Wednesday, July 22, 2026

Karnataka Guest Teacher Recruitment 2026-27: Second Phase Notification Released

  VIDYAVANI       Wednesday, July 22, 2026
Karnataka Guest Teacher Recruitment 2026-27: Second Phase Notification Released

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2026-27 ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಖಾಯಂ ಶಿಕ್ಷಕರ ನೇಮಕವಾಗುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತದವರೆಗೆ (ಮಾರ್ಚ್-2027)ವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಶಿಕ್ಷಕರ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಒಟ್ಟು-40000. ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಉಲ್ಲೇಖದ ಸರ್ಕಾರದ ಪತ್ರದಲ್ಲಿ ಅನುಮತಿ ನೀಡಲಾಗಿದೆ.

ಉಲ್ಲೇಖ-01 ರ ಸರ್ಕಾರದ ಆದೇಶದಂತೆ ಒಟ್ಟು 40000. ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಸಹಮತಿಸಿದ್ದು. ಪ್ರಸ್ತುತ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ (ಪಿ. ಎಸ್.ಟಿ ಮತ್ತು ಜಿ.ಪಿ.ಟಿ) ವೃಂದದ ಒಟ್ಟು-33708 ಹುದ್ದೆಗಳಿಗೆ ಎದುರಾಗಿ ಪ್ರಥಮ ಹಂತದಲ್ಲಿ 30337 ಖಾಲಿ ಹುದ್ದೆಗಳಿಗೆ ಜಿಲ್ಲಾವಾರು/ತಾಲ್ಲೂಕುವಾರು ಅತಿಥಿ ಶಿಕ್ಷಕರನ್ನು ಉಲ್ಲೇಖ-01ರ ಸರ್ಕಾರದ ಆದೇಶದಲ್ಲಿ ವಿಧಿಸಿರುವ ಷರತ್ತುಗಳಿಗೊಳಪಟ್ಟು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದೆ.

ಉಪ ನಿರ್ದೇಶಕರು(ಆಡಳಿತ)ರವರುಗಳು ಮಂಜೂರು ಮಾಡಲು ಕೋರಿರುತ್ತಾರೆ. ಈ ಸರ್ಕಾರದಿಂದ ಮಂಜೂರಾದ ಹುದ್ದೆಗಳಲ್ಲಿ ಅತಿಥಿ ಶಿಕ್ಷಕರನ್ನು ವಿದ್ಯಾರ್ಥಿಗಳ ಶಿಕ್ಷಕರ ಉಲ್ಲೇಖ-3ರ ಮನವಿಗಳಲ್ಲಿ ರಾಜ್ಯದ ಮನವಿಗಳನ್ನು ನೀಡಿ ಹೆಚ್ಚುವರಿ ಅತಿಥಿ ಶಿಕ್ಷಕರನ್ನು ಕೋರಿಕೆಗಳನ್ನು ಪರಿಗಣಿಸಿ ಎರಡನೇ ಹಂತದಲ್ಲಿ ಲಭ್ಯವಿರುವ ಒಟ್ಟು 9663 ಹುದ್ದೆಗಳಲ್ಲಿ 6617 ಅನುಪಾತದಂತೆ(PTR) ಜಿಲ್ಲಾವಾರು ಜಿ.ಪಿ.ಟಿ/ಪಿಎಸ್.ಟಿ ಖಾಲಿ ಇರುವ ಹುದ್ದೆಗಳ ಎದುರಾಗಿ ಹಂಚಿಕೆ ಮಾಡಿ ಉಲ್ಲೇಖ-1 ಮತ್ತು ಉಲ್ಲೇಖ-2ರ ಈ ಕಛೇರಿಯ ಸಮ ಸಂಖ್ಯೆಯ ಪತ್ರದಲ್ಲಿನ ಎಲ್ಲಾ ಷರತ್ತುಗಳಿಗೊಳಪಟ್ಟು ಅನುಬಂಧದಲ್ಲಿ ತಿಳಿಸಿದಂತೆ ವಿದ್ಯಾರ್ಥಿಗಳ ಶಿಕ್ಷಕರ ಅನುಪಾತದಂತೆ(PTR) ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ತಿಳಿಸಿದೆ.

ಮೇಲ್ಕಂಡ ಸರ್ಕಾರದ ಉಲ್ಲೇಖ-1 ಮತ್ತು 2ರ ಈ ಕಛೇರಿಯ ಎಲ್ಲಾ ಷರತ್ತುಗಳನ್ನು ಪಾರದರ್ಶಕವಾಗಿ ಚಾಚು ತಪ್ಪದೇ ಪಾಲಿಸಲು ಸಂಬಂಧಪಟ್ಟ ಮುಖ್ಯ ಶಿಕ್ಷಕರುಗಳಿಗೆ ಕಡ್ಡಾಯವಾಗಿ ಸೂಕ್ತ ಸೂಚನೆಗಳನ್ನು ಜಿಲ್ಲಾ ಉಪನಿರ್ದೇಶಕರು/ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡುವುದು ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಯಾವುದೇ ಲೋಪದೋಷಗಳಾದಲ್ಲಿ ಸಂಬಂಧಪಟ್ಟ ತಾಲ್ಲೂಕು/ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿಸಿ ಶಿಸ್ತು ಕ್ರಮಕ್ಕೆ ಒಳಪಡಿಸಲಾಗುವುದು.

ಈ ಕೂಡಲೇ ನೇಮಕ ಮಾಡಿಕೊಳ್ಳಲು ಸಹಾಯವಾಗುವಂತೆ ಕ್ಷೇತ ಶಿಕ್ಷಣಾಧಿಕಾರಿಗಳು, ಅಗತ್ಯತೆ/ಅವಶ್ಯಕತೆ ಇರುವ ಶಾಲೆಗಳ ಖಾಲಿ ಹುದ್ದೆಗಳಿಗೆ ನಿಯಮಾನುಸಾರ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ತಾಲ್ಲೂಕು ಹಂತದಲ್ಲಿ ಶಾಲಾವಾರು ಹುದ್ದೆ ಹಂಚಿಕೆ ಆದೇಶವನ್ನು ಕಡ್ಡಾಯವಾಗಿ ಕೂಡಲೇ ಹೊರಡಿಸುವುದು.

ತಾಲ್ಲೂಕು ಹಂತದಲ್ಲಿ ನೇಮಕಗೊಂಡ ಅತಿಥಿ ಶಿಕ್ಷಕರ ವಿವರಗಳನ್ನು ಕೆಳಕಂಡ ನಿಗದಿತ ನಮೂನೆಯಲ್ಲಿ ಜಿಲ್ಲಾವಾರು ಕ್ರೂಢೀಕರಿಸಿ ಈ ಕಛೇರಿಗೆ ಜಿಲ್ಲಾ ಉಪನಿರ್ದೇಶಕರು ವಿಳಂಬಕ್ಕೆ ಅವಕಾಶ ನೀಡದೇ ಕೂಡಲೇ ಅತಿಥಿ ಪಂಚಾಯಿತಿವಾರು ಹುದ್ದೆಗಳ ವಿವರವನ್ನು ಕೆಳಗಿನ ನಮೂನೆಯಲ್ಲಿ ಕ್ರೋಡೀಕರಿಸಿ ದೃಡೀಕೃತ (ಪಿ.ಡಿ.ಎಫ್ ಮಾದರಿಯಲ್ಲಿ) ಸಾಫ್ಟ್ ಪ್ರತಿಯನ್ನು ಈ ಕಛೇರಿ ಇ-ಮೇಲ್ ವಿಳಾಸ, primarydpi@gmail.com ಸಲ್ಲಿಸುವುದು ತಪ್ಪಿದಲ್ಲಿ ಸೂಕ್ತ ಶಿಸ್ತಕ್ರಮ ಜರುಗಿಸಲಾಗುವುದು. ಎಂದು ಆದೇಶದಲ್ಲಿ ತಿಳಿಸಲಾಗಿದೆ.

logoblog

Thanks for reading Karnataka Guest Teacher Recruitment 2026-27: Second Phase Notification Released

Previous
« Prev Post

No comments:

Post a Comment