಕೋ ಬರಲಿಲ್ಲ ಅಂತ ದನಕರಗಳು ಕಾಯುತ್ತಿದ್ದೋ, ಆಗ ಗಾಳಿ ಕಡೆ ಮೊರೆ ಮಾಡ್ಕಂಡಿ ನಿಂತಿದ್ದವು. ಆ ಗಾಳೀಲಿ ದುಃಖದ ಕೊಳಲು ಊದುದ ಸದ್ದಾಯ್ತು. ಆಗ ಮೂರು ಸಾವಿರ ದನಕರಗಳೆಲ್ಲ ಆ ಸ್ಥಳಕ್ಕೆ ಬಂದವು. ಆತ ಬಿದ್ದು ಹೊರಳಾಡುತ್ತಿದ್ದ. ಅಲ್ಲಿದ್ದ ಹೆಜ್ಜೆಗಳನ್ನ ಈ ಆಕಳುಗಳೆಲ್ಲಾ ನೋಡಿದವು. ಉದ್ದಕ್ಕೂ ರಕ್ತ ಚೆಲ್ಲಿಕೊಂಡು ಹೋಗಿತ್ತು. ಈ ಆಕಳುಗಳು ಆ ರಕ್ತದ ಗುರುತು ನೋಡ್ಕಂದಿ ಉಡುಕಿಕೊಂಡು ಹೋದೊ.

ಆ ರಕ್ತದ ಕಲೆಯು ಆ ಹುಡುಗಿಯ ಮನೆ ಬಾಗಿಲಿನ ತನಕವೂ ಹೋಗಿತ್ತು. ದನಗಳು ಮನೆಯ ಮೊದಲನೆಯ ಅಂತಸ್ತನ್ನೆಲ್ಲ ಕೊಂಬಿನಲ್ಲಿ ತಿವುದು ಬೀಳಿಸಿದವು. ಕದವನ್ನು ಮುರಿದು ಒಳಗೆ ನುಗ್ಗಿದವು. ಅಲ್ಲಿಗೆ ಎಲ್ಲಾ ದನಗಳು ಬಂದವು.

ಅದೇ ಸಮಯದಲ್ಲಿ ಶಿವಪಾರ್ವತಿ ಕರಂಡಿ ದೇಶನೋಡಿಕೆ ಹೋಗ್ತಿದ್ರು. ಆಗ ಈ ದನಗಳ ದನಿ ಕೇಳಿ ಬರುತ್ತಿದ್ದರು. ಮೂರು ಸಾವಿರ ದನಕರಗಳು ಶಿವ ಪಾರ್ವತಿಯರ ಎದುರು ಗದ್ದಲ ಮಾಡಿದವು. ಆಗ ಪಾರ್ವತಿ ನೋಡಿದ್ದು. 'ಶಿವನನ್ನು ಕೇಳಿಕೊಂಡು. ಏನು ಅಂತ ಹೋಗಿ ನೋಡೋಣ' ಅಂದ್ಲು. ಶಿವನನ್ನ ಕೆಳಗೆ ಇಳಿ ಅಂದ್ಲು, ಶಿವ'ಬಾ ಹುಚ್ಚಿ, ಬಾ'ಮುಂದೆ ತೋರಿಸ್ತೀನಿ'ಅಂದ. 'ನಾನು ಹೇಳಿದ್ರೆ ನೀನು ಕೇಳಕಿಲ್ವಲ್ಲ' ಅಂತ ಹೇಳೆ. ನೊಣ ಆಗಿ ಪರಮಾತ್ಮನ ಬೆನ್ನ ಹಿಂದೆ ಕುಂತು ಕೊಂಡಳು. ಶಿವ ಮತ್ತೆ ಒಳ್ಳೆ ನೋಡಿದ. 'ಪಾರ್ವತಿ ಪಾರ್ವತಿ' ಅಂತ ಕೂಗಿದ. 'ನಾನೇನಂದ ನಾನೇ ನೋಡುವ ಅಂದೆ ಅಂದ ಶಿವ. ಸರಿ ಅಂತ ಹೇಳಿ, ಗಡಿ ಬಿಡಿಲಿ ಶಿವ ಪಾರ್ವತಿ ಇಳಿದ್ರು. ಚಂಡು ಬೇರೆ, ದಿಂಬ ಬೇರೆ ಯಾಗಿತ್ತು. ಮೂರು ಸಾವಿರ ದನಕರಗಳು ಬೋರಾಡಿ ಆಳ್ವ ಇದ್ದವು.

ಆಗ ಶಿವಪಾರ್ವತಿಗೆ ದನಗಳ ದುಃಖವನ್ನು ನೋಡಲಿಕ್ಕೆ ಆಗಲಿಲ್ಲ. ಶಿವ ನೋಡ್ಡ 'ಅದ್ರೆ ಹಿಂದೆ ಬಂದುದೆಲ್ಲಾ ಹೋದ್ರೆ ಏನಂದೆ'ಅಂದ. ಎಲೆಬಾವ ಅಂದ. ನರ ಬಂತು. ಮಾಂಸ ಬಂತು ಎಲ್ಲವನ್ನೂ ಜೋಡಿಸಿದ್ರು. ದೇಹದಲ್ಲಿ ರಕ್ತ ಅದೆ ಅಂದ. ಮೂರನ್ನೂ ಕೂಡಿದ್ದ. ಶಿವ ಎಲ್ಲವನ್ನು ಕೂಡ ಕೂಡಿಸಿ ತನ್ನ ತುರುಬಿನಿಂದ ಜೊತೆಯಲ್ಲಿದ್ದ ಜೀವದ ಕಡ್ಡಿ ತಕ್ಕಂಡಿ ಜೀವ ಬರಿಸ್ಟ. ಕೃಷ್ಣ ಎದ್ದು ಕೂಂತ್ಕಂಡ. ಆಗಶಿವ ಪಾರ್ವತಿ ಮಾಯಾದ್ರು. ದನ ಜೋರಾಗಿ ಆಳುತ್ತಿದ್ದೂ, ಆದ್ರೆ ಕೃಷ್ಣನು ಸರಿಯಾಗಿ ದನಕರಗಳನ್ನು ನೋಡ್ಡ. ಆದ್ರೆ ನನಗೆ ಮಾದರವ ಮುಟ್ಟ; ನನ್ನ ನೀವು ಮುಟ್ಟಬೇಡಿ' ಅಂದ. ನನ್ನ ಗತಿಏನು ಅಂತ ಕೇಳ.

ಕಟ್ಕಾಕ ಕಣ್ಣಿ ಇಲ್ಲ; ಹಿಂಡಾಕೆ ಮೊಲೆ ಇಲ್ಲ; ಬಿಳಿಯಲಿಬಿಯವರ ಕಂಡ್ರೆ ಹಾರಿ `ಹೋಗಿ ಅಂತ ಹೇಳಿ, ಬಿಳಿಬಟ್ಟೆ ತಕ್ಕಂಡಿ ಹಾರಿಸಿ ಬಿಟ್ಟ. ಗೂಳಿ ಎದ್ದು ಗಂಡು ಚಿಗರೆ ಆಗಿ ಆಕಳು ಹೆಣ್ಣು ಚಿಗರೆ ಆಗಿ 'ಟಣ ಟಣ' ಅಂತ ಹಾರುತ್ತಿದ್ದೂ. ಕೃಷ್ಣ ಅನ್ನೂ ಹುಡುಗಿ ಹೋಗಿ ಮಾದರ ಮನೆ ಸೇರಿದ. ಆ ಮೂರು ಸಾವಿರ ಆಕಳುಗಳು ಕಾಡಿನಲ್ಲಿ ಸುಖವಾಗಿ ಜೀವನ ಸಾಗಿಸುತ್ತಿದ್ದೊ.


logoblog

Thanks for reading Story -02 ಸುಖದ ಕೊಳಲು - ದುಃಖದ ಕೊಳಲು

Previous
« Prev Post

No comments:

Post a Comment