Thursday, February 26, 2026

Story 07- ದೇವಲೋಕದ ಹೂವು

  VIDYAVANI       Thursday, February 26, 2026
Story 07- ದೇವಲೋಕದ ಹೂವು

ಒಂದು ತಾಂಡದಲ್ಲಿ ಒಬ್ಬ ಮುದುಕಿ ಇದ್ದಳು. ಅವಳಿಗೆ ಮಕ್ಕಳಿರಲಿಲ್ಲ. ಅವರು ಒಬ್ಬ ಸಾಕುಮಗನನ್ನು ಸಾಕಿದ್ದಳು. ಅದೇ ತಾಂಡದಲ್ಲಿ ಒಬ್ಬ ರಾಜ ಇದ್ದ. ಆ ರಾಜನ್ ಒಂದು ಕುರು (ಗಾಯ) ಆಗಿತ್ತು. ಆ ತಾಂಡದಲ್ಲಿ ಬೇಕಾದಷ್ಟು ಜನ ಇದ್ರು. ರಾಜ ಏನು ಮಾಡೋ ಆ ತಾಂಡದ ಜನ, ಪಂಡಿತ್ರು. ಪಾಮರಾದಿಯಾಗಿ ಎಲಾರನ್ನೂ ರಾಜ ತನ್ನ ಆಸ್ಥಾನಕ್ಕೆ ಡಂಗುರ ಹೊಡೆದು ಸಾರಿಸಿ ಕರೆಸಿದ. ತಾಂಡದ ಯಜಮಾನರ ಸಮ್ಮುಖದಲ್ಲಿ 'ಅಪ್ಪಾ ಮಹಾಜನಗಳೇ ನೀವೆಲ್ಲ ಇದ್ದೀರಿ, ನಿಮ್ಮಲ್ಲಿ ಯಾರಾದ್ರು, ಒಬ್ಬರು ನನ್ನ ಕುರು ವಾಸಿಮಾಡೋರು ಇದ್ರೆ ನಗ್ಗೆ ಔಸ್ಟಿಕೊಡಿ' ಅಂತ ಕೇಳಿಕೊಂಡ.

ಆ ಹೊತ್ತಿನಲ್ಲಿ ನೆರೆದಿದ್ದ ಯಾರೂ ಕೂಡ ಮಾತಾಡ್ಲಿಲ್ಲ. ಆ ತಾಂಡದ ಯಜ ಮಾನ ಎದ್ದು ನಿಂತಿಕೊಂಡು ಕೈಮುಗಿದು 'ಮಹಾಸ್ವಾಮಿ ನನ್ನದೊಂದು ಮಾತು ಡಿಸ್ಟ್ರಿ ಹಾಕಿದ್ರೆ ಕುರು ಮಾಯೋದಿಲ್ಲ. 'ದೇವಲೋಕದ ಹೂವು ತಂದು ನೇವಳಿಸ ಬೇಕು' ಅಂತ ಹೇಳ್ತ. ಮಹಾರಾಜ ಕೇಳೋ, ಆ ಗುಂಪಿನಲ್ಲಿದ್ದವುರಾರು ಕೂಡ ಕೈ ಎತ್ತಲಿಲ್ಲ. ತರೊಕ್ಕೇ ಆಗಲ್ಲ ಅನ್ನೋರು ಕೈ ಮೇಲೆ ಎತ್ತ ಬೇಡಿ' ಅಂತ ಹೇಳಿದ್ರು. ಆ ಒಂದು ಸಭೆಗೆ ರಾಜನ ಪರಿವಾರದವುರೆಲ್ಲ ಸೇರಿದ್ರು. ರಾಜ ಕೇಳ ತನ್ನ ಪರಿವಾರದವರಿಗೆ 'ಈ ತಾಂಡದಲ್ಲಿ ಯಾರನ್ನೂ ಬಿಡದಂತೆ ಕರಬಂದಿದ್ದೀರಿಯೋ ಅಥವಾ ಯಾರನ್ನಾದರೂ ಬಿಟ್ಟಿದ್ದರಿಯೋ 'ಅಂತ ಕೇಳಿದ. ಆಗ ಪರಿವಾರದವುರು 'ಒಬ್ಬ ಮುದುಕಿ, ಹಾಗೆಯೇ ಆ ಮುದುಕಿಯ ಸಾಕು ಮಗನನ್ನು ಬಿಟ್ಟು ಎಲ್ಲಾರನ್ನೂ ಕಕ್ಕೊಂಡು ಬಂದಿದ್ದೇವೆ'ಅಂತ ಹೇಳಿದ್ರು. 'ಆಯ್ತು 'ಹೋಗಿ ಆ ಇಬ್ಬರನ್ನೂ ಕರಬನ್ನಿ ಅಂತ ಆಜ್ಞೆಮಾಡಿದ. ಪರಿವಾರದವರು 'ಆಯ್ತು ಸ್ವಾಮಿ' ಅಂತ ಹೇಳಿ ಹೋದರು.

ರಾಜನ ಪರಿವಾರದವರು ಹೋಗಿ ಆ ಮುದುಕಿ ಮತ್ತು ಮುದುಕಿಯ ಸಾಕಿದ ಮಗನನ್ನು 'ರಾಜನ ಅಪ್ಪಣೆಯಾಗಿದೆ ನೀವು ಬರಬೇಕು' ಅಂತ ಹೇಳಿದರು. ರಾಜನ ಆಚೆಗೆ ಒಪ್ಪಿ ಈ ಮುದುಕಿ ಮತ್ತು ತನ್ನ ಸಾಕು ಮಗ ಇಬ್ಬರು ಕೂಡ ರಾಜನ ಪರಿವಾರದ ಜೊತೆ ಬಂದರು.

ರಾಜ ಕೇಳ್ಳ 'ಅಲ್ಲಾ ಮುದುಕಿ ಎಲ್ಲಾ ಜನ ಬಂದದ್ರೆ ನೀವ್ಯಾಕೆ ಬದ್ಧಿಲ್ಲ 'ಅಂತ ಅಂದು ಮುದುಕಿ 'ನನ್ನ ಮೈ ಚೆನ್ನಾಗಿಲ್ಲ, ಆದ ಕಾರಣ ನಾವು ಬರಿಕೆ ಆಗಲಿಲ್ಲ ಅಂತ ಹೇಳಿದ್ರು.

ಆಯ್ತು ಈ ಮುಖ್ಯವಾದ ವಿಚಾರವೊಂದಿದೆ ಅಂತ ರಾಜ ತನ್ನ ಪರಿವಾರದವರ ಜೊತೆ ಹೇಳ, ರಾಜ ಕೇಳ'ಯಾರಾದ್ರು ಒಬ್ರು ಹೋಗಿ ನೀವ್ಯಾರಾದ್ರು ಕೂಡಹೋಗಿ ಕುರು ವಾಸಿಯಾಗುತ್ತೆ ಅಂತ ಯಜಮಾನರು ಹೇಳದ್ರೆ, ನೀವ್ಯಾರಾದ್ರು ಕೂಡ ಹೋಗಿ ತಂದ್ರೆ ಒಳ್ಳೆಯದಾಗುತ್ತೆ ಅಂತ ಹೇಳ. ಯಾರು ಕೂಡ ಕೈಯನ್ನ ಮೇಲೆ ಎತ್ತಲಿಲ್ಲ. ಈ ಮುದುಕಿಯ ಸಾಕಿದ ಮಗ ಇದ್ದವು ನಾನು ಹೋಗಿ ದೇವಲೋಕದ ಹೂವು ತರೀನಿ ಒಬ್ಬ. ನೀನು ಹೋದ್ರೆ ಅಂತ ಹೇಳ್ವ. ಮುದುಕಿ ಹೇಳಿದ್ದು. ಬ್ಯಾಡ ಕನಪ್ಪಾ ಇರೋನು: ನನ್ನ ನೋಡ್ಕಳೋನು ಯಾರೂ?ನೀನು ಮಾತ್ರ ಹೋಗಬ್ಯಾಡ ಅಂತ ಬೇಕಾದಷ್ಟು ಗೋಗರೆದು ಕೇಳಿಕೊಂಡು. ಈ ಹುಡುಗ ಕೇಳ್ಳಿಲ್ಲ. ರಾಜನ ತಾವುಕೆ ಹೋಗಿ ಇಚ್ಛೆ `ತಕ್ಕಬಿಟ್ಟ.

ಮುದುಕಿಗೆ ಬಾರಿಯೋಚೆ ಆಗುಬಿಟ್ಟು. ಅಪ್ಪ ನನ್ನೆ ಊಟ ಬಟ್ಟಿಗೆ ಏನು ಮಾಡ್ತಿಯೇ ಅಂತ ಕೇಳಿದಳು. ನಾನು ಮಾತ್ರ ಒಪ್ಪಂದಿನ್ನಿ ದೇವು ಏನು ಮಾಡ್ತಾನೆ ಅಂಗ ಆಗ್ಲಿ ಅಂತ ಆ ಹುಡುಗ ಹೇಳ, ರಾಜ ಆ ಹುಡುಗನ್ನ ತನ್ನ ದಂಡೈ ಕರೆದ. 'ಏನಪ್ಪಾ ಹುಡುಗ ಈ ಇಚ್ಛೆ ತಕ್ಕಂಡಿದ್ದೀಯೆ ಈಗ ನೀನು ಎಷ್ಟು ದಿನಕ್ಕೆ ಆ ದೇವಲೋಕದ ಹೂವ ತರೀಯೇ 'ಅಂತ ಹೇಳು ಅಂದ. ಈ ಹುಡುಗ ಒಂದು ದಿನ ಕಮ್ಮಿ ಇಪ್ಪತ್ತು ದಿನಕ್ಕೆ ನಾನು ನಿಮಗೆ ದೇವಲೋಕದ ಹೂವ ತಕ್ಕಂದಿ ಬಂದು ಕೊಡ್ತೀನಿ ಅಂತ ಒಪ್ಪಂದ. ರಾಜ ಆ ಹುಡುಗನ ಮಾತ್ರೆ 'ಆಯ್ತು 'ಅಂತ ಒಪ್ಪಂದು ಅವು ಏನು ಬೇಕು, ಏನು ಕೇಳ್ತಾನೆ, ಹಣಕಾಸು, ಬೆಳ್ಳಿ ಬಂಗಾರ ಎಲ್ಲಾನುವೆ ಕೊಟ್ಟುಕಳುಹಿಸಿಕೊಟ್ಟ.

ಮುದುಕಿಯ ಸಾಕಿದ ಮಗ ಮತ್ತು ದುಡ್ಡು ಕೊಟ್ಟು ನಾನು ಬರೋತನಕವು ಈ ದುಡ್ಡು ಕಾಸು ತಕ್ಕಂದಿ ಖರ್ಚು ಮಾಡ್ತಾ ಇರು ಅಂತ ಹೇಳಿ ಹೋಗಕ್ಕೆ ರೆಡಿ ಯಾದ. ಆಗ ಮುದುಕಿ ಆಳ ಇದ್ದು. ಆ ಹುಡುಗ 'ನನ್ನೆ ಏನು ತೊಂದ್ರೆ ಆಗಕಿಲ್ಲ, ನೀನು ಒಂದು ರೊಟ್ಟಿ ಬುತ್ತಿ ಕಟ್ಟಿಕೊಡು 'ಅಂತ ಕೇಳ್ತ. ಆ ಮುದುಕಿಗೆ ಧೈರ್ಯ ತಂದುಕೊಟ್ಟ. ನಾನು ಬರ್ತೀನಿ ಅಂತ ಹೇಳಿ ಅವುಗಳಿಂದ ಬಿಡಿಸಿಕೊಂಡ.

ಈ ಹುಡುಗ ಹೋದ, ಹೋದೆ ಹೋದ, ಅಟ್ಟಡವಿ, ಅರಣ್ಯಕ್ಕೆ ಹೋದ. ಆ ಹೊತ್ತಿಗೆ ಸಂಜೆ ಆಯ್ತು ಹೊತ್ತು ಮುಳುಗಿತು. ಅದೊಂದು ದೊಡ್ಡ ಬಸರಿ ಮರ ಕಾಯ್ತು. ಅಲ್ಲೆ ಹೋದ. ಕತ್ತಲೆಯಾಯ್ತು. ಮಲುಗಬೇಕು ಅಂತ ಹೇಳಿ ಬುತ್ತಿ ತಿಂದು ಅಲ್ಲೆ ಮರದ ಪೊಟರೆ ಒಳಗೆ ಸೇರಂಡ. ಆ ಮರದ ಪೊಟರೆ ಒಳಗೆ ಸೇರಂಡು ಕಾಲ ಹಾಕಿದ. ನಿದ್ದೆ ಬಂತು ಅಲ್ಲೇ ಮಲಗಿದೆ. ಬೆಳಿಗ್ಗೆ ಆಯ್ತು. ಮೇಲಕ್ಕೆ ಅಂತ್ಯಂದಿ ನೋಡ್ಕ, ಆ ಮರದ ಕೊಂಬೆ ಮೇಲೆ ಒಂದ ದೊಡ್ಡ ಪೆಟ್ಟಿಗೆ ಇತ್ತು. ಆ ಪೆಟ್ಟಿಗೆ ನೋಡಿ ಇವು ಬಾರಿ ಆಶ್ಚರ್ಯ ಆಯ್ತು. ಅದನ್ನ ನೋಡ ಬೇಕು ಅಂತ ಹೇಳಿ ಇಚೆಗೆ ಬಂದ.

ಆ ಕಾಡಿಗೊಬ್ಬ ರಾಜ. ಅವುನ ಮಗಳು ಸತ್ತಿದ್ದು. ಅವ್ರುನ್ನ ಭೂಮಿ ಮೇಲೆ ಮಣ್ಣು ಮಾಡ ಬ್ಯಾಡು. ಮರದ ಮೇಲೆ ಮಣ್ಣು ಮಾಡಬೇಕು ಅಂತ ಶಾಪ ಇತ್ತು. ಆದ್ರಂತೆ ಅವುನು ಮರದ ಕೊಂಬೆ ಮೇಲೆ ಮಣ್ಣು ಮಾಡ್ಡ. ಈ ಹುಡುಗ ಮರದ ಪೊಟ್ರೆಲಿ ಮಕ್ಕಂಡು ಮೇಕ್ಕೆ ನೋಡ್ಡ. ಅವುನ ತಲೆ ನೇರಕ್ಕೆ ಆ ಪೆಟ್ಟೆ ಕಾಣಿಸ್ತು. ಇದೇನು ಕಾಯಲ್ಲ, ಹಣ್ಣಲ್ಲ ಪೆಟ್ಟೆ ಯಾಕೆ ಕಟ್ಟಿದ್ದಾರೆ ಅಂತ ಹೇಳಿ ಎದ್ದು ಹೋಗಿ ಮರ ಹತ್ತಿದ. ಮರ ಏರಿ ಕೆಳಿಕ್ಕೆ ಪೆಟ್ಟೆ ಇಳಿಸ್ಕಂಡ. ಆ ಪೆಟ್ಟಿಗೆ ತಗುದು ನೋಡ್ತಾನೆ. ಗಾಳಿಗೆ ಯಣ ನಾತ ಹೊಡೆತ್ತಿತ್ತು. 'ಅರೆ ಇವುನವ್ವನಡಾಯಂತ ದುರುನಾತ'ಅಂತ ಅಂದ. ಈ ಪೆಟ್ಟೆ ಒಳಕ್ಕೆ ಯಣ ಹಾಕವೆಲ್ಲ ಅಂತ ಹೇಳಿ ಮತ್ತೆ ಅಂಗ ಮುಚ್ಚಿಬಿಟ್ಟ.

ಆ ಹುಡುಗ ಆ ಪೆಟ್ಟೆ ಮುಚ್ಚಳ ತಗುದ್ ಬಿಟ್ಟ, ಆ ಯಣದ ವಾಸ್ತೆ ತುರು ಹೋಗಿ ಯಮನ ಲೋಕಕ್ಕೆ ಬಡಿತು. ಯಮ 'ಆಹಾ! ಅಂತ ಊಟ ಎಂತ ಊಟ'ಅಂತ ಹೇಳಿ ಕಳಗಲ ಲೋಕಕ್ಕೆ ಓಡಿಬಂದ. ಎಲ್ಲನುವೆ ನೋಡ್ಡ. ಪೆಟ್ಟಿಗೆ ಒಳುಗೆ ಯಣ ಇತ್ತು. ಯಾರು ತಂದವುರು ಈ ಹೆಣವಾ ಅಂತ ಹೇಳಿ ಆ ಮರದ ಬೊಡ್ಡಿಯ ಯಮ ಸುತ್ತರಿದ. ಆ ಮರದ ಬೊಡ್ಡಿ ಒಳಗೆ ಸೇರಬಿಟ್ಟಿದ ಈ ಹುಡುಗ ಹೊರಕ್ಕೆ ಚೆಂಡು ಚಾಚಿದ. ಯಮ ಸುತ್ತ ಮುತ್ತ ತಿರುಗುತ್ತಿದ್ದ. ಯೋಚಿಸ್ಟ 'ಈಗ ಇವುನ ಕೋಪಕ್ಕೆ ನಾನು ಸಿಕ್ಕಿದ್ರೆ ನನ್ನ ತರಿದು ಬಿಡ್ತಾನೆ'ಅಂತ ನೋಡ್ತ ನಿಂತ್ಕಂಡ.

ಯಮ ಅಲ್ಲಿ ಯೂರೂ ಇಲ್ಲದಿದ್ದ ನೋಡಿ. ಆಹಾ! ಯಂತ ಚಂದದ ಹೆಣ್ಣು ಅಂತ ಹೇಳಿ ತನ್ನ ತುರಬಿನಲ್ಲಿದ್ದ ಜೀವಬರಿಸೊ ಮಂತ್ರದ ಜೋಳದ ಕಡ್ಡಿಯ ಕಿತ್ಸೆಂಡು, ಮಂತ್ರ ಹೊಡೆದು ಆ ಪೆಟ್ಟೆಲ್ಲಿದ್ದ ಯಣದ ಬದುಕಿಸಿದ. ಆ ಹೆಣ್ಣು ಮಗಳು ಬಂಗಾರ ಹೊಳೆಯುವಂತೆ 'ಪಳಪಳ' ಹೊಳೆತ್ತಿದ್ದು. ಆಗ ಯಮ ಆಹಾ!ಯಂತ ಹೆಣ್ಣು, ಬಂಗಾರದಂತ ಹೆಣ್ಣು ಅಂತ ಹೇಳಿ ನೋಡ್ಡ. 'ಯಂಗೆ ತಿನ್ನಲಿ, ಯಂಗೆ ತಿನ್ನಲಿ' ಅಂತ ಯೋಚಿಸ್ತಿದ್ದ. ಇನ್ನು ಕೂಡ ನನ್ನ ಮಗಳಿದ್ದಂಗೆ ಅಂತ ಅಂದ್ಮಂಡು ಸುಮ್ಮ ಅದ.

ಆ ಮರದ ಬೊಡ್ಡಿ ಒಳಗೆ ಕುಂತಿದ್ದ ಹುಡುಗ 'ಈ ಹುಡ್ಲಿ ತಕ್ಕ ಹೋಗಿ ತನ್ನ ಜೊತೆ ಮಾಡಿಕ್ಕಬೇಕು'ಅಂತ ಹೇಳಿ ನೋಡ್ತ ಕುಂತಿದ್ದವುನು ಯಮುನ್ನೆ ಕೊಳ್ಳಿ ತಕ್ಕಂದಿ ಒಂದು ಕೈಯ ಕಡುದು ಬಿಟ್ಟಿ, . ಆಹುಡುಗ ಯಮನೆ 'ಆ ಹುಡ್ಡಿ ಯಾರು ಅಂದ್ಯಂಡಿದ್ದೀಯ ಅದು ನನ್ನ ಸೇರ ಬೇಕಾದ ಹೆಣ್ಣು' ಅಂದ. ಆಯ್ತು ನನ್ನ ಪ್ರಾಣ ಉಳಿಸು ಅಂತ ಯಮ ಕೂಗಿದ. ಓಹೋಓಹೋ ಆಯ್ತು ನೀನೇಳ್ಕೊಂಗೆ ಕೇಳೀನಿ, ನೀನು ಏನು ಕೇಳ್ತಿಯ ಕೊಡ್ತೀನಿ ಅಂತ ಯಮ ಹೇಳ್ತ. ಆಯ್ತು ಅಂತ ಹೇಳಿ ಈ ಹುಡುಗ ಒಪ್ಪಂದ. ಎಲ್ಲಿ ನಿನ್ನ ಮನೆ ಅಂದ ಹುಡುಗ. ಅರ್ಧ ಮೈಲಿ ದೂರದಲ್ಲಿ ಅದೆ. ನಾಳೆ ಬತೀನಿ ಇದೆ ಟೈಮುಗೆ ಅಂತ ಹೇಳಿ ಯಮ ಹೋದ.

ಈ ಹುಡುಗ ಆ ಆದಿಕ್ಕಂಡಿದ್ದ ಹುಡುಗಿಯ ಕೇಳ. 'ನಿಮ್ಮ ಅಪ್ಪನ ಮನೆಗೆ ಹೋಗ್ತಿಯ'ಅಂತ ಕೇಳ. 'ಆಯ್ತು 'ಅಂತ ಹೇಳಿದ್ದು. ಆ ಹುಡುಗಿಯ ಕರಂಡಿ ಅವ್ರ ಮನೆಗೆ ಬಂದ. ಅವ್ರ ತಂದೆ ತಾಯಿಗಳು ಸತ್ತ ತಮ್ಮ ಮಗಳು ದೆವ್ವ ಆಗಿ ಬಂದ ಅಂತ ಹೆದುರು ಬಿಟ್ರು. ಆಗ ಊರಿನ ಹೌಹಾರಿದ್ರು. ಈ ರೀತಿ ಹುಡುಗಿ ಬಂದಿದ್ದ ನೋಡಿ ಊರಿನ ಜನಕ್ಕೆಲ್ಲಾ ಗಾಬರಿ ಆಯ್ತು. ಅದ್ರು ಸತ್ತಿದ್ದ ಮಗಳು ಬಂದದ್ದಕ್ಕೆ ಯಾರೂ ಕೂಡ ಸಮ್ಮತಿಸಲಿಲ್ಲ. ಹುಡುಗ ಜೊತೆಲಿ ಬಂದು ಅವುಳು 'ಇದೇ ನಮ್ಮ ಮತ್ತೆ ಅವುರೆ ನಮ್ಮ ಅಪ್ಪ ಅವ್ವರು' ಅಂತ ಹೇಳಿದ್ದು. ಆ ಹುಡುಗ ಕೇಳ್ತ. 'ಈ ಹುಡಗಿಯ ಎಲ್ಲೆ ಕಳಿಸಿದ್ರಿ'ಅಂದ. ನಮ್ಮ ಮಗಳು ಸತ್ತಿದ್ದು ಒಪ್ಪ ಮಾಡಿದ್ದೂ ಅಂತ ಹೇಳಿದ್ರು. ಈ ಹುಡುಗಿಯ ಭೂಮಿಲಿ ಮಣ್ಣು ಮಾಡಿಲಿಲ್ಲ. ಅಂತರದಲ್ಲಿ ಮಣ್ಣು ಮಾಡಿದೊಅಂತ ಹೇಳಿದ್ರು. ಮತ್ತೆ ಬಂದವುಳೆಲ್ಲಾ ಅಂತ ಬಾರಿ ಹೌಹಾರಿದ್ರು. 'ಈ ಮಗು ನಮ್ಮನೆಗೆ ಬ್ಯಾಡ ನೀನೇ ಮದುವೆ ಮಾಡೋ ಹೋಗು' ಅಂದ್ರು. 'ನೀನು ಮದ್ದೆ ಅದ್ರೆ ನಿನ್ನೆ ಬಂಗಾರ, ಬೆಳ್ಳಿ, ಚಿನ್ನ, ದುಡ್ಡು, ಕಾಸು, ಮೇಲಂತಸ್ತು ಬೇಕಾದಂಗೆ ಜಾಗೀರು ಎಲ್ಲಾನುವೆ ಕೊಡ್ತೀನ' ಅಂತ ಹೇಳಿದ್ರು.

ಈ ಹುಡುಗ ಆ ಹುಡುಗಿಯ ಅಪ್ಪ ಅವ್ವರ ಮಾತ್ತೆ 'ಆಯ್ತು ಅಂತ ಒಪ್ಪಂದಿ ನಾನು ಬರೋತನಕ ಇಲ್ಲೇ ಇಲ್ಲಿ ಅಂತ ಹೇಳಿ ಹೋದ.

ಹೋದೆ ಹೋದ, ಹೋದೆ ಹೋದ, ನೆನ್ನೆ ಮಲಗಿದ್ದ ಮರದ ತಾವುಕೆ ಹೋದ. ಅಲ್ಲಿ ಅಗ್ಗೆ ಯಮ ಮಾತಿನಂತೆ ಕಾಯ್ತು ಕುಂತಿದ್ದ. ಯಮ ಅಲ್ಲಿಂದ ನನ್ನ ಮನೆ ಹತ್ತಿರಕ್ಕೆ ಕರಂಡಿ ಹೋದ. ನನ್ನೆ ಮೋಸ ಮಾಡಿದ್ರೆ ನಿನ್ನೆ ಎರಡು ಕೈ, ಎರಡು ಕಾಲು ತಲೆ ಎಲ್ಲಾನು ಸವುರ್ ಬಿಡ್ತೀನಿ ಅಂತ ಯಮುನ್ನೆ ಈ ಮುದುಕಿಯ ಸಾಕಿದ ಮಗ ಹೆದರಿಸಿದ. ಅದ್ರೆ ಯಮ ಬ್ಯಾಡ ಕನಪ್ಪಾ ನಿನ್ನೆ ಏನು ಬೇಕು ಕೊಡ್ತೀನಿ ಅಂತ ಹೇಳ್ದ .

ಆ ಮರದ ಬೊಡ್ಡಿ ಒಳಗೆ ಕುಂತಿದ್ದ ಹುಡುಗ 'ಈ ಹುಡ್ಲಿ ತಕ್ಕ ಹೋಗಿ ತನ್ನ ಜೊತೆ ಮಾಡಿಕ್ಕಬೇಕು ಅಂತ ಹೇಳಿ ನೋಡ್ತ ಕುಂತಿದ್ದವುನು ಯಮುನೈ ಕೊಳ್ಳಿ ತಕ್ಕಂದಿ ಒಂದು ಕೈಯ ಕಡುದು ಬಿಟ್ಟಿ, ಆಹುಡುಗ ಯಮನ್ನೆ 'ಆ ಹುಡ್ಲಿ ಯಾರು ಅಂದ್ಯಂಡಿದ್ದೀಯ ಅದು ನನ್ನ ಸೇರ ಬೇಕಾದ ಹೆಣ್ಣು' ಅಂದ. ಆಯ್ತು ನನ್ನ ಪ್ರಾಣ ಉಳಿಸು ಅಂತ ಯಮ ಕೂಗಿದ. ಓಹೋಓಹೋ ಆಯ್ತು ನೀನೇಳ್ತಂಗೆ ಕೇಳೀನಿ, ನೀನು ಏನು ಕೇಳ್ಳಿಯ ಕೊಡ್ತೀನಿ ಅಂತ ಯಮ ಹೇಳ್ತ. ಆಯ್ತು ಅಂತ ಹೇಳಿ ಈ ಹುಡುಗ ಒಪ್ಪಂದ. ಎಲ್ಲಿ ನಿನ್ನ ಮನೆ ಅಂದ ಹುಡುಗ. ಅರ್ಧ ಮೈಲಿ ದೂರದಲ್ಲಿ ಅದೆ. ನಾಳೆ ಬರ್ತೀನಿ ಇದೆ ಟೈಮುಗೆ ಅಂತ ಹೇಳಿ ಯಮ ಹೋದ.

ಈ ಹುಡುಗ ಆ ಅದಿಕ್ಕಂಡಿದ್ದ ಹುಡುಗಿಯ ಕೇಳ. 'ನಿಮ್ಮ ಅಪ್ಪನ ಮನೆಗೆ ಹೋಗ್ತಿಯ ಅಂತ ಕೇಳ್ಳ. 'ಆಯ್ತು 'ಅಂತ ಹೇಳಿದ್ದು. ಆ ಹುಡುಗಿಯ ಕರಂಡಿ ಅವ್ರ ಮನೆಗೆ ಬಂದ. ಅವ್ರ ತಂದೆ ತಾಯಿಗಳು ಸತ್ತ ತಮ್ಮ ಮಗಳು ದೆವ್ವ ಆಗಿ ಬಂದ ಅಂತ ಹೆದುರು ಬಿಟ್ರು. ಆಗ ಊರಿನ ಹೌಹಾರಿದ್ರು. ಈ ರೀತಿ ಹುಡುಗಿ ಬಂದಿದ್ದ ನೋಡಿ ಊರಿನ ಜನಕ್ಕೆಲ್ಲಾ ಗಾಬರಿ ಆಯ್ತು. ಅದ್ರು ಸತ್ತಿದ್ದ ಮಗಳು ಬಂದದ್ದಕ್ಕೆ ಯಾರೂ ಕೂಡ ಸಮ್ಮತಿಸಲಿಲ್ಲ. ಹುಡುಗ ಜೊತೆಲಿ ಬಂದು ಅವುಳು 'ಇದೇ ನಮ್ಮ ಮತ್ತೆ ಅವುರೆ ನಮ್ಮ ಅಪ್ಪ ಅವ್ವರು' ಅಂತ ಹೇಳಿದ್ದು, ಆ ಹುಡುಗ ಕೇಳ. 'ಈ ಹುಡಗಿಯ ಎಲ್ಲೆ ಕಳಿಸಿದ್ರಿ'ಅಂದ. ನಮ್ಮ ಮಗಳು ಸತ್ತಿದ್ದು ಒಪ್ಪ ಮಾಡಿದ್ದೂ ಅಂತ ಹೇಳಿದ್ರು. ಈ ಹುಡುಗಿಯ ಭೂಮಿಲಿ ಮಣ್ಣು ಮಾಡಿಲಿಲ್ಲ. ಅಂತರದಲ್ಲಿ ಮಣ್ಣು ಮಾಡಿದೊಅಂತ ಹೇಳಿದ್ರು. ಮತ್ತೆ ಬಂದವುಳೆಲ್ಲಾ ಅಂತ ಬಾರಿ ಹೌಹಾರಿದ್ರು. 'ಈ ಮಗು ನಮ್ಮನೆಗೆ ಬ್ಯಾಡ ನೀನೇ ಮದುವೆ ಮಾಡೋ ಹೋಗು' ಅಂದ್ರು. 'ನೀನು ಮದ್ದೆ, ಅದ್ರೆ ನಿನ್ನೆ ಬಂಗಾರ, ಬೆಳ್ಳಿ, ಚಿನ್ನ, ದುಡ್ಡು, ಕಾಸು, ಮೇಲಂತಸ್ತು ಬೇಕಾದಂಗೆ ಜಾಗೀರು ಎಲ್ಲಾನುವೆ ಕೊಡ್ತೀನ' ಅಂತ ಹೇಳಿದ್ರು.

ಈ ಹುಡುಗ ಆ ಹುಡುಗಿಯ ಅಪ್ಪ ಅವ್ವರ ಮಾತ್ತೆ ;ಆಯ್ತು ಅಂತ ಒಪ್ಪಂದಿ ನಾನು ಬರೋತನಕ ಇಲ್ಲೇ ಇರಿ ಅಂತ ಹೇಳಿ ಹೋದ.

ಹೋದೆ ಹೋದ, ಹೋದೆ ಹೋದ, ನೆನ್ನೆ ಮಲಗಿದ್ದ ಮರದ ತಾವುಕೆ ಹೋದ. ಅಲ್ಲಿ ಅಗ್ಲೆ ಯಮ ಮಾತಿನಂತೆ ಕಾಯ್ತು ಕುಂತಿದ್ದ. ಯಮ ಅಲ್ಲಿಂದ ನನ್ನ ಮನೆ ಹತ್ತಿರಕ್ಕೆ ಕರಂಡಿ ಹೋದ. ನನ್ನ ಮೋಸ ಮಾಡಿದ್ರೆ ನಿನ್ನೆ ಎರಡು ಕೈ, ಎರಡು ಕಾಲು ತಲೆ ಎಲ್ಲಾನು ಸವುರ್ ಬಿಡ್ತೀನಿ ಅಂತ ಯಮುನ್ನೆ ಈ ಮುದುಕಿಯ ಸಾಕಿದ ಮಗ ಹೆದರಿಸಿದ. ಅದ್ರೆ ಯಮ ಬ್ಯಾಡ ಕನಪ್ಪಾ ನಿನ್ನೆ ಏನು ಬೇಕು ಕೊಡ್ತೀನಿ ಅಂತ ಹೇಳ್ದ .

ಅಲ್ಲಿ ಯಮುನ ಹೆಂಡ್ತಿ ನೀರು ಕಾಯಿಸಿ ಗಂಡನ್ನೆ ಬಿಸಿ ನೀರು ಸ್ನಾನ ಮಾಡ್ಲಿಕ್ಕೆ ಕಾಯ್ತಿದ್ದು, ಯಮ ಹೋಗಿ ಸ್ನಾನಕ್ಕೆ ಕುಂತ್ಕಂಡ, ಯಮುನ ಹೆಂಡ್ತಿ, ನೀರಾ ಕ್ರಾವ್ಯ. ಯಮುನ ಮುಗು ನೀರ ದೂರದಿಂದ ಹೊಂದಿ ಬಂದು ಕೊಡ್ತಾ ಇದ್ದಾಳೆ. ಆ ಹುಡುಗಿಗೆ ನೀರ ಹೊತ್ತ ಬಂದಿ ಕೊಟ್ಟು ಸಾಕಾಯ್ತು. ನೀರ ಜಗ್ಗಿ ಜಗ್ಗಿ ತರಬೇಕಾದ್ರೆ ಅವುರ ಕಣ್ಣಲ್ಲಿ ನೀರು ಬರಿತ್ತು. ಆ ಹುಡುಗಿ ಅಳೋದು ಈ ಹುಡುಗುತ್ತೆ ಕೇಳು.

ಆ ಹುಡುಗಿ ಹೇಳು. ನಮ್ಮಪ್ಪನ್ನೆ ಭಾರಿ ತ್ರಾಸು ಆಗದೆ. ಅದನ್ನ ಯಾರು ವಾಸಿ *ಮಾಡ್ತಾರೆ ಅಂತ ಕೇಳಿದ್ದು. 'ಈಗ ನಮ್ಮ ಪ್ರನ್ನ ಕಷ್ಟವ ಯಾರು ವಾಸಿ ಮಾಡ್ತಾರೆ ಅವುರೆ ನಾನು ಲಗ್ನ ಆಗ್ತಿನಿ ಅಂತ ಹೇಳಿದ್ದು. ಇವುನು ಆಯ್ತು ನಿಮ್ಮಪ್ಪನ್ನ ತಾಸು ಹೋಗುಸ್ತೀನಿ ಅಂತ ಹೇಳ್ತ. ಆಯ್ತು ನೀವು ನಮ್ಮಪ್ಪನ ತ್ರಾಸು ಹೋಗಿಸಿದ್ರೆ ನಾನು ಮದ್ಯೆ ಆಗ್ತಿನಿ ಅಂತ ಹೇಳಿದ್ದು, 'ಆಯ್ತು ಅಂತ ಒಪ್ಪಂದ .

ಈ ಹುಡುಗ ಹೇಳ್ತ ನಿಮ್ಮ ಅಪ್ಪ ನೋಡಿದ್ರೆ ನನ್ನ ತಿಂದು ಬಿಡ್ತಾನೆ. ಅಷ್ಟೆ ನಿಮ್ಮಪ್ಪನ್ನೆ ಕಣ್ಣಿಗೆ ಬಟ್ಟೆ ಕಟ್ಟು ಅಂತ ಆ ಹುಡ್ಗ ಹೇಳ. ಅವುಳು 'ಆಯ್ತು 'ಅಂತ ಹೇಳಿ ಕಣ್ಣಿಗೆ ಬಟ್ಟೆ ಕಟ್ಟಿ ಕಂಡಿ ಬಂದು, ಅವುನು ಕೈ ಜೋಡಿಸಿದ. ಆ ಯಮುನ ತಾವು ಇತ್ತಲ್ಲ ಜೀವ ಬರಿಸೋ ಮಂತ್ರ ಜೋಳದ ಕಡ್ಡಿ ತಕ್ಕಂಡಿ ಕ್ಕೆ ಮೇಲೆ ನೇವುಳಿಸಿದ. ಆ ಯಮುನೈ ಕೈ ಬಂತು. ಆಗ ಕ್ಕೆ ನೋಡ್ಕಂದ ಯಮ. ಆಗ ಅವುಳು ಕಣ್ಣಿಗೆ ಕಟ್ಟಿದ ಬಟ್ಟೆ ಬಿಚ್ಚಿದ್ದು.

ಆಗ ಅವುನು'ಆಹಾ |ಆಹಾ!ನನ್ನೆ ಕೈ ಬಂತು'ಅಂತ ಕುಣಿದಾಡಿದ. ಆಗ ಹುಡುಗ ಶಿವ ಶಿವ ಪರಮಾತ್ಮ 'ಅಂತ ಅವುನ ಮುಂದೆ ಹೋಗಿ ಕುಂತ್ಕಂಡ. ಈಗ ನಾನು ಬೇಡಿದ್ದ ಕೊಡ್ತೀಯ ಅಂದ. 'ಆಯ್ತು' ಅಂತ ಯಮ ಹೇಳ್ತ. ಹೊನ್ನು ಬೆಳ್ಳಿ ಬಂಗಾರ ಯಾರಿಗೆ ಬೇಕು' ಅಂದ ಆಹುಡುಗ. ಆಗ ಯಮನೆ ಆಶ್ಚರ್ಯ ಆಯ್ತು. 'ಮತ್ತೇನು ಬೇಕು' ಅಂತ ಕೇಳ. ನನ್ನೆ 'ದೇವಲೋಕದ ಹೂವು ಬೇಕು' ಅಂತ ಹೇಳ್ತ. ಆಗ'ಯಮ ಆಹಾ ಏನು ಬೇಕು!' 'ದೇವಲೋಕದ ಹೂವು ಬೇಕು'ಅಂತ ಹೇಳ. ಇಲ್ಲ ಅಂದ್ರೆ ಮೊದಲು ನಿನ್ನ ಒಂದು ಕೈ ಕಡಿದಿದ್ದೆ, ಈಗ ಎರಡು ಕೈಯನ್ನು ಕಡಿತ್ತೀನಿ'ಅಂತ ಹುಡುಗ ಕೋಪದಲ್ಲಿ ಹೇಳ್ವ.ನಿನ್ನ ಬಳಿ ಇಲ್ಲ ಅಂದ್ರೆ ಎಲ್ಲದೆ ಹೇಳು ನಾನೇ ಹೋಗಿ ತರೀನಿ ಅಂತ ಹೇಳ, ಅದ್ರೆ ಯಮ ಒಪ್ಪಂದ. ಆಗ ಆ ಹೂವಿರೋ ಜಾಗಕ್ಕೆ ಈ ಹುಡುಗನ್ನೆ ದಾರಿ ಕೋರಿಲ್ಲ.

'ಆ ಜಾಗದಲ್ಲಿ ಒಂದು ಬಾವಿ ಇದೆ. ಆ ಬಾವಿಲಿ ಪರಮಾತ್ಮನ ಏಳು ಜನ ಹೆಣ್ಣು ಮಕ್ಕಳು ಜಳಕ ಮಾಡಕ್ಕೆ ಬತ್ತಾರೆ. ಆಗ ಆ ಏಳು ಮಂದಿಸುವೆ ಬಟ್ಟೆ ಕಳೆದು ಆರು ಜನ ಒಂದು ಜಾಗದಲ್ಲಿ ಹಾಕ್ತಾರೆ. ಹಿರೇ ಆಕೆ ಬೇರೆ ಒಂದು ತಾವು ಹಾಕುತ್ತಾಳೆ.

ನೀನು ಆ ಬಟ್ಟೆ ತಕ್ಕಂಡು ಓಡಿಬಾ'ಅಂತ ಹೇಳಿಕೊಟ್ಟ, ಯಮ. ಈ ಹುಡ್ಗ 'ಆಯು ಅಂತ ಆ ಪರಮಾತ್ಮನ ಮಕ್ಕು ಬರೋದನ್ನೆ ಕಾಯ್ತ ಕುಂತಿದ್ದ. ಆಗ ಪರಮಾತ್ಮನ ಏಳು ಹೆಣ್ಣು ಮಕ್ಕಳುವೆ ಬಂದ್ರು, ಏಳು ಜನರುವೆ ಬಟ್ಟೆಯಲ್ಲಿನುವೆ ಬಿಚ್ಚಾಕಿ ಬರಿಬೆತ್ತಲೆಯಾಗಿ ಬಾವಿಗೆ ಹಾರಿದ್ರು. ಅಲ್ಲಿ ಬಾರಿ ಖುಷಿ ಖುಷಿಯಾಗಿ ಜಳಕ ಮಾಡ್ತಿದ್ರು.

ಆಗ ಈ ಮುದುಕಿಯ ಸಾಕಿದ ಮಗ ನೋಡ್ತಾ ಇದ್ದ. ಆ ಪರಮಾತ್ಮನ ಹಿರೇ ಆಕೆ ಬಟ್ಟೆನ ಬೇರು ಜಾಗದಲ್ಲಿ ಹಾಕಿದ್ದು. ಅಲ್ಲಿ ಹಾಕಿದ್ದನ್ನ ನೋಡ್ತ. ಅವೆಲ್ಲ ಖುಷಿಯಿಂದ ಅಡ್ಡ ಗ್ಯಾನದಲ್ಲಿರಬೇಕಾದ್ರೆ, ಇವುನು ಸದ್ದಾಗದ ರೀತೀಲಿ ಹೋಗಿ ದೊಡ್ಡಾಕಿ ಬಟ್ಟೆಯ ಎತ್ಯಂದಿ ಓಡಿಬಂದು ಯಮುನ ಮುಕಳಿ ಬಡಕ್ಕೆ ಬಾಕಿದ. ಆಕೆ ಪರಮಾತ್ಮನ ಹಿರೇಮಗಳು ಬೆತ್ತಲೆಯಾಗಿ ಇವುನ ಬೆನ್ನಟ್ಟಿದ್ದು. ಇವುನು ಅವು ಕೈಗೆ ಸಿಕ್ಕದೆ ಜೋರಾಗಿ ಓಡಿಬಂದು ಯಮನ ಹಿಂದೆ ನಿಂತ್ಸ ಬಿಟ್ಟ. ಆಹ ಯಮ ಆಕೆಗೆ ತನ್ನ ಮಗಳ ಬಟ್ಟೆ ಕೊಟ್ಟು ಆಕೆ ಮಾನ ಕಾಪಾಡಿದ. ಈ ರೀತಿಯಾಗಿ ಅವುಳ ಬಟ್ಟೆಯ ನರಮನುಷ್ಯ ಮುಟ್ಟಿದ್ದರಿಂದ ಮುಟ್ಟುಚಟ್ಟಾದ್ರು.

ಆಗ ಅವಳು 'ಲೋ ಹುಡುಗ ನನ್ನ ಬಟ್ಟೆ ಕೊಡು' ಅಂದ್ಲು. ಈ ಹುಡುಗ 'ನಾನ್ ತಂದಿಲ್ಲ ಅಂದ. 'ಸರಿ, ಹಾಗೆ ಅದ್ರೆ ಆಟ ಆಡೋಣ ಬಾ' ಅಂದ್ಲು. ಆ ಇಬ್ಬರು ಪಗಡೆ ಆಟಕ್ಕೆ ಕುಂತ್ಕಂಡ್ರು. 'ಸೋತ್ರೆ ಬಟ್ಟೆ ಕೊಡು, ಸೋಲದಿದ್ರೆ ನೀನು ಏನು ಬೇಡ್ತಿಯೇ ಕೊಡ್ತೀನಿ' ಅಂದ್ಲು. ಈ ಹುಡುಗ 'ಆಯ್ತು 'ಅಂತ ಒಪ್ಪಂಡ. ಸರಿ ಬಾರಿಹೊತ್ತು ಈ ಪಗಡೆ ಆಟದಲ್ಲೇ ಕಾಲ ಕಳೆದ್ರು. ಮುದುಕಿಯ ಸಾಕಿದ ಮಗ ನೋಡ್ಡ. ಆಗ ಈ ಪರಮಾತ್ಮನ ಮಗಳು ಕವ ಕವ ನಕಿದ್ದು.

ಅಲ್ಲಿ ಯಮನ ಮಗಳು ಬೋರಾಡಿ ಆಳಿದ್ದು, ಅವುಳು ಅವ್ರ ಅಪ್ಪ, 'ಅಪ್ಪ' ಅಂದ್ಲು. 'ಏನವ್ವಾ, 'ಅಂದ. 'ಆತನ ಕೂಡೆ ನಾನು ಹೋಗ್ತಿನಿ' ಅಂದ್ಲು. ಆ ಹುಡುಗನ್ನೆ ನಿನ್ನ ಜೊತೆ ನನ್ನ ಮಗಳು ಬಾಳೆ ಕರ ಹೋಗ್ತಿಯ ಅಂತ ಕೇಳ. ನಿನ್ನೆ ಎರಡು ಕುದುರೆ ಹೂರವಷ್ಟು ಬಂಗಾರ ಬೆಳ್ಳಿ ಕೊಡ್ತೀನಿ ಅಂತ ಕುದ್ರೆ ಜೊತೆ ಮಾಡಿ ಚಿನ್ನ, ಬಂಗಾರ, ಬೆಳ್ಳಿ, ಹೊನ್ನು ಎಲ್ಲವನ್ನೂ ಹೊರಿಸಿ ಕಳುಹಿಸಿದ. ಅಲ್ಲಿಂದ ರಾಜನ ಮಗ್ನ ತಾವುಕೆ ಬಂದ್ರು.

ಆಕೆಯನ್ನ ಕರೊಂಡು ಬಂದ. ಕುದುರೆ ಮೇಲೆ ಈ ಮುದುಕಿಯ ಮಗ ದೇವಲೋಕದ ಹೂವು ತಕ್ಕೊಂಡು, ಆ ಯಮನ ಮಗಳು, ದೇವಲೋಕದ ಪರಮಾತ್ಮನ ಮಗಳು, ಕರೊಂಡು ಬಂದ್ರು.

ತನ್ನ ಸಾಕಿದ ಮುದುಕಿ ಗುಡಿಸಿಲು ತವುಕೆ ಬಂದ್ರು. ಆ ಗುಡಿಸ್ತು ಮಹಡಿಯಾಗಿತ್ತು. ಕನ್ನಡಿ ತರ ಮುಖ ಕಾಣಿಸ್ತಿತ್ತು. ಕನ್ನಡಿ ತರ ಅರಮನೆ ಕಟ್ಟಿದ್ರು.

ಎಲ್ಲಿ ನೋಡಿದ್ರು ಮುಖ ಕಾಣಿಸ್ತಿತ್ತು. ಕನ್ನಡಿ ತರ ಅರಮನೆ ಕಟ್ಟಿದ್ರು. ಈ ಹುಡುಗ ಕುದುರೆ ಇಳಿದು ನಮ್ಮ ಜಾಗದಲ್ಲಿ ಯಾರು ಮನೆ ಕಟ್ಟಿವೆ ಅಂತ ನೋಡ್ಡ. ಅಲ್ಲಿ ಅಮ್ಮಾ ಮನೆ ಒಳಗೆ ಅಡ್ಡಾ ತಿನ್ನು, 'ಅಮ್ಮ 'ಅಂದ. ಹೊರಗಡೆ ನಾಲ್ಕು ಮಂದಿ ನಿಂತಿದ್ರು. ಅಮ್ಮ ಎಲ್ಲಾರೂ ನೀರ ತಕ್ಕೊಂಡು ಬಂದು ಕೊಟ್ಟು ಪರಮಾತ್ಮನ ಮಗಳು ಕೇಳಿದ್ದು. ಯಾರು ಇವು ಅಂತ. ಆಗ ಹುಡುಗ ನಮ್ಮ ತಾಯಿ ಅಂತ ಹೇಳ್ವ, ಆಗ ಈ ಹುಡುಗಿ ಹೇಳಿದ್ರು, ಹೋಗಿ ನೀರು ತಂದು ಆ ಮುದುಕಿಯ ಕಾಲು ತೊಳೆದ್ದು. ಗಂಡನ ಪಾದ ತೊಳೆದ್ದು, ಮನೆ ಹೊಸ್ತಿಲು ತೊಳೆದ್ದು, ಮನೆ ಒಳಿಕೆ ಕಾಲಾಕಿದ್ರು.

ಈ ರೀತಿ ಎಲ್ಲಾ ಕಾಲಾಕಿದ ಕೂಡಲೇ ಐಶ್ವರ್ಯ, ಬಂಗಾರದ ಮಂಚ, ಬಂಗಾರದ ತೊಟ್ಟಿಲು ಆಯ್ತು. ಏನು ಬೇಡ್ತಾರೆ ಅದೆ ಆಯ್ತು. ಊಟ ಏನು ಕೇಳ್ತಾರೆ, ಅದೆ ಆಯ್ತು. ಅಷ್ಟು ಹೊತ್ತಿಗೆ ಒಂದು ಕಮ್ಮಿ ಇಪ್ಪತ್ತು ದಿನ ಆಯ್ತು.

ಆ ಹೊತ್ತಿನಲ್ಲಿ ಪರದಾನಿ ಆಳುಗಳನ್ನ ಕಳುಹಿಸಿದ. ರಾಜರ ಆಳುಗಳು 'ಏನಪ್ಪಾ ನಾವು ಆ ಮುದುಕಿ ಮಗನಿಗೆ 'ಇಚ್ಛೆ'ಕೊಟ್ಟು ಎಷ್ಟು ದಿನ ಆಯ್ತು. ಅವುನು ಬಂದಿದ್ದಾನೋ ಇಲ್ಲವೊ ನೋಡಬನ್ನಿ 'ಅಂತ ಕಳುಹಿಸಿದ. ಮುದುಕಿ ಮಗ ಬೆಳಿಗ್ಗೆ ಎದ್ದು ಮುಖ ತೊಳ್ಕೊಂಡು ಎದ್ದು ಕುಂತಿದ್ದ. 'ಏನ್ರಿ ನಿಮಗೆ ರಾಜರು ಕರಿತ್ತಾ' ಅಂತ ಹೇಳುದ್ರು. ರಾಜನ ಜವಾನಕ್ಕೆ ಬರ್ರೀನಿ ಅಂತ ಹೇಳಿ ಈ ಮುದುಕಿ ಮಗ ಕಳುಹಿಸಿದ. ಅವು ಹೋಗಿ ರಾಜರ ಬಳಿ ಹೇಳಿದ್ರು. ಆ ಹೊತ್ತಿಗಾಗ್ಗೆ ಕುರು ದೊಡ್ಡದಾಗಿತ್ತು. ಈ ಹುಡ್ಗ ರಾಜರ ಬಳಿ ಹೋಗಿ 'ದೇವಲೋಕದ ಹೂವು ತಂದಿದ್ದೀನಿ' ಅಂದ. ಆ ಕರುವಿಗೆ (ಗಾಯಕೆ) ಮಂತ್ರಿಸಿ ನೇವಳಿಸಿ ಇಳೆತೆಗೆದ. ಮಾರನೆ ದಿನಕ್ಕೆ ಕುರು ವಾಸಿಯಾಯ್ತು. ನಾನು ಒಪ್ಪಿದಂತೆನನ್ನ ಮಾತು ಮುಗಿತು ಅಂತ ಹೇಳಿದ. ರಾಜ ಆ ಮುದುಕಿ ಮಗನ್ನೆ ಚಿನ್ನ, ಬೆಳ್ಳಿ, ಬಂಗಾರ ಕೊಟ್ಟು ಕಳುಹಿಸಿದ. ಮುದುಕಿ ಮಗ ಬೆಳ್ಳಿ ಬಂಗಾರ ಹೊತ್ತಂದಿ ತನ್ನ ಮನೆಗೆ ಬಂದ.

ಸುಮಾರು ದಿನಾಯ್ತು. ಹಿಂಗೆ ದಿನ ಕಳಿತಿದ್ದೊ, ಆಗ ಎಷ್ಟೋ ದಿನದ ಮೇಲೆ ಈಹುಡುಗನ ಬಳಿಗೆ ಕಷ್ಟದವುನು ಹೋದ. 'ಬಾರೋ'ಅಪ್ಪ ಅಂದೆ. ಅವುನು ಬಂದಕುಂತ್ಕಂಡ, 'ನಿನ್ನ ದಾರಿನೇ ನೋಡ್ತಾ ಇದ್ದೀನಿ'ಅಂದ. 'ಆಯ್ತು 'ಅಂತ ಹೇಳಿ ಕಷ್ಟದವುನು ಹೋಗಿ ಕುಂತ್ಕಂಡ. 'ಅಪ್ಪಾ ಯಾರು ಮನೇಲಿ ನೀರು ತಕ್ಕ ಬನ್ನಿ' ಅಂದ. ಆಗ ದೇವಲೋಕದ ಹೆಣ್ಣು ನೀರು ತಂದು ಇಟ್ಟು ಒಳಗೆ ಹೋದ್ಲು. ಸರಿ ಆ ಹೊತ್ತೆ ಕಷ್ಟದ ವುನ್ನೆ ಅನುಮಾನ ಬಂತು. ಕೋಡ್ಮಿಂಚು ಆಯ್ತು. ಇಂತಹ ಹೆಣ್ಣು ಎಲ್ಲಿಂದ ಬಂದು ಅಂತ ಯೋಚನೆ ಮಾಡ್ಲಿ. ಅಲ್ಲಿಂದ ಕಷ್ಟದವ ಮಹಾರಾಜರ ಮನೆಗೆ ಹೋದ.

ರಾಜನ್ನೆ ಕಷ್ಟದವನು ಹೇಳ್ತ ನಿನ್ನ ಏಳು ಮಂದಿ ಹೆಂಡ್ತಿರು ಯಾಕೆ ಆ ಮುದುಕಿಯ ಸಾಕಿದ ಹುಡುಗನ ಹೆಂಡ್ತಿರ ಥರ ಇಲ್ಲ. ಅವು ಬಂಗಾರದಂಗೆ ಅತ್ತೆ, ಅವ್ರು ಏನಾದ್ರು ಮಾಡಿ ಪಡ್ಕಬೇಕು ಅಂತ ಹೇಳ.

ಆಗ ರಾಜ ಮುದುಕಿಯ ಸಾಕಿದ ಮಗನ್ನ ಕರೆಸ್ಟ, 'ಯಾಕ್ರೀ' ಅಂತ ಹುಡುಗ ಕೇಳ್ತ. 'ಒಬ್ಬನೇ ಕುಂತ್ಕಂಡು ಬೇಜಾರಾಗ್ತದೆ ಸೋಲು ಗೆಲವಿನ ಆಟ ಆಡೋಣ' ಅಂದ. ನೀನು ಸೋತ್ರ ನಮ್ಮನೇಲಿ ಏನು ಸಿಕ್ಕುತ್ತೆ ಹಿಡಿ ಅಂತ ರಾಜ ಹೇಳ್ತ. ಅದೇ ರೀತಿ 'ನಿನು ಸೋತ್ರ ನನ್ನ ಮನೇಲಿ ಏನು ಸಿಕ್ಕುತ್ತೆ ಹಿಡಿ' ಅಂತಹೇಳಿ ಈ ರೀತಿಯಾಗಿ ಪಂತ ಕಟ್ಟಿದ್ರು. ಸರಿ ಇಬ್ಬರೂ ಪಗಡೆ ಆಟ ಆಡ್ತಿದ್ರು. ಆಗ ಈ ಮುದುಕಿ ಮನೆಗೆ ಬಂದು ಪರಮಾತ್ಮನ ಮಗಳ ಕೇಳ ಈ ರೀತಿಯಾಗಿ ಒಪ್ಪಂದಿ ಬಂದಿದೀನಿ' ಅಂತ ಹೇಳ. 'ಆಯ್ತು ಆಟ ಆಡಿಬನ್ನಿ ಅಂತ ಹೇಳಿ ಕಳಿಸಿದ್ದು.

ಆಟಕ್ಕೆ ಈ ಹುಡುಗ ಹೋಗಿ ಕುಂತ್ಯಂದ ಮೂರನೇ ಆಟಕ್ಕೆ ಸಾಕಿದ ಮಗ ಸೋತ. ಆಗ ರಾಜ ಮನೆಗೆ ಬಂದು 'ನಿನ್ನ ಮನೇಲಿ ಏನು ಸಿಕ್ಕುತ್ತೆ ಹಿಡಿತೀನಿ' ಅಂದ ಸರಿ ಹೋಗಿ ಹಿಡಿ ಅಂತ ಹೇಳ್ತ ಮುದುಕಿಯಸಾಕಿದ ಮಗ. ಆಗ ರಾಜ ಈ ಹುಡುಗನ ಮನೆಗೆ ಬಂದ. ಆಗ ಪರಮಾತ್ಮನ ಮುಗು ಏಣಿ ಹಾಕ್ಕಂಡು ಮಹಡಿ ಮೇಲೆ ಇದ್ದಳು. ಈ ರಾಜ ಬಂದು ಕೆಳಗಿನ ಏಣಿ ನೋಡ್ಡ. ಕೆಳಗಿನ ಮನೆ ಹುಡುಕಿದ. ಆಗ ಮಹಡಿಯ ಹತ್ತಿಕ್ಕೆ ಏಣಿ ಹಿಡಿದ. ಆಗ ಪರಮಾತ್ಮನ ಮಗು, ನೋಡಿದ್ದು. 'ಹೇ ರಾಜ ಏನು ಸಿಕ್ಕುದೆ' ಅಂದ್ಲು. ರಾಜ 'ನಿಚ್ಚಳಿಕೆ ಅಂದ. ದೇವಲೋಕದ ಹೆಣ್ಣು ಹೊತ್ತಂಡಿ ನಡಿ ಅಂದ್ಲು. ರಾಜ ಮಾತಿನಂತೆ ನಿಚ್ಚಳಿಕೆ ತಕ್ಕೊಂಡು ಹೋದ.

ರಾಜ, ಆ ಹುಡುಗನ ಹೆಂಡ್ತಿನೋಡಿ ಬಾರಿ ಖುಷಿ ಆಯ್ತು. ನನ್ನ ಏಳು ಮಂದಿ ಹೋದ್ರು ಸರಿ ಅಂತ ಹಟಿ ಆಯ್ತು. ಅದೇ ರೀತಿ ನನ್ನ ರಾಜ್ಯ ಹೋದರೂ ಸರಿ ಅಂತ ಹೇಳಿ ಹೋದ. ಮತ್ತೆ ಹುಡುಗನ್ನ ಕರೆಸಿ ಆಟಕ್ಕೆ ಕುಂತ್ಕಂಡ. ಮತ್ತೊಮ್ಮೆ ಆಟ ಆಡಿದ್ರು. 'ಆಯ್ತು ಅಂತ ಹುಡುಗ ಹೇಳಿದ. ಆಗ ಈ ಬಾರಿ ಮುದುಕಿ ಮಗ ಗೆದ್ದು ಬಿಟ್ಟ. ಆಗ ರಾಜನ ಏಳುಮಂದಿ ಹೆಂಡ್ತೀರನ್ನು ಈ ಹುಡುಗ ಕರಂಡಿ ಬಂದು ಜೊತೆ ಸೇರಂಡು ಒಟ್ಟು ಹತ್ತು ಮಂದಿನೂ ಸೇರಿಸ್ಕಂಡಿ ಆರಮನೇಲಿ ಸುಖವಾಗಿ ಜೀವನ ನಡೆಸ್ತಿದ್ದ. ರಾಜ ಮಾತಾಡಿದಂತೆ ಎದ್ದು ದೋತ್ರ ತಕ್ಕಂಡಿ ಹೋದ. ಇವು ಹತ್ತು ಮಂದಿನುವೆ ಸುಖವಾಗಿ ರಾಜಭಾರ ಮಾಡ್ಕಂದಿ ಸಂಸಾರ ಮಾಡ್ಕಂದಿ ಹೋದ್ರು.



logoblog

Thanks for reading Story 07- ದೇವಲೋಕದ ಹೂವು

Previous
« Prev Post

No comments:

Post a Comment