ಒಂದು ತಾಂಡದಲ್ಲಿ ಅಪ್ಪ ಮಗ ಇಬ್ಬರು ಇದ್ರು. ಮಗ ದಿನ ಪೂರ್ತಿ ಪೋಲಿ ತಿರುಕ್ಕೊಂಡು ಬರಿದ್ದ. ತಂದೆ ಒಂದು ಸೇರು ಜೋಳಕ್ಕೆ ಗೌಡರ ಹೊಲ, ತೋಟದಲ್ಲಿ ದುಡಿಯುತ್ತಿದ್ದ. ಈ ರೀತಿಯಾಗಿ ಕಾಲ ಕಳೆಯುತ್ತಿರಬೇಕಾದರೆ ಒಂದು ದಿನ ಮಗ 'ಅಪ್ಪ ದಿನಾ ನೀನು ಒಂದು ಸೇರು ಜೋಳಕ್ಕೆ ದುಡೀತಾ ಕಾಲ ನೂಕಿದ್ರೆ. ಮುಂದೆ ನಮ್ಮ ಜೀವ ಹೆಂಗೆ ಸಾಗಿಸೋದು ಅಂದ. ಅಪ್ಪ ಹೇಳಿದ್ದ 'ಏನಪ್ಪಾ ಮಾಡ್ಡೆ ನನ್ನ ಹಣೆಬರಹ ಅಂಗೆ ಮಾಡ್ತಿವಿ ' ಅಂತ ಹೇಳ. ಮಗ ಅಪ್ಪನೆ ನಾನು ಒಂದು ಮಾತೇಳ್ತಿನಿ ನನ್ನ ಜೊತೆ ಬಾ ಅಂತ ಕರದ. ಅಪ್ಪ ಮಗನ ಜೊತೆ ಹೋದ. ಮಗ ಏನು ಮಾಡ ಅಂದ್ರೆ ಅಪ್ಪನ ಕರೊಂಡು ರಾಜನ ಮನೆಗೆ ಕನ್ನ ಹಾಕಕ್ಕೆ ಹೋದ್ರು.
ಅಪ್ಪ ಏನೋ ಇದು ಅಂತ ಕೇಳ. ಏನೂ ಇಲ್ಲ ಎಷ್ಟು ದಿನಾ ಅಂತ ಒಂದು ಸೇರು ಜೋಳಕ್ಕೆ ದುಡಿತೀಯ ಬಾ ಅಂದ. ಅಪ್ಪನೂ ಸರಿ ಅಂತ ಒಪ್ಪಿಕೊಂಡು ಹೋದ. ಅಪ್ಪ ಮಕ್ಕು ರಾಜನ ಮನೆ ಹತ್ತಿರಕ್ಕೆ ಹೋದ್ರು. ಮಗ ಕನ್ನ ಕೊರೆದುಒಳಕ್ಕೆ ಹೋದ. ರಾಜನ ಮಲಗೊ ಕೋಣೆಗೆ ನುಗ್ಗಿದ. ರಾಜ ಮಲಗಿದ್ದ ಮಂಚ ಬಂಗಾರದ್ದು. ಆ ಬಂಗಾರದ ಮಂಚದ ಮೂರು ಕಾಲುಗಳನ್ನು ಕಳ್ಳಂಡ. ರಾಜನ್ ಎಚ್ಚರ ಆಗೋಯ್ತು. ಕಳ್ಳ ಕಳ್ಳ ಅಂತ ಹಿಂದೆ ಬಂದ. ಮಗ ಈಚೆ ಬಂದ. ಅಪ್ಪ ರಾಜನ ಕೈಗೆ ಸಿಕ್ಕಿಬಿಟ್ಟ. ಮಗ ಏನು ಮಾಡೋದು ಅಂತ ಯೋಚೆ ಮಾಡಿ ಈಗ ಎಲ್ಲಾ ಸಿಕ್ಕುತ್ತೀವಿ ಅಂತ ಅಪ್ಪನ ಚೆಂಡ ಕಡಿದು ಬಟ್ಟೆಗೆ ಸುತ್ತಿಕೊಂಡು ಬಂಗಾರದ ಮೂರು ಕಾಲನ್ನು ಕಟ್ಟಿಕೊಂಡು ಬ೦ದ.
ರಾಜ ಕೂಗಿದ ಆಳುಗಳೆಲ್ಲ ಬಂದು ದಿಂಬ ಬಿದ್ದಿದ್ದನ್ನ ಎಲ್ಬಂದಿ ಹೋಗಿ ಮಡಗಿದ್ರು. ಬೆಳಿಗ್ಗೆ ಹೊತ್ತೆ ಜನ ಸೇರಿ ಬಿಟ್ರು. ರಾಜ ಹೇಳ ಈ ದಿಂಬ ನಮ್ಮ ಊರಿ ನದೊ, ಬೇರೆ ಊರಿನದೊ ಅಂತ ನೋಡಿಸಿದ್ದ.
ಮಗ ಬಂಗಾರದ ಮಂಚದ ಕಾಲು ತಕ್ಕಂಡು, ಅಪ್ಪನ ಚೆಂಡನ್ನು ಬಟ್ಟೆಗೆ ಮುಚ್ಚಿಕೊಂಡು ತಕ್ಕ ಬಂದು ಮನೇಲಿ ಇಟ್ಟ. ಅವ್ವ, ನಿಮ್ಮ ಅಪ್ಪ ಎಲ್ಲಿ ಅಂತ ಕೇಳಿದ್ದು, ಅಪ್ಪನ್ನ ರಾಜ ಹಿಡಿದು ಬಿಟ್ಟಿ. ನಾವು ಸಿಕ್ಕಿಬಿಡ್ತೀವಿ ಅಂತ ಹೇಳಿ ಅಪ್ಪನ್ನ ಚೆಂಡು ಕಡಕಂಡು ಬಂದಿದ್ದೇನೆ ಅಂತ ಹೇಳ. ಅವ್ವ ಬಾರಿ ದುಃಖ ಮಾಡಿದ್ದು, 'ತಾಯಿ ಅಯ್ಯಯ್ಯೋ ಪ್ರೋ ನಾನು ಸಾಯ್ತಿನಿ ಅಂತ ರಂಪ ಮಾಡಿದ್ದು,
ಮಗ ನೀನು ದುಃಖ ಮಾಡಿ ರಂಪ ಮಾಡಿದ್ರೆ ನೀನು ಸಿಕ್ತಿಯೇ ನಾನೂ ಸಿಕ್ಕಿನಿ ಅಂತ ಹೇಳ. ಅವ್ವ ಗಟಧೈರ್ಯ ಮಾಡಿದ್ದು. ಈ ಮುಂಜಾನೆ ಬೆಳಿಗ್ಗೆ ಜನ ಸೇರಾರೆ. ರಾಜ ಎಲ್ಲಾರನ್ನೂ ಕರೆಸ್ತಾನೆ. ಬಾರಿ ಉಷಾರಾಗಿ ಇರಬೇಕು ಅಂತ ಅವ್ವಸ್ಥೆ ಹೇಳ್ತ. ಅವ್ವ ಆಯ್ತು ಅಂತ ಒಪ್ಪಂಡ್ಲು. 'ಮಗನೂ ಸಿಕ್ಕಿಬಿಟ್ರೆ ತಾನೋಬ್ಳೆ ಇರಬೇಕಾಗಿರುತ್ತೆ' ಅಂತ ಮಗನ್ನೆ ಒಪ್ಪಂದಿ ಸುಮ್ಮ ಅದ್ದು.
ರಾಜ ಈ ಮುಂಜಾನೆ ಭರ್ತಿ ಜನಸೇರಿದ್ದ. 'ಯಾರಾದ್ರು ಡಿಂಬ ನಮ್ಮದೊ, ಬೇರೆ ಊರಿನವುರುದೊ'ಅಂತ ಕೇಳ್ತ ಇದ್ರು. ಯಾರಾದ್ರು ಹೇಳಿ ಅಂತ ಹೇಳಿದ್ರು. ನಾವೇಳಿದ್ರೆ ನಾವೇ ಸಿಕ್ಕ ಬೇಕಾಗುತ್ತೆ ಅಂತ ಯಾರು ಕೂಡ ಬಾಯಿ ಬಿಡಲಿಲ್ಲ. ರಾಜ ಸುಮ್ಮೆ ಅದ. ರಾಜ ಆಳುಗಳ ಕರೆದು ಡಂಗುರ ಬಾರಿಸಿದ. ಆಳುಗಳು ಬಂದ್ರು. ರಾಜ ಹೇಳ್ತ "ಖರೇ ಅವ್ರ ಅಪ್ಪಕ್ಕೆ ಹುಟ್ಟಿದ ಮಗ ಅದ್ರೆ ದಿಂಬದ ಜೊತೆಗೆ ಚೆಂಡು ತಂದು ಮಡಗ್ನಿ' ಅಂತ ಹೇಳಿದ. ಅದೇ ರೀತಿ ಡಂಗುರ ಬಾರಿಸಿ ಆಳುಗಳು ಸಾರಿದ್ರು. ಬೀದಿ ಬೀದಿ, ಊರುಊರು, ತಾಂಡ ತಾಂಡದ ಜನರೆಲ್ಲಾ ಗೊತ್ತಾಯ್ತು. ಅದೇ ರೀತಿ ಈ ಹುಡುಗನಿಗೆ ಮತ್ತು ಅವ್ರ ಅವನ್ನೂ ಗೊತ್ತಾಯ್ತು. ಈ ಹುಡುಗ ಬಾರಿ ಯೋಚೆ ಮಾಡ್ಡ. ಅಪ್ಪಕ್ಕೆ ಹುಟ್ಟಿದ ಮಗ ಅದ್ರೆ ತಕ್ಕ ಹೋಗಿ ದಿಂಬಕ್ಕೆ ಜೊತೆ ಮಾಡಿ ಅಂತ ಹೇಳದ್ದೆ. ನಾನು ತಕ್ಕ ಹೋಗಿ ಚಂಡ ಮಡಗಿ ಬರ್ರೀನಿ ಅಂತ ಅವ್ರ ತಾಯಿ ಜೊತೆ ಹೇಳ್ತ, ಅವ್ರ ಅವ್ವ ಬಾರಿ ಹುಸಾರಾಗಿ ಹೋಗಿ ಇಟ್ಟು ಬಾ ಅಂದ್ಲು. 'ಆಯ್ತು' ಅಂತ ಒಪ್ಪಂದಿ ಹೋದ.
ದಿಂಬ ತಕ್ಕ ಹೋಗಿ ಒಂದು ಮೈದಾನದಲ್ಲಿ ಇಟ್ರು. ಸುತ್ತಾ ಆಳುಗಳು ಕಾಯ್ತು ಕುಂತಿದ್ರು. ಬೆಂಕಿ ಹಾಕ್ಕಂಡು ಚಳಿಗೆ ಬೆಂಕಿ ಕಾಯಿಸ್ತಾ ಇದ್ರು. ಈ ಹುಡುಗ ಒಂದು ವೇಶ ಹಾಕಿದ. ಕೈಯಲ್ಲಿ ತಾಳ ಹಾಕ್ಕಂಡಿ ಆ ಹೆಣದ ದಿಂಬ ಮಡಿಗಿದ್ದಲ್ಲಿಗೆ ಬಂದ. ಸುತ್ತ ಆಳು ಮಂದಿ ಕುಂತಿದ್ರು. ಇವುನೂ ಅಲ್ಲಿ ಬಂದ. ಕುಂತಿದ್ದ ಮಂದಿ
'ಲೇ ನೀ ಯಾರ್ 'ಅಂದ್ರು ಈ ಹುಡುಗ 'ನಾನ್ ಅಪ್ಪ ಪಕ್ಕದ್ ಊರು' ಅಂದ. ಯಾಕೆ ಬಂದೆ ಅಂದ್ರು, ಅಪ್ಪ ನೆನ್ನೆದಿನ ಆ ಊರಲ್ಲಿ ಭಜನೆ ಆಯ್ತು; ಮುಗಿಸ್ಕಂಡಿ
ನಮ್ಮ ಊರೆ ಹೋಗ್ತಿದ್ದೀನಿ ಅಂದ. 'ಆಯ್ತು' ಹೋಗು ಈ ಜಾಗಕ್ಕೆ ಯಾಕೆ ಬಂದೆ ಅಂದ್ರು. ಬೆಂಕಿ ಕಾಣಿಸ್ತು' ಅದ್ರೆ ಬಂದೆ ಬೀಡಿ ಸೇದಬೇಕಾಗಿತ್ತು. ಬೆಂಕಿ ತಕ್ಕಳ್ಳ ಅಂತ ಇಲ್ಲೆ ಬಂದೆ ಅಂದ. ಸರಿ ಆಯ್ತು ಹೋಗು. ನಮ್ಮ ಹತ್ರ ಬೆಂಕಿ ಕಡ್ಡಿ ಇಲ್ಲ. ಆ ಬೆಂಕಿ ಗುಡ್ಡೆಲೆ ತಕ್ಕ ಹೋಗು ಅಂದ್ರು. ಇವುನು ಹೋದ ಅಲ್ಲೇ ದಿಂಬದ ಪಕ್ಕದಲ್ಲಿ ಚಂಡ ಒಗೆದು ಬಂದ. ಕೈಯಲ್ಲಿ ತಾಳಹಾಕ್ಕಂಡಿ ಹಾಡ ಹಾಡುತ್ತ ಮುಂದಲೂರಿಗೆ ಹೋಗ್ತಿನಿ 'ಅಂತ ಹೋದ.
ಅವನು ಹೋದ ಎಷ್ಟೋ ಹೊತ್ತಿನ ಮೇಲೆ ಅಲ್ಲಿ ಕುಂತಿದ್ದ ಮಂದಿ ನೋಡಿದ್ರು. ಚಂಡು ಬಂದು ಅವು ಅಪ್ಪನ ದಿಂಬದ ಹತ್ತಿರ ಬಿದ್ದಿದೆ. 'ಲೋ ಹಿಡಿದ್ದಾ ಅವುನೆ ಇರಬಹುದು' ಅಂದ್ರು. ಅವನು ಆಗ್ಲೆ ದೂರ ಹೊರಟು ಹೋಗಿದ್ದ. ನಾವು ಉಳಿವುಗಿಲ್ಲ ಅಂತ ಎಲ್ಲಾ ನೋಡಿದ್ರು, ಅವುನು ಸಿಗಲಿಲ್ಲ.
ಈ ಆಳುಗಳು ಮತ್ತೆ ಬೆಳಿಗ್ಗೆ ರಾಜನ ತಾವುಕೆ ಹೋದ್ರು. 'ಅಪ್ಪಾ ನಾವು ನನ್ನ ಕಾಯ್ತಾ ಇದ್ರೂ, ಯಾರೋ ಒಬ್ಬ ಸನ್ಯಾಸಿ ತರದ ವೇಷ ಹಾಕ್ಕಂಡು ಬಂದ, ಬೀಡಿ ಸೇದ ಬೇಕು ಬೆಂಕಿ ಕಡ್ಡಿ ಕೊಡಿ ಅಂದ. ಬೆಂಕಿ ಕಡ್ಡಿ ಇಲ್ಲ. ಬೆಂಕಿ ತಕ್ಕ ಹೋಗು ಅಲ್ಲಿ ಅಂತ ಅಂದೊ. ಅವನು ಬೆಂಕಿ ಅಚ್ಚಿಕೊಂಡುಹೋದ. ಆಗ ಎಷ್ಟೋ ಹೊತ್ತಾದ ಮೇಲೆ ನೋಡಿದ್ರೆ ದಿಂಬದ ತಾವು ಚಂಡು ಬಿದ್ದಿತ್ತು. ನೋಡಿ ಸುದ್ದಿಯ ನಿಮ್ಮ ಕೊಡ ಅಂತಬಂದೊ ಮಹಾಸ್ವಾಮಿ' ಅಂದ್ರು ರಾಜನ ಸೇವಕರು.
ರಾಜ ಬೈದು 'ಸೂಳೇ ಮಕ್ಕಳ ಬಂದಿದ್ದವುನೇ ಆ ಸತ್ತವನು ಕಡೆಯವುನಿರ ಬೇಕು ಹಿಡಿದಂತೆ ಬಿಟ್ಟಿದರಿಯಲ್ಲಾ' ಅಂತ ಹೇಳಿ ಬೈದು ನಾಳೆ ನೀವು ಅವುನ್ನ ಹಿಡಿನಿಲ್ಲ ಅಂದ್ರೆ ನಿಮ್ಮ ಶಿಕ್ಷೆ ಕೊಡ್ತೀನಿ' ಅಂದ್ರು. ಅವೆಲ್ಲ ಮತ್ತೆ ಅವುನ್ನ ಹುಡುಕಿ ಕ್ಕಾಗಿ ಹೋದ್ರು.
ರಾಜ ಮತ್ತೆ ಡಂಗುರ ಸಾರಿಸಿದ. ರಾಜ ಭರ್ತಿ ಜನ ಕಳಿಸಿದ. 'ಆ ಸತ್ಯವುನ ಸುಟ್ಟು ಹೋದ ಬೂದಿಯನ್ನು ತಕ್ಕ ಹೋಗಿ ನೀರಿಗೆ ಬಿಡಬೇಕು' ಇಲ್ಲ ಅಂದ್ರೆ ಅವುನು ಖರೇ ಅಪ್ಪ, ಹುಟ್ಟಿಲ್ಲ ಬೆರಕೆಗೆ ಹುಟ್ಟಿದ ಮಗಅಂತ ರಾಜ ಸಾರಿದ. ಆ ಸುದ್ದಿ. ಎಲ್ಲಾರಿಗೂ ಗೊತ್ತಾಯ್ತು. ನಾನು ನಮ್ಮ ಅಪ್ಪಕ್ಕೆ ಹುಟ್ಟಿದ ಮಗ ಆಗಾಬೇಕು ಅಂತ ತಿಳ್ಕೊಂಡು ಅಪ್ಪನ ಬೂದಿ ತಕ್ಕ ಹೋಗಿ ನೀರಿಗೆ ಹಾಕಬೇಕು. ಅದ್ರೆ ಏನು ಮಾಡ ಬೇಕು. ಅಂತ ಯೋಚೆಮಾಡ್ಡ, ಕೊನೆಗೆ ಯೋಚೆ ಮಾಡ್ಕಂಡು ರಾಜನ ಮಗಳ ಥರ ವೇಷ ಹಾಕ್ಕಂಡು ಹೋಗ ಬೇಕು ಅಂತ ಯೋಚೆ ಮಾಡ್ಡ. ಮೈತುಂಬ ಬಂಗಾರ ಹಾಕ್ಕಂಡು ವಡವೆ ವಸ್ತು ಹಾಕ್ಕಂಡು ಹೋದ. ಅವು ಅಲ್ಲೆ ಬೂದಿ ತಾವು ಸುತ್ತ ಭರ್ತಿ ಜನ ಕೂತಿದ್ರು. ಇವುನು ಅಲ್ಲಿ ಹೋದ. ಮೈ ತುಂಬ ಬಂಗಾರ ಹಾಕಿದ್ದ. ಚಕ್ ಬುಕ್, ಚಕ್ ಬುಕ್ ಅಂತ ಬೂದಿ ಸುತ್ತ ಸುತ್ತಿದ್ದು,
ಬೂದಿ ಗುಡ್ಡೆ ಸುತ್ತ ಜನಗಳು ಕುಂತಿದ್ದರು. ಇವುಳು ಅಲ್ಲಿ ಹೋದ್ಲು. ರಾಜನ ಮಗಳ ರೀತಿ ವೇಷ ಹಾಕಿದ್ದಲ್ಲ ಅದ್ರೆ ರಾಜನ ಮಗಳು ಅಂತ ತಿಳ್ಳಂಡ್ರು. ಸುಮ್ಮೆ ಅವ್ರ ಸುತ್ತ ಕುಣಿತಿದ್ದು. ರಾಜನ ಮಗಳು ಅಂತ ತಿಳ್ಕೊಂಡ್ರು. 'ಅವುಳು ಏನು ನಿದ್ದೆ ಮಾಡ್ತಾ ಇದ್ದರಿಯಾ' ಅಂತ ಕೇಳಿದ್ದು ಕಿವಿಗಾಕಿದ್ದ ಗುಂಡು, ಸರ ಎಲ್ಲಾ ನುವೆ ಕಿತ್ತು ಬಿಳಿಸುಬುಟ್ಟು. ಬೂದಿಗೆ ಬಿದ್ದೋಯ್ತು. ಆವಾಗ ಬೂದಿ ಯನ್ನೆಲ್ಲ ತಕ್ಕಂದಿ ಹೋಗಿ ನದಿಗೆ ಹಾಕಿದ್ರು. ಎಲ್ಲಾ ಬೂದಿನುವೆ ನೀರಲ್ಲಿ ಹೋಯ್ತು. ಅಲ್ಲಿಯೂ ಕೂಡ 'ಅವುಳು ಅಯ್ಯೋ ಹೊಯ್ತಪ್ಪ ಗುಂಡು. ಅಪ್ಪಾ ಬೈತಾರೆ ಅಂತ ಕೂಗಾಡಿದ್ದು. ಎದೆ ಎದೆ ಚಚ್ಚಂಡಿ ಆಳಿದ್ದು. ಎದೆ ಎದೆ ಚಂಚ್ಚಂಡಿ ರಂಪಮಾಡ್ಕಂಡಿ ಅರಮನೆಗೆ ಹೋದಳು.
ಬೆಳ್ಳಿಗೆ ಆಯ್ತು. ರಾಜನ ಬಳಿಗೆ ಎಲ್ಲಾ ಆಳು ಮನುಷ್ಯರು ಹೋದ್ರು. ಕಳ್ಳರ ಹಿಡಿದಿದೀರಾ ಅಂತ ರಾಜ ಕೇಳ. 'ಇಲ್ಲ' ಅಂತ ಹೇಳಿದ್ರು. ಆಗ ಬೂದಿ ಕಾಯುತ್ತಿದ್ದ ಆಳುಗಳು ಹೇಳಿದ್ರು 'ನಮ್ಮ ತಂಗಿ ಬಂದಿದ್ದು (ರಾಜನ ಮಗಳು) ಅಲ್ಲಿ ಒಡವೆಗಳ ಕೆಡಗಿದ್ದು. ಎಲ್ಲವನ್ನೂ ತಕ್ಕಹೋಗಿ ಹೊಳೇಲಿ ಜಾಲಿಸಿನೋಡಿದೋ ಅಲ್ಲಿ ಒಡವೆ ಹೋಯ್ತು. ಬೂದಿಯಲ್ಲಾ ಹೊಳೇಲಿ ಹೋಯ್ತು. ಇವೆಲ್ಲ ಹೋದ್ರು. ರಾಜ ಕೇಳ 'ಕಳ್ಳನ್ನ ಹಿಡಿದ್ರ' ಅಂತ. 'ಅವು ಇಲ್ಲ' ಅಂದ್ರು.
'ರಾಜನ ಮಗಳ ವೇಷ ಹಾಕ್ಕಂಡು ಯಾರೋ ಬಂದು ಈ ರೀತಿ ಮಾಡಿರ ಬೋದು. ನೀವು ಯಾಕಿಡೀಲಿಲ್ಲ. ಅವುನು ಬಾರಿ ಬೈದ. ಆಹಾ! ನನ್ನ ಮಗಳು ಆ ಹೊತ್ನಲ್ಲಿ ಯಂಗೆ ಬಂದಾಳು. ಸೂಳೇಮುಕೃ ನೀವು ಏನು ಮಾಡ್ತಿದ್ರಿ ಅವುನ್ನ ಹಿಡಿದಂತೆ ಅಂತ ಬೈದು ಚೀಮಾರಿ ಮಾತ್ರ.ಇವುನು ಹೋದಾಗ ಕಾಯುತ್ತ ಕುಂತಿದ್ದು. ಅವುಳ ರೂಮಿನ ಕದ ತಳ್ಳು ಇವುನು ಹೋದ. ಬೇಕಾದಂತೆ ಅಡಿಗೆ ಮಾಡಿದ್ದು, ಊಟ ಕೊಟ್ಟು. ಸರಿ ಇವುನು ಬಂದಿರೋದು ಆಕೆಗೆ ಗೊತ್ತಾಯ್ತು. ಬಂಗಾರದ ಕಾಲು ತಂದಿದ್ದೀಯ ಅಂತ ಕೇಳಿದ್ರು 'ಉಂ' ತಂದಿದ್ದೇನೆ ಅಂತ ಹೇಳ್. ರಾಜನ ಮಗಳು 'ತಾ' ಅಂದ್ಲು. 'ತಕ್ಕೋ' ಅಂತ ಒಂದು ಮಂಚದ ಬಂಗಾರದ ಕಾಲು ಕೊಟ್ಟ. ಇಬ್ಬರು ಕೂತ್ಕಂಡ್ರು. ಆಟ ಆಡ್ತಿದ್ರು. 'ಇಬ್ಬರು ನೀನು ಕುಡಿ, ನಾನ್ ಕುಡಿತ್ತೀನಿ' ಅಂತ ಹೇಳಿ ಕುಡಿದ್ರು. ರಾಜನ ಮಗಳು 'ಪುಲ್' ಆಗಿ ಕುಡಿದು ಬಿಟ್ಟು, ಇವುನು ಕುಡಿಯೋನಂಗೆ ಆಟ ಮಾಡಿ ಎಲ್ಲನುನ್ಸ್ ಬಟ್ಟೆ ಒಳಕೆ ಬಿಟ್ಟಬಿಟ್ಟ. ಕೊನೆಗೆ ಬಾರಿ ತುರಾಡ್ತಿದ್ದು. ಆಕೆ ಪುಲ್ ಆಗಿ ಕುಡಿದು ಬಟ್ಟು. ಮುಖದ ತಾವುಕೆ ವಸಿ ಸವುರಂಡ. ಅವುಳಿಗೆ ಮಾತ್ರ ತುರಾಡುವಂಗೆ ಕುಡಿಸಿಬಿಟ್ಟ. ಮತ್ತೆ ಅಲ್ಲಿಂದ ಬಂಗಾರದ ಮಂಚದ ಕಾಲು ತಕ್ಕಂಡು ತನ್ನ ತಾಂಡದ ಕಡೆ ನಡೆದು ಬಿಟ್ಟ. ಸುಮಾರು ಹೊತ್ತು ಇವಳು ಮಲಗಿದ್ದು. ಬೆಳಿಗ್ಗೆ ಎದ್ದು ಹೋಗಿ ನೋಡಿದ್ರು. ಅವುನು ಎದ್ದು ಹೋಗಿದ್ದ. ರಾಜ ಈಗೂ ಸಿಗಲಿಲ್ವಲ್ಲ ಅಂತ ನೊಂದಂಡ . ಸುಮಾರು ತಿಂಗಳು ಕಳೆದೋದು. ರಾಜನ ಮಗಳು ಬಸರಿ ಅದ್ದು. ಅದು ಎಲ್ಲಾ ರೂಗು ಗೊತ್ತಾಯ್ತು. ಅದ್ರೆ ಅವುನ್ನ ಹೆಂಗೆ ಕಂಡು ಹಿಡಿಯೋದು ಅಂತ ಕಾಯ್ತು ಇದ್ದ. ಅವಮ್ಮ ಹೊಟ್ಟೆ ಆದ್ದು. ಪಿಂಡ ಬರುತ್ತ ಬರುತ್ತ ದೊಡ್ಡ ದಾಯ್ತು. ಅದ್ರು ಕೂಡ ಸಿಗಲಿಲ್ಲ. ರಾಜನ್ನೆ ಬಾರಿ ಯೋಚೆ ಆಯ್ತು. ನನ್ನ ಮಗಳ ಹತ್ತಿರ ಬಂದು ಒಂದು ಕಾಲು (ಮಂಚದ ಬಂಗಾರದ ಕಾಲು) ತಕ್ಕೊಂಡು ಹೋಗವುನಲ್ಲಾ ಅವುನೆಂತೆಯವನು ಅಂತ ಯೋಚಿಸ್ಟ. ಎಂಟು ತಿಂಗಳಾಯ್ತು, ಕೊನೆಗೆ ಒಂಭತ್ತು ತಿಂಗಳಾಯ್ತು.
a e
ರಾಜನ ಮಗಳಿಗೆ ಒಂಭತ್ತು ತಿಂಗಳಾಯ್ತು. ಅವುಳುಗೆ ಹೆರಿಗೆಯಾಯ್ತು. ಗಂಡು ಮಗು ಹುಟ್ಟಿತ್ತು. ರಾಜ ಯೋಚೆ ಮಾಡ್ಡ. ಮಗುಗೆ ಒಂದು ವರ್ಷ ತುಂಬೊ ಹೊತ್ತಿಗೆ ಬಿನ್ನಹ ಮಾಡ ಬೇಕು ( ಊಟ ಹಾಕಿಸ ಬೇಕು) ಅಂತ ಹೇಳಿ ರಾಜ ಸಾರಿಸಿದ. ಊರಿನ * ಎಲ್ಲಾ ಜನನ್ನು ಈ ಔತಣಕ್ಕೆ ಸೇರಿಸಿದ. ಕುರುಡರು ಕುಂಟರು ಎಲ್ಲಾರನ್ನು ಕೂಡ ಕರೆಸ್ಪ, ರೋಗದವು, ಮುದುಕರು ಯಾರೂನ್ನು ಕೂಡ ಬಿಡದಂತೆ ಕರೆಸ್ಟ.
ಆ ಹುಡುಗ ಒಂದು ದಿನಕ್ಕೆ ಒಂದು ವರ್ಷದವನಂಗೆ ಮಗು ಬೆಳಿತ್ತು. ಎರಡು ದಿನಕ್ಕೆ ಎರಡು ವರ್ಷ ಆದಾಂಗೆ ಮಗು ಬೆಳಿತಿತ್ತು. ಮಗುನ ಯಾರ ಮಗ ಅಂದ್ರೆ ಯಾರ ಹೆಸರ ಹೇಳೋದು ಅಂತ ರಾಜನ್ನೂ ಮಗಳಿಗೂ ಯೋಚೆ ಆಯ್ತು. ಎಲ್ಲಾರನ್ನು ಕರೆಸಿದ ( ಬಿನ್ನು ಹಾಕಿಸಿ ಅಂತ ಹೇಳಿದ) ಎಲ್ಲಾರಿಗೂ ಊಟ ಹಾಕಿಸಿದ.
ಊರವರೆಲ್ಲಾ ಬಂದ್ರು, ಊರನ್ನು ಯಾರೂ ಕೂಡ ಉಳಿಸದಂತೆ ಕರಬಂದ. ಎಲ್ಲಾರೂ ಕೂಡ ಊಟ ಮಾಡ್ಕಂಡು ಹೋದ್ರು. ಅದ್ರೆ ಒಬ್ಬೆ ಒಬ್ಬು ಮಾತ್ರಮುದುಕಿ, ಒಬ್ಬ ಕಾಯಿಲೆ ಮನುಷ್ಯನನ್ನ ಬಿಟ್ಟೆ ಅಂತ ಹೇಳಿದ್ದು. ರಾಜ ಹೋಗಿ ಕರಬಾ ಅಂತ ಹೇಳ, ಹೋದ್ರು. ನೀವು ಬರಬೇಕಂತೆ ಅಂತ ಆಳುಗಳು ಹೋಗಿ ಕರಂಡಿ ಬಂದ್ರು.
ಈ ಹುಡುಗ ಮೈ ಗೆಲ್ಲ ಬೆಲ್ಲದ ನೀರು ಹಾಕ್ಕಂಡಿ ರೋಗದ ಮನುಷ್ಯನ ರೀತಿ ಯಲ್ಲಿ ನಳ್ಳಾಡುತ್ತಿದ್ದ. ನನ್ನ ಕಂಡು ಹೋಗಬ್ಯಾಡಿ ಅಂತ ಹೇಳ. ಊಟ ಮಾಡಿದ್ರೆ ಕಕ್ಕಬೇಕಾಗ್ತದೆ ಅಂತ ಹೇಳ್ತ. ಅವು ಅದ್ರೂ ರಾಜನ ಅಪ್ಪಣೆ ಅಂತ ಕರಹೋದ.
ಅಲ್ಲಿ ನಾನು ದೂರದಲ್ಲಿದ್ದೀನಿ ಹೊಲ ಸಿನವುನಾದ್ದರಿಂದ ನೀನು ಒಳಗೆ ಹೋಗು ಅಂತ ಹೇಳಿ ತಾಯಿಯ ಜೊತೆ ಹೋದ. ರಾಜ ಊಟ ಮಾಡಿಕೆ ಬಂದವುರೆಲ್ಲ ಊಟ ಕೊಟ್ಟು. ನಂತರ ಮಗು ಬಿಟ್ಟು ಬಿಡ್ತೀದ್ರು. ಆಗ ಆ ಮಗು ಈ ಹುಡುಗನ ಬಳಿಗೆ ಹೋಯ್ತು. ರಾಜಹೇಳ, ನೀನು ಈ ಹೊತ್ನಲ್ಲಿ ನಿಮ್ಮ ಅಪ್ಪ ಯಾರು ಅವ್ರ ಬಳಿ ಹೋಗಿ ತೊಡೆಯ ಮೇಲೆ ಕುಂತ್ಸಬೇಕು ಅಂತ ಹೇಳಿದ್ದ. ಅದೇ ರೀತಿ ಆ ಅಸುಮಗು ಅವುನ ತೊಡೆದು ಮೇಲೆ ಹೋಗಿ ಕುಂತ್ಸತ್ತು.
ಆಗ ಅವುನ್ನ ಉತ್ತರಿ ಬಿಚ್ಚಿಸಿದ್ರು, ಅವುನು ಯಾವ ಜಾತಿ ಅದ್ರೂ ಪರವಾಗಿಲ್ಲ. ಅಂತ ಕಂಡಿ ಬಂದು ಇವುನೆ ನಿನ್ನ ಗಂಡ ಅಂತ ಹೇಳಿ ಮದ್ಯೆ ಮಾಡಿಕೆ ರೆಡಿಮಾಡಿದ್ರು. ಆವುಗ್ಗೆ ಸ್ನಾನ ಮಾಡಿಸಿದ್ರು. ರಾಜ ಅವು ಒಂದು ಅಂತಸ್ತಿನ ಮನೆ ಕೊಟ್ಟು ಮಡಿಕ್ಕಂಡ. ನಾನೇ ತಾಳ ಬಾರಿಸ್ಕಂಡಿ ನದಿಗೆ ಬೂದಿ ಹಾಕಿದೆ, ಒಂದು ಬಂಗಾರದ ಕಾಲುಕೊಟ್ಟ ಒಂದು ರಾತ್ರಿ ಮಗಳ ಕೂಡಿದ್ದೆ ಅಂತ ಅಂದ. ರಾಜನ ಮಗಳು ಒಪ್ಪಂದ್ದು. ಊರೆಲ್ಲನು ಕರೆಸಿ ಮದುವೆ ಮಾಡಿದ. ಊರಿಗೆಲ್ಲ ಬಿನ್ನ ಹಾಕಿಸಿದ. ರಾಜ, ರಾಜನ ಮಗಳು, ಈ ಹುಡುಗ ಎಲ್ಲಾ ಸುಖವಾಗಿದ್ರು.
ಅವುನ್ನ ಮನೆಗೆ ಕಳುಹಿಸಿ ರಾಜ ಆಳುಗಳ ಕೈಲಿ ಮತ್ತೆ ಡಂಗುರ ಸಾರಿಸಿದ. - ರಾಜ' ಖರೆ ಅವ್ರ ಅಪ್ಪಕ್ಕೆ ಹುಟ್ಟಿದ್ದವುನಾದ್ರೆ ಅವುನು ತಕ್ಕಹೋಗಿರೋ ಮೂರು ಬಂಗಾರದ ಕಾಲಲ್ಲಿ ಒಂದು ತಂದು ನನ್ನ ಮಗಳಿಗೆ ಕೊಟ್ಟು ಅವುಳ ಜೊತೆ ಮಲಗಿದ್ದು ಹೋಗಲಿ ಅಂತ ಸಾರಿಸಿದ.
ರಾಜನ ಮಗಳು ಬಾರಿ ಸುಂದರಿ, ಬೇಕಾದಂತಹ ಒಡವೆ ವಸ್ತ್ರ ಹಾಕ್ಕಂಡು ಬಂದು, ರಾಜನ ಮಗಳ ಬಳಿಗೆ ಒಂದು ಬಂಗಾರದ ಕಾಲ ಹಾಕ್ಕಂಡು ಬ್ಯಾಗನ್ನಲ್ಲಿ ಹಿಟ್ಕಂದಿ ಹೋದ (ಮಂಚದ ಚಿನ್ನದ ಕಾಲು) ಸುರ ಸುಂದರಿ ಎಚ್ಚರವಾಗಿದ್ದು.
No comments:
Post a Comment