Thursday, February 26, 2026

Story 01- ನಾಗ್ರೇಂದ್ರ ಭೂಪನ ಕತೆ

  VIDYAVANI       Thursday, February 26, 2026
Story 01- ನಾಗ್ರೇಂದ್ರ ಭೂಪನ ಕತೆ

ಒಂದೂರಲ್ಲಿ ಒಬ್ಬ ಬಡವ ಇದ್ದನಂತೆ. ಅವುನು ದಿನಾ ಸೌದೆ ಮಾರಿ; ಮಾರಿ ಜೀವನ ಸಾಗಿಸ್ತಿದ್ದ, ಮನೆತುಂಬ ಮಕ್ಕಳು, ತುಂಬ ದೇಸರ ಆಯ್ತು. ಸಂಸಾರ ಸಾಗಿ ಸೋದಕ್ಕಿಂತ ಸಾಯೋದೆವಾಸಿ ಅಂತ ಹುತ್ತನಗೆಡ್ಡಿ ತೋಡಿಕೆ ಹೋದ. ಹುತ್ತನಗೆಡ್ಡಿ ಕೋಡಿದ್ರೆ ಹಾವು ಕಚ್ಚುತ್ತೆ ಸಾಯಬೋದು ಅಂತ ಯೋಚನೆ ಮಾಡ್ಡ. ಕೈ ಹಾಕ್ಕಂಡಿದ್ದ ಹಾವು ಕಡಿನಿಲ್ಲ. ಸರಿ ಮತ್ತೆ ಕಡಿಯೊಲ್ಲದಲ್ಲ ಅಂತ ಹೇಳಿ ಆ ಹಾವು ತಕ್ಕಬಂದು ತಿಂದ್ರೆ ಸಾಯಬೋದು ಅಂತ ಆ ಹಾವು ತಕ್ಕಂಡಿ ಬಂದು ಗಡಿಗೆಗೆ ಹಾಕ್ಕಂಡಿ ಮಡಿಕ್ಕಂಡಿದ್ದ ನೆಲುವುವಿಗೆ ಹಾಕಿ ಮುಚ್ಚಿ ಮಡಗಿದ. ಹೆಂಡ್ತಿ ಕಣ್ಣು ತಪ್ಪಿಸಿ ಮಡಿಕ್ಕಂಡಿದ್ದ ನೆಲುವುವಿಗೆ ಹಾಕಿ ಮುಚ್ಚಿ ಮಡಗಿದ. ಹೆಂಡ್ತಿ ಕಣ್ಣು ತಪ್ಪಿಸಿ ತಿನ್ನಬೇಕು. ಅಂತ ಕಾಯ್ದಿದ್ದ. ಅವುಳು ಯಾವ ಕಡೆನೂ ಕೂಡ ಹೋಗನಿಲ್ಲ. ಆಮೇಲೆ ಹೋಗಿ ಗಡಿಗೆ ತಗುದು ನೋಡ್ಡ, ಗಡಿಗೇಲಿ ಹಾವು ಇರಲಿಲ್ಲ. ಗಡಿಗೆ ತುಂಬ ಬಂಗಾರ ಆಗಿತ್ತು. ಹೆಂಡ್ತಿಗೆ ಎಲ್ಲಾ ವಿಚಾರವನ್ನು ಹೇಳ, ಸಂಸಾರ ಸಾಗಿಸೋಕೆ ಸಾಕಾಗಿ ಈ ರೀತಿ ಮಾಡಿದೆ, ಹಾವು ಇನ್ನಿಲ್ಲ ಬಂಗಾರ ಆಗದೆ ಅಂತ ಎಲ್ಲಾ ನುವೆ ಹೇಳ. ಆಕೆ ಹೇಳಿದ್ದು, ಉಪ್ಪು ಮೆಣಸಿನಕಾಯಿ ಇಲ್ಲ ಪಕ್ಕದೂರಿನ ರಾಜನ್ ಚಿನ್ನ ಬಂಗಾರ ತಕ್ಕ ಹೋಗಿ ಕೊಟ್ಟು ಉಪ್ಪು ಮೆಣಸಿನಕಾಯಿ ತಕ್ಕ ಬರೋದಿ ಅಂತ ಹೇಳಿ ಕಳಿಸಿದ್ದು. ಇವುನು ಕಂಬಳಿ ಮೂಲೆಗೆ ಬಂಗಾರ ಕಟ್ಕಂಡು ಹೋದ.

ಆ ರಾಜನೆ ಮಕ್ಕೆ ಇಲ್ಲ. ಎಲ್ಲಾ ದೇವು ತಿರುಗಿದ್ರು, ಮಕ್ಕಳಾಗಲಿಲ್ಲ. ನನ್ನ ಹತ್ರ ಬಂಗಾರ ಅದೆ, ಅನ್ನ ತಕ್ಕಂಡಿ ಉಪ್ಪು ಮೆಣಸಿನಕಾಯಿ ಕೊಡಿ ಅಂತ ಕೇಳೋ. ಅವುನು ಬಂಗಾರ ತಕ್ಕಂಡು ಎರಡು ಕೂರಿಗೆ ಹೊಲ (ಎಂಟು ಎಕರೆ) ಎರಡೆತ್ತು ಉಳು ಕಳ್ಳಕ್ಕೆ ಕೊಟರಿ ಜಾಗ ಕೊಟ್ಟು, ಬಂದು ಮಾಡ್ಕಂಡಿ ಇರು ಅಂತ ಹೇಳ. ಸರಿ ಹೋಗು ನಿನ್ನ ಹೆಂಡು ಮಕ್ಕಳ ಕರಂಬಂದು ಇರು ಅಂತ ಹೇಳಿದ. ಉಪ್ಪು ಮೆಣಸಿನ ಕಾಯಿ ಕೊಟ್ಟು ಸಾಲಕಿಲ್ಲ ಅಂತ ಹೇಳಿ ಈ ರೀತಿ ಮಾಡ್ಲೆ ಅಂತ ಹೇಳಿದ.

ಹೆಂಡ್ತಿ ಜಳಕ ಮಾಡಿಕೆ ಹೋದ್ದು. ಆಗ ಬಂಗಾರ ಇಟ್ಟಿದದ್ದು ಕೂಸಾಗಿ ಅಳ್ತಿತ್ತು ಇವುನು ಹೊರಗೆ ಹೋಗಿ ನೋಡ್ತಾನೆ ಅದು ಅಳ್ತಾದೆ. ಮಕ್ಕಳೇ ಇನ್ನಿಲ್ಲ ನಲ್ಲ ಹೊರಗೆ ಬಂದು, ನಮ್ಮ ನಸೀಪು ಮಕ್ಕಳೇ ಇರಲಿಲ್ಲ. ಈಗಮಕ್ಕಳು ಆಯ್ತಲ್ಲ, ರಾಜ ಹೆಂಡ್ತಿಗೆ ಯಾರೂ ಹೇಳ ಬೇಡ ಅಂತ ಹೇಳ. ರಾಜನ್ ಮಗ ಹುಟ್ಟುವುನೇ ಅನ್ನೂ ವಿಚಾರ ಹೇಳ್ಳಿಲ್ಲ. ಉಪು ಮೆಣಸಿನಕಾಯಿಗೆ ಬರೋರು ಹೋಗೋರಿಂದ ರಾಜನ್ನೆ ಮಕ್ಕು ಆಗುವುದೇ ಅಂತ ತಿಳಿತು. ರಾಜನಿಗೆ ಮಗ ಹುಟ್ಟನ್ನೇ ಅಂತ ಜನಕ್ಕೆಲ್ಲ ಪ್ರಚಾರ ಆಯ್ತು. ರಾಜ ತನ್ನ ಹೆಂಡ್ತಿಗೆ ಮಗನ್ನ ಹೊರಕ್ಕೆ ಬಿಡ ಬೇಡ ಅಂತ ಹೇಳಿದ್ದ. ಪ್ರಾಧಾನಿಗೆ ಒಬ್ಬ ಮಗ ಇದ್ದ. ರಾಜನ ಮಗನ ವಾರಿಗೆಯವುನು. ಪ್ರಾಧಾನಿ ಮಗ ಬಂದು ರಾಜನ ಮಗನ್ನ ಬಾ ತೋಟ ನೋಡ್ಕಂಬರುವ ಅಂತ ಕರಂಡಿ ಹೋದ; ರಾಜ ಬಂದು ಮಗನ್ನ ನೋಡಿಕೆ ಬಾನೆ, ಕಾಕಾನ ಮಗನ ಜೊತೆ ಹೋಗಿದ್ದಾನೆ. ನಿಮ್ಮಪ್ಪ ಊರಿಗೊಗವುನೆ, ನಿನ್ನ ಸುರಾಯಿತಕ್ಕಂದಿ ಸಾಯಿಸ್ತೀನಿ. ನನ್ನ ಬಿಡು ಇಲ್ಲ ಅಂದ್ರೆ ನಾನೇ ಸುರಾಯಿನಲ್ಲಿ ಕಡ್ಕಂಡಿ ಸಾಯ್ತಿನಿ ಅಂಥ ಹೇಳ. ಸರಿ ಹೋಗಪ್ಪಾ ಅಂತ ಹೇಳೆ, ಆದ್ರೆ ನಾನು ಬಿಟ್ಟೆ ಕುದ್ರೆ ಮೇಲೆ ಕುಂತ್ಯಂದಿ ಹೋದ್ರು.

ಅಲ್ಲಿ ಹೋಗ್ತಾ ಹೋಗ್ತಾ ಬಸವಿಯವರ ಮನೆತಾವಿಂದ ಹೋದ್ರು. ಅಲ್ಲಿದ್ದ ಬಸವಿಯವುರ ಒಬ್ಬಾಕೆ ಏನಂದಳು. 'ಬರುವಾಗ ಇವುನ ಕುದುರೆ ನಿಲ್ಲುಸ್ತೀನಿ' ಅಂದ್ಲು. ನನ್ನ ರಂಗ ಮಾತಿಲ್ಲ ಏನಿಲ್ಲ : ಕಣ್ಣೆತ್ತಿ ನೋಡಿಲ್ಲ ಯಾಕೆ ನಿಲ್ಲುಸ್ತಿಯ?ಅಂತ ಹೇಳಿ ಅವ್ರದ್ರೆ ಬಾಜಿ ಕಟ್ಟಿದ್ರು. ಪ್ರಧಾನಿ ಮಗ, ರಾಜನ ಮಗ ತೋಟ ನೋಡ್ಕಂದಿ ಬರಿದ್ರು. ಕುದುರೆ ಅವ್ರ ಮನೆಗೆ ಬಂದ ತಕ್ಷಣ ಲಗಾಮ ಇಡಿದು ನಿಲ್ಲಿಸಿದ್ದು. ಆಕೆಯನ್ನ ಹೆಂಡ್ತಿ ತರ ಮಾಡ್ಕಂಡ. ಪ್ರಧಾನಿ ಮಗನ್ನ ದಬ್ಬಿದ್ದು, ಹೋಗು ನಿನ್ನ ನನ್ನ ಜೋಡಿ ಇಲ್ಲ ಅಂತ. ಅವುನ್ನ ಚಾ ಕುಡಿ ಅಂತ ಹೇಳಿ ಮನೆಗೆ ಕರಂಡಿ ಹೋದ್ಲು.

ರಾಜನ್‌ ಪ್ರಧಾನಿ ಮಗ ಹೋಗಿ ಹೇಳ. ಏನು ಆಯ್ತು ಅಂತ. ಬಂದ್ರೆ ಬರಲಿ ಇದ್ರೆ ಇರಲಿ ಅಂತ ರಾಜ ಸುಮ್ಮ ಆದ. ಅವುನು ನಮ್ಮ ಹೊಟ್ಟೇಲಿ ಹುಟ್ಟಿಲ್ಲ. ನಮ್ಮ ನಸಿಪು ಬಂದರೆ ಅವುನು ಬರಲಿ. ಹೋದ್ರೆ ಹೋಗಲಿ ಅಂತ ಹೇಳಿದ. ನಾಲೈದು ವರ್ಷ ಆಯ್ತು ಅವನು ಬರಲಿಲ್ಲ. ನಿನ್ನೆ ಲಗ್ನ ಮಾಡ್ತಾರಂತೆ ಅಂತ ಹೇಳಿ ಹುಡುಗುರನ್ನ ಕಳಿಸ್ಟ ರಾಜಿ. ರಾಣಿ ಅವು ಹೇಳಿ ಕಳಿಸಿದ್ರು. ಕರ

ಬನ್ನಿ ಅಪ್ಪರು ಲಗ್ನ ಮಾಡ್ತಾರಂತೆ ಇಷ್ಟು ದಿನ ಆದ ಮೇಲೆ ಇರಬಾರದಂತ ಅಂತಕಳಿಸಿದ್ರು, ಪ್ರಾತ್ರುದಾಕಿ ಕೇಳೋ, ನನ್ನೆ ಅಪ್ಪ ಅವ್ವ ಲಗ್ನ ಮಾಡ್ತಾರಂತೆ ಅಕ್ಕಿ ಕಾಳು ತಲೆ ಮೇಲೆ ಹಾಕುಬೇಕಂತೆ ಅಂಗೆಯೇ ಇರಬಾರದಂತೆ .

ಹೌದು ಈ ಮಾತು ಕತೆ ಆಯ್ತು. ಹೋಗಿ ಮಾಡ್ಕ ಹೋಗು ಅಂತ ಪಾತ್ರ ದಾಕಿ ಅಂದು, ಯಾರನ್ನ ಮಧ್ಯೆ ಮಾಡ್ಕಳಿ ಅಂತ ಹೇಳಿದ್ದು, ಆಗ ಪಾತ್ರಗಾಕಿ ಹೇಳಿದ್ದು, ಅತ್ತರೆ ಮುತ್ತು ಉದುರಬೇಕು, ಕಣ್ಣಿಂದ. ನಕ್ಕರೆ ಹವಳ ಉದುರಬೇಕು ಬಾಯಿಂದ, ನಡೆದರೆ ಬುಕುಟ ಹಾರಬೇಕು ತಲೇ ಮೇಲೆ (ಕುಂಕುಮ) ಅಂತಹಕೆ ಆದ್ರೆ ಮಾಡ್ಕ ಇಲ್ಲ ಅಂದ್ರೆ ಬ್ಯಾಡ ಅಂತ ಹೇಳಿದ್ದು. ಅವುನು ಬಂದು ಹುಡುಗರಿಗೆ ಹೇಳ, ನೋಡೋ ನೀವು ಅಪ್ಪ ಅವರೆ ಈ ರೀತಿ ಹೇಳಿ ನಾನು ಮದ್ದೆ ಮಾಡ್ಕಳೋದು 'ಆತ್ರೆ ಮುತ್ತು ಉದರ ಬೇಕು, ನಕ್ಕರೆ ಹವಳ ಉದರಬೇಕು ನಡೆದರೆ ಬುಕುಟ ಹಾರಬೇಕು' ಅಂತಾಕ ಆದ್ರೆ ಮಾಡ್ಕಂಡನಂತೆ ಅಂತ ಹೇಳಿ ಎಂದು ಹೇಳಿ ಕಳಿಸ್ಟ ಅಂದ್ರು ಈ ಹುಡುಗರು.

ಆ ರಾಜ ಅಂತ್ಯಾಕೆ ಸಿಗಲಿಲ್ಲ. ಇವುನು ಮದುವೆಯಾಗುವಂತಿಲ್ಲ ಅಂತ ಹೇಳ್ತ. ಪ್ರಧಾನಿ ಹೇಳ್ತ ಸೂರ ಹುಟ್ಟುತಾನಿಂದ ಸೂರ ಮುಳುಗುವವರೆಗಿನ ದೇಶದಾಗೆಲ್ಲ ಹೋಗಿ ನೋಡ್ಕ ಬರ್ತಿನಿ ಹೆಣ್ಣನ್ನ ಅವುನ ಫೋಟೋ ತಕ್ಕಬಾ ನಿಗ್ಗೆ ಹೆಣ್ಣು ತಕ್ಕ ಬದ್ದೀನಿ ಅಂತ ಹೇಳಿದ್ರು. ಹುಡುಗ್ರುಮತ್ತೆ ಹೋದ್ರು. ಫೋಟೋ ತಗಿಸ್ಕಂಡು ಬಂದ್ರು-ಹೆಣ್ಣು ನೋಡಿಕೆ ಹೋದ. ಹನ್ನೆರಡು ತಿಂಗಳು ತಿರುಗಿದ. ತಿರುಗಿ ತಿರುಗಿ ಒಂದು ದೊಡ್ಡ ಊರಿಗೆ ಬಂದ. ಎಲ್ಲೂ ಹೆಣ್ಣು ಸಿಗಲಿಲ್ಲ ಅಂತ ಹೇಳಿ ಬೇಸರದಿಂದ ಕುದುರೆ ಕಟ್ಟಾಕ್ಕಂಡಿ ಹನು ಮಂತನ ದೇವಸ್ಥಾನದ ತಾವು ಕುತ್ಕಂಡ.

ಆ ಜಾಗದಲ್ಲಿ ಆ ಊರಿನ ಹೆಣ್ಣು ಮಕ್ಕಳುಗಳು ಆಟ ಆಡ್ತಿದ್ರು. ಅವ್ರವ್ರ ಜಗಳ ಆಡ್ತಿದ್ರು. ಒಂದು ಹೆಣ್ಣು ಆಳಿತ್ತು. ಮುತ್ತು ಉದರುತ್ತಿದ್ದೂ ; ಆ ಮೇಲೆ ಅವೆಲ್ಲ ಸಮಾಧಾನ ಮಾಡಿದ್ದು ನಕ್ಕಿತು. ಹವಳ ಉದುರುತ್ತಿದ್ದೂ, ಆ ಮೇಲೆ ಕರಂಡಿ ಮನೆಗೆ ಹೋಗ್ತಿದ್ರು ಮುಕುಟ ಹಾರಿತ್ತು. ನೋಡ. ಈ ಹೆಣ್ಣದ್ರೆ ಚಲೋ ಆಯ್ತು ಅಂತ ಅವ್ರ ಹಿಂದೇನೆ ಬಂದ ಆಕೆ ಮನೆಗೆ ಹೋದ. ಅವಳ ತಲೆ ಗೂದಲು ಕಾಣಿಸ್ತಿತ್ತು. ಅವರ ಮನೆಗೆ ಆ ಮಕ್ಕಳ ಹಿಂದೆಯೇ ನಡೆದು ಕೊಂಡು ಹೋದ. ಯಾರ ಮಗಳು ಅಂತ ಕೇಳಿದ್ರು. ರಾಜನ ಮಗನೆ ಹೆಣ್ಣು ನೋಡಿಕೆ ಬಂದಿರುವುದಾಗಿ ತಿಳಿಸಿದ. ಯಾವೂರು ಅಂತ ಕೇಳಿದ್ರು. ಪಕ್ಕದ ಊರಿನ ರಾಜ್ಯದ ಮಂತ್ರಿ ಅಂತ ಹೇಳ್ತ. ಆ ಕನೈಗೆ ಸಲುವಾಗಿ ತಾನು ಬಂದಿದ್ದೇನೆ ಅಂತ ವಿಚಾರ ವನ್ನು ತಿಳಿಸಿದ. ತಾನು ಹನ್ನೆರಡು ತಿಂಗಳಿಂದ ಹೆಣ್ಣಿಗಾಗಿ ತಿರುಗಿರುವುದಾಗಿ ಹೇಳಿ, ಅವ್ರ ಮಗಳನ್ನ ಕೊಡುವುದಾಗಿ ಕೇಳಿ ಆ ಕನ್ನೆಯನ್ನು ಕೊಡುವಂತೆ ಹೇಳಿ ಬಂದ. ಆಕೆಯ ಫೋಟೋವನ್ನು ತೆಗೆದು ಕೊಂಡು ಬಂದ. ಅವರು ಕೂಡ ಕನ್ಯ ಕೊಡುವುದಾಗಿ ಮಾತು ಕೊಟ್ಟರು.

ಹೆಣ್ಣು ಗಟ್ಟಿ ಮಾಡಿಕೊಂಡು ಬಂದು ಅವುನಿಗೆ ಫೋಟೋ ತೆಗೆದುಕೊಂಡು ಬಂದ. ಆ ಹುಡುಗನನ್ನ ಕಳ್ಳ ಬನ್ನಿ ಅಂತ ಹೇಳಿ ಫೋಟೋ ತೋರಿಸಿ ಬಂದು ಆ ಹುಡುಗನನ್ನು ಕರೆದು ಕೊಂಡು ಬರುವುದು ಅಂತ ಹೇಳಿ ಪೋಟೋ ತಕ್ಕ ಬಂದು ಪಾತ್ರದಾಕಿಯ ಕೈಲಿ ಕೊಟ್ಟು ಕಳಿಸಿದ. ಫೋಟೋನ ಪಾತ್ರ ದಾಕಿಯ ಕೈಲಿ ಕೊಟ್ಟು, ಆಕೆ ಏನಂದಳು ಸೂರನ ಬೆಳಕು ನೋಡಪ್ಪ ಇಚ್ಛೆದೆಲೆ ಕೆಂಪು ತೆಗೆದು ಫೋಟೋ ಕಣ್ಣಿಗೆ ಹಾಕಿದ್ದು. ಸರಿ ಫೋಟೋ ತೋರಿಸಿದ್ದು. ಈ ಕುಂಡಿಗೆ ಯಾರು ಮಾಡ್ಕತ್ತಾರೆ. ಈ ಕುಂಡಿಗೆ ಯಾರು ಮಾಡ್ಕತ್ತಾರೆ ನಾನು ಒಲ್ಲೆ ಅಂದ ಹೇ ಮಾಡ್ಕ ಹೋಗಿ ಆಮೇಲೆ ನೋಡಬ್ಯಾಡ. ಸರಿ ಹೋಗಿ ಮನೆಗೆ ಹೋಗಿ ಬಾ ಅಂತ ಹೇಳಿದ್ರು. ಮನೆಗೋಗಿ ಲಗ್ನ ಆಗಿಕಾಗೆ ಹೋದ್ರು. ನನ್ನ ಮನೆಗೆ ಬಾ ಅಂದ. ಲಗ್ನ ಆಗುವಾಗ ಹೂವುಗಳನ್ನ ಎರಚಿದ್ದಳು. ಅವುಳ ಕಣ್ಣಿನ ಮೇಲೆ ಹೂವು ಬಿದ್ದಿತ್ತು. ಹೂವು ಕುಂತಿದ್ದು, ಕುಂಡಿತರ ಕಂಡು, ಸರಿಯಾಗಿ ಕಾಣಲಿಲ್ಲ ಕುಂಡಿಯಂತೆ ಕಂಡಳು. ಪಾತ್ರದಾರಿಯಾಕಿ ಮನೆ ಸೇರಿದ.

ಆಕೆ ದೊಡ್ಡಾಕೆ ಆದ್ದು. ಮೈ ನೆರೆದಳು ತಂದೆ ತಾಯಿ ಗಂಡನ ಮನೆಗೆ ಕರಂಡಿ ಬಂದು ದಿನ ಕೇಳ ಬೇಕಂತೆ ಎಲ್ಲೆ ಹೋಗ. ನಾಲೆಗೆ ಹೋಗದ್ದೆ ಅಂತ, ಹೇಳ್ಕೊಂಡಿದ್ರು. ಅದ್ರೆ ಇವುನು ಪಾತ್ರದಾಕಿ ಮನೆ ಸೇರಿದ. ಅಡಿಗೆ ಮಾಡ್ಕಂದಿ ತನ್ನ ಪಾಡಿಗೆ ತಾನು ಬಂದು ರೂಮಿಗೆ ಮಲಗಿಕೊಂಡಳು. ಸೊಸೆ ಬಂದು ಐದಾರು ತಿಂಗಳು ಕಳೆಯಿತು. ತಂದೆ ತಾಯಿ ಆಳ್ತಿದ್ರು. ಈಕೆ ಸೊಸೆ ಕೇಳಿದ್ದು. ಯಾಕೆ ಅಳ್ತಿದ್ದೀಯ ಅಂತ ಕೇಳಿದ್ದು. ನೀನು ಯಾಕೆ ಅಳಿಯೇ? ಅಂತ ಕೇಳಿದ್ರು . ನೀನು ಮಾವ ಅತ್ತೆ ಯಾಕೆ ಅಳಿಯ ಅಂತ ಕೇಳಿದರು. ನಮ್ಮ ಮಾವ ಯಾಕೆ ಆಳರೆ ಅದ ಹೇಳುವವರೆಗೆ ನಾನು ಹೇಳುವುದಿಲ್ಲ, ಊಟ ಮಾಡುವುದಿಲ್ಲ ಅಂತ ಹೇಳಿದ್ರು.

ಆಗ ಅವು ನಮಗೆ ದುಃಖ ಬಂತು ಅಂತ ಅತ್ತೊ ಅಂತ ಹೇಳಿದ್ರು. ಐದಾರು ತಿಂಗಳು ಆಯ್ತು. ಅವುನು ಪಾತ್ರದಾಕಿ ಮನೆಗೆ ಹೋಗಿ ಸೇರಿದ್ದಾನೆ ಅಂತ ಹೇಳಿದ್ರು. ಆಗ ಅವುಳು ಕೇಳಿದ್ದು, 'ಆಕೆಯ ಮನೆ ತೋರಿಸು ಕರ ಬರ್ರೀನಿ'ಅಂದ್ಲು. ಸೊಸೆ ಈ ರೀತಿ ಹೇಳಿದ್ದು, ತನ್ನ ಗಂಡ ಇರುವ ಮನೆ ತೋರಿಸಿ; ನೀವು ಮನೆಯ ಹತ್ತಿರಕ್ಕೆ ಬರಬೇಡಿ. ದೂರದಲ್ಲಿ ನಿಂತು ಕೊಂಡು ತೋರಿಸು ಅಂದ್ಲು. ಕರೆದು ಕೊಂಡು ಹೋದಳು.

ಹೋಗಿ ಮನೆಯ ಮುಂದೆ ನಿಂತಳು. ಪಾತ್ರದಾಕಿ ಎದುರುಬದುರು ಕುಂತು ಕೊಂಡು ಪಗಡೆ ಆಡುತ್ತಿದ್ದಳು. ಬಾಕಲಕಡೆ ಮೋರೆ ಹಾಕಿದ್ದು, ಸೂರನ ಬೆಳಕು ಬೀಳು. ನೋಡಿಲ್ಲ ಅಂತ ಹೇಳಿದ್ರು. ಆತ ಏನು ಮಾಡಿದ ಯಾವುರಾಕೆ;ಯಾರಾಕೆ ಅಂತ ಬೆನ್ನತ್ತಿ ಮನೆಗೆ ಬಂದ. ಒಂದಾಮಾಡಿ ಬರ್ತೀನಿ ಅಂತ ಹೋದ. ಮಂಚದ ಮೇಲೆ ಹೋಗಿ ಆಕೆ ಮಕ್ಕಂಡ್ಲು. ದಿನಾಬರಲಾರದವುನು. ಯಾರು ಹೆಣ್ಣು ಮಗಳು ಬಂದವಳು; ಮುಂಜಾನೆ ತೋರಿಸ್ತೀನಿ ಅಂದ್ಲು, ಯಾರು ಬಂದಿಲ್ಲ ಅಂದ್ಲು, ಮನೆ ಒಳಕ ಹೋದ.

ನನ್ನ ಸುಳ್ಳೆಬ್ರಿಯ ಅಂದ. ನಮ್ಮನೆ ಒಳಗೆ ಹೋಗ್ತಿನಿ. ಪಾತ್ರದಾಕಿಗೆ ನಮ್ಮ ನೇಲಿ ನನ್ನ ಹೆಂಡ್ತಿ ಅವುಳೆ ಹೋಗ್ತಿನಿ ಅಂದ.

ತಂದೆ ತಾಯಿ ಬೇರೆ ಬೇರೆ ಮಲಗಿದ್ದರು. ನಾನು ನೀರಿಗೋದಲಿ. ನಿನ್ನ ಗಂಡನ ಹೇಸರೇಳು ಅಂತ ಕೇಳ್ತಾರೆ ಅಂತ ಹೇಳಿ ತನ್ನ ಗಂಡನನ್ನ ಕೇಳಿದಳು. ನೀನು ಹೆಸರೇಳು ಅಂತೀಯೇ ನಾನು ಹೆಸರೇಳಿದರೆ ನೀನು ಹಿಡಿಯಕೆ ಆಗುವುದಿಲ್ಲ ಅಂತ ಹೇಳಿದ. ನಾಳೆ ಮನೆ ತಾರಿಸು. ನಾಲೆ ಸಂಜೆಗೆ ಹೇಳೀನಿ ಅಂದ. ಸಂದಿ ಇರದಂಗೆ ಮಾಡು ಅಂತ ಹೇಳ್ತ. ರಾತ್ರೆ ನಂಗೆ ಹಿಡಿಯಾದಿಲ್ಲ ಅಂತ ಹೇಳ. ನನ್ನ ಹೆಸರು ನಾಗಭೂಪ ಅಂತ ಹೇಳ್ವ. ಆಕೆ ಏನು ಮಾಡ್ಡೆ ಹಾವಾಗಿ ಹೆಡೆಯ ಆಳುದ್ದ ನಿಂತು ಕೊಳ್ತು. ನಿಂತ ಗಳಿಗೇಲಿ ಆಕೆ ಮುಟ್ಟಲಿಲ್ಲ.

ಸರಿ ಹಾವು ಏನು ಮಾಡ್ತು. ಹತ್ತಿ ಗೋಡೆ ಮೇಲೆ ಹಾಸಿ ಬೇಲಿ ಕಡೆ ಹೋಯ್ತು. ಪರಾರಿಯಾಗಿ ಹೋದ. ಮುಂಜಾನೆಗೆ ತಾಯಿ ಬಂದು ಎಲ್ಲೋದ ಮಗ ಅಂತ ಕೇಳ, ಎಷ್ಟೋತ್ತಾಯ್ತು ಅಂತ ಹೇಳಿದ್ರು. ನಿನ್ನ ಹೆಸರೇನು ಹೇಳು ಅಂತ ಹೇಳಿ ಕತೆ ಹೇಳಿದ್ದು. ಅತ್ತೆ ಜೊತೆ ಹೇಳಿದ್ದು. ನಾಗಭೂಪ ಆದ ನಾನು ಹಿಡಿಯಲಿಲ್ಲ. ಹೆದರಿಕೊಂಡು ಮುಟ್ಟಲಿಲ್ಲ, ಮಗ ಹಾವಾಗಿ ಹೋದ ಅಂತ ಅವ್ವ ದುಃಖ ಪಟ್ಟಳು. ಮಗ ಆಗಿದ್ದ ಅವನೆ ಹೆಸರಿಟ್ಟಲ್ಲ. ಅವನಿಗೆ ತೊಟ್ಟಿಲು ಕಟ್ಟಲಿಲ್ಲ. ಆತ ಸುಮ್ಮನೆ ಬಂದು ಹೋದ ಅಷ್ಟೆ.

ಅದಕ್ಕೆ ನೀನು ಚಿಂತೆ ಮಾಡಬೇಡ. ನೀನು ಆಳಬೇಡ;ಚಿಂತೆ ಮಾಡ ಬೇಡ, ನನಗೆ ಅರ್ಧಭಾಗ ಪಾಲು ಕೊಟ್ಟುಬಿಡಿ. ದಾಸೋಗ ಮಾಡಿಸ್ತೀನಿ ರೊಕ್ಕ ರೂಪಾಯಿ ದಾನ ಮಾಡ್ತೀನಿ ಅಂದ್ಲು. ಮಗನ ಹೆಸರ ಮೇಲೆ ಮಾಡ್ತೀನಿ ಅಂತ ಹೇಳಿದ್ದಲ್ಲ ಅದ್ರೆ ಅತ್ತೆ ಮಾವ ಪಾಲು ಮಾಡಿ ಕಳುಹಿಸಿದ್ರು. ನನ್ನ ಗಂಡನ ಮೇಲೆ ಮತ್ತೆ ಯಾಗಿರುವುದರಿಂದ ದಾಸೋಗ ಇಟ್ಟಎಲ್ಲಾ ಅಂತ ಹೇಳಿ ದುಡ್ಡಿಸ್ಕಳ್ಳಿಕ್ಕೆ ಬಂದ್ರು. ಕೇಳ್ಕೊಂಡು ಬಂದು ಕೇಳ್ಕೊಂಡಿ ಬಂದು ಈ ಊರಿಗೆ ಬಂದ. ಹೊತ್ತು ಮುಳುಗಿತ್ತು. ಅಳಕುಂತ. ಹೊತ್ತು ಮುಳುಗಿತ್ತು ಕತ್ತಲಾಗಿತ್ತು, ಒಂದಾಗಳು ಬಂತು. ಅದ್ರ ಜೊತೇಲಿ (ಗೋಪಿ ತಾಯಿ) ಬಂದ . ಅದು ಒಂದೂರಿಗೊ ಇಲ್ಲ, ಅಂದ್ರೆ ಒಂದು ತಾಂಡಕ್ಕೆ ಸೇರಿಸುತ್ತೆ ಅಂತ ಹೇಳಿ ಆ ಗೋಪಿ ತಾಯಿಯ ಜೊತೆ ಆ ಗೋಪಿತಾಯಿ ಒಂದು ದೊಡ್ಡ ಹುತ್ತಿನಗೆಡ್ಡೆ ತಾವುಕೆಹೋಯ್ತು. ಸರಿ ಇವುನು ಕೂಡ ಹಿಂದೆಯೇ ಹೋದ. ಆಕಳು ಕೂಡ ಹುತ್ತಿನಗೆಡ್ಡೆಗೆ ಹೋಯ್ತು. ಅಲ್ಲಿ ಬೇರೆ ಬೇರೆ ಕಡೆಯ ಹಾವುಗಳೆಲ್ಲ ಇದ್ದವು. ಹುಡುಗ ಮರೇಲಿ ಕುಂತ. ಹುತ್ತಿನ ಗೆಡ್ಡೆಗೆ ಬಂದ. ಅಲ್ಲೇ ಕುಂತ. ಗುಪ್ಪೆಯಾಗಿ ಜೇನು ಹುಳುಗಳ ತರ ಕುಂತ.

ಅಲ್ಲಿ ಹಾವಾಗಿ ಹೋಗಿದ್ದೆಲ್ಲಾ ಅವುನು ಅಲ್ಲೇ ಇದ್ದ. ಬಂದ ಹಾವು ದೇವರ ಕಟ್ಟೆ ಮೇಲೆ ಬಂತು. ಅಲ್ಲಿ ಮನುಷ್ಯನಾಗಿ ಮಾರ್ಪಾಟಾಯ್ತು. ಇವನು ದೂರದಲ್ಲಿ ಕುಂತಿದ್ದ. ಅಲ್ಲಿ ಜ್ಯೋತಿ ಉರಿತಿತ್ತು. ಆ ದೀಪಕ್ಕೆ ಹೇಳಿದ್ದ ದಿನಾ ಆ ದೀಪದ ಜ್ಯೋತಿ ಹೇಳ್ತಿತ್ತು. ಇವತ್ತು ಕೇಳ. 'ದೀಪದಜ್ಯೋತಿ ದೀಪದ ಜ್ಯೋತಿ ನಮ್ಮ ರಧಾನಿ ಏನು ಮಾಡ್ತಾವೆ ಅಂತ ಕೇಳ. ದೀಪದ ಜ್ಯೋತಿ ಹೇಳು. ನಿಮ್ಮ ರಾಧಾನಿ ನಿನ್ನ ಹೆಸರ ಮೇಲೆ ದಾಸೋಗ ಮಾಡ್ತಾಳೆ ಅಂತ ಹೇಳು. ದೂರದಲ್ಲಿ ಕುಂತಿದ್ದ ವನು ನೋಡ್ತಾ ಕುಂತಿದ್ದ. ಹಾವು ಹಾಲು ಕುಡ್ಡು ಅಲ್ಲೆ ಕುಂತ್ಸತ್ತು.

ಅಲ್ಲೆ ಕುಂತಿದ್ದವುನು ನೋಡ. ಆಕಳು ಯಾವ ಕಡೆ ಹೋಗುವ ಅಂತ ನೋಡ್ತಿತ್ತು. ಆಕಳು ಬನ್ನಿಲ್ಲ. ಅಲ್ಲಿ ಬೇರೆ ಬೇರೆ ಹಾವೆಲ್ಲ ಇದ್ದೂ ಮತ್ತೆ ಇವುನು ಹಾಲು ಕುಡ್ಡು ಅಲ್ಲೆ ಇರುತ್ತಿದ್ದ. ಆಕಳು ಮೈಯಾಕೆ ಹೋಗಿ ಬಂತು. ಆತ ಹೊರಕೆ ಬಂದ. ಆಕೆ ಮನೆಗೆ ದಾಸೋಗದ ತಾವುಕೆ ಹೋಗಕೆ ಬಂದ. ನಾನು ಬೇರೆ ಊರಿಂದ ಬಂದಿದ್ದಿ ನಮ್ಮ ದೇಶದಾಗೆ ಬರುವಾಗ ಒಂದು ಮಾತು ಕೇಳಿದ್ದಿ, ಬರುವಾಗ ಒಂದು ಆಕಳು ಸಿಕ್ಕು . ಅದರ ಜೊತೆ ಬಂದೆ. ಅದು ಒಂದು ತಾಂಡಾ ಕಾದರೂ ಸೇರಿಸುತ್ತೆ. ಇಲ್ಲ ಅಂದ್ರೆ ಒಂದು ಊರಿಗಾದರೂ ಸೇರಿಸುತ್ತೆ ಅಂತ ಹೇಳಿ ಅದ್ರ ಜೊತೇಲಿ ಬಂದೆ ಆ ಆಕಳುಹುತ್ತಿನ ಗೆಡ್ಡೆ ಗೆ ಕರ ಹೋಗಿ ಹಿಡ್ತು. ಅಲ್ಲಿ ಅದು ಹಾಲು ಕರಿತು. ಸರಿ ಒಬ್ಬ ವ್ಯಕ್ತಿ ಬಂದು ಹಾಲು ಕುಡ್ಡ. ಅಲ್ಲಿ ಕಟ್ಟೆ ಮೇಲೆ ದೀಪ ಉರಿತಿದ್ದು.

ದೀಪದ ಜ್ಯೋತಿ ದೀಪದ ಜ್ಯೋತಿ ನಮ್ಮ ರಧಾನಿ ಏನು ಮಾಡ್ತಾಳೆ ಅಂದ. ದೀಪದ ಜ್ಯೋತಿಗಳು ಹೇಳಿದೊ ನಿಮ್ಮ ಅರಧಾನಿ ದಾಸೋಗ ಮಾಡ್ತಾಳೆ ಅಂತ ಹೇಳಿದು. ಅದನ್ನ ಕೇಳ್ಳಕಂಡ ಅಷ್ಟು ಹೊತ್ತಿಗೆ ಬೆಳಗಾಯ್ತು. ಅವುನು ಹುತ್ತಿನ ಗೆಡ್ಡೆಗೆ ಹಾವಾಗಿ, ಹೋದ. ಆಕಳು ಮೇಯಕೆ ಬಂತು, ನಾನು ಅದರ ಹಿಂದೆ ನಡ್ಕಂಡಿ ಬಂದೆ. ಆಗ ಆಕೆ ನನ್ನ ಗಂಡನೇ ಇರಬಹುದು. ಅವುನು ಖಂಡಿತ ನನ್ನ ಗಂಡನೇ ನಿನ್ನೆ ಬೇಡಿದಷ್ಟು ದುಡ್ಡು ಕೊಡ್ತೀನಿ. ನನ್ನೆ ಆ ಹುತ್ತಿನ ಗೆಡ್ಡೆ ತೋರಿಸು ಅಂತ ಹೇಳಿದಳು. ನನ್ನ ನೋಡಿದ್ದನ್ನ ಕೇಳಿದ್ದನ್ನ ತೋರಿಸುತ್ತೇನೆ ಬಾ ಅಂತ ಕರೆದು ಕೊಂಡು ಹೋದ.

ದಂಡು, ದರ್ಬಾರು ಕರಂಡಿ ಹೋದಳು. ಸರಿ ಹುತ್ತಿನಗೆಡ್ಡೆ ತಲುರಿದರು. ಸಜ್ಜಿಗೆ ಉಂಡೆಮಾಡಿ ಊಟ ಮಾಡಿದ್ರು. ಅಲ್ಲಿ ಎಲ್ಲಾರೂ ಊಟ ಮಾಡಿದರು.

ಆಕಳು ಬಂತು. ಹೊತ್ತು ಮುಳುಗಿತ್ತು. ದೀಪ ಅತ್ತಿಕೊಂಡು ಉರಿಯುತ್ತಿದ್ದೂ. ಆಗ ಆಕಳು ಹಿಂದೆ ಹೋಗಿ ಆ ಮಾತು ಕಂಡು ಬರ್ರೀನಿ ಸರಿಯಾಗಿ ನೋಡು ಅಂತ ಹೇಳೋ. ನೋಡ್ಕ ಬರ್ರೀನಿ ಅಂತ ಅವುಳು ಹಿಂದೆ ಹೋಗಿ ನಿಂತ್ಕಂಡು 'ದೀಪದ ಜ್ಯೋತಿಯ ಕೇಳ.' ದೀಪದಜ್ಯೋತಿ ದೀಪದ ಜ್ಯೋತಿ ನನ್ನ ಅರಧಾನಿ ಏನು ಮಾಡುತ್ತಾ ಇದ್ದಾಳು ಅಂತು. ನಿಮ್ಮ ಅರಧಾನಿ ನಿನ್ನಎಡ ಪಕ್ಕದಲ್ಲೆ ನಿಂತವಳೆ ಅಂತು.

ಸರಿ ಇನ್ನೇನು ಹಾವಾಗಿಕೆ ಹೋಗಿದ್ದ. ಇವುಳು ಗಪ್ಪನೇ ಹಿಡಿದು ಕೊಂಡಳು. ಅವುನು ಹುಡುಗನಾಗಿಯೇ ಉಳಿದ. ನೀನು ಬಾ ಅಂತ ಹೇಳಿದಳು. ನಾನು ಬರುವುದಿಲ್ಲ ಅಂದ್ಲು. ನಾನು ನಿನ್ನ ಬಿಟ್ಟು ಹೋಗುವುದಿಲ್ಲ ಅಂತ ಹೇಳ. ಅವುನು ಹಾಲು ಕುಡಿತಿದ್ದ. ಅವುಳು ಹಾಲು ಕುಡಿದು ಕುಂತಿದ್ದ ನಂತರ ಜೊತೇಲಿ ಬಂದ. ಎರಡು ಮೂರು ಮಕ್ಕಳಾಗೋ ತನಕ ಇದ್ದ. ಆಮೇಲೆ ಎದ್ದು ಹೋದ. ಇವುಳು ಮಕ್ಕಳ ಜೊತೆ ಸುಖವಾಗಿ ಜೀವನ ನಡೆಸಿದಳು.


logoblog

Thanks for reading Story 01- ನಾಗ್ರೇಂದ್ರ ಭೂಪನ ಕತೆ

Previous
« Prev Post
Oldest
You are reading the latest post

No comments:

Post a Comment